ಎಲ್ಲರ ಎದುರು ಸಲ್ಮಾನ್​ ಖಾನ್​ಗೆ ಕಿಸ್​ ಮಾಡಿದ ಸಿದ್ದಾರ್ಥ್​ ಶುಕ್ಲಾ ಪ್ರೇಯಸಿ ಶೆಹನಾಜ್ ಗಿಲ್​; ವಿಡಿಯೋ ವೈರಲ್​

Shehnaaz Gill | Salman Khan: ಸಲ್ಮಾನ್​ ಖಾನ್​ ಮತ್ತು ಶೆಹನಾಜ್​ ಗಿಲ್​ ಆಪ್ತವಾಗಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ ನೋಡಿ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಎಲ್ಲರ ಎದುರು ಸಲ್ಮಾನ್​ ಖಾನ್​ಗೆ ಕಿಸ್​ ಮಾಡಿದ ಸಿದ್ದಾರ್ಥ್​ ಶುಕ್ಲಾ ಪ್ರೇಯಸಿ ಶೆಹನಾಜ್ ಗಿಲ್​; ವಿಡಿಯೋ ವೈರಲ್​
ಸಲ್ಮಾನ್​ ಖಾನ್​, ಶೆಹನಾಜ್​ ಗಿಲ್​
Follow us
TV9 Web
| Updated By: ಮದನ್​ ಕುಮಾರ್​

Updated on:May 04, 2022 | 12:06 PM

​ಬಿಗ್​ ಬಾಸ್​ ಖ್ಯಾತಿಯ ನಟ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​ (Shehnaaz Gill) ಅವರ ನಡುವೆ ಯಾವ ರೀತಿಯ ಪ್ರೀತಿ ಇತ್ತು ಎಂಬುದು ಎಲ್ಲರಿಗೂ ತಿಳಿದ ವಿಚಾರ. ‘ಬಿಗ್​ ಬಾಸ್​ 13’ ವೇಳೆ ಇಬ್ಬರೂ ಪರಸ್ಪರ ತುಂಬ ಕ್ಲೋಸ್​ ಆಗಿದ್ದರು. ಈ ಜೋಡಿಗೆ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿಯಾಗಿತ್ತು. ಇನ್ನೇನು ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​ ಮದುವೆ ಆಗುತ್ತಾರೆ ಎಂದುಕೊಳ್ಳುವಾಗ ವಿಧಿ ತನ್ನ ಕ್ರೂರತೆ ಮೆರೆಯಿತು. ಕಳೆದ ವರ್ಷ ಸೆ.2ರಂದು ಸಿದ್ದಾರ್ಥ್​ ಶುಕ್ಲಾ (Sidharth Shukla) ಅವರು ಹೃದಯಾಘಾತದಿಂದ ಕೊನೆಯುಸಿರು ಎಳೆದರು. ಆ ಬಳಿಕ ಶೆಹನಾಜ್​ ಗಿಲ್ ಶೋಕ ಸಾಗರದಲ್ಲಿ ಮುಳುಗುವಂತಾಗಿತ್ತು. ಪ್ರಿಯಕರನ ನಿಧನದ ನೋವಿನಿಂದ ಅವರು ತೀವ್ರವಾಗಿ ಕುಸಿದುಹೋಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಆರಂಭಿಸಿದ್ದಾರೆ. ಈಗ ಸಲ್ಮಾನ್​ ಖಾನ್​ (Salman Khan) ಜೊತೆ ಆಪ್ತವಾಗಿ ನಡೆದುಕೊಂಡು ಸುದ್ದಿ ಆಗಿದ್ದಾರೆ. ಎಲ್ಲರ ಎದುರು ಸಲ್ಲುಗೆ ಶೆಹನಾಜ್​ ಗಿಲ್​ ಪ್ರೀತಿಯ ಚುಂಬನ ನೀಡಿದ್ದಾರೆ. ಆ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಎಲ್ಲೆಡೆ ಈದ್​ ಹಬ್ಬವನ್ನು ಸಡಗರದಿಂದ ಆಚರಿಸಲಾಗಿದೆ. ಸಲ್ಮಾನ್​ ಖಾನ್​ ಸಹೋದರಿ ಅರ್ಪಿತಾ ಖಾನ್​ ಅವರ ಮನೆಯಲ್ಲೂ ಈದ್​ ಸಲುವಾಗಿ ಔತಣ ಕೂಟ ಏರ್ಪಡಿಸಲಾಗಿತ್ತು. ಈ ಪಾರ್ಟಿಯಲ್ಲಿ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದಾರೆ. ನಟಿ ಶೆಹನಾಜ್​ ಗಿಲ್​ ಕೂಡ ಸಲ್ಮಾನ್​ ಖಾನ್​ ಕುಟುಂಬದವರ ಜೊತೆ ಬೆರೆತಿದ್ದಾರೆ. ಪಾರ್ಟಿ ಮುಗಿಸಿ ಹೊರಡುವಾಗ ಅವರು ಮಾಧ್ಯಮದ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ. ಈ ವೇಳೆ ಸಲ್ಮಾನ್​ ಖಾನ್​ ಅವರನ್ನು ಪದೇ ಪದೇ ತಬ್ಬಿಕೊಂಡು ಪ್ರೀತಿ ತೋರಿಸಿದ್ದಾರೆ. ಅಷ್ಟೇ ಅಲ್ಲದೇ ಸಲ್ಲು ಕುತ್ತಿಗೆಗೆ ಅವರು ಕಿಸ್​ ಮಾಡಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ವಿಡಿಯೋ ಕಂಡು ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.

ಬಾಲಿವುಡ್​ನಲ್ಲಿ ಅನೇಕರ ಪಾಲಿಗೆ ಸಲ್ಮಾನ್​ ಖಾನ್​ ಅವರು ಗಾಡ್​ ಫಾದರ್​ ಆಗಿದ್ದಾರೆ. ಹಲವು ನಟಿಯರಿಗೆ ಅವರು ಸ್ಟಾರ್​ ಪಟ್ಟ ಕೊಡಿಸಿದ್ದಾರೆ. ಈಗ ಶೆಹನಾಜ್​ ಗಿಲ್​ ಅವರಿಗೂ ಅಂಥದ್ದೇ ಆಫರ್​ ಸಿಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹಲವು ವರ್ಷಗಳಿಂದ ಸಲ್ಮಾನ್​ ಖಾನ್​ ಅವರು ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ. ಈ ಶೋನಲ್ಲಿ ಭಾಗವಹಿಸಿದವರ ಜೊತೆ ಅವರಿಗೆ ಉತ್ತಮ ಒಡನಾಟ ಬೆಳೆಯುತ್ತದೆ. ಶೋ ಮುಗಿದ ಬಳಿಕವೂ ಬಿಗ್​ ಬಾಸ್​ ಸ್ಪರ್ಧಿಗಳ ವೃತ್ತಿಜೀವನಕ್ಕೆ ಅವರು ಬೆಂಬಲವಾಗಿ ನಿಲ್ಲುತ್ತಾರೆ. ಶೆಹನಾಜ್​ ಗಿಲ್​ ಅವರಿಗೂ ಸಲ್ಲು ಪ್ರೋತ್ಸಾಹ ನೀಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇಷ್ಟು ದಿನ ಹಿಂದಿ ಕಿರುತೆರೆಯಲ್ಲಿ ಫೇಮಸ್​ ಆಗಿದ್ದ ಶೆಹನಾಜ್​ ಗಿಲ್​ ಅವರು ಶೀಘ್ರದಲ್ಲೇ ಬಾಲಿವುಡ್​ಗೆ ಎಂಟ್ರಿ ನೀಡಲಿದ್ದಾರೆ. ಅವರು ನಟಿಸಲಿರುವ ಮೊದಲ ಹಿಂದಿ ಸಿನಿಮಾ ‘ಕಭಿ ಈದ್​ ಕಭಿ ದಿವಾಲಿ’. ಈ ಚಿತ್ರಕ್ಕೆ ಸಲ್ಮಾನ್​ ಖಾನ್​ ಹೀರೋ ಆಗಿದ್ದು, ಅವರ ಭಾವ ಆಯುಷ್​ ಶರ್ಮಾಗೆ ಜೋಡಿಯಾಗಿ ಶೆಹನಾಜ್​ ಗಿಲ್​ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರಿಂದ ಅಧಿಕೃತ ಮಾಹಿತಿ ಹೊರಬೀಳಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

ಹೃದಯಾಘಾತದಿಂದ ಮಡಿದ ಪ್ರಿಯಕರ ಸಿದ್ದಾರ್ಥ್​ಗೆ ಬಿಗ್​ ಬಾಸ್​ ಫಿನಾಲೆಯಲ್ಲಿ ಶೆಹನಾಜ್​ ಗಿಲ್​ ನಮನ

ಮದುವೆ ತಯಾರಿಯಲ್ಲಿದ್ದ ಸಿದ್ದಾರ್ಥ್​ ಶುಕ್ಲಾ ಮತ್ತು ಶೆಹನಾಜ್​ ಗಿಲ್​​ ; ಮೂರು ತಿಂಗಳಿರುವಾಗಲೇ ನಡೆಯಿತು ದುರಂತ

Published On - 12:05 pm, Wed, 4 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ