Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಕಾಲ್ಪನಿಕ ಕತೆ ಎಂದ ವಿಕಿಪೀಡಿಯಾ ಬರಹ; ವಿವೇಕ್ ಅಗ್ನಿಹೋತ್ರಿ ತೀವ್ರ ಆಕ್ಷೇಪ

The Kashmir Files: ವಿಕಿಪೀಡಿಯಾ ಬರಹದಲ್ಲಿ ‘‘ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಕಾಲ್ಪನಿಕ ಕತೆಯಾಗಿದೆ. 1990ರಲ್ಲಿ ಕಾಶ್ಮೀರಿ ಹಿಂದೂಗಳ ವಲಸೆಯನ್ನು ನರಮೇಧವಾಗಿ ತಪ್ಪಾಗಿ ಚಿತ್ರಿಸಲಾಗಿದ್ದು, ಈ ದೃಷ್ಟಿಕೋನವು ತಪ್ಪೆಂದು ವ್ಯಾಪಕವಾಗಿ ಹೇಳಲಾಗುತ್ತಿದೆ’’ ಎಂದು ಬರೆಯಲಾಗಿದೆ. ಇದಕ್ಕೆ ವಿವೇಕ್ ಅಗ್ನಿಹೋತ್ರಿ ಅಸಮಾಧಾನ ಹೊರಹಾಕಿದ್ದಾರೆ.

Vivek Agnihotri: ‘ದಿ ಕಾಶ್ಮೀರ್ ಫೈಲ್ಸ್’ ಕಾಲ್ಪನಿಕ ಕತೆ ಎಂದ ವಿಕಿಪೀಡಿಯಾ ಬರಹ; ವಿವೇಕ್ ಅಗ್ನಿಹೋತ್ರಿ ತೀವ್ರ ಆಕ್ಷೇಪ
ವಿಕಿಪೀಡಿಯಾ ಬರಹ (ಎಡ ಚಿತ್ರ), ‘ದಿ ಕಾಶ್ಮೀರ್ ಫೈಲ್ಸ್’ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
Follow us
TV9 Web
| Updated By: shivaprasad.hs

Updated on:May 03, 2022 | 5:21 PM

‘ದಿ ಕಾಶ್ಮೀರ್​ ಫೈಲ್ಸ್’ (The Kashmir Files) ಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ವಿಕಿಪೀಡಿಯಾದಲ್ಲಿ ಚಿತ್ರದ ಕುರಿತ ಬರಹಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಿಕಿಪೀಡಿಯಾ ಲೇಖನದಲ್ಲಿ ಚಿತ್ರದ ಕತೆಯನ್ನು ‘ಕಾಲ್ಪನಿಕ’ ಎಂದು ಬರೆಯಲಾಗಿದ್ದು, ಇದು ವಿವೇಕ್​ರ ಅಸಮಾಧಾನಕ್ಕೆ ಕಾರಣವಾಗಿದೆ. ಬರಹದ ಸ್ಕ್ರೀನ್​ಶಾಟ್​ಅನ್ನು ಟ್ವಿಟರ್​ ಮೂಲಕ ಹಂಚಿಕೊಂಡಿರುವ ವಿವೇಕ್, ಆನ್​ಲೈನ್ ವಿಶ್ವಕೋಶ ಎಂದೇ ಕರೆಯಲಾಗುವ ವಿಕಿಪೀಡಿಯಾವನ್ನು ತರಾಟೆ ತೆಗೆದುಕೊಂಡಿದ್ದಾರೆ. ‘‘ಪ್ರಿಯ ವಿಕಿಪೀಡಿಯಾ, ನಿಮ್ಮ ಬರಹದಲ್ಲಿ ಇಸ್ಲಾಮೋಫೋಬಿಯಾ, ಧರ್ಮಾಂಧ.. ಮೊದಲಾದ ಪದಗಳನ್ನು ಸೇರಿಸಲು ಮರೆತಿದ್ದೀರಿ. ನೀವು ನಿಮ್ಮ ಜಾತ್ಯಾತೀತ ನಿಲುವನ್ನು ಉಲ್ಲಂಘಿಸುತ್ತಿದ್ದೀರಿ. ಇನ್ನಷ್ಟು ಹೀಗೇ ಎಡಿಟ್ (ತಿದ್ದುಪಡಿ) ಮಾಡಿ’’ ಎಂದು ಅಸಮಾಧಾನ ಹೊರಹಾಕಿದ್ದಾರೆ ವಿವೇಕ್ ಅಗ್ನಿಹೋತ್ರಿ.

ವಿಕಿಪೀಡಿಯಾ ಬರಹದಲ್ಲಿ ಏನಿತ್ತು?

ವಿಕಿಪೀಡಿಯಾ ಬರಹದಲ್ಲಿ ‘‘ದಿ ಕಾಶ್ಮೀರ್ ಫೈಲ್ಸ್ ಚಿತ್ರವು ಕಾಲ್ಪನಿಕ ಕತೆಯಾಗಿದೆ. 1990ರಲ್ಲಿ ಕಾಶ್ಮೀರಿ ಹಿಂದೂಗಳ ವಲಸೆಯನ್ನು ನರಮೇಧವಾಗಿ ತಪ್ಪಾಗಿ ಚಿತ್ರಿಸಲಾಗಿದ್ದು, ಈ ದೃಷ್ಟಿಕೋನವು ತಪ್ಪೆಂದು ವ್ಯಾಪಕವಾಗಿ ಹೇಳಲಾಗುತ್ತಿದೆ’’ ಎಂದು ಬರೆಯಲಾಗಿದೆ. ಈ ವಾಕ್ಯಕ್ಕೆ ವಿವೇಕ್ ಅಗ್ನಿಹೋತ್ರಿ ಅಸಮಾಧಾನ ಹೊರಹಾಕಿದ್ದಾರೆ.

ವಿವೇಕ್ ಟ್ವೀಟ್ ಇಲ್ಲಿದೆ:

ವಿದೇಶಿ ವರದಿಗಾರರ ಪತ್ರಿಕಾಗೋಷ್ಠಿ ರದ್ದು; ವಿವೇಕ್ ಅಗ್ನಿಹೋತ್ರಿ ಅಸಮಾಧಾನ:

ಇತ್ತೀಚಿನ ಬೆಳವಣಿಗೆಯಲ್ಲಿ ನವದೆಹಲಿಯಲ್ಲಿ ಮೇ 5ರಂದು ಆಯೋಜಿಸಲು ಉದ್ದೇಶಿಸಲಾಗಿದ್ದ, ವಿದೇಶಿ ವರದಿಗಾರರ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿರುವುದಕ್ಕೆ ವಿವೇಕ್ ಅಗ್ನಿಹೋತ್ರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ದಿ ಕಾಶ್ಮೀರ್ ಫೈಲ್ಸ್’ ಹಾಗೂ ಕಾಶ್ಮೀರಿ ಪಂಡಿತರ ನರಮೇಧದ ಬಗ್ಗೆ ಚರ್ಚಿಸಲು ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಆದರೆ ಕೆಲವು ಪ್ರಬಲ ಮಾಧ್ಯಮಗಳ ಬೆದರಿಕೆಯಿಂದ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ವಿವೇಕ್ ಅಗ್ನಿಹೋತ್ರಿ ಆರೋಪಿಸಿದ್ದಾರೆ. ಈ ಬಗ್ಗೆ ಟ್ವಿಟರ್​ನಲ್ಲಿ ವಿಡಿಯೋ ಮೂಲಕ ಅವರು ಸಂದೇಶ ಹಂಚಿಕೊಂಡಿದ್ದಾರೆ.

ಕೆಲವು ಮಾಧ್ಯಮಗಳು ಗೋಷ್ಠಿಯನ್ನು ರದ್ದು ಮಾಡುವಂತೆ ಹೇಳಿದ್ದು, ಇಲ್ಲವಾದಲ್ಲಿ ಸಾಮೂಹಿಕ ರಾಜಿನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ವಿದೇಶಿ ವರದಿಗಾರರ ಕ್ಲಬ್​ನ ಅಧ್ಯಕ್ಷರು ಕರೆ ಮಾಡಿ ಸುದ್ದಿಗೋಷ್ಠಿ ರದ್ದಾದ ಬಗ್ಗೆ ಮಾಹಿತಿ ನೀಡಿದರು. ಇದು ವಾಕ್ ಸ್ವಾತಂತ್ರ್ಯದ ಉಲ್ಲಂಘನೆ, ದ್ವೇಷಪೂರಿತ ಅಭಿಯಾನದ ಪ್ರಭಾವ ಎಂದು ವಿವೇಕ್ ಅಗ್ನಿಹೋತ್ರಿ ವಿಡಿಯೋದಲ್ಲಿ ಆರೋಪಿಸಿದ್ದಾರೆ. ಅಲ್ಲದೇ ಮೇ 5ರಂದು ಸುದ್ದಿಗೋಷ್ಠಿ ನಡೆಸುವುದಾಗಿಯೂ ಅವರು ತಿಳಿಸಿದ್ದಾರೆ.

ಮಾರ್ಚ್ 11ರಂದು ತೆರೆಕಂಡಿದ್ದ ‘ದಿ ಕಾಶ್ಮೀರ್ ಫೈಲ್ಸ್’ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದಲ್ಲದೇ, ಗಳಿಕೆಯಲ್ಲೂ ದಾಖಲೆ ಬರೆಯಿತು. ಹಲವು ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿ, ಬೆಂಬಲ ನೀಡಿದವು. ಬಾಕ್ಸಾಫೀಸ್​ನಲ್ಲಿ ಸುಮಾರು 331 ಕೋಟಿ ರೂಗಳನ್ನು ಚಿತ್ರವು ಗಳಿಸಿತ್ತು. ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮೊದಲಾದ ಖ್ಯಾತ ತಾರೆಯರು ಬಣ್ಣಹಚ್ಚಿರುವ ಈ ಚಿತ್ರವು ಮೇ 13ರಿಂದ ಜೀ5 ಒಟಿಟಿಯಲ್ಲಿ ಬಿತ್ತರವಾಗಲಿದೆ.

ಇನ್ನಷ್ಟು ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: ಒಟಿಟಿಗೆ ಬರ್ತಿದೆ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ; ಕನ್ನಡ ಪ್ರೇಕ್ಷಕರಿಗೂ ಇಲ್ಲಿದೆ ಒಂದು ಗುಡ್​ ನ್ಯೂಸ್​

Dhanush: ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ; ಮದ್ರಾಸ್ ಹೈಕೋರ್ಟ್​​ನಿಂದ ನಟನಿಗೆ ಸಮನ್ಸ್- ಏನಿದು ಪ್ರಕರಣ?

Published On - 5:02 pm, Tue, 3 May 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ