Dhanush: ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ; ಮದ್ರಾಸ್ ಹೈಕೋರ್ಟ್​​ನಿಂದ ನಟನಿಗೆ ಸಮನ್ಸ್- ಏನಿದು ಪ್ರಕರಣ?

ಧನುಷ್ ತಮ್ಮ ಮಗ ಎಂದು ಕತಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಎಂಬುವವರು ಆರೋಪಿಸಿದ್ದಾರೆ. ಕೆಲವು ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದ್ದು, ಧನುಷ್ ಅವರು ಪಿತೃತ್ವ ಪರೀಕ್ಷೆಯ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಕತಿರೇಸನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕತಿರೇಸನ್ ಧನುಷ್​ರ ನಿಜವಾದ ತಂದೆ ಎಂದು ಹೇಳಿಕೊಳ್ಳುತ್ತಿದ್ದಾರೆ.

Dhanush: ಧನುಷ್ ತಮ್ಮ ಮಗ ಎಂದು ಹೇಳಿಕೊಂಡ ದಂಪತಿ; ಮದ್ರಾಸ್ ಹೈಕೋರ್ಟ್​​ನಿಂದ ನಟನಿಗೆ ಸಮನ್ಸ್- ಏನಿದು ಪ್ರಕರಣ?
ಧನುಷ್
Follow us
| Updated By: shivaprasad.hs

Updated on:May 03, 2022 | 4:26 PM

ಕಾಲಿವುಡ್ ನಟ ಧನುಷ್ (Dhanush) ಅವರನ್ನು ತಮ್ಮ ಮಗ ಎಂದು ಹೇಳಿಕೊಳ್ಳುವ ದಂಪತಿಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್‌ನಿಂದ (Madras High Court) ನಟನಿಗೆ ಸಮನ್ಸ್ ಜಾರಿಯಾಗಿದೆ. ಧನುಷ್ ತಮ್ಮ ಮಗ ಎಂದು ಕತಿರೇಸನ್ ಮತ್ತು ಅವರ ಪತ್ನಿ ಮೀನಾಕ್ಷಿ ಎಂಬುವವರು ಆರೋಪಿಸಿದ್ದಾರೆ. ಕೆಲವು ವರ್ಷಗಳಿಂದ ಈ ಪ್ರಕರಣ ನಡೆಯುತ್ತಿದ್ದು, ಧನುಷ್ ಅವರು ಪಿತೃತ್ವ ಪರೀಕ್ಷೆಯ ನಕಲಿ ದಾಖಲೆಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಿ ಕತಿರೇಸನ್ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕತಿರೇಸನ್ ಧನುಷ್​ರ ನಿಜವಾದ ತಂದೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ 2020ರಲ್ಲಿ ನ್ಯಾಯಾಲಯವು ಪ್ರಕರಣವನ್ನು ವಜಾಗೊಳಿಸಿ ಪಿತೃತ್ವ ದಾಖಲೆಗಳನ್ನು ನಕಲಿ ಎಂದು ಸಾಬೀತುಪಡಿಸಲು ಯಾವುದೇ ಪೂರಕ ದಾಖಲೆಗಳಿಲ್ಲ ಎಂದು ಹೇಳಿತ್ತು. ಇದೀಗ ನ್ಯಾಯಾಲಯದ ಆ ಆದೇಶವನ್ನು ರದ್ದುಗೊಳಿಸುವಂತೆ ಕತಿರೇಸನ್ ಮತ್ತೆ ಮನವಿ ಸಲ್ಲಿಸಿದ್ದಾರೆ ಎಂದು ವರದಿಗಳು ಹೇಳಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ರಾನ್ ಹೈಕೋರ್ಟ್​​ನಿಂದ ಧನುಷ್​ಗೆ ಸಮನ್ಸ್ ನೀಡಲಾಗಿದೆ ಮತ್ತು ವಿಚಾರಣೆಗೆ ಅನುಮತಿ ಕೋರಲಾಗಿದೆ ಎಂದು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಕತಿರೇಸನ್ ಅವರ ಮನವಿಯನ್ನು ಈ ಹಿಂದೆ ಮಧುರೈ ಹೈಕೋರ್ಟ್ ಪೀಠವು ತಿರಸ್ಕರಿಸಿತ್ತು. ಇದೀಗ ಮದ್ರಾಸ್ ಹೈಕೋರ್ಟ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನುಷ್ ವಿರುದ್ಧ ನೋಟಿಸ್ ಜಾರಿ ಮಾಡಿದೆ ಎಂದು ವರದಿಗಳು ತಿಳಿಸಿವೆ.

ದಂಪತಿಗಳು ಹೇಳಿದ್ದೇನು? ಧನುಷ್ ಪ್ರತಿಕ್ರಿಯೆ ಏನು?

ಕತಿರೇಸನ್ ಮತ್ತು ಮೀನಾಕ್ಷಿ ಅವರು ಧನುಷ್ ತಮ್ಮ ಮೂರನೇ ಮಗ ಎಂದು ಹೇಳಿಕೊಂಡಿದ್ದರು. ಚಲನಚಿತ್ರ ರಂಗದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ಧನುಷ್ ತಮ್ಮ ತವರು ಪಟ್ಟಣವನ್ನು ತೊರೆದು ಚೆನ್ನೈಗೆ ಹೋಗಿದ್ದರು. ನಿಜವಾದ ಪೋಷಕರಾಗಿರುವ ತಮಗೆ ಮಾಸಿಕ 65,000 ರೂ ಪರಿಹಾರ ನೀಡಬೇಕೆಂದು ದಂಪತಿಗಳು ಕೋರಿಕೊಂಡಿದ್ದರು.

ಈ ಪ್ರಕರಣವು ನ್ಯಾಯಾಲಯದಲ್ಲಿ ವರ್ಷಗಳಿಂದ ವಿಚಾರಣೆಯಲ್ಲಿದೆ. ನ್ಯಾಯಾಲಯದಲ್ಲಿ ಕತಿರೇಸನ್ ಹಾಗೂ ಮೀನಾಕ್ಷಿ ದಂಪತಿಗಳು ಮಾಡಿದ ಎಲ್ಲಾ ಆರೋಪಗಳನ್ನು ಧನುಷ್ ನಿರಾಕರಿಸಿದ್ದಾರೆ ಎಂದು ವರದಿಗಳು ಹೇಳಿವೆ.

ಹಾಲಿವುಡ್ ಪದಾರ್ಪಣೆಗೆ ಸಿದ್ಧವಾದ ಧನುಷ್:

ಚಿತ್ರಗಳ ವಿಷಯಕ್ಕೆ ಬಂದರೆ ನಟ ಧನುಷ್ ಹಾಲಿವುಡ್ ಪದಾರ್ಪಣೆಗೆ ಸಿದ್ಧರಾಗಿದ್ದಾರೆ. ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಒಟಿಟಿ ಸಂಸ್ಥೆ ನೆಟ್​ಫ್ಲಿಕ್ಸ್​ನ ಮೂಲ ಚಿತ್ರವಾದ​​ ‘ದಿ ಗ್ರೇ ಮ್ಯಾನ್’ನಲ್ಲಿ (The Gray Man) ಧನುಷ್ ಬಣ್ಣಹಚ್ಚುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮೊದಲ ಲುಕ್ ರಿವೀಲ್ ಮಾಡಲಾಗಿತ್ತು. ಆಕ್ಷನ್ ಅವತಾರದಲ್ಲಿ ಧನುಷ್ ಕಾಣಿಸಿಕೊಂಡಿದ್ದರು.

View this post on Instagram

A post shared by Dhanush (@dhanushkraja)

‘ದಿ ಗ್ರೇ ಮ್ಯಾನ್’ ಚಿತ್ರವನ್ನು ಅಂಥೋನಿ ಹಾಗೂ ಜೋ ರಸ್ಸೋ ನಿರ್ದೇಶಿಸುತ್ತಿದ್ದಾರೆ. ಮಾರ್ಕ್ ಗ್ರೇನಿ ಅವರ ‘ದಿ ಗ್ರೇ ಮ್ಯಾನ್’ ಎಂಬ ಕಾದಂಬರಿ ಆಧಾರಿತ ಚಿತ್ರ ಇದಾಗಿದ್ದು, ದೊಡ್ಡ ಪಾತ್ರವರ್ಗವೇ ಚಿತ್ರದಲ್ಲಿದೆ. ರಯಾನ್ ಗೊಸ್ಲಿಂಗ್, ಕ್ರಿಸ್ ಇವಾನ್ಸ್, ಅನಾ ಡಿ ಅರ್ಮಾಸ್, ರೆಗೆ-ಜೀನ್ ಪೇಜ್, ಜೆಸ್ಸಿಕಾ ಹೆನ್‌ವಿಕ್, ಬಿಲ್ಲಿ ಬಾಬ್ ಥಾರ್ನ್‌ಟನ್, ವ್ಯಾಗ್ನರ್ ಮೌರಾ ಮೊದಲಾದವರು ಬಣ್ಣಹಚ್ಚುತ್ತಿದ್ದಾರೆ. ಜುಲೈ 22ರಿಂದ ‘ದಿ ಗ್ರೇ ಮ್ಯಾನ್’ ನೆಟ್​ಫ್ಲಿಕ್ಸ್​ನಲ್ಲಿ ಬಿತ್ತರವಾಗಲಿದೆ.

ಇನ್ನಷ್ಟು ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Aishwaryaa Rajinikanth: ಧನುಷ್ ‘ಫ್ರೆಂಡ್’ ಎಂದು ಕರೆದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ ಐಶ್ವರ್ಯಾ!

ಧನುಷ್​-ಐಶ್ವರ್ಯಾ ಲವ್​ ಸ್ಟೋರಿ; 21ನೇ ವಯಸ್ಸಿಗೆ ಪ್ರೀತಿಸಿ ಮದುವೆ ಆಗಿದ್ದ ನಟ

Published On - 4:18 pm, Tue, 3 May 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್