Aishwaryaa Rajinikanth: ಧನುಷ್ ‘ಫ್ರೆಂಡ್’ ಎಂದು ಕರೆದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ ಐಶ್ವರ್ಯಾ!

Dhanush: ಮಾಜಿ ಪತಿ ಧನುಷ್ 'ಫ್ರೆಂಡ್' ಎಂದು ಕರೆದ ಬೆನ್ನಲ್ಲೇ ಐಶ್ವರ್ಯಾ ರಜಿನಿಕಾಂತ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೆಸರನ್ನು ಬದಲಾಯಿಸಿದ್ದಾರೆ‌. ಇದು ಕಾಕತಾಳೀಯವಾದರೂ ಅಭಿಮಾನಿ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Aishwaryaa Rajinikanth: ಧನುಷ್ ‘ಫ್ರೆಂಡ್’ ಎಂದು ಕರೆದ ಬೆನ್ನಲ್ಲೇ ಟ್ವಿಟರ್​ನಲ್ಲಿ ಹೆಸರು ಬದಲಾಯಿಸಿದ ಐಶ್ವರ್ಯಾ!
ಐಶ್ವರ್ಯಾ ರಜಿನಿಕಾಂತ್
TV9kannada Web Team

| Edited By: shivaprasad.hs

Mar 24, 2022 | 2:15 PM

ಮಾಜಿ ಪತಿ ಧನುಷ್ (Dhanush) ‘ಫ್ರೆಂಡ್’ ಎಂದು ಕರೆದ ಬೆನ್ನಲ್ಲೇ ಐಶ್ವರ್ಯಾ ರಜಿನಿಕಾಂತ್ (Aishwaryaa Rajinikanth) ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹೆಸರನ್ನು ಬದಲಾಯಿಸಿದ್ದಾರೆ‌. ಹೌದು, ಅಚ್ಚರಿಯಾದರೂ ಇದು ಸತ್ಯ. ಐಶ್ವರ್ಯಾ ಹಾಗೂ ಧನುಷ್ ಕೆಲ ಸಮಯದ ಹಿಂದೆ ವೈವಾಹಿಕ ಜೀವನದಿಂದ ಬೇರೆಯಾಗಿದ್ದರು. ಅದಾಗ್ಯೂ ಈರ್ವರೂ ಸ್ನೇಹದಿಂದ ಮುಂದುವರೆಯುವುದಾಗಿ ಹೇಳಿಕೊಂಡಿದ್ದರು. ಐಶ್ವರ್ಯಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ‘ಐಶ್ವರ್ಯಾ ಧನುಷ್’ ಎಂಬ ಹೆಸರನ್ನೇ ಉಳಿಸಿಕೊಂಡಿದ್ದರು. ಈ ವಿಚಾರ ಆಗಾಗ ಅಭಿಮಾನಿ ವಲಯದಲ್ಲಿ ಚರ್ಚೆಯಾಗುತ್ತಿತ್ತು. ಇದೀಗ ಐಶ್ವರ್ಯಾ ತಮ್ಮ ಖಾತೆಯಿಂದ ಧನುಷ್ ಹೆಸರನ್ನು ತೆಗೆದಿದ್ದಾರೆ. ಪ್ರಸ್ತುತ ತಮ್ಮ ಹೆಸರನ್ನು ‘ಐಶ್ವರ್ಯಾ ರಜಿನಿಕಾಂತ್’ ಎಂದು ಅವರು ಬದಲಾಯಿಸಿಕೊಂಡಿದ್ದಾರೆ. ಟ್ವಿಟರ್​ ಹಾಗೂ ಇನ್​ಸ್ಟಾಗ್ರಾಂ ಎರಡರಲ್ಲೂ ಐಶ್ವರ್ಯಾ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಧನುಷ್ ‘ಫ್ರೆಂಡ್’ ಎಂದು ಕರೆದಿದ್ದೇಕೆ?

ಕಳೆದ ವಾರ ಐಶ್ವರ್ಯಾ ನಿರ್ದೇಶನದ ಹಾಡು ‘ಪಯಣಿ’ ರಿಲೀಸ್ ಆಗಿತ್ತು. ಹಿಂದಿ, ತಮಿಳು, ತೆಲುಗು, ಮಲಯಾಳಂ ಹಾಗೂ ಕನ್ನಡದಲ್ಲಿ ಹಾಡು ರಿಲೀಸ್ ಆಗಿತ್ತು. ಇದರ ಲಿಂಕ್ ಹಂಚಿಕೊಂಡಿದ್ದ ಧನುಷ್, “ಕಂಗ್ರಾಟ್ಸ್ ಮೈ ಫ್ರೆಂಡ್, ದೇವರು ಒಳ್ಳೆಯದು ಮಾಡಲಿ” ಎಂದು ಬರೆದಿದ್ದರು. ಇದಕ್ಕೆ ಉತ್ತರಿಸಿದ್ದ ಐಶ್ವರ್ಯಾ, “ಧನ್ಯವಾದಗಳು ಧನುಷ್” ಎಂದು ಪ್ರತಿಕ್ರಿಯಿಸಿದ್ದರು. ವಿಚ್ಛೇದನದ ನಂತರ ಈ ತಾರಾ ಜೋಡಿ ಸಾಮಾಜಿಕ ಜಾಲತಾಣಗಳಲ್ಲಿ ಹೀಗೆ ಬಹಿರಂಗವಾಗಿ ಪ್ರತಿಕ್ರಿಯಿಸಿದ್ದು ಅದೇ ಮೊದಲಾಗಿತ್ತು. ಇದೀಗ ಧನುಷ್ ‘ಫ್ರೆಂಡ್’ ಎಂದು ಕರೆದ ನಂತರ ಐಶ್ವರ್ಯಾ ತಮ್ಮ ಹೆಸರನ್ನು ಬದಲಾಯಿಸಿರುವುದು ಅಭಿಮಾನಿ ವಲಯದಲ್ಲಿ ಕುತೂಹಲ ಮೂಡಿಸಿದೆ. ಇದು ಕಾಕತಾಳೀಯವಾದರೂ ಕೂಡ ಚರ್ಚೆಯಾಗುತ್ತಿರುವುದು ಸುಳ್ಳಲ್ಲ!

ಐಶ್ವರ್ಯಾ ಅವರು ನಟ ರಜನಿಕಾಂತ್ ಹಿರಿಯ ಪುತ್ರಿ. ವೃತ್ತಿಯಲ್ಲಿ ಅವರು ನಿರ್ದೇಶಕಿ ಹಾಗೂ ಗಾಯಕಿ. ಇವರು 2004ರ ನವೆಂಬರ್ 18ರಂದು ನಟ ಧನುಷ್ ಜತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

Aishwaryaa Rajinikanth twitter name changed

ಐಶ್ವರ್ಯಾ ರಜಿನಿಕಾಂತ್ ಹೊಸ ಹೆಸರು

ಬಾಲಿವುಡ್​ಗೆ ಕಾಲಿಡಲಿದ್ದಾರಂತೆ ಐಶ್ವರ್ಯಾ:

ಐಶ್ವರ್ಯಾ ವೈಯಕ್ತಿಕ ಜೀವನದ ಚರ್ಚೆಯ ನಡುವೆಯೇ ಅವರ ವೃತ್ತಿ ಜೀವನದ ಬಗ್ಗೆ ಇತ್ತೀಚೆಗೆ ಮಹತ್ತರ ವಿಚಾರವೊಂದು ಹೊರಬಿದ್ದಿತ್ತು. ಐಶ್ವರ್ಯಾ ನಿರ್ದೇಶನದ ಕ್ಯಾಪ್ ತೊಟ್ಟು ಬಾಲಿವುಡ್​ಗೆ ಕಾಲಿಡಲಿದ್ದಾರೆ ಎಂದು ವರದಿಯಾಗಿತ್ತು. ಇಟೈಮ್ಸ್​ ವರದಿ ಮಾಡಿದ ಪ್ರಕಾರ, ಐಶ್ವರ್ಯಾ ರಜನಿಕಾಂತ್ ಬಾಲಿವುಡ್​ಗೆ ಕಾಲಿಡೋಕೆ ರೆಡಿ ಆಗಿದ್ದಾರೆ. ಅಮಿತಾಭ್​ ಬಚ್ಚನ್​ ನಟನೆಯ ‘ಝುಂಡ್​’ ಸಿನಿಮಾ ನಿರ್ಮಾಣ ಮಾಡಿದ್ದ ಮೀನೂ ಅರೋರಾ ಈ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ‘ಓಹ್​ ಸಾತಿ ಚಲ್’ ಎಂದು ಚಿತ್ರಕ್ಕೆ ಶೀರ್ಷಿಕೆ ಇಡಲಾಗಿದೆ ಎಂದು ವರದಿ ಆಗಿದೆ. ಈ ಬಗ್ಗೆ  ಅವರ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಈ ಬಗ್ಗೆ ಶೀಘ್ರವೇ ಅವರು ಘೋಷಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:

ವಿಚ್ಛೇದನದ ನಂತರ ಇದೇ ಮೊದಲ ಬಾರಿಗೆ ಒಂದು ದೊಡ್ಡ ಸಾಹಸಕ್ಕೆ ಮುಂದಾದ ಐಶ್ವರ್ಯಾ ರಜನಿಕಾಂತ್

ವಿಚ್ಛೇದನ ಬಳಿಕ ಮೊದಲ ಬಾರಿಗೆ ಮಾಜಿ ಪತ್ನಿ ಐಶ್ವರ್ಯಾಗೆ ಶುಭಾಶಯ ತಿಳಿಸಿದ ಧನುಷ್

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada