AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

The Gray Man First Look: ಧನುಷ್ ನಟನೆಯ ಮೊದಲ ಹಾಲಿವುಡ್ ಚಿತ್ರದ ಪೋಸ್ಟರ್​ ವೈರಲ್; ಯಾವಾಗ ರಿಲೀಸ್?

Dhanush | Netflix: ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಒಟಿಟಿ ಸಂಸ್ಥೆ ನೆಟ್​ಫ್ಲಿಕ್ಸ್​ನ ಮೂಲ ಚಿತ್ರವಾದ​​ ‘ದಿ ಗ್ರೇ ಮ್ಯಾನ್’ನಲ್ಲಿ ಧನುಷ್ ಬಣ್ಣಹಚ್ಚುತ್ತಿದ್ದಾರೆ. ಇದೀಗ ಚಿತ್ರದಲ್ಲಿ ಧನುಷ್ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಆಗಿದೆ.

The Gray Man First Look: ಧನುಷ್ ನಟನೆಯ ಮೊದಲ ಹಾಲಿವುಡ್ ಚಿತ್ರದ ಪೋಸ್ಟರ್​ ವೈರಲ್; ಯಾವಾಗ ರಿಲೀಸ್?
‘ದಿ ಗ್ರೇ ಮ್ಯಾನ್’ ಚಿತ್ರದಲ್ಲಿ ಧನುಷ್
TV9 Web
| Edited By: |

Updated on:Apr 27, 2022 | 3:52 PM

Share

ಕಾಲಿವುಡ್ ನಟ ಧನುಷ್ (Dhanush) ಇದೀಗ ಭಾಷೆಗಳನ್ನು ಮೀರಿ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ತಮಿಳಿನ ಜತೆಗೆ ಹಿಂದಿಯಲ್ಲೂ ಮಿಂಚಿದ್ದ ನಟ ಈಗ ಹಾಲಿವುಡ್​ಗೆ ಪದಾರ್ಪಣೆ ಮಾಡುತ್ತಿದ್ದಾರೆ. ಈ ಬಗ್ಗೆ ಕೆಲವು ಸಮಯದ ಹಿಂದೆಯೇ ಘೋಷಣೆಯಾಗಿತ್ತು. ಜಾಗತಿಕ ಮಟ್ಟದಲ್ಲಿ ಜನಪ್ರಿಯವಾಗಿರುವ ಒಟಿಟಿ ಸಂಸ್ಥೆ ನೆಟ್​ಫ್ಲಿಕ್ಸ್​ನ (Netflix) ಮೂಲ ಚಿತ್ರವಾದ​​ ‘ದಿ ಗ್ರೇ ಮ್ಯಾನ್’ನಲ್ಲಿ (The Gray Man) ಧನುಷ್ ಬಣ್ಣಹಚ್ಚುತ್ತಿದ್ದಾರೆ. ಇದೀಗ ಚಿತ್ರದಲ್ಲಿ ಧನುಷ್ ಪಾತ್ರ ಹೇಗಿರಲಿದೆ ಎಂಬುದು ರಿವೀಲ್ ಮಾಡಲಾಗಿದೆ. ಧನುಷ್ ಪಾತ್ರ ಸೇರಿದಂತೆ ಚಿತ್ರದ ಪ್ರಮುಖ ಪಾತ್ರಗಳನ್ನು ಪರಿಚಯಿಸಲಾಗಿದ್ದು, ಸ್ಟಿಲ್​ಗಳನ್ನು ನೆಟ್​ಫ್ಲಿಕ್ಸ್ ಹಂಚಿಕೊಂಡಿದೆ. ಇದರೊಂದಿಗೆ ಚಿತ್ರದ ರಿಲೀಸ್ ಬಗ್ಗೆಯೂ ಮಾಹಿತಿಯನ್ನು ನೀಡಲಾಗಿದೆ. ನಟ ಧನುಷ್ ಕೂಡ ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಜುಲೈ 22ರಿಂದ ‘ದಿ ಗ್ರೇ ಮ್ಯಾನ್’ ನೆಟ್​ಫ್ಲಿಕ್ಸ್​ನಲ್ಲಿ ಬಿತ್ತರವಾಗಲಿದೆ.

‘ದಿ ಗ್ರೇ ಮ್ಯಾನ್’ ಚಿತ್ರವನ್ನು ಅಂಥೋನಿ ಹಾಗೂ ಜೋ ರಸ್ಸೋ ನಿರ್ದೇಶಿಸುತ್ತಿದ್ದಾರೆ. ದೊಡ್ಡ ಪಾತ್ರವರ್ಗವೇ ಚಿತ್ರದಲ್ಲಿದ್ದು ರಯಾನ್ ಗೊಸ್ಲಿಂಗ್, ಕ್ರಿಸ್ ಇವಾನ್ಸ್, ಅನಾ ಡಿ ಅರ್ಮಾಸ್, ರೆಗೆ-ಜೀನ್ ಪೇಜ್, ಜೆಸ್ಸಿಕಾ ಹೆನ್‌ವಿಕ್, ಬಿಲ್ಲಿ ಬಾಬ್ ಥಾರ್ನ್‌ಟನ್, ವ್ಯಾಗ್ನರ್ ಮೌರಾ ಮೊದಲಾದವರು ಬಣ್ಣಹಚ್ಚುತ್ತಿದ್ದಾರೆ.

ನೆಟ್​ಫ್ಲಿಕ್ಸ್ ಇಂಡಿಯಾ ‘ದಿ ಗ್ರೇ ಮ್ಯಾನ್’ ಚಿತ್ರದಲ್ಲಿ ಧನುಷ್ ಪಾತ್ರದ ಮೊದಲ ಲುಕ್ ಹಂಚಿಕೊಂಡಿದೆ. ಮಾಸ್ ಅವತಾರದಲ್ಲಿ 38 ವರ್ಷದ ನಟ ಕಾಣಿಸಿಕೊಂಡಿದ್ದಾರೆ. ಕಾರ್​ನ ಮೇಲ್ಭಾಗದಲ್ಲಿ ಆಕ್ಷನ್​ ಮೋಡ್​ನಲ್ಲಿ ಧನುಷ್ ನಿಂತಿದ್ದು, ಮುಖದಲ್ಲಿ ರಕ್ತದ ಕಲೆಯಿದೆ. ಈ ಮೂಲಕ ಧನುಷ್ ಪಾತ್ರದ ಬಗ್ಗೆ ತೀವ್ರ ಕುತೂಹಲವನ್ನು ಸೃಷ್ಟಿಸಿದೆ ಚಿತ್ರತಂಡ.

ನೆಟ್​ಫ್ಲಿಕ್ಸ್ ಇಂಡಿಯಾ ಹಂಚಿಕೊಂಡ ಟ್ವೀಟ್:

ಚಿತ್ರದಲ್ಲಿನ ವಿವಿಧ ಪಾತ್ರಗಳ ಲುಕ್ ಹೇಗಿದೆ? ಇಲ್ಲಿದೆ ನೋಡಿ

ಮಾರ್ಕ್ ಗ್ರೇನಿ ಅವರ ‘ದಿ ಗ್ರೇ ಮ್ಯಾನ್’ ಎಂಬ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಧನುಷ್ ಚಿತ್ರಗಳ ವಿಷಯಕ್ಕೆ ಬಂದರೆ ನಟ ತಮಿಳಿನಲ್ಲಿ ‘ಮಾರನ್’ ಚಿತ್ರದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹಿಂದಿಯ ‘ಅತರಂಗಿ ರೇ’ ಚಿತ್ರದಲ್ಲೂ ಧನುಷ್ ಬಣ್ಣಹಚ್ಚಿದ್ದರು. ಅದರಲ್ಲಿ ಅಕ್ಷಯ್ ಕುಮಾರ್, ಸಾರಾ ಅಲಿ ಖಾನ್ ಮೊದಲಾದ ತಾರೆಯರು ನಟಿಸಿದ್ದರು.

ಇದನ್ನೂ ಓದಿ: ‘ಕೆಜಿಎಫ್​ 2’ ಮಾತ್ರವಲ್ಲ, ಅತಿ ಹೆಚ್ಚು ಕಲೆಕ್ಷನ್​ ಮಾಡಿದ ಟಾಪ್​ 10 ಸಿನಿಮಾಗಳ ಲಿಸ್ಟ್​ ಇಲ್ಲಿದೆ..

Sara Tendulkar: ಬಾಲಿವುಡ್​ ಪ್ರವೇಶಕ್ಕೂ ಮುನ್ನವೇ ಸಖತ್ ಸುದ್ದಿಯಾಗುತ್ತಿರುವ ಸಾರಾ ತೆಂಡೂಲ್ಕರ್

Published On - 3:48 pm, Wed, 27 April 22