AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಬ್ಬಬ್ಬಾ.. ಮದುವೆಯಲ್ಲಿ ಡ್ಯಾನ್ಸ್ ಮಾಡೋಕೆ ಶಾರುಖ್​, ಸಲ್ಮಾನ್​, ಹೃತಿಕ್ ಪಡೆಯುವ ಸಂಭಾವನೆ ಇಷ್ಟೊಂದಾ?

ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಅವರ ಹಲವು ಸಿನಿಮಾಗಳು ಸೋತಿರಬಹುದು. ನಟನೆಗೆ ಕೊಂಚ ಬ್ರೇಕ್ ನೀಡಿರಬಹುದು. ಆದರೆ, ಅವರ ಖ್ಯಾತಿ ಕಡಿಮೆ ಆಗಿಲ್ಲ. ಶಾರುಖ್​ ಖಾನ್ ಮದುವೆಯಲ್ಲಿ ಡ್ಯಾನ್ಸ್ ಮಾಡೋಕೆ 3 ಕೋಟಿ ರೂಪಾಯಿ ಪಡೆಯುತ್ತಾರೆ.

ಅಬ್ಬಬ್ಬಾ.. ಮದುವೆಯಲ್ಲಿ ಡ್ಯಾನ್ಸ್ ಮಾಡೋಕೆ ಶಾರುಖ್​, ಸಲ್ಮಾನ್​, ಹೃತಿಕ್ ಪಡೆಯುವ ಸಂಭಾವನೆ ಇಷ್ಟೊಂದಾ?
ಶಾರುಖ್​, ಸಲ್ಮಾನ್​, ರಣವೀರ್
TV9 Web
| Edited By: |

Updated on:May 03, 2022 | 9:38 AM

Share

ಒಮ್ಮೆ ಸೆಲೆಬ್ರಿಟಿ ಪಟ್ಟ ಸಿಕ್ಕರೆ ಸಾಕು, ಸಿನಿಮಾ ಮಾತ್ರವಲ್ಲದೆ ಬೇರೆ ಮೂಲಗಳಿಂದಲೂ ಆದಾಯ ಹರಿದುಬರುತ್ತದೆ. ಉದ್ಘಾಟನೆ ವೇಳೆ ರಿಬ್ಬನ್ ಕಟ್ ಮಾಡಿದರೆ ಲಕ್ಷಲಕ್ಷ ಹಣ ಜೇಬಿಗೆ ಇಳಿಯುತ್ತದೆ. ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಾಕಿದರೆ ದುಡ್ಡು ಬರುತ್ತದೆ. ಮದುವೆಗಳಲ್ಲಿ ಡ್ಯಾನ್ಸ್ ಮಾಡಿಯೂ ಸೆಲೆಬ್ರಿಟಿಗಳು (Celebrity) ಹಣ ಮಾಡುತ್ತಾರೆ ಅನ್ನೋದು ಹಲವರಿಗೆ ಗೊತ್ತಿಲ್ಲದ ವಿಚಾರ. ಹೌದು, ದೊಡ್ಡ ದೊಡ್ಡ ಉದ್ಯಮಿಗಳು, ರಾಜಕಾರಣಿಗಳ ಮದುವೆಗಳಲ್ಲಿ ಸೆಲೆಬ್ರಿಟಿಗಳು ಹೋಗಿ ಡ್ಯಾನ್ಸ್ ಮಾಡಿ ಬರುತ್ತಾರೆ. ಈ ಮೂಲಕ ಬಂದ ಅತಿಥಿಗಳನ್ನು ರಂಜಿಸುತ್ತಾರೆ. ಇದಕ್ಕೆ ಅವರು ಬಹಳ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಬಾಲಿವುಡ್ (Bollywood)​ ಮಂದಿ ಈ ಕೆಲಸಕ್ಕೆ ಪಡೆಯುವ ರೆಮ್ಯುನರೇಷನ್​ ಕೋಟಿ ಲೆಕ್ಕದಲ್ಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಶಾರುಖ್​ ಖಾನ್ ಮದುವೆಯಲ್ಲಿ ಡ್ಯಾನ್ಸ್ ಮಾಡೋಕೆ 3 ಕೋಟಿ ರೂಪಾಯಿ ಪಡೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಶಾರುಖ್ ಅವರ ಹಲವು ಸಿನಿಮಾಗಳು ಸೋತಿರಬಹುದು. ನಟನೆಗೆ ಕೊಂಚ ಬ್ರೇಕ್ ನೀಡಿರಬಹುದು. ಆದರೆ, ಅವರ ಖ್ಯಾತಿ ಕಡಿಮೆ ಆಗಿಲ್ಲ. ಈಗಲೂ ಅವರು ಬಾಲಿವುಡ್​ನಲ್ಲಿ ಕಿಂಗ್ ಖಾನ್​. ಈ ಕಾರಣಕ್ಕೆ ಅವರು ಇಷ್ಟು ದೊಡ್ಡ ಮಟ್ಟದ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ.

ಸಲ್ಮಾನ್ ಖಾನ್ ಕೂಡ ಬಾಲಿವುಡ್​ನ ಬೇಡಿಕೆಯ ನಟ. ಸಲ್ಲು ಭಾಯ್ ಅವರು ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ತುಂಬಾನೇ ದೊಡ್ಡದು. ಆದಾಗ್ಯೂ ನಿರ್ಮಾಪಕರು ಸಲ್ಮಾನ್ ಖಾನ್ ಕಾಲ್​ಶೀಟ್​ ಪಡೆಯಲು ಕ್ಯೂ ನಿಲ್ಲುತ್ತಾರೆ. ಅವರ ಜತೆ ಕೆಲಸ ಮಾಡಿದರೆ ನಷ್ಟವಂತೂ ಆಗುವುದಿಲ್ಲ ಎನ್ನುವ ನಂಬಿಕೆ ನಿರ್ಮಾಪಕರದ್ದು. ಅಷ್ಟು ದೊಡ್ಡ ಸ್ಟಾರ್​ ಡಮ್ ಹೊಂದಿದ್ದಾರೆ ಸಲ್ಲು. ಅವರು ಕೂಡ ವಿವಾಹ ಸಮಾರಂಭದಲ್ಲಿ ಹೆಜ್ಜೆ ಹಾಕೋಕೆ 3 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ ಎಂದು ವರದಿ ಆಗಿದೆ.

ಡ್ಯಾನ್ಸ್ ಮಾಡಿ ಕೋಟಿಕೋಟಿ ಪಡೆಯುವ ಇನ್ನೂ ಅನೇಕ ಸೆಲೆಬ್ರಿಟಿಗಳಿದ್ದಾರೆ. ಬಾಲಿವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿರುವ ಹೃತಿಕ್ ರೋಷನ್ ಎರಡು ಕೋಟಿ ರೂಪಾಯಿ, ಚಿತ್ರ ವಿಚಿತ್ರ ಬಟ್ಟೆ ಧರಿಸಿ ಕಾಣಿಸಿಕೊಳ್ಳುವ ರಣವೀರ್ ಸಿಂಗ್ 2 ಕೋಟಿ ರೂಪಾಯಿ, ದೀಪಿಕಾ ಪಡುಕೋಣೆ 1 ಕೋಟಿ ರೂಪಾಯಿ, ಕತ್ರಿನಾ ಕೈಫ್ ಕೂಡ ಒಂದು ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ.

ಇತರೆ ಮನರಂಜನೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ. 

ಇದನ್ನೂ ಓದಿ: ಶಾರುಖ್​ ಖಾನ್​ 8 ಪ್ಯಾಕ್​ ಬಾಡಿ ಫೋಟೋ ವೈರಲ್​; ‘ಪಠಾಣ್​’ ಚಿತ್ರದಲ್ಲಿ ಹೊಸ ಗೆಟಪ್​

ಶಾರುಖ್​ ಖಾನ್​-ಕಾಜೋಲ್​ ಮತ್ತೆ ಜೋಡಿ; ಈ ಬಾರಿ ಕೂಡ ಕರಣ್​ ಜೋಹರ್ ರೂವಾರಿ

Published On - 9:26 am, Tue, 3 May 22

Follow Us
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್​​ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್​​ನಲ್ಲೊಂದು ಭಾವೈಕ್ಯತೆಯ ಜಾತ್ರೆ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಚಾಮರಾಜನಗರದಲ್ಲಿ ಕಾಡುಗಳ್ಳರು ಮತ್ತೆ ಆ್ಯಕ್ಟಿವ್: ವಾರದಲ್ಲೇ ಎರಡು ಶಿಕಾರಿ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸಿಎಂ ಡಿಕೆ ಶಿವಕುಮಾರ್​ ನಡೆಗೆ ಹೈಕೋರ್ಟ್‌ನಿಂದ ಪ್ರಶಂಸೆ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಸೌತ್ ರುಚೀಸ್ ಹೋಟೆಲ್ ಮೇಲೆ ಎಫ್​ಡಿಎ ದಾಳಿ
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಇಡಿ ದಾಳಿ: ಬೆಂಗಳೂರಿನಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರಿಂದ ಹೈಡ್ರಾಮಾ!
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕುಡುಕರ ಆಶ್ರಯತಾಣವಾಯ್ತು ಕೋಟೆನಾಡಿನ ಗುರುಭವನ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಕೆಪಿಎಸ್‌ಸಿ ಅಕ್ರಮ: ಕಲಬುರ್ಗಿಯ ಅಭ್ಯರ್ಥಿಗೆ ಶಾಕ್​​ ಕೊಟ್ಟ ಸಿಐಡಿ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಸಿಡಬ್ಲ್ಯೂಆರ್‌ಸಿ ಆದೇಶ ಪ್ರಶ್ನಿಸಿ ಸುಪ್ರೀಂಗೆ ಹೋಗಲು ಸಿಎಂ ಸೂಚನೆ
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿಗೆ ಜಿಲ್ಲಾಡಳಿತದಿಂದ ಟಫ್ ರೂಲ್ಸ್