AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರುಖ್​ ಖಾನ್​-ಕಾಜೋಲ್​ ಮತ್ತೆ ಜೋಡಿ; ಈ ಬಾರಿ ಕೂಡ ಕರಣ್​ ಜೋಹರ್ ರೂವಾರಿ

ಕರಣ್​ ಜೋಹರ್​ ಅವರಿಗೆ ಶಾರುಖ್​ ಖಾನ್​ ಮತ್ತು ಕಾಜೋಲ್​ ಜೊತೆ ಉತ್ತಮ ಗೆಳೆತನ ಇದೆ. ಅನೇಕ ವರ್ಷಗಳಿಂದಲೂ ಈ ಮೂವರು ಸ್ನೇಹಿತರು.

ಶಾರುಖ್​ ಖಾನ್​-ಕಾಜೋಲ್​ ಮತ್ತೆ ಜೋಡಿ; ಈ ಬಾರಿ ಕೂಡ ಕರಣ್​ ಜೋಹರ್ ರೂವಾರಿ
ಕಾಜೋಲ್​, ಶಾರುಖ್​ ಖಾನ್​, ಕರಣ್​ ಜೋಹರ್​,
TV9 Web
| Edited By: |

Updated on: May 02, 2022 | 11:34 AM

Share

​ಹಲವು ಸಿನಿಮಾಗಳಲ್ಲಿ ಶಾರುಖ್​ ಖಾನ್​ (Shah Rukh Khan) ಮತ್ತು ಕಾಜೋಲ್​ ಅವರು ಜೋಡಿಯಾಗಿ ನಟಿಸಿದ್ದಾರೆ. ಬಾಲಿವುಡ್​ನಲ್ಲಿ ಅವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ‘ದಿಲ್​ವಾಲೆ ದುಲ್ಹನಿಯಾ ಲೇ ಜಾಯೇಂಗೆ’ ಸಿನಿಮಾದಿಂದಲೂ ಅವರಿಬ್ಬರ ಕಾಂಬಿನೇಷನ್​ ಬಗ್ಗೆ ಅಭಿಮಾನಿಗಳಿಗೆ ಎಲ್ಲಿಲ್ಲದಷ್ಟು ಕ್ರೇಜ್​ ಇದೆ. ‘ಕುಚ್​ ಕುಚ್​ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್​’, ‘ಬಾಜಿಗರ್​’, ‘ದಿಲ್​ವಾಲೆ’, ‘ಮೈ ನೇಮ್​ ಈಸ್​ ಖಾನ್​’ ಮುಂತಾದ ಸಿನಿಮಾಗಳಲ್ಲಿ ಅವರಿಬ್ಬರ ನಟನೆಯನ್ನು ಕಂಡು ಫ್ಯಾನ್ಸ್​ ಇಷ್ಟಪಟ್ಟಿದ್ದಾರೆ. ಈಗ ಈ ಜೋಡಿಯನ್ನು ಮತ್ತೆ ಒಂದಾಗಿಸಲು ಬಿ-ಟೌನ್​ ಅಂಗಳಲ್ಲಿ ಪ್ಲ್ಯಾನ್​ ಸಿದ್ಧವಾಗುತ್ತಿದೆ. ನಿರ್ಮಾಪಕ/ನಿರ್ದೇಶಕ ಕರಣ್​ ಜೋಹರ್​ (Karan Johar) ಅವರು ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಆಲಿಯಾ ಭಟ್​ ಮತ್ತು ರಣವೀರ್​ ಸಿಂಗ್​ ಮುಖ್ಯ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ. ಇದೇ ಸಿನಿಮಾದಲ್ಲಿ ಶಾರುಖ್​ ಖಾನ್​ ಮತ್ತು ಕಾಜೋಲ್​ (Kajol) ಅವರಿಗೆ ವಿಶೇಷ ಪಾತ್ರಗಳನ್ನು ನೀಡಲು ಕರಣ್​ ಜೋಹರ್​ ಪ್ಲ್ಯಾನ್​ ಮಾಡಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಈ ವಿಷಯ ಹೇಳಿದ ಬಳಿಕ ಅಭಿಮಾನಿಗಳು ಖುಷಿ ಆಗಿದ್ದಾರೆ. ಈ ಕುರಿತು ಅಧಿಕೃತ ಮಾಹಿತಿ ಹೊರಬೀಳುವುದು ಬಾಕಿ ಇದೆ.

ಕರಣ್​ ಜೋಹರ್​ ಅವರಿಗೆ ಶಾರುಖ್​ ಖಾನ್​ ಮತ್ತು ಕಾಜೋಲ್​ ಜೊತೆ ಉತ್ತಮ ಗೆಳೆತನ ಇದೆ. ಅನೇಕ ವರ್ಷಗಳಿಂದಲೂ ಈ ಮೂವರು ಸ್ನೇಹಿತರು. ಕಾಜೋಲ್​-ಶಾರುಖ್​ ಖಾನ್​ ಜೋಡಿಯ ‘ಕುಚ್​ ಕುಚ್​ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್​’ ಸಿನಿಮಾಗಳಿಗೆ ಕರಣ್​ ಜೋಹರ್​ ಅವರೇ ನಿರ್ದೇಶನ ಮಾಡಿದ್ದರು. ಇನ್ನು, ಅವರ ನಿರ್ದೇಶನದ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳು ಇದ್ದೇ ಇರುತ್ತವೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿಯೂ ಅದು ಮುಂದುವರಿಯಲಿದೆ ಎಂದು ಹೇಳಲಾಗುತ್ತಿದೆ.

ಹಲವು ಕಾರಣಗಳಿಂದಾಗಿ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಈ ಹಿಂದೆ ಆಲಿಯಾ ಭಟ್​ ರಣವೀರ್​ ಸಿಂಗ್​ ಅವರು ‘ಗಲ್ಲಿ ಬಾಯ್​’ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರ ಸೂಪರ್​ ಹಿಟ್​ ಆಗಿತ್ತು. ಅದೇ ಜೋಡಿ ಈಗ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಅವರ ಜೊತೆಗೆ ಕಾಜೋಲ್​ ಮತ್ತು ಶಾರುಖ್​ ಖಾನ್​ ಕೂಡ ಸೇರಿಕೊಂಡರೆ ಸಿನಿಮಾದ ತಾರಾ ಮೆರುಗು ಹೆಚ್ಚಲಿದೆ. ಈ ಎಲ್ಲ ವಿವರಗಳ ಬಗ್ಗೆ ಕರಣ್​ ಜೋಹರ್​ ಕಡೆಯಿಂದಲೇ ಹೆಚ್ಚಿನ ಮಾಹಿತಿ ಹೊರಬರಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ರಾಜ್​ಕುಮಾರ್​ ಹಿರಾನಿ ಜೊತೆ ಶಾರುಖ್​ ಹೊಸ ಸಿನಿಮಾ:

‘ಜೀರೋ’ ಚಿತ್ರದ ಬಳಿಕ ಶಾರುಖ್​ ಖಾನ್​ ಅವರ ಬೇರಾವುದೇ ಚಿತ್ರ ತೆರೆಕಂಡಿಲ್ಲ. ಸತತ ಸೋಲಿನಿಂದ ಕಂಗೆಟ್ಟಿದ್ದ ಅವರು ಈಗ ಹೇಗಾದರೂ ಮಾಡಿ ಗೆಲ್ಲಬೇಕು ಎಂಬ ಹಠದಲ್ಲಿದ್ದಾರೆ. ಒಂದೆಡೆ ಅವರ ‘ಪಠಾಣ್​’ ಸಿನಿಮಾದ ಕೆಲಸಗಳು ಜಾಲ್ತಿಯಲ್ಲಿವೆ. ಇನ್ನೊಂದೆಡೆ ಖ್ಯಾತ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜೊತೆ ಅವರು ಕೈ ಜೋಡಿಸಿದ್ದಾರೆ. ಆ ಚಿತ್ರಕ್ಕೆ ‘ಡಂಕಿ’ ಎಂದು ಹೆಸರು ಇಡಲಾಗಿದೆ. ಇತ್ತೀಚೆಗಷ್ಟೇ ಅದರ ಟೈಟಲ್​ ಟೀಸರ್​ ಬಿಡುಗಡೆ ಆಗಿದ್ದು, ಅಭಿಮಾನಿಗಳಲ್ಲಿ ಸಖತ್​ ನಿರೀಕ್ಷೆ ಹುಟ್ಟುಹಾಕಿದೆ. ಬಾಲಿವುಡ್​ನಲ್ಲಿ ರಾಜ್​ಕುಮಾರ್​ ಹಿರಾನಿ ಅವರು ಸೋಲಿಲ್ಲದ ಸರದಾರನಾಗಿ ಮಿಂಚುತ್ತಿದ್ದಾರೆ. ಅವರ ಜೊತೆ ಶಾರುಖ್​ ಸಿನಿಮಾ ಮಾಡಲಿರುವುದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಇದನ್ನೂ ಓದಿ:

8 ಪ್ಯಾಕ್​ ಅವತಾರದಲ್ಲಿ ಬಂದ ಶಾರುಖ್​ ಖಾನ್​; ಮಸ್ತ್​ ಫೋಟೋ ನೋಡಿ ಫ್ಯಾನ್ಸ್​ ಹೇಳಿದ್ದೇನು?

ದೀಪಿಕಾ ಪಡುಕೋಣೆ ಬಿಕಿನಿ ಫೋಟೋಗಳು ಲೀಕ್​; ಶಾರುಖ್​ ಕೂಡ ಇದ್ದಾರೆ ಅಂತ ಪತ್ತೆಹಚ್ಚಿದ ಫ್ಯಾನ್ಸ್​

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ
ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ