ಶಾರುಖ್ ಖಾನ್ ಹಾಗೂ ಅಜಯ್​ ದೇವಗನ್ ಪತ್ನಿ ಕಾಜೋಲ್ ಬಗ್ಗೆ ಹಬ್ಬಿತು ವದಂತಿ; ಇದು ಯಾರ ಕಿತಾಪತಿ?

ಹಲವು ಕಾರಣಗಳಿಂದಾಗಿ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಆಲಿಯಾ ಭಟ್​ ರಣವೀರ್​ ಸಿಂಗ್​ ಅವರು ಈ ಸಿನಿಮಾದಲ್ಲಿ ಮತ್ತೆ ಒಂದಾಗಿದೆ.

ಶಾರುಖ್ ಖಾನ್ ಹಾಗೂ ಅಜಯ್​ ದೇವಗನ್ ಪತ್ನಿ ಕಾಜೋಲ್ ಬಗ್ಗೆ ಹಬ್ಬಿತು ವದಂತಿ; ಇದು ಯಾರ ಕಿತಾಪತಿ?
ಕಾಜೋಲ್-ಶಾರುಖ್ ಖಾನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: May 02, 2022 | 6:17 PM

ಸ್ಟಾರ್​ ನಟ ನಟಿಯರ ಬಗ್ಗೆ ನಿತ್ಯ ಒಂದಷ್ಟು ಸುದ್ದಿಗಳು ಹುಟ್ಟಿಕೊಳ್ಳುತ್ತವೆ. ಇದರಲ್ಲಿ ಕೆಲವು ನಿಜವಾದರೆ, ಇನ್ನೂ ಕೆಲವು ವದಂತಿಗಳು. ಇದಕ್ಕೆಲ್ಲ ಸ್ಟಾರ್ ನಟರು ತಲೆಕೆಡಿಸಿಕೊಳ್ಳುವುದಿಲ್ಲ. ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ಹೊಸಹೊಸ ಸುದ್ದಿಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ. ಸಿನಿಮಾ ರಂಗದಲ್ಲಿ ಆ ಹೀರೋ ಈ ನಿರ್ದೇಶಕನ ಜತೆ ನಟಿಸುತ್ತಾರೆ, ಆ ಸ್ಟಾರ್ ಜೋಡಿ ಮತ್ತೆ ಒಂದಾಗುತ್ತಿದೆ ಎಂಬಿತ್ಯಾದಿ ವದಂತಿಗಳಿಗೆ ಇಲ್ಲಿ ಬರವಿಲ್ಲ. ಶಾರುಖ್ ಖಾನ್ (Shah Rukh Khan) ಹಾಗೂ ಅಜಯ್​ ದೇವಗನ್ (Ajay Devgn) ಪತ್ನಿ ಕಾಜೋಲ್ (Kajol) ಅವರ ಬಗ್ಗೆಯೂ ಇದೇ ಮಾದರಿಯ ವದಂತಿ ಹುಟ್ಟಿಕೊಂಡಿತ್ತು. ಇದರಲ್ಲಿ ನಿಜಾಂಶವಿಲ್ಲ ಎಂಬುದು ಪಕ್ಕಾ ಆಗಿದೆ.

ಎಸ್​ಆರ್​ಕೆ ಹಾಗೂ ಕಾಜೋಲ್ ಅವರದ್ದು ಬಾಲಿವುಡ್​ನಲ್ಲಿ ಹಿಟ್ ಜೋಡಿ. ಕಾಜೋಲ್​-ಶಾರುಖ್​ ಖಾನ್​ ‘ಕುಚ್​ ಕುಚ್​ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್​’, ‘ಮೈ ನೇಮ್ ಈಸ್ ಖಾನ್​’, ‘ಡಿಡಿಎಲ್​ಜೆ’ ಸೇರಿ ಹಲವು ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದರು. ಈಗ ಇವರಿಬ್ಬರೂ ಕರಣ್ ಜೋಹರ್ ನಿರ್ದೇಶನ ಮಾಡುತ್ತಿರುವ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ, ಅದು ಸುಳ್ಳಾಗಿದೆ. ಬಾಲಿವುಡ್ ಮಂದಿ ಈ ವದಂತಿ ಹಬ್ಬಿಸಿದ್ದಾರೆ ಎನ್ನಲಾಗುತ್ತಿದೆ.

ಕರಣ್​ ಜೋಹರ್​ ಅವರಿಗೆ ಶಾರುಖ್​ ಖಾನ್​ ಮತ್ತು ಕಾಜೋಲ್​ ಜೊತೆ ಉತ್ತಮ ಗೆಳೆತನ ಇದೆ. ಅನೇಕ ವರ್ಷಗಳಿಂದಲೂ ಈ ಮೂವರು ಸ್ನೇಹಿತರು. ಕಾಜೋಲ್​-ಶಾರುಖ್​ ಖಾನ್​ ಜೋಡಿಯ ‘ಕುಚ್​ ಕುಚ್​ ಹೋತಾ ಹೈ’, ‘ಕಭಿ ಖುಷಿ ಕಭಿ ಗಮ್​’ ಸಿನಿಮಾಗಳಿಗೆ ಕರಣ್​ ಜೋಹರ್​ ಅವರೇ ನಿರ್ದೇಶನ ಮಾಡಿದ್ದರು. ಕರಣ್ ನಿರ್ದೇಶನದ ಸಿನಿಮಾಗಳಲ್ಲಿ ಅತಿಥಿ ಪಾತ್ರಗಳು ಇದ್ದೇ ಇರುತ್ತವೆ. ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿಯೂ ಅದು ಮುಂದುವರಿಯಲಿದೆ ಎಂದು ಹೇಳಲಾಗಿತ್ತು. ಆದರೆ, ಇದು ವದಂತಿ ಎಂಬುದನ್ನು ಮೂಲಗಳು ಖಚಿತಪಡಿಸಿರುವುದಾಗಿ ಬಾಲಿವುಡ್ ಹಂಗಾಮ ವರದಿ ಮಾಡಿದೆ.

ಹಲವು ಕಾರಣಗಳಿಂದಾಗಿ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾ ಮೇಲೆ ನಿರೀಕ್ಷೆ ಮೂಡಿದೆ. ಈ ಹಿಂದೆ ಆಲಿಯಾ ಭಟ್​ ರಣವೀರ್​ ಸಿಂಗ್​ ಅವರು ‘ಗಲ್ಲಿ ಬಾಯ್​’ ಸಿನಿಮಾದಲ್ಲಿ ನಟಿಸಿದ್ದರು. ಆ ಚಿತ್ರ ಸೂಪರ್​ ಹಿಟ್​ ಆಗಿತ್ತು. ಅದೇ ಜೋಡಿ ಈಗ ‘ರಾಕಿ ಔರ್​ ರಾಣಿ ಕಿ ಪ್ರೇಮ್​ ಕಹಾನಿ’ ಸಿನಿಮಾದಲ್ಲಿ ಮತ್ತೆ ಒಂದಾಗಿದೆ. ಅವರ ಜೊತೆಗೆ ಕಾಜೋಲ್​ ಮತ್ತು ಶಾರುಖ್​ ಖಾನ್​ ಕೂಡ ಸೇರಿಕೊಂಡರೆ ಸಿನಿಮಾದ ತಾರಾ ಮೆರುಗು ಹೆಚ್ಚಲಿದೆ. ಈ ಎಲ್ಲ ವಿವರಗಳ ಬಗ್ಗೆ ಕರಣ್​ ಜೋಹರ್​ ಕಡೆಯಿಂದಲೇ ಹೆಚ್ಚಿನ ಮಾಹಿತಿ ಹೊರಬರಲಿ ಎಂದು ಫ್ಯಾನ್ಸ್​ ಕಾಯುತ್ತಿದ್ದಾರೆ.

ಇದನ್ನೂ ಓದಿ: Ajay Devgan: ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯಿಸುತ್ತಾ ‘ಹಿಂದಿಯೇ ನಮ್ಮ ರಾಷ್ಟ್ರಭಾಷೆ’ ಎಂದ ಅಜಯ್ ದೇವಗನ್; ನೆಟ್ಟಿಗರಿಂದ ಕ್ಲಾಸ್

ಕರಣ್​ ಜೋಹರ್​ ಜತೆ ರಶ್ಮಿಕಾ ಮಂದಣ್ಣ ಸಿನಿಮಾ?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ