AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ajay Devgan: ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯಿಸುತ್ತಾ ‘ಹಿಂದಿಯೇ ನಮ್ಮ ರಾಷ್ಟ್ರಭಾಷೆ’ ಎಂದ ಅಜಯ್ ದೇವಗನ್; ನೆಟ್ಟಿಗರಿಂದ ಕ್ಲಾಸ್

Kichcha Sudeep | Hindi Language: ಇತ್ತೀಚೆಗೆ ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಎಂದಿದ್ದರು. ಇದೀಗ ಬಾಲಿವುಡ್ ನಟ ಅಜಯ್ ದೇವಗನ್ ಕಿಚ್ಚ ಸುದೀಪ್​ಗೆ ಪ್ರತಿಕ್ರಿಯೆ ನೀಡಿದ್ದಾರೆ.

Ajay Devgan: ಕಿಚ್ಚ ಸುದೀಪ್ ಮಾತಿಗೆ ಪ್ರತಿಕ್ರಿಯಿಸುತ್ತಾ ‘ಹಿಂದಿಯೇ ನಮ್ಮ ರಾಷ್ಟ್ರಭಾಷೆ’ ಎಂದ ಅಜಯ್ ದೇವಗನ್; ನೆಟ್ಟಿಗರಿಂದ ಕ್ಲಾಸ್
ಅಜಯ್ ದೇವಗನ್, ಕಿಚ್ಚ ಸುದೀಪ್
TV9 Web
| Updated By: Digi Tech Desk|

Updated on:Apr 27, 2022 | 6:46 PM

Share

ಹಿಂದಿ (Hindi) ರಾಷ್ಟ್ರೀಯ ಭಾಷೆಯೇ ಎನ್ನುವ ಬಗ್ಗೆ ಚರ್ಚೆ ದೀರ್ಘಕಾಲದಿಂದ ನಡೆದಿದೆ. ಇತ್ತೀಚೆಗೆ ಈ ವಿಚಾರ ಜೋರಾಗಿ ಸುದ್ದಿಯಾಗುತ್ತಿದೆ. ಚಿತ್ರರಂಗದಲ್ಲೂ ಇದರ ಕುರಿತು ಪರ-ವಿರೋಧ ಮಾತುಗಳು ನಡೆದಿವೆ. ಇತ್ತೀಚೆಗೆ ಸ್ಯಾಂಡಲ್​ವುಡ್ ನಟ ಕಿಚ್ಚ ಸುದೀಪ್ (Kichcha Sudeep) ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ ಹಾಗೂ ಅದನ್ನು ರಾಷ್ಟ್ರೀಯ ಭಾಷೆಯಾಗಿ ಒಪ್ಪಲು ಸಾಧ್ಯವಿಲ್ಲ ಎಂದಿದ್ದರು. ಇದೀಗ ಬಾಲಿವುಡ್ ನಟ ಅಜಯ್ ದೇವಗನ್ (Ajay Devgan) ಕಿಚ್ಚ ಸುದೀಪ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ಟ್ವಿಟರ್​ನಲ್ಲಿ ಕಿಚ್ಚ ಸುದೀಪ್​ರನ್ನು ಉಲ್ಲೇಖಿಸಿ ಅಜಯ್ ಬರೆದಿದ್ದು, ಹಿಂದಿ ರಾಷ್ಟ್ರೀಯ ಭಾಷೆ ಅಲ್ಲವೆಂದ ಮೇಲೆ ಡಬ್ ಮಾಡಿ ಏಕೆ ಚಿತ್ರಗಳನ್ನು ಹಿಂದಿಯಲ್ಲಿ ರಿಲೀಸ್ ಮಾಡುತ್ತೀರಿ ಎಂದು ಪ್ರಶ್ನಿಸಿದ್ದಾರೆ. ಜತೆಗೆ ಹಿಂದಿಯು ರಾಷ್ಟ್ರೀಯ ಭಾಷೆಯೇ ಆಗಿರುತ್ತದೆ ಎಂದು ಹೇಳಿದ್ದಾರೆ ಅಜಯ್ ದೇವಗನ್. ಸದ್ಯ ಅಜಯ್ ದೇವಗನ್ ಟ್ವೀಟ್ ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.

ಅಜಯ್ ದೇವಗನ್ ಟ್ವೀಟ್​ನಲ್ಲಿ ಹೇಳಿದ್ದೇನು?

ಅಜಯ್ ದೇವಗನ್ ತಮ್ಮ ಟ್ವೀಟ್​ನಲ್ಲಿ ಕಿಚ್ಚ ಸುದೀಪ್​ರನ್ನು ಸಹೋದರ ಎಂದು ಕರೆದು ಮಾತನ್ನಾರಂಭಿಸಿದ್ದಾರೆ. ‘‘ಹಿಂದಿ ನ್ಯಾಷನಲ್ ಲಾಂಗ್ವೇಜ್ ಅಲ್ಲ ಅಂದಮೇಲೆ ನಿಮ್ಮ ಮಾತೃಭಾಷೆ ಸಿನಿಮಾನ ಹಿಂದಿಯಲ್ಲಿ ಡಬ್ ಮಾಡಿ ಏಕೆ ರಿಲೀಸ್ ಮಾಡುತ್ತೀರಾ?’’ ಎಂದು ಅಜಯ್ ಪ್ರಶ್ನಿಸಿದ್ದಾರೆ. ಜತೆಗೆ ‘‘ಹಿಂದಿ ನಮ್ಮ ಮಾತೃ ಭಾಷೆ. ಹಾಗೆಯೇ ಹಿಂದಿಯು ರಾಷ್ಟ್ರೀಯ ಭಾಷೆಯೂ ಆಗಿತ್ತು. ಆಗಿದೆ ಮತ್ತು ಮುಂದೆಯೂ ಆಗಿರುತ್ತದೆ’’ ಎಂದಿದ್ದಾರೆ ನಟ.

ಅಜಯ್ ದೇವಗನ್ ಟ್ವೀಟ್ ಇಲ್ಲಿದೆ:

ಅಜಯ್ ದೇವಗನ್​ಗೆ ಕ್ಲಾಸ್ ತೆಗೆದುಕೊಳ್ಳುತ್ತಿರುವ ನೆಟ್ಟಿಗರು:

ಭಾರತದಲ್ಲಿ ಅಧಿಕೃತವಾಗಿ ರಾಷ್ಟ್ರೀಯ ಭಾಷೆಯ ಸ್ಥಾನಮಾನವನ್ನು ಹಿಂದಿಗೆ ನೀಡಲಾಗಿಲ್ಲ ಎಂದು ನೆಟ್ಟಿಗರು ಅಜಯ್ ದೇವಗನ್ ತಿಳಿಹೇಳಿದ್ದಾರೆ. ಕನ್ನಡದಂತೆಯೇ ಹಿಂದಿಯೂ ಕೂಡ ಒಂದು ಭಾಷೆ ಎಂದು ಮತ್ತಷ್ಟು ಜನರು ಹೇಳಿದ್ದಾರೆ. ಅಜಯ್ ದೇವಗನ್ ವಾದಕ್ಕೆ ನೆಲೆಗಟ್ಟೇ ಇಲ್ಲ ಎಂದು ಮತ್ತಷ್ಟು ಜನರು ಪ್ರತಿಕ್ರಿಯಿಸಿದ್ದರೆ, ಇದು ನಟನ ಹೊಸ ಚಿತ್ರ ‘ರನ್​ವೇ 34’ ಪ್ರಚಾರದ ಗಿಮಿಕ್ ಎಂದು ಮತ್ತಷ್ಟು ಜನ ಕಾಲೆಳೆದಿದ್ದಾರೆ. ಒಂದಷ್ಟು ಜನ ಅಜಯ್ ಮಾತಿಗೆ ಬೆಂಬಲವನ್ನೂ ನೀಡಿದ್ದಾರೆ.

ಅಜಯ್ ಟ್ವೀಟ್​ಗೆ ಪ್ರತಿಕ್ರಿಯಿಸಿದ ಕಿಚ್ಚ ಸುದೀಪ್:

ಅಜಯ್ ದೇವಗನ್ ಟ್ವೀಟ್​ಗೆ ಕಿಚ್ಚ ಸುದೀಪ್ ಪ್ರತಿಕ್ರಿಯೆ ನೀಡಿದ್ದಾರೆ. ‘‘ನಾನು ಆ ಸಾಲು ಹೇಳಿದ ಹಿನ್ನೆಲೆಗೂ ಅದು ನಿಮ್ಮನ್ನು ತಲುಪಿದ್ದಕ್ಕೂ ವ್ಯತ್ಯಾಸವಿದೆ. ನಿಮ್ಮನ್ನು ಮುಖತಃ ಭೇಟಿಯಾದಾಗ ಈ ಬಗ್ಗೆ ಚರ್ಚಿಸುವೆ. ಆ ಮಾತುಗಳನ್ನು ಹೇಳಿದ್ದು ಯಾರನ್ನೋ ನೋಯಿಸಲು ಅಥವಾ ವಾದಿಸಲು ಅಲ್ಲ. ನಾನೇಕೆ ಹಾಗೆ ಮಾಡಲಿ?’’ ಎಂದಿದ್ದಾರೆ ಕಿಚ್ಚ.

ಜತೆಗೆ ಈ ದೇಶದಲ್ಲಿರುವ ಪ್ರತಿಯೊಂದು ಭಾಷೆಯನ್ನೂ ನಾನು ಗೌರವಿಸುತ್ತೇನೆ ಎಂದಿರುವ ಸುದೀಪ್, ‘‘ಈ ವಿಷಯವನ್ನು ಇಲ್ಲಿಗೇ ನಿಲ್ಲಿಸೋಣ. ಕಾರಣ, ನಾನು ಹೇಳಿದ್ದು ಬೇರೆಯದ್ದೇ ಹಿನ್ನೆಲೆಯಲ್ಲಿ. ನಿಮಗೆ ಶುಭವಾಗಲಿ, ಶೀಘ್ರದಲ್ಲೇ ಸಿಗೋಣ’’ ಎಂದು ಬರೆದಿದ್ದಾರೆ.

‘‘ನೀವು ಹಿಂದಿಯಲ್ಲಿ ಕಳುಹಿಸಿದ ಟೆಕ್ಸ್ಟ್ ನನಗೆ ಅರ್ಥವಾಯಿತು. ನಾವೆಲ್ಲರೂ ಗೌರವಿಸಿದ್ದೇವೆ, ಪ್ರೀತಿಸುತ್ತೇವೆ ಮತ್ತು ಹಿಂದಿಯನ್ನು ಕಲಿತಿದ್ದೇವೆ. ತಪ್ಪಿಲ್ಲ ಸರ್, ಆದರೆ ನನ್ನ ಪ್ರತಿಕ್ರಿಯೆಯನ್ನು ಕನ್ನಡದಲ್ಲಿ ಟೈಪ್ ಮಾಡಿದರೆ ಪರಿಸ್ಥಿತಿ ಏನಾಗಬಹುದು ಎಂದು ಆಶ್ಚರ್ಯ ಪಡುತ್ತಿದ್ದೆ.! ನಾವೂ ಭಾರತಕ್ಕೆ ಸೇರಿದವರಲ್ಲವೇ ಸರ್’’ ಎಂದು ಸುದೀಪ್ ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.

ಕಿಚ್ಚ ಸುದೀಪ್ ಟ್ವೀಟ್ ಇಲ್ಲಿದೆ:

ಇದನ್ನೂ ಓದಿ: ಕನ್ನಡ ಚಿತ್ರರಂಗವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದ ಮೊದಲಿಗ ಸುದೀಪ್​ ಎಂದ ನಟ ಜಗ್ಗೇಶ್

ಕನ್ನಡ ಚಿತ್ರರಂಗ ಉದಾಹರಿಸಿ ಬಾಲಿವುಡ್​ ಕಿವಿಹಿಂಡಿದ ನವಾಜುದ್ದೀನ್ ಸಿದ್ದಿಕಿ; ‘ಸೇಕ್ರೆಡ್ ಗೇಮ್ಸ್’ ನಟ ಹೇಳಿದ್ದೇನು?

Published On - 5:35 pm, Wed, 27 April 22