ದೀಪಿಕಾ ಪಡುಕೋಣೆ ಬಿಕಿನಿ ಫೋಟೋಗಳು ಲೀಕ್​; ಶಾರುಖ್​ ಕೂಡ ಇದ್ದಾರೆ ಅಂತ ಪತ್ತೆಹಚ್ಚಿದ ಫ್ಯಾನ್ಸ್​

ದೀಪಿಕಾ ಪಡುಕೋಣೆ ಬಿಕಿನಿ ಫೋಟೋಗಳು ಲೀಕ್​; ಶಾರುಖ್​ ಕೂಡ ಇದ್ದಾರೆ ಅಂತ ಪತ್ತೆಹಚ್ಚಿದ ಫ್ಯಾನ್ಸ್​
ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ ಅವರನ್ನು ಬಿಕಿನಿ ಗೆಟಪ್​ನಲ್ಲಿ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ತುಂಬ ಹಾಟ್​ ಆಗಿ ಕಾಣಿಸುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ.

TV9kannada Web Team

| Edited By: Madan Kumar

Mar 18, 2022 | 8:45 AM

ಸಿನಿಮಾ ಶೂಟಿಂಗ್​ ಮಾಡುವಾಗ ಎಷ್ಟು ಸಾಧ್ಯವೋ ಅಷ್ಟು ಗೌಪ್ಯತೆ ಕಾಪಾಡಿಕೊಳ್ಳಲಾಗುತ್ತದೆ. ಯಾವುದೇ ದೃಶ್ಯವೂ ಲೀಕ್​ ಆಗಬಾರದು ಎಂದು ನಿರ್ದೇಶಕರು ಎಚ್ಚರಿಕೆ ವಹಿಸುತ್ತಾರೆ. ಆದರೆ ಕೆಲವೊಮ್ಮೆ ಅವರ ಕೈ ಮೀರಿ ಫೋಟೋ ಮತ್ತು ವಿಡಿಯೋಗಳು ಲೀಕ್​ ಆಗಿಬಿಡುತ್ತವೆ. ಈಗ ‘ಪಠಾಣ್​’ (Pathaan Movie) ಚಿತ್ರತಂಡಕ್ಕೆ ಹಾಗೆಯೇ ಆಗಿದೆ. ವಿದೇಶದ ಲೊಕೇಷನ್​ಗಳನ್ನು ಈ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿದೆ. ಶಾರುಖ್​ ಖಾನ್​ (Shah Rukh Khan) ಈ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ದೀಪಿಕಾ ಪಡುಕೋಣೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಶಾರುಖ್​ ಖಾನ್​ ಅವರು ಫೋಟೋಗಳು ಲೀಕ್​ ಆಗಿದ್ದವು. ಈಗ ದೀಪಿಕಾ ಪಡುಕೋಣೆ (Deepika Padukone) ಫೋಟೋಸ್​ ವೈರಲ್​ ಆಗಿವೆ. ಶೂಟಿಂಗ್​ ಸಂದರ್ಭದಲ್ಲಿ ಬಿಕಿನಿ ಧರಿಸಿ ಓಡಾಡುತ್ತಿರುವ ಅವರ ಈ ಫೋಟೋಗಳನ್ನು ಸೋಶಿಯಲ್​ ಮೀಡಿಯಾದ ಅನೇಕ ಖಾತೆಗಳಲ್ಲಿ ಹಂಚಿಕೊಳ್ಳಲಾಗಿದೆ. ಇವುಗಳನ್ನು ಕಂಡು ಫ್ಯಾನ್ಸ್​ ಖುಷಿ ಆಗಿದ್ದಾರೆ. ಆದರೆ ಚಿತ್ರತಂಡಕ್ಕೆ ಬೇಸರ ಆಗಿದೆ. ‘ಪಠಾಣ್​’ ಚಿತ್ರದ ಮೇಲೆ ಅಭಿಮಾನಿಗಳಿಗೆ ದೊಡ್ಡಮಟ್ಟದ ನಿರೀಕ್ಷೆ ಇದೆ. ಈ ಚಿತ್ರಕ್ಕೆ ಸಿದ್ದಾರ್ಥ್​ ಆನಂದ್​ ನಿರ್ದೇಶನ ಮಾಡುತ್ತಿದ್ದಾರೆ. ಜಾನ್​ ಅಬ್ರಾಹಂ ಕೂಡ ಈ ಸಿನಿಮಾದಲ್ಲಿ ಒಂದು ಮುಖ್ಯ ಪಾತ್ರ ಮಾಡುತ್ತಿದ್ದಾರೆ. ಆ ಕಾರಣದಿಂದಲೂ ‘ಪಠಾಣ್​’ ಬಗ್ಗೆ ನಿರೀಕ್ಷೆ ಹೆಚ್ಚಿದೆ.

ಸ್ಪೇನ್​ನಲ್ಲಿ ಶೂಟಿಂಗ್​ ನಡೆಯುತ್ತಿರುವಾಗ ದೀಪಿಕಾ ಪಡುಕೋಣೆ ಅವರು ಬಿಕಿನಿ ಧರಿಸಿ ಕ್ಯಾಮೆರಾ ಎದುರಿಸಿದ್ದಾರೆ. ಇದು ‘ಪಠಾಣ್​’ ಸಿನಿಮಾದ ಹಾಡಿನ ಶೂಟಿಂಗ್​ ಎಂದು ಕೂಡ ಹೇಳಲಾಗುತ್ತಿದೆ. ಹಲವು ಫೋಟೋಗಳು ಲೀಕ್​ ಆಗಿವೆ. ದೀಪಿಕಾ ಪಡುಕೋಣೆ ಅವರನ್ನು ಬಿಕಿನಿ ಗೆಟಪ್​ನಲ್ಲಿ ನೋಡಿದ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಹಿನ್ನೆಲೆಯಲ್ಲಿ ಶಾರುಖ್​ ಖಾನ್​ ಕೂಡ ಇದ್ದಾರೆ ಎಂದು ಫ್ಯಾನ್ಸ್ ಪತ್ತೆ ಹಚ್ಚಿದ್ದಾರೆ. ದೀಪಿಕಾ ತುಂಬ ಹಾಟ್​ ಆಗಿ ಕಾಣಿಸುತ್ತಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ‘ನಮಗೆ ಕಿಂಗ್​ಫಿಶರ್​ ಕ್ಯಾಲೆಂಡರ್​’ ನೆನಪಾಗುತ್ತಿದೆ ಎಂದು ಒಂದಷ್ಟು ಅಭಿಮಾನಿಗಳು ಕಮೆಂಟ್​ ಮಾಡಿದ್ದಾರೆ. ದೀಪಿಕಾ ಅವರ ನಟಿ ಆಗುವುದಕ್ಕೂ ಮುನ್ನ ಮಾಡೆಲ್​ ಆಗಿದ್ದರು. ಆಗ ಕಿಂಗ್​ಫಿಶರ್​ ಕ್ಯಾಲೆಂಡರ್​ಗಳ ಮೂಲಕ ಅವರು ಫೇಮಸ್​ ಆಗಿದ್ದರು. ಅದನ್ನು ಈಗ ಫ್ಯಾನ್ಸ್ ನೆನಪು ಮಾಡಿಕೊಂಡಿದ್ದಾರೆ.

ಶಾರುಖ್​ ಖಾನ್​ ಗೆಟಪ್​ ಕೂಡ ಲೀಕ್​:

ಸತತ ಸೋಲಿನಿಂದ ಕಂಗೆಟ್ಟಿರುವ ಶಾರುಖ್​ ಖಾನ್ ಅವರಿಗೆ ‘ಪಠಾಣ್​’ ಸಿನಿಮಾದಿಂದ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಅದಕ್ಕಾಗಿ ಅವರು ಬಾಡಿ ಟ್ರಾನ್ಸ್​ಫಾರ್ಮೆಷನ್​ ಕೂಡ ಮಾಡಿಕೊಂಡಿದ್ದಾರೆ. 8 ಪ್ಯಾಕ್​ ಆ್ಯಬ್ಸ್​ ಮೂಲಕ ಗಮನ ಸೆಳೆಯುತ್ತಿದ್ದಾರೆ. ಆದರೆ ಆ ಫೋಟೋಗಳು ಕೂಡ ಲೀಕ್​ ಆಗಿವೆ. ಇತ್ತೀಚೆಗಷ್ಟೇ ‘ಪಠಾಣ್’​ ಚಿತ್ರದ ಟೀಸರ್​ ಬಿಡುಗಡೆ ಆಗಿತ್ತು. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಅವರು ಕಾಣಿಸಿಕೊಂಡಿದ್ದರು. ಶಾರುಖ್​ ಖಾನ್​ ಅವರ ಹಿನ್ನೆಲೆ ಧ್ವನಿ ಮಾತ್ರ ಕೇಳಿಸಿತ್ತು. ಆದರೆ ಲುಕ್​ ಬಹಿರಂಗ ಆಗಿರಲಿಲ್ಲ. ಅದ್ದೂರಿಯಾಗಿ ಲುಕ್​ ರಿವೀಲ್​ ಮಾಡಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್​ ಆಗಿರುತ್ತದೆ. ಆದರೆ ಅದಕ್ಕೂ ಮುನ್ನವೇ ಈ ರೀತಿ ಫೋಟೋ ವೈರಲ್ ಆಗಿದೆ. ಕೆಲವರು ಈ ಲುಕ್ ನೋಡಿ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:

‘ಗೆಹರಾಯಿಯಾ’ ಪಾತ್ರವನ್ನು ಅರಗಿಸಿಕೊಳ್ಳಲು ನನ್ನ ಕುಟುಂಬಕ್ಕೆ ಕಷ್ಟವಾಗಿತ್ತು ಎಂದ ದೀಪಿಕಾ ಪಡುಕೋಣೆ

‘ಎಷ್ಟೇ ಮೈ ತೋರಿಸಿದರೂ ಈ ಕೆಟ್ಟ ಸಿನಿಮಾ ಗೆಲ್ಲಲ್ಲ’; ದೀಪಿಕಾ ಚಿತ್ರದ ಬಗ್ಗೆ ಕಂಗನಾ ಖಡಕ್​ ವಿಮರ್ಶೆ

Follow us on

Related Stories

Most Read Stories

Click on your DTH Provider to Add TV9 Kannada