ಬೆಂಗಳೂರಿನ ವ್ಯಕ್ತಿಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಿದ ಪ್ರಿಯಾಂಕಾ ಚೋಪ್ರಾ; ಕಾರಣ ಏನು?

ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುವ ಪ್ರಿಯಾಂಕಾ ಚೋಪ್ರಾ ಅವರು ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಈಗ ಅವರು ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಹೆಚ್ಚಾಗಿ ಬಳಸುತ್ತಿಲ್ಲ.

ಬೆಂಗಳೂರಿನ ವ್ಯಕ್ತಿಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಿದ ಪ್ರಿಯಾಂಕಾ ಚೋಪ್ರಾ; ಕಾರಣ ಏನು?
ಪ್ರಿಯಾಂಕಾ ಚೋಪ್ರಾ ರೋಲ್ಸ್ ರಾಯ್ಸ್ ಘೋಸ್ಟ್ ಕಾರು
Follow us
TV9 Web
| Updated By: ಮದನ್​ ಕುಮಾರ್​

Updated on:Mar 18, 2022 | 12:01 PM

ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ಅವರು ಹಲವು ಕಾರಣಗಳಿಗಾಗಿ ಸುದ್ದಿ ಆಗುತ್ತಲೇ ಇರುತ್ತಾರೆ. ಅಮೆರಿಕದ ಗಾಯಕ ನಿಕ್​ ಜೋನಸ್​ ಅವರನ್ನು ಮದುವೆ ಆದ ಬಳಿಕ ಪ್ರಿಯಾಂಕಾ ವಿದೇಶದಲ್ಲೇ ಸೆಟ್ಲ್​ ಆಗಿದ್ದಾರೆ. ಬಾಲಿವುಡ್​ ಸಿನಿಮಾಗಳನ್ನೂ ಅವರು ಹೆಚ್ಚಾಗಿ ಒಪ್ಪಿಕೊಳ್ಳುತ್ತಿಲ್ಲ. ಇತ್ತೀಚೆಗಷ್ಟೇ ಅವರು ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡರು. ಇದೆಲ್ಲದರ ನಡುವೆ ಅವರು ಕಾರು ಮಾರಿದ ಕಾರಣದಿಂದ ಸುದ್ದಿ (Priyanka Chopra News) ಆಗಿದ್ದಾರೆ. ಹೌದು, ಪ್ರಿಯಾಂಕಾ ಚೋಪ್ರಾ ಅವರ ಬಳಿ ಅನೇಕ ಐಷಾರಾಮಿ ಕಾರುಗಳು ಇವೆ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕಾರುಗಳನ್ನು ಅವರು ಹೊಂದಿದ್ದಾರೆ. ಆ ಪೈಕಿ ರೋಲ್ಸ್​ ರಾಯ್ಸ್​ ಘೋಸ್ಟ್​ ಕಾರನ್ನು (Rolls Royce Ghost) ಅವರು ಈಗ ಮಾರಾಟ ಮಾಡಿದ್ದಾರೆ. ಈ ಕುರಿತು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ. ಮೂಲಗಳ ಪ್ರಕಾರ, ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಮಾರಿದ್ದಾರೆ. ಕಾರು ಖರೀದಿಸಿದ ವ್ಯಕ್ತಿ ಯಾರು ಎಂಬುದನ್ನು ಎಲ್ಲಿಯೂ ಬಹಿರಂಗಪಡಿಸಿಲ್ಲ. ಅಷ್ಟಕ್ಕೂ ಅವರು ಈ ಕಾರು ಮಾರಿದ್ದು ಯಾಕೆ ಎಂಬ ಬಗ್ಗೆ ಫ್ಯಾನ್ಸ್ ವಲಯದಲ್ಲಿ ಪ್ರಶ್ನೆ ಎದ್ದಿದೆ.

ಹಲವು ವರ್ಷಗಳಿಂದ ಪ್ರಿಯಾಂಕಾ ಚೋಪ್ರಾ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ಅವರು ನೀಡಿದ್ದಾರೆ. ಹಾಲಿವುಡ್​ ಸಿನಿಮಾಗಳಲ್ಲಿ, ಇಂಗ್ಲಿಷ್​ ವೆಬ್​ ಸರಣಿಗಳಲ್ಲೂ ಕಾಣಿಸಿಕೊಂಡಿರುವ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಅದಕ್ಕೆ ತಕ್ಕಂತೆಯೇ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಆದರೆ ಈಗ ಅವರು ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಹೆಚ್ಚಾಗಿ ಬಳಸುತ್ತಿಲ್ಲ.

ಪ್ರಿಯಾಂಕಾ ಚೋಪ್ರಾ ಅವರು ರೋಲ್ಸ್ ರಾಯ್ಸ್ ಘೋಸ್ಟ್ ಕಾರನ್ನು ಖರೀದಿಸಿದ್ದು ಭಾರತದಲ್ಲಿ. ಆದರೆ ಅವರು ಮದುವೆ ಆದ ಬಳಿಕ ಪತಿ ನಿಕ್​ ಜೋನಸ್​ ಜೊತೆ ಅಮೆರಿಕದಲ್ಲಿ ಸೆಟ್ಲ್​ ಆಗಿದ್ದಾರೆ. ಅವರ ತಾಯಿ ಮಧು ಚೋಪ್ರಾ ಅವರು ಕೂಡ ಈ ಕಾರನ್ನು ಬಳಸುತ್ತಿಲ್ಲ. ಹಾಗಾಗಿ ಮಾರಾಟ ಮಾಡುವುದು ಸೂಕ್ತ ಎಂದು ಅವರು ನಿರ್ಧರಿಸಿದರು. ಬೆಂಗಳೂರು ಮೂಲದ ಉದ್ಯಮಿಯೊಬ್ಬರಿಗೆ ರೋಲ್ಸ್ ರಾಯ್ಸ್ ಘೋಸ್ಟ್ ಕಾರು ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.

ಮಗುವಿನ ಆರೈಕೆಯಲ್ಲಿ ಪ್ರಿಯಾಂಕಾ ಬ್ಯುಸಿ:

ಸ್ವತಃ ಗರ್ಭ ಧರಿಸಲು ಪ್ರಿಯಾಂಕಾ ಚೋಪ್ರಾ ಅವರಿಗೆ ದೈಹಿಕವಾಗಿ ಯಾವುದೇ ಸಮಸ್ಯೆಗಳು ಇರಲಿಲ್ಲ. ಆದರೆ ನಿಕ್​ ಜೋನಸ್​ ಮತ್ತು ಪ್ರಿಯಾಂಕಾ ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿರುವುದರಿಂದ ಬಾಡಿಗೆ ತಾಯಿ ಮೂಲಕವೇ ಮಗು ಪಡೆಯುವುದು ಸೂಕ್ತ ಅಂತ ನಿರ್ಧರಿಸಿದರು. ನಂತರ ದಕ್ಷಿಣ ಕ್ಯಾಲಿಫೋರ್ನಿಯಾದ ಮಹಿಳೆಯೊಬ್ಬರನ್ನು ಸಂಪರ್ಕಿಸಿದರು. ಆ ಮಹಿಳೆಗೆ ಇದು 5ನೇ ಹೆರಿಗೆ ಎಂದು ಹೇಳಲಾಗಿದೆ.

ಬಾಡಿಗೆ ತಾಯಿಯು ಏಪ್ರಿಲ್​ ತಿಂಗಳಲ್ಲಿ ಮಗುವಿಗೆ ಜನ್ಮ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಅದಕ್ಕಾಗಿ ಪ್ರಿಯಾಂಕಾ ಮತ್ತು ನಿಕ್​ ಆ ತಿಂಗಳಲ್ಲಿ ಯಾವುದೇ ಕೆಲಸಗಳನ್ನೂ ಒಪ್ಪಿಕೊಳ್ಳದೇ ಬಿಡುವು ಮಾಡಿಕೊಳ್ಳಲು ಸಿದ್ಧರಾಗಿದ್ದರು. ಆದರೆ ಮೂರು ತಿಂಗಳು ಮುಂಚಿತವಾಗಿ ಈ ಮಗು ಜನಿಸಿತು. ಇದೊಂದು ಪ್ರೀ-ಮೆಚ್ಯೂರ್​ ಮಗು ಎಂದು ಹೇಳಲಾಗಿದೆ.

9 ತಿಂಗಳಿಗೆ ಮಗು ಜನಿಸುವುದು ಸಹಜ. ಅಪರೂಪದ ಪ್ರಕರಣಗಳಲ್ಲಿ ಈ ಅವಧಿಗೂ ಮುನ್ನವೇ ಮಗು ಜನಿಸುತ್ತವೆ. ಪ್ರಿಯಾಂಕಾ ಚೋಪ್ರಾ-ನಿಕ್​ ಜೋನಸ್​ ಮಗುವಿನ ವಿಚಾರದಲ್ಲೂ ಹಾಗೆಯೇ ಆಗಿದೆ. ಆರೂವರೆ ತಿಂಗಳಿಗೆ ಈ ಮಗು ಜನಿಸಿದೆ ಎಂದು ‘ಡೈಲಿ ಮೇಲ್​’ ವರದಿ ಮಾಡಿತ್ತು. ಈ ಕುರಿತು ಪ್ರಿಯಾಂಕಾ ಚೋಪ್ರಾ ಮತ್ತು ನಿಕ್​ ಜೋನಕ್​ ಈವರೆಗೂ ಮೌನ ಮುರಿದಿಲ್ಲ.

ಇದನ್ನೂ ಓದಿ:

ಗೊಂಬೆ ಜತೆ ಕೃಷ್ಣನ ಮೂರ್ತಿ; ವೈರಲ್​ ಆಗುತ್ತಿದೆ ಪ್ರಿಯಾಂಕಾ ಚೋಪ್ರಾ ಹಂಚಿಕೊಂಡ ಫೋಟೋ

ಒಳಉಡುಪು ಧರಿಸದೆ ಪಬ್ಲಿಕ್​ನಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ಚೋಪ್ರಾ; ಬಂತು ಸಾಲುಸಾಲು ಟೀಕೆ

Published On - 11:59 am, Fri, 18 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ