Updated on: Feb 24, 2022 | 4:34 PM
ನಟಿ ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದ ಖ್ಯಾತ ಪಾಪ್ ಸಿಂಗರ್ ನಿಕ್ ಜೋನಸ್ ಅವರನ್ನು ಮದುವೆ ಆಗಿ ಅಮೆರಿಕಕ್ಕೆ ತೆರಳಿದ್ದಾರೆ. ಆದರೆ, ಅವರು ಎಂದಿಗೂ ತಮ್ಮ ತನವನ್ನು ಬಿಟ್ಟುಕೊಟ್ಟಿಲ್ಲ. ಈ ಮೊದಲು ಅನೇಕ ಬಾರಿ ಈ ವಿಚಾರ ಸಾಬೀತಾಗಿದೆ.
ಪ್ರಿಯಾಂಕಾ ಚೋಪ್ರಾ ಅವರು ಅಮೆರಿಕದಲ್ಲಿ ಸೆಟಲ್ ಆಗಿದ್ದಾರೆ. ಇಂದು ಒಂದಷ್ಟು ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಗೊಂಬೆಗಳ ಜತೆಗೆ ಕೃಷ್ಣನ ಮೂರ್ತಿ ಕೂಡ ಇದೆ. ಇದು ಸಾಕಷ್ಟು ಹೈಲೈಟ್ ಆಗಿದೆ. ಈ ಫೋಟೋ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
‘ಅಮೆರಿಕಕ್ಕೆ ತೆರಳಿದರೂ ಪ್ರಿಯಾಂಕಾ ಭಾರತದ ತನವನ್ನು ಬಿಟ್ಟಿಲ್ಲ. ಮುದ್ದಾದ ಕೃಷ್ಣನ ಮೂರ್ತಿ ಇಷ್ಟವಾಯಿತು’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ನಾನಾ ರೀತಿಯಲ್ಲಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಈ ಮೊದಲು ಪತಿ ನಿಕ್ ಜತೆ ದೀಪಾವಳಿ ಆಚರಿಸಿದ್ದರು ಪ್ರಿಯಾಂಕಾ. ಈ ಫೋಟೋ ಸಾಕಷ್ಟು ವೈಲರ್ ಆಗಿತ್ತು. ಫೋಟೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದರು. ಈ ಬಾರಿ ಕೃಷ್ಣನ ಮೂರ್ತಿ ಚಿತ್ರದ ಮೂಲಕ ಗಮನ ಸೆಳೆದಿದ್ದಾರೆ.
ಪ್ರಿಯಾಂಕಾ ಹಾಗೂ ನಿಕ್ ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಮಗು ಪಡೆದಿದ್ದಾರೆ. ಈ ವರೆಗೆ ದಂಪತಿ ಮಗುವಿನ ಫೋಟೋ ಹಂಚಿಕೊಂಡಿಲ್ಲ. ಮಗು ನಿಗದಿತ ಸಮಯಕ್ಕೂ ಮೊದಲೇ ಜನಿಸಿದೆ ಎನ್ನುವ ಬಗ್ಗೆ ವರದಿ ಆಗಿತ್ತು.
ಪ್ರಿಯಾಂಕಾ ಚೋಪ್ರಾ