AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಕಾಶ್ಮೀರ್​ ಫೈಲ್ಸ್​’ ಕಲೆಕ್ಷನ್​ ನೋಡಿ ಈ ನಟನಿಗೆ ಹೊಟ್ಟೆಕಿಚ್ಚು ಆಯ್ತು; 6 ದಿನಕ್ಕೆ 79 ಕೋಟಿ ರೂ.!

The Kashmir Files Collection: ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಶೀಘ್ರದಲ್ಲೇ 100 ಕೋಟಿ ರೂಪಾಯಿ ಕಮಾಯಿ ಮಾಡುವುದು ಖಚಿತ ಆಗಿದೆ. ತೆರೆಕಂಡು 6 ದಿನ ಆಗಿದ್ದರೂ ಕೂಡ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಕಲೆಕ್ಷನ್​ ನೋಡಿ ಈ ನಟನಿಗೆ ಹೊಟ್ಟೆಕಿಚ್ಚು ಆಯ್ತು; 6 ದಿನಕ್ಕೆ 79 ಕೋಟಿ ರೂ.!
ಆರ್​. ಮಾಧವನ್​, ದಿ ಕಾಶ್ಮೀರ್​ ಫೈಲ್ಸ್​
TV9 Web
| Edited By: |

Updated on: Mar 17, 2022 | 4:44 PM

Share

ಭಾರತೀಯ ಚಿತ್ರರಂಗದಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ (The Kashmir Files) ಸಿನಿಮಾ ಹೊಸ ಸಂಚಲನ ಮೂಡಿಸಿದೆ. ಮಾ.11ರಂದು ಬಿಡುಗಡೆ ಆಗಿದ್ದ ಈ ಚಿತ್ರ ಒಂದು ವಾರ ಕಳೆಯುವುದರೊಳಗೆ ಹಲವು ದಾಖಲೆಗಳನ್ನು ಮಾಡಿದೆ. ಬಾಲಿವುಡ್​ನ ದೊಡ್ಡ ಸ್ಟಾರ್​ ನಟರ ಸಿನಿಮಾಗಳನ್ನೂ ಬೀಟ್​ ಮಾಡಿ ಗಲ್ಲಾಪೆಟ್ಟಿಗೆಯಲ್ಲಿ ‘ದಿ ಕಾಶ್ಮೀರ್​ ಫೈಲ್ಸ್​’ ಚಿತ್ರ ಸೌಂಡು ಮಾಡುತ್ತಿದೆ. ಮೊದಲ ದಿನ ಈ ಚಿತ್ರ ಕೇವಲ 3.5 ಕೋಟಿ ರೂಪಾಯಿ ಕಲೆಕ್ಷನ್ (The Kashmir Files Box Office Collection)​ ಮಾಡಿತ್ತು. ಆದರೆ ಆರನೇ ದಿನದ ಅಂತ್ಯಕ್ಕೆ ಈ ಸಿನಿಮಾದ ಗಳಿಕೆ ಬರೋಬ್ಬರಿ 79 ಕೋಟಿ ರೂಪಾಯಿ ಆಗಿದೆ. ಈ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುವಂಥದ್ದು. ಹೆಚ್ಚು ಪ್ರಚಾರವಿಲ್ಲದೇ ಬಿಡುಗಡೆಯಾದ ಸಿನಿಮಾಗೆ ನಂತರದ ದಿನಗಳಲ್ಲಿ ಭರ್ಜರಿ ಪ್ರಚಾರ ಸಿಕ್ಕಿತು. ಸಿನಿಮಾ ನೋಡಿದ ಬಳಿಕ ಪ್ರೇಕ್ಷಕರು ಎಮೋಷನಲ್​ ಆಗಿ ಪ್ರತಿಕ್ರಿಯಿಸುತ್ತಿದ್ದಾರೆ. ಈ ಎಲ್ಲ ಅಂಶಗಳ ಕಾರಣದಿಂದ ಈ ಚಿತ್ರ ಧೂಳೆಬ್ಬಿಸುತ್ತಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದ ಕಲೆಕ್ಷನ್​ ಕಂಡು ನಟ ಆರ್​. ಮಾಧವನ್​ (R Madhavan) ಅವರು ಮೆಚ್ಚುಗೆ ಸೂಚಿಸಿದ್ದಾರೆ. ಈ ಕುರಿತು ಅವರು ಮಾಡಿರುವ ಟ್ವೀಟ್​ ವೈರಲ್​ ಆಗುತ್ತಿದೆ.

‘ಇದು ಅದ್ಭುತ ಮತ್ತು ಅಭೂತಪೂರ್ವವಾದದ್ದು. ಹಾಗಾಗಿ ತುಂಬ ಹೊಟ್ಟೆಕಿಚ್ಚು ಆಗುತ್ತಿದೆ. ಅದೇ ರೀತಿ ಹೆಮ್ಮೆ ಕೂಡ ಆಗುತ್ತಿದೆ. ದಿ ಕಾಶ್ಮೀರ್​ ಫೈಲ್ಸ್​ ತಂಡದ ಗೆಲವು ಕಂಡು ಖುಷಿಯಾಗಿದೆ’ ಎಂದು ಆರ್.​ ಮಾಧವನ್​ ಅವರು ಟ್ವೀಟ್​ ಮಾಡಿದ್ದಾರೆ. ಕಳೆದ ವಾರ ಅವರು ಈ ಸಿನಿಮಾದ ಟ್ರೇಲರ್​ ಶೇರ್​ ಮಾಡಿಕೊಂಡಿದ್ದರು. ಆ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದರು. ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ಕಂಡು ಸಿನಿಮಾದ ಬಗ್ಗೆ ತಮಗೆ ಕೌತುಕ ಹೆಚ್ಚಿದೆ ಎಂದು ಮಾಧವನ್​ ಹೇಳಿದ್ದರು.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮೊದಲ ದಿನ, ಅಂದರೆ ಮಾ.11ರಂದು ಗಳಿಸಿದ್ದು ಬರೀ 3.55 ಕೋಟಿ ರೂಪಾಯಿ. ಅಂದು ‘ರಾಧೆ ಶ್ಯಾಮ್​’ ಸಿನಿಮಾದ ಪೈಪೋಟಿ ನಡುವೆ ಈ ಚಿತ್ರ ಕಳೆದೇ ಹೋಯಿತು ಎಂದು ಎಲ್ಲರೂ ಭಾವಿಸಿದ್ದರು. ಆದರೆ ಜನರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬಂದಿದ್ದರಿಂದ ಎರಡನೇ ದಿನವೇ ‘ದಿ ಕಾಶ್ಮೀರ್​ ಫೈಲ್ಸ್​’ ಗಳಿಕೆ ಹೆಚ್ಚಿತು. ಮಾ.12ರಂದು ಈ ಸಿನಿಮಾ 8.50 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಬೀಗಿತು. 3ನೇ ದಿನ 15.10 ಕೋಟಿ ರೂಪಾಯಿ, 4ನೇ ದಿನ 15.05 ಕೋಟಿ ರೂಪಾಯಿ, 5ನೇ ದಿನ 18 ಕೋಟಿ ರೂಪಾಯಿ ಹಾಗೂ 6ನೇ ದಿನ ಬರೋಬ್ಬರಿ 19.05 ಕೋಟಿ ರೂಪಾಯಿ ಗಳಿಸುವ ಮೂಲಕ ಈ ಸಿನಿಮಾ ಒಟ್ಟು 79 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ವಿದೇಶಿ ಗಲ್ಲಾಪೆಟ್ಟಿಗೆಯ ಆದಾಯ ಸೇರಿಸಿದರೆ ಈ ಮೊತ್ತ ಇನ್ನೂ ಹೆಚ್ಚಲಿದೆ.

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾಗೆ ವಿವೇಕ್​ ಅಗ್ನಿಹೋತ್ರಿ ನಿರ್ದೇಶನ ಮಾಡಿದ್ದಾರೆ. ಅಭಿಷೇಕ್​ ಅಗರ್​ವಾಲ್​ ನಿರ್ಮಾಣ ಮಾಡಿದ್ದಾರೆ. ಅನುಪಮ್​ ಖೇರ್​, ದರ್ಶನ್​ ಕುಮಾರ್​, ಪಲ್ಲವಿ ಜೋಶಿ, ವಿಥುನ್ ಚಕ್ರವರ್ತಿ, ಪುನೀತ್​ ಇಸ್ಸಾರ್​, ಪ್ರಕಾಶ್​ ಬೆಳವಾಡಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲರ ನಟನೆಗೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜಕೀಯ ಕ್ಷೇತ್ರದ ಅನೇಕ ಗಣ್ಯರು ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ನೋಡಿ ಶಹಭಾಷ್​ ಎಂದಿದ್ದಾರೆ.

ಅನೇಕ ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ. ಇದು ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ. ಶೀಘ್ರದಲ್ಲೇ 100 ಕೋಟಿ ರೂಪಾಯಿ ಕಮಾಯಿ ಮಾಡುವುದು ಖಚಿತ ಆಗಿದೆ. ತೆರೆಕಂಡು 6 ದಿನ ಆಗಿದ್ದರೂ ಸಹ ಇಂದಿಗೂ ಅನೇಕ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ಜೇಮ್ಸ್​’ ಬಂದ್ರೂ ‘ದಿ ಕಾಶ್ಮೀರ್​ ಫೈಲ್ಸ್​’ ಹೌಸ್​ಫುಲ್​: ಹೆಚ್ಚುತ್ತಲೇ ಇದೆ ಈ ಸಿನಿಮಾ ಕಲೆಕ್ಷನ್​

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್