ಶಾರುಖ್​ ಖಾನ್​ 8 ಪ್ಯಾಕ್​ ಬಾಡಿ ಫೋಟೋ ವೈರಲ್​; ‘ಪಠಾಣ್​’ ಚಿತ್ರದಲ್ಲಿ ಹೊಸ ಗೆಟಪ್​

ಶಾರುಖ್​ ಖಾನ್​ 8 ಪ್ಯಾಕ್​ ಬಾಡಿ ಫೋಟೋ ವೈರಲ್​; ‘ಪಠಾಣ್​’ ಚಿತ್ರದಲ್ಲಿ ಹೊಸ ಗೆಟಪ್​
ಶಾರುಖ್​ ಖಾನ್

‘ಪಠಾಣ್​’ ಸಿನಿಮಾದಿಂದ ಒಂದು ಗೆಲುವು ಕಾಣುವುದು ಶಾರುಖ್​ ಖಾನ್​ ಅವರಿಗೆ ತುಂಬ ಅನಿವಾರ್ಯ ಆಗಿದೆ. ಹಾಗಾಗಿ 8 ಪ್ಯಾಕ್​ ಆ್ಯಬ್ಸ್​ ಮೂಲಕ ಅಭಿಮಾನಿಗಳ ಮುಂದೆ ಬರಲು ಅವರು ತೀರ್ಮಾನಿಸಿದಂತಿದೆ.

TV9kannada Web Team

| Edited By: Madan Kumar

Mar 16, 2022 | 3:21 PM

ನಟ ಶಾರುಖ್​ ಖಾನ್​ (Shah Rukh Khan) ಅವರು ಅದ್ದೂರಿ ಕಮ್​ಬ್ಯಾಕ್​ಗಾಗಿ ಪ್ಲ್ಯಾನ್​ ಮಾಡಿಕೊಂಡಿದ್ದಾರೆ. 2018ರಲ್ಲಿ ‘ಝೀರೋ’ ಸಿನಿಮಾ ಸೋತ ಬಳಿಕ ಅವರ ಯಾವುದೇ ಹೊಸ ಚಿತ್ರ ತೆರೆಕಂಡಿಲ್ಲ. ಇಷ್ಟು ದೊಡ್ಡ ಗ್ಯಾಪ್​ ಬಳಿಕ ಅವರು ಮತ್ತೆ ಅಭಿಮಾನಿಗಳ ಮುಂದೆ ಬರಲು ತಯಾರಿ ಮಾಡಿಕೊಂಡಿದ್ದಾರೆ. ಸದ್ಯ ಶಾರುಖ್​ ಖಾನ್​ ಅವರು ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಆ ಪೈಕಿ ‘ಪಠಾಣ್​’ (Pathaan Movie) ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಹೆಚ್ಚು ನಿರೀಕ್ಷೆ ಇದೆ. ಆ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಈಗ ಕೆಲವು ಫೋಟೋಗಳು ಲೀಕ್​ ಆಗಿವೆ. ದೀಪಿಕಾ ಪಡುಕೋಣೆ ಮತ್ತು ಶಾರುಖ್​ ಖಾನ್​ ಅವರು ‘ಪಠಾಣ್​’ ಸಿನಿಮಾದಲ್ಲಿ ಜೋಡಿಯಾಗಿ ನಟಿಸುತ್ತಿದ್ದಾರೆ. ಬಾಲಿವುಡ್​ನಲ್ಲಿ ಇವರಿಬ್ಬರದ್ದು ಸೂಪರ್​ ಹಿಟ್​ ಕಾಂಬಿನೇಷನ್​ ಆ ಕಾರಣದಿಂದಲೂ ಕೂಡ ‘ಪಠಾಣ್​’ ಚಿತ್ರದ ಬಗ್ಗೆ ಹೈಪ್​ ಸೃಷ್ಟಿ ಆಗಿದೆ. ಈಗ ಶಾರುಖ್​ ಖಾನ್​ ಅವರು ಇದರ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಶೂಟಿಂಗ್​ ಸೆಟ್​ನಿಂದ ಕೆಲವು ಫೋಟೋಗಳು (Shah Rukh Khan Photo) ಲೀಕ್ ಆಗಿದ್ದು, ಅದರಲ್ಲಿ ಶಾರುಖ್​ ಖಾನ್​ 8 ಪ್ಯಾಕ್​ ಆ್ಯಬ್ಸ್​ ಫೋಟೋಗಳು ವೈರಲ್​ ಆಗಿವೆ.

‘ಪಠಾಣ್​’ ಸಿನಿಮಾದಿಂದ ಒಂದು ಗೆಲುವು ಕಾಣುವುದು ಶಾರುಖ್​ ಖಾನ್​ ಅವರಿಗೆ ತುಂಬ ಅನಿವಾರ್ಯ ಆಗಿದೆ. ಹಾಗಾಗಿ ಅವರು ಈ ಚಿತ್ರಕ್ಕಾಗಿ ಎಲ್ಲಿಲ್ಲದಂತೆ ಕಷ್ಟಪಡುತ್ತಿದ್ದಾರೆ ಎನ್ನಲಾಗಿದೆ. 8 ಪ್ಯಾಕ್​ ಆ್ಯಬ್ಸ್​ ಮೂಲಕ ಅಭಿಮಾನಿಗಳ ಮುಂದೆ ಬಂದು ಮನರಂಜನೆ ನೀಡಲು ಅವರು ತೀರ್ಮಾನಿಸಿದಂತಿದೆ. ಅದಕ್ಕಾಗಿ ದೇಹ ದಂಡಿಸಿ ತಯಾರಾಗಿದ್ದಾರೆ. ಆದರೆ ಶೂಟಿಂಗ್​ ಸಂದರ್ಭದಲ್ಲಿಯೇ ಈ ಫೋಟೋಗಳು ಲೀಕ್​ ಆಗಿರುವುದರಿಂದ ಅಭಿಮಾನಿಗಳಿಗೆ ಮತ್ತು ಚಿತ್ರತಂಡಕ್ಕೆ ಬೇಸರ ಮೂಡಿಸಿದೆ.

ಇತ್ತೀಚೆಗಷ್ಟೇ ‘ಪಠಾಣ್’​ ಚಿತ್ರದ ಟೀಸರ್​ ಬಿಡುಗಡೆ ಆಗಿತ್ತು. ಅದರಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್​ ಅಬ್ರಾಹಂ ಅವರು ಕಾಣಿಸಿಕೊಂಡಿದ್ದರು. ಶಾರುಖ್​ ಖಾನ್​ ಅವರ ಹಿನ್ನೆಲೆ ಧ್ವನಿ ಮಾತ್ರ ಕೇಳಿಸಿತ್ತು. ಆದರೆ ಲುಕ್​ ಬಹಿರಂಗ ಆಗಿರಲಿಲ್ಲ. ಅದ್ದೂರಿಯಾಗಿ ಲುಕ್​ ರಿವೀಲ್​ ಮಾಡಬೇಕು ಎಂಬುದು ಚಿತ್ರತಂಡದ ಪ್ಲ್ಯಾನ್​ ಆಗಿರುತ್ತದೆ. ಆದರೆ ಅದಕ್ಕೂ ಮುನ್ನವೇ ಈ ರೀತಿ ಫೋಟೋ ವೈರಲ್ ಆಗಿದೆ. ಕೆಲವರು ಈ ಲುಕ್ ನೋಡಿ ಖುಷಿಪಟ್ಟಿದ್ದಾರೆ. ಕಮೆಂಟ್​ಗಳ ಮೂಲಕ ತಮ್ಮ ಅಭಿಪ್ರಾಯ ತಿಳಿಸುತ್ತಿದ್ದಾರೆ. ಈ ಚಿತ್ರಕ್ಕಾಗಿ ಶಾರುಖ್​ ಖಾನ್​ ಅವರು ತಮ್ಮ ದೇಹವನ್ನು ಹೇಗೆ ಹುರಿಗೊಳಿಸಿಕೊಂಡರು ಎಂಬುದನ್ನು ಕೂಡ ವಿಡಿಯೋ ಮೂಲಕ ದಾಖಲಿಸಲಾಗಿದೆ. ಅದನ್ನು ನಂತರದ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂಬ ಮಾಹಿತಿ ಹರಿದಾಡುತ್ತಿದೆ.

ಇತ್ತೀಚೆಗೆ ಎಸ್​ಆರ್​ಕೆ+ ಲೋಗೋವನ್ನು ಶಾರುಖ್​ ಖಾನ್​ ಶೇರ್​ ಮಾಡಿಕೊಂಡಿದ್ದರು. ‘ಒಟಿಟಿ ಜಗತ್ತಿನಲ್ಲಿ ಏನೇನೋ ಆಗಲಿದೆ’ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದರು. ನಟ ಸಲ್ಮಾನ್ ಖಾನ್​, ನಿರ್ಮಾಪಕ ಕರಣ್​ ಜೋಹರ್​ ಈ ಬಗ್ಗೆ ತಮ್ಮ ಎಗ್ಸೈಟ್​ಮೆಂಟ್​ ತೋರಿಸಿದ್ದರು. ಆದರೆ, ಈ ವಿಚಾರದ ಅಸಲಿಯತ್ತೇ ಬೇರೆ ಇದೆ ಎನ್ನಲಾಗುತ್ತಿದೆ. ಇಟೈಮ್ಸ್​ ವರದಿ ಮಾಡಿದ ಪ್ರಕಾರ, ಎಸ್​​ಆರ್​ಕೆ+ ಅನ್ನೋದು ಶಾರುಖ್​ ಖಾನ್​ ನೀಡಿದ ಜಾಹೀರಾತು ಎನ್ನಲಾಗಿದೆ. ಡಿಸ್ನಿ+ ಹಾಟ್​ಸ್ಟಾರ್ ಜತೆಗೆ ಶಾರುಖ್​ ಖಾನ್​ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಈ ರೀತಿಯ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲ ವರದಿ ಪ್ರಕಾರ, ಶಾರುಖ್​ ಖಾನ್​ ಅವರು ಡಿಸ್ನಿ+ ಹಾಟ್​​ಸ್ಟಾರ್​ ಜತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಬರಬೇಕಿದೆ.

ಇದನ್ನೂ ಓದಿ:

ಶಾರುಖ್​ ಖಾನ್​ ಹೊಸ ಲುಕ್​ ನೋಡಿ ವಾವ್​ ಎಂದ ಫ್ಯಾನ್ಸ್​; ಇಲ್ಲಿವೆ ಫೋಟೋಗಳು

ದುಬೈ ಬಗ್ಗೆ ಶಾರುಖ್​ ಪ್ರೀತಿಯ ಮಾತು; ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಹೇಳಿದ್ದು ಏನು?

Follow us on

Related Stories

Most Read Stories

Click on your DTH Provider to Add TV9 Kannada