AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಇಂದು ಕೊಹ್ಲಿ ಸೆಂಚುರಿ ಬಾರಿಸಿದರೆ..’; ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ ಸಿಂಪಲ್ ಸುನಿ

Virat Kohli | Avatara Purusha 1 | Simple Suni: ಅಭಿಮಾನಿಗಳಿಗೆ ಹೊಸ ಆಫರ್ ಘೋಷಿಸಿದ್ದಾರೆ ನಿರ್ದೇಶಕ ಸಿಂಪಲ್ ಸುನಿ. ಅದೇನು ಅಂತೀರಾ? ಇಂದು (ಮೇ.4) ನಡೆಯುವ ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿದರೆ ಅಭಿಮಾನಿಗಳಿಗೆ ಉಚಿತ ಟಿಕೇಟ್ ಸಿಗಲಿದೆ. ಅದೂ ಅವರು ಬಯಸಿದ ಚಿತ್ರಮಂದಿರಗಳಲ್ಲಿ. ಆದರೆ ಇದಕ್ಕೊಂದು ಷರತ್ತಿದೆ. ಏನದು?

‘ಇಂದು ಕೊಹ್ಲಿ ಸೆಂಚುರಿ ಬಾರಿಸಿದರೆ..’; ಅಭಿಮಾನಿಗಳಿಗೆ ಭರ್ಜರಿ ಆಫರ್ ನೀಡಿದ ಸಿಂಪಲ್ ಸುನಿ
ವಿರಾಟ್ ಕೊಹ್ಲಿ, ಅವತಾರ ಪುರುಷ 1, ಸಿಂಪಲ್ ಸುನಿ
TV9 Web
| Updated By: shivaprasad.hs|

Updated on: May 04, 2022 | 5:01 PM

Share

ನಿರ್ದೇಶಕ ಸಿಂಪಲ್ ಸುನಿ (Simple Suni) ಸದ್ಯ ‘ಅವತಾರ ಪುರುಷ’ (Avatara Purusha 1) ಚಿತ್ರದ ಬಿಡುಗಡೆ ಸಿದ್ಧತೆಯಲ್ಲಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಅಪಾರ ನಿರೀಕ್ಷೆ ಮೂಡಿಸಿರುವ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಚಿತ್ರತಂಡ ಭಾಗಿಯಾಗಿದೆ. ಇದೀಗ ಅಭಿಮಾನಿಗಳಿಗೆ ಹೊಸ ಆಫರ್ ಘೋಷಿಸಿದ್ದಾರೆ ಸುನಿ. ಅದೇನು ಅಂತೀರಾ? ಇಂದು (ಮೇ.4) ನಡೆಯುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಸೆಂಚುರಿ ಬಾರಿಸಿದರೆ ಅಭಿಮಾನಿಗಳಿಗೆ ಉಚಿತ ಟಿಕೇಟ್ ಸಿಗಲಿದೆ. ಅದೂ ಅವರು ಬಯಸಿದ ಚಿತ್ರಮಂದಿರಗಳಲ್ಲಿ. ಇದಕ್ಕೆ ಒಂದು ಷರತ್ತನ್ನು ಹಾಕಿದ್ದಾರೆ ಸಿಂಪಲ್ ಸುನಿ. ಕೊಹ್ಲಿ ಸೆಂಚುರಿ ಹೊಡೆದರೆ ಉಚಿತ ಟಿಕೆಟ್ ನೀಡುವುದಾಗಿ ಸಿಂಪಲ್ ಸುನಿ ಘೋಷಿಸಿದ ಟ್ವೀಟ್​ಅನ್ನು ರಿಟ್ವೀಟ್ ಮಾಡಬೇಕು. ಒಂದು ವೇಳೆ ಕೊಹ್ಲಿ 100 ರನ್ ಬಾರಿಸಿದರೆ ರಿಟ್ವೀಟ್ ಮಾಡಿದವರಿಗೆ ಅವರಿಷ್ಟದ ಚಿತ್ರಮಂದಿರಗಳಲ್ಲಿ ‘ಅವತಾರ ಪುರುಷ 1’ರ ಟಿಕೆಟ್ ಬುಕ್​ಅನ್ನು ಉಚಿತವಾಗಿ ಬುಕ್ ಮಾಡಿ ಕೊಡಲಾಗುವುದು ಎಂದಿದ್ದಾರೆ ನಿರ್ದೇಶಕ.

ಸಿಂಪಲ್ ಸುನಿ ವಿಭಿನ್ನ ರೀತಿಯ ಪ್ರಚಾರಗಳಿಗೆ ಹೆಸರುವಾಸಿಯಾದವರು. ಈ ಹಿಂದೆಯೂ ಕೂಡ ಅವರು ಹಲವು ವಿಭಿನ್ನ ಪ್ರಚಾರದ ಮಾರ್ಗಗಳ ಮೂಲಕ ಜನರ ಮನಗೆದ್ದಿದ್ದರು. ಇದೀಗ ಅವರ ಈ ಹೊಸ ಟ್ವೀಟ್ ಕೂಡ ಸಖತ್ ಸದ್ದು ಮಾಡುತ್ತಿದ್ದು, ಈಗಾಗಲೇ ಸುಮಾರು 3000ಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಈ ಸಂಖ್ಯೆ ಮತ್ತಷ್ಟು ಏರುತ್ತಲೇ ಇದೆ.

ಇದನ್ನೂ ಓದಿ
Image
KL Rahul: ಕೆಎಲ್ ರಾಹುಲ್- ಆಥಿಯಾ ಶೆಟ್ಟಿ ಮದುವೆ ಸದ್ಯಕ್ಕಿಲ್ಲ ಎಂದ ಕುಟುಂಬ; ಫ್ಯಾನ್ಸ್ ಮನದಲ್ಲಿ ಮೂಡಿದೆ ಹಲವು ಪ್ರಶ್ನೆ
Image
ಗೋವಾ ಸಿಎಂ ಪ್ರಮೋದ್​ ಸಾವಂತ್​ ಭೇಟಿ ಮಾಡಿದ ಯಶ್​-ರಾಧಿಕಾ ಪಂಡಿತ್​; ಮುಂದಿನ ಸಿನಿಮಾ ಬಗ್ಗೆ​ ಕುತೂಹಲ
Image
‘ಅವತಾರ ಪುರುಷ’ ಪ್ರಚಾರಕ್ಕೆ ಬಳಕೆ ಆಗ್ತಿದೆ ‘ಆರ್​ಸಿಬಿ’ ಮ್ಯಾಚ್​; ಸಿಂಪಲ್ ಸುನಿಯ ಹೊಸ ಐಡಿಯಾ
Image
ರಿಸರ್ಚ್​ ಮಾಡಿ ಫೀಲ್ಡ್​ಗೆ ಇಳಿದ ಸುನಿ; ‘ಅವತಾರ ಪುರುಷ’ ಟೀಸರ್​ನಲ್ಲಿ ಮತ್ತೊಂದು ಮುಖ ಅನಾವರಣ

ಸಿಂಪಲ್ ಸುನಿ ಟ್ವೀಟ್ ಇಲ್ಲಿದೆ:

‘ಅವತಾರ ಪುರುಷ’ ಸೆಟ್​ನಲ್ಲೂ ಕ್ರಿಕೆಟ್ ಜಪ:

ಅಂದಹಾಗೆ ಸಿಂಪಲ್ ಸುನಿಯವರ ಕ್ರಿಕೆಟ್ ಪ್ರೀತಿ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಕಾರಣ, ಸುನಿಯವರ ಸಾಮಾಜಿಕ ಜಾಲತಾಣಗಳನ್ನು ಗಮನಿಸುವವರು ಅವರ ಮಜವಾದ ಟ್ವೀಟ್​ಗಳನ್ನು ಗಮನಿಸಿಯೇ ಇರುತ್ತಾರೆ. ಅವರಿಗೆ ಸಿನಿಮಾದಷ್ಟೇ ಪ್ರೀತಿ ಕ್ರಿಕೆಟ್ ಬಗ್ಗೆಯೂ ಇದೆ. ಭಾರತ ತಂಡದ ಹಾಗೂ ಆರ್​ಸಿಬಿ ತಂಡಗಳ ಬಗ್ಗೆ ಅವರು ಸದಾ ಟ್ವೀಟ್ ಮಾಡುತ್ತಿರುತ್ತಾರೆ.

ಸುನಿಯವರ ಕ್ರಿಕೆಟ್ ಪ್ರೀತಿಯನ್ನು ತಿಳಿಸುವ ವಿಶೇಷ ವಿಡಿಯೋವೊಂದು ಇಲ್ಲಿದೆ. ‘ಅವತಾರ ಪುರುಷ 1’ರ ಶೂಟಿಂಗ್ ಸೆಟ್​ನಲ್ಲಿ ಸುನಿ ಹಾಗೂ ನಾಯಕ ನಟ ಶರಣ್ ಭಾರತ ತಂಡದ ಕ್ರಿಕೆಟ್ ಪಂದ್ಯದ ಬಗ್ಗೆ ಮಾತನಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ತೆರೆಯ ಹಿಂದಿನ ವಿಡಿಯೋ ಝಲಕ್​ಗಳಲ್ಲಿ ಇದೂ ಸೆರೆಯಾಗಿದ್ದು, ಶರಣ್​ಗೆ ಸುನಿಯವರು ಭಾರತ ತಂಡದ ಪಾಯಿಂಟ್ಸ್ ಪಟ್ಟಿ, ಮುಂದಿನ ಪಂದ್ಯಗಳ ಬಗ್ಗೆ ವಿವರಿಸುತ್ತಿರೋದು ಸೆರೆಯಾಗಿದೆ.

ವಿಡಿಯೋ ಇಲ್ಲಿದೆ:

ಮೇ 6ರಂದು ‘ಅವತಾರ ಪುರುಷ’ ಸಿನಿಮಾ ತೆರೆಗೆ ಬರುತ್ತಿದೆ. ಪುಷ್ಕರ್ ಫಿಲ್ಮ್ಸ್​ ಅಡಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವಿಲಿಯಂ ಡೇವಿಡ್​ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಶರಣ್​ಗೆ ನಾಯಕಿಯಾಗಿ ಆಶಿಕಾ ರಂಗನಾಥ್​ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!