‘ಅವತಾರ ಪುರುಷ’ ಬೇರೆ ಭಾಷೆಗೆ ಯಾಕೆ ಡಬ್ ಆಗಿಲ್ಲ? ಪ್ಯಾನ್ ಇಂಡಿಯಾ ಪ್ಲಾನ್ ಬಗ್ಗೆ ಸುನಿ ಹೇಳೋದಿಷ್ಟು..
2 ಪಾರ್ಟ್ಗಳಲ್ಲಿ ‘ಅವತಾರ ಪುರುಷ’ ಸಿನಿಮಾ ಮೂಡಿಬರುತ್ತಿದೆ. ಆ ಬಗ್ಗೆ ನಿರ್ದೇಶಕ ಸಿಂಪಲ್ ಸುನಿ ಮಾತನಾಡಿದ್ದಾರೆ.
ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಸಿನಿಮಾಗಳು ಹವಾ ಮಾಡುತ್ತಿವೆ. ‘ಕೆಜಿಎಫ್ 2’ (KGF 2) ಚಿತ್ರದ ಭರ್ಜರಿ ಗೆಲುವಿನ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ನಿರೀಕ್ಷೆ ಹೆಚ್ಚುವಂತಾಗಿದೆ. ಹಾಗಂತ ಮುಂಬರುವ ಎಲ್ಲ ಚಿತ್ರಗಳನ್ನೂ ಇದೇ ಮಟ್ಟದಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ. ಆ ಬಗ್ಗೆ ಸಿಂಪಲ್ ಸುನಿ (Simple Suni) ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಅವತಾರ ಪುರುಷ’ ಸಿನಿಮಾ (Avatara Purusha Movie) ಮೇ 6ರಂದು ಬಿಡುಗಡೆ ಆಗುತ್ತಿದೆ. ಶರಣ್ ಮತ್ತು ಆಶಿಕಾ ರಂಗನಾಥ್ ಜೋಡಿಯಾಗಿ ನಟಿಸಿರುವ ಈ ಸಿನಿಮಾ ಕೂಡ ‘ಕೆಜಿಎಫ್’ ರೀತಿ ಎರಡು ಪಾರ್ಟ್ನಲ್ಲಿ ಮೂಡಿಬರುತ್ತಿದೆ. ಮೊದಲ ಪಾರ್ಟ್ ಹಿಟ್ ಆದರೆ ಎರಡನೇ ಪಾರ್ಟ್ ಅನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುತ್ತೀರಾ ಎಂಬ ಪ್ರಶ್ನೆಗೆ ಸುನಿ ಉತ್ತರಿಸಿದ್ದಾರೆ. ‘ಬೇರೆ ಭಾಷೆಗೆ ಡಬ್ ಮಾಡುವ ಆಲೋಚನೆ ಇಲ್ಲ’ ಎಂದು ಹೇಳಿರುವ ಅವರು ಅದಕ್ಕೆ ಕಾರಣವನ್ನೂ ವಿವರಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.