AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸರೋಜಿನಿ ನಾಯ್ಡು ಬಯೋಪಿಕ್​ನಲ್ಲಿ ಶಾಂತಿಪ್ರಿಯಾ, ಸೋನಲ್​: ಪ್ಯಾನ್​ ಇಂಡಿಯಾ ಚಿತ್ರಕ್ಕೆ ಕನ್ನಡಿಗನ ನಿರ್ದೇಶನ

Sarojini Naidu Biopic: ಸರೋಜಿನಿ ನಾಯ್ಡು ಅವರ ಪಾತ್ರದಲ್ಲಿ ಶಾಂತಿಪ್ರಿಯಾ ಮತ್ತು ಸೋನಲ್ ಮಾಂತೆರೋ ಅವರು ನಟಿಸಲಿದ್ದಾರೆ. ಈ ಚಿತ್ರಕ್ಕೆ ವಿನಯ್ ಚಂದ್ರ ನಿರ್ದೇಶನ ಮಾಡಲಿದ್ದಾರೆ.

ಸರೋಜಿನಿ ನಾಯ್ಡು ಬಯೋಪಿಕ್​ನಲ್ಲಿ ಶಾಂತಿಪ್ರಿಯಾ, ಸೋನಲ್​: ಪ್ಯಾನ್​ ಇಂಡಿಯಾ ಚಿತ್ರಕ್ಕೆ ಕನ್ನಡಿಗನ ನಿರ್ದೇಶನ
ಶಾಂತಿ ಪ್ರಿಯಾ, ಹಿತೇನ್​ ತೇಜ್ವಾನಿ, ಸೋನಲ್ ಮೊಂತೆರೋ
Follow us
TV9 Web
| Updated By: ಮದನ್​ ಕುಮಾರ್​

Updated on: Apr 07, 2022 | 10:13 AM

ಸಾಧಕರ ಕುರಿತಾಗಿ ಅನೇಕ ಬಯೋಪಿಕ್​ಗಳು ಬಂದಿವೆ. ಇನ್ನೂ ಅನೇಕರ ಬಯೋಪಿಕ್​ ನಿರ್ಮಾಣ ಆಗುವುದು ಬಾಕಿ ಇದೆ. ‘ಭಾರತದ ಕೋಗಿಲೆ’ ಎಂದು ಖ್ಯಾತರಾಗಿದ್ದ ಸರೋಜಿನಿ ನಾಯ್ಡು (Sarojini Naidu) ಜೀವನದ ಕುರಿತು ಈಗ ಸಿನಿಮಾ ನಿರ್ಮಾಣ ಆಗುತ್ತಿದೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿದ್ಧವಾಗಲಿರುವ ಈ ಬಯೋಪಿಕ್​ಗೆ ಕನ್ನಡಿಗ ವಿನಯ್​ ಚಂದ್ರ ಅವರು ನಿರ್ದೇಶನ ಮಾಡಲಿದ್ದಾರೆ. ಕನ್ನಡ ಮತ್ತು ಹಿಂದಿಯಲ್ಲಿ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಚರಣ್​ ಸುವರ್ಣ, ಹನಿ ಚೌಧರಿ ಮತ್ತು ಸಿ.ಬಿ. ಕುಲಕರ್ಣಿ ಅವರು ಜೊತೆಯಾಗಿ ಬಂಡವಾಳ ಹೂಡುತ್ತಿದ್ದಾರೆ. ಈ ಸಿನಿಮಾವನ್ನು ವಿಸ್ತಾ ಫಿಲಂಸ್ ಮೂಲಕ ನಿರ್ಮಿಸಲಾಗುತ್ತಿದೆ. ಸರೋಜಿನಿ ನಾಯ್ಡು ಅವರ ಯೌವನದ ಪಾತ್ರದಲ್ಲಿ ಸೋನಲ್​ ಮಾಂತೆರೋ (Sonal Monteiro) ನಟಿಸಲಿದ್ದಾರೆ. ಹಿರಿ ವಯಸ್ಸಿನ ಪಾತ್ರದಲ್ಲಿ ಅನುಭವಿ ಕಲಾವಿದೆ ಶಾಂತಿಪ್ರಿಯಾ  (Shantipriya) ಅಭಿನಯಿಸಲಿದ್ದಾರೆ. ಸರೋಜಿನಿ ನಾಯ್ಡು ಪತಿಯ ಪಾತ್ರಕ್ಕೆ ಬಾಲಿವುಡ್​ ಕಲಾವಿದ ಹಿತೇನ್​ ತೇಜ್ವಾನಿ ಅವರು ಬಣ್ಣ ಹಚ್ಚುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಸರೋಜಿನಿ ನಾಯ್ಡು ಬಯೋಪಿಕ್​ ಬಗ್ಗೆ ಕೌತುಕ ಮೂಡಿದೆ.

ನಟಿ ಶಾಂತಿ ಪ್ರಿಯಾ ಅವರು ಒಂದು ಕಾಲದಲ್ಲಿ ಟಾಲಿವುಡ್​ ಮತ್ತು ಬಾಲಿವುಡ್​ನಲ್ಲಿ ಬಹುಬೇಡಿಕೆಯ ಹೀರೋಯಿನ್​ ಆಗಿದ್ದರು. ಅಕ್ಷಯ್​ ಕುಮಾರ್​ ವೃತ್ತಿಜೀವನದಲ್ಲಿ ಮೊದಲ ಬಾರಿ ಹೀರೋ ಆಗಿ ನಟಿಸಿದ್ದ ‘ಸೌಗಂಧ್​’ ಚಿತ್ರಕ್ಕೆ ನಾಯಕಿ ಆಗಿದ್ದರು ಶಾಂತಿ ಪ್ರಿಯಾ. ಬಳಿಕ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದರು. ಕಳೆದ ಹಲವು ವರ್ಷಗಳಿಂದ ಅವರು ನಟನೆಯಿಂದ ದೂರ ಉಳಿದುಕೊಂಡಿದ್ದರು. 28 ವರ್ಷಗಳ ನಂತರ ಶಾಂತಿಪ್ರಿಯ ಮತ್ತೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಅದು ಕೂಡ ಕನ್ನಡದ ಸಿನಿಮಾ ಮೂಲಕ ಎಂಬುದು ವಿಶೇಷ. ‘28 ವರ್ಷಗಳ ನಂತರ ನಟನೆಗೆ ವಾಪಸ್ಸಾಗಿದ್ದೇನೆ. ಇಂಥದ್ದೊಂದು ಅವಕಾಶಕ್ಕೆ ಧನ್ಯವಾದಗಳು. ಇಲ್ಲಿ ಸರೋಜಿನಿ ನಾಯ್ಡು ಅವರ ಪಾತ್ರ ನಿರ್ವಹಿಸುತ್ತಿದ್ದು, ಶಕ್ತಿಮೀರಿ ಜೀವ ತುಂಬುವುದಕ್ಕೆ ಪ್ರಯತ್ನಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಸರೋಜಿನಿ ನಾಯ್ಡು ಅವರ ಪತಿ ಗೋವಿಂದರಾಜುಲು ಪಾತ್ರದಲ್ಲಿ ನಟಿಸುತ್ತಿರುವುದಕ್ಕೆ ಹಿತೇನ್​ ತೇಜ್ವಾನಿ ಅವರಿಗೆ ಖುಷಿ ಇದೆ. ‘ಸರೋಜಿನಿ ಅವರ ಜೀವನದಲ್ಲಿ ನಡೆದ ಹಲವು ಪ್ರಮುಖ ವಿಷಯಗಳನ್ನು ಈ ಚಿತ್ರದಲ್ಲಿ ತೆರೆದಿಡಲಾಗುತ್ತಿದೆ. ಸರೋಜಿನಿ ಅವರ ಬಗ್ಗೆ ಜನರಿಗೆ ಅಷ್ಟಾಗಿ ಗೊತ್ತಿಲ್ಲ. ಅವರಿಗೆ ಪತಿ ಗೋವಿಂದ​ ರಾಜುಲು ಬೆನ್ನೆಲುಬು ಆಗಿದ್ದರು. ಕೊನೆಯವರೆಗೂ ಸಹಕಾರ, ಪ್ರೋತ್ಸಾಹ ನೀಡಿದರು. ಕುಟುಂಬ ಮತ್ತು ಮಕ್ಕಳ ಜವಾಬ್ದಾರಿಯನ್ನು ತಾವು ಹೊತ್ತುಕೊಂಡು ಪತ್ನಿಯನ್ನು ಹುರಿದುಂಬಿಸಿದರು. ಪತ್ನಿಗೆ ಏನು ಇಷ್ಟವಿತ್ತೋ, ಅದೆಲ್ಲವನ್ನೂ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರು. ಅಂಥ ಪಾತ್ರ ನನಗೆ ಸಿಕ್ಕಿರುವುದು ಸಂತಸದ ವಿಚಾರ’ ಎಂದು ಹಿತೇನ್​ ಹೇಳಿದ್ದಾರೆ.

ಒಂದು ಬಯೋಪಿಕ್​ನಲ್ಲಿ ನಟಿಸಬೇಕು ಎಂದು ನಟಿ ಸೋನಲ್​ ಮಾಂತೆರೋ ಅವರು ಆಸೆ ಇಟ್ಟುಕೊಂಡಿದ್ದರು. ಅದು ಇಷ್ಟು ಬೇಗ ಈಡೇರುತ್ತದೆ ಅಂತ ಅವರು ಅಂದುಕೊಂಡಿರಲಿಲ್ಲ. ಈ ಅವಕಾಶ ಸಿಕ್ಕಿದ್ದಕ್ಕೆ ಅವರಿಗೆ ಖುಷಿ ಇದೆ. ‘ಕಥೆ ಕೇಳಿದಾಗ ಬಹಳ ಖುಷಿ ಆಯಿತು. ಸರೋಜಿನಿ ನಾಯ್ಡು ಅವರ ಚಿಕ್ಕವಯಸ್ಸಿನ ಪಾತ್ರವನ್ನು ನಾನು ಮಾಡುತ್ತಿದ್ದೇನೆ. ಅವರ ಕಾಲೇಜಿನ ದಿನಗಳು ಮತ್ತು ರಾಜಕೀಯಕ್ಕೆ ಎಂಟ್ರಿ ಕೊಡುವುದಕ್ಕಿಂತ ಮುಂಚಿನ ದಿನಗಳ ಪಾತ್ರ ಮಾಡುತ್ತಿದ್ದೇನೆ’ ಎಂದು ಸೋನಲ್ ಮಾಂತೆರೋ ಹೇಳಿದ್ದಾರೆ.

ಸರೋಜಿನಿ ನಾಯ್ಡು ಬಗ್ಗೆ ಕಳೆದ 8 ವರ್ಷಗಳಿಂದ ಅಧ್ಯಯನ ಮಾಡಿರುವ ಧೀರಜ್ ಮಿಶ್ರಾ ಅವರು ಈ ಸಿನಿಮಾಗೆ ಬರಹಗಾರರಾಗಿದ್ದಾರೆ. ‘ಸರೋಜಿನ ಅವರು ಆಗಿನ ಕಾಲಕ್ಕೆ ಸ್ಕಾಲರ್​ಶಿಪ್​ ಪಡೆದು ಲಂಡನ್​ನಲ್ಲಿ ಓದಿದವರು. ಅವರಿಗೆ ಹಲವು ಭಾಷೆಗಳು ಗೊತ್ತಿತ್ತು. ಭಾರತದ ಪ್ರತಿನಿಧಿಯಾಗಿ ಅವರು ಹಲವು ದೇಶಗಳಿಗೆ ಹೋಗಿದ್ದರು. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು. 50 ಡಿಗ್ರಿ ಬಿಸಿಲಿನಲ್ಲೂ ಮೂರು ದಿನಗಳ ಕಾಲ ನೀರು ಕುಡಿಯದೇ ಹೋರಾಟ ಮಾಡಿದರು. ಅವರ ಈ ಹೋರಾಟ ಎಲ್ಲರಿಗೂ ಗೊತ್ತಾಗಬೇಕು’ ಎಂದು ತಮ್ಮ ಆಶಯವನ್ನು ತಿಳಿಸಿದ್ದಾರೆ ಧೀರಜ್ ಮಿಶ್ರಾ.

ಈ ಸಿನಿಮಾಗೆ ನಿರ್ದೇಶನ ಮಾಡುವುದರ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ವಿಜಯ್​ ಚಂದ್ರ ಅವರು ವಹಿಸಿಕೊಂಡಿದ್ದಾರೆ. ‘1878ರಿಂದ 1949ರ ಕಾಲಘಟ್ಟದಲ್ಲಿ ಈ ಚಿತ್ರ ನಡೆಯುತ್ತದೆ. ಬೆಂಗಳೂರು, ಮುಂಬೈ, ಉತ್ತರ ಪ್ರದೇಶದಲ್ಲಿ ಚಿತ್ರೀಕರಣ ನಡೆಯಲಿದೆ. ಕನ್ನಡ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿ, ತೆಲುಗು ಮತ್ತು ತಮಿಳಿಗೆ ಡಬ್​​ ಆಗಲಿದೆ. ಸರೋಜಿನಿ ನಾಯ್ಡು ಅವರ ಕುಟುಂಬದ ಒಪ್ಪಿಗೆ ಪಡೆದುಕೊಂಡಿದ್ದೇವೆ. ಸರೋಜಿನಿ ಅವರ ಬಗ್ಗೆ ಜನರಿಗೆ ಗೊತ್ತಿಲ್ಲದ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ. ಇನ್ನುಳಿದ ಪಾತ್ರಗಳಿಗೆ ಕಲಾವಿದರ ಆಯ್ಕೆ ಇನ್ನೂ ಪೂರ್ತಿಯಾಗಿಲ್ಲ’ ಎಂದು ವಿಜಯ್​ ಚಂದ್ರ ಹೇಳಿದ್ದಾರೆ.

ಇದನ್ನೂ ಓದಿ:

ಲತಾ ಮಂಗೇಶ್ಕರ್​ ಕುರಿತು ಬರಲಿದೆ ಬಯೋಪಿಕ್​; ರೇಸ್​ನಲ್ಲಿದ್ದಾರೆ ಖ್ಯಾತ ನಿರ್ದೇಶಕರು

ಕಪಿಲ್​ ಶರ್ಮಾ ಕುರಿತು ಬಯೋಪಿಕ್​; ಅಧಿಕೃತ ಘೋಷಣೆ ಮಾಡಿದ ಚಿತ್ರತಂಡ

ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಬೇರೆ ಬೇರೆ ಸ್ಥಳಗಳಿಗೆ ಹೋಗುತ್ತೇವೆಂದಿದ್ದ ಸಿಎಂ, ಡಿಸಿಎಂ ಜೊತೆಗಿದ್ದರು
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ಮೊನ್ನೆ ಬಿಡದಿ ಭದ್ರಾಪುರ ಬಳಿ ಇವತ್ತು ಅತ್ತಿಬೆಲೆ ಮಾರ್ಗ ರೇಲ್ವೇ ಬ್ರಿಜ್
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ತೋರಿಕೆಯ ಸಿಟಿ ರೌಂಡ್ಸ್ ಸಿದ್ದರಾಮಯ್ಯಗೆ ಬೇಕಿತ್ತೇ? ಜನರ ಪ್ರಶ್ನೆ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ಟಿವಿ9 ವರದಿಗಾರ ಪ್ರಶ್ನಿಸುತ್ತಿದ್ದಂತೆಯೇ ರೆಡ್ ಕಾರ್ಪೆಟ್ ಮಂಗಮಾಯ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ವಕ್ಫ್​ ಆಸ್ತಿ ಕಬಳಿಕೆ ತೆರವು: ವಕ್ಫ್ ನಮ್ಮ ದುಷ್ಮನ್ ಎಂದ ಮುಸ್ಲಿಂ ಮಹಿಳೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಜನಸಾಮಾನ್ಯರಿಗೆ ಕಷ್ಟ ತಪ್ಪಿದ್ದಲ್ಲ ಅಂತ ಉಡಾಫೆ ಮಾತಾಡಿದ ಕಾರ್ಯಕರ್ತೆ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ
ಸೋಮನಹಳ್ಳಿ ಟೋಲ್ ವಿರುದ್ಧ ರೈತರು, ಸ್ಥಳೀಯರಿಂದ ಹೋರಾಟ