Trikona Kannada Movie: ತಾಳ್ಮೆಯ ಮಹತ್ವ ಸಾರಲು ಬರ್ತಿದೆ ‘ತ್ರಿಕೋನ’ ಸಿನಿಮಾ
ಮೂರು ಜನರೇಷನ್ ಸ್ಟೋರಿ ‘ತ್ರಿಕೋನ’ ಚಿತ್ರದಲ್ಲಿದೆ. ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನು ಈ ಸಿನಿಮಾ ಹೇಳಲು ಹೊರಟಿದೆ.
ಪ್ರತಿ ಶುಕ್ರವಾರ ಸಿನಿಮಾ ರಸಿಕರಿಗೆ ಹಬ್ಬ. ಹೊಸಬರ ಹೊಸ ಪ್ರಯತ್ನ, ಅನುಭವಿಗಳ ಭಿನ್ನ ಸಿನಿಮಾಗಳು ತೆರೆ ಮೇಲೆ ಬಂದು ಪ್ರೇಕ್ಷಕರನ್ನು ರಂಜಿಸುತ್ತೆ. ಅದೇ ರೀತಿ ನಮ್ಮದೊಂದು ಭಿನ್ನ ಪ್ರಯತ್ನ, ಅಷ್ಟೇ ಗಟ್ಟಿ ಕಂಟೆಂಟ್ ಇರುವ ಸಿನಿಮಾ, ಪಕ್ಕಾ ಪ್ರೇಕ್ಷಕರಿಗೆ ಮನರಂಜನೆ ನೀಡುತ್ತೆ ಎಂದು ಹೊಸ ಹೋಪ್ ಇಟ್ಟುಕೊಂಡು ಬಂದ ಚಿತ್ರತಂಡದ ಪ್ರಯತ್ನ ‘ತ್ರಿಕೋನ’ (Trikona Kannada Movie). ಏ.8ರಂದು ತೆರೆಗೆ ಬರಲು ಸಜ್ಜಾಗಿರುವ ‘ತ್ರಿಕೋನ’ ಚಿತ್ರದ ತುಣುಕುಗಳು ಗಮನ ಸೆಳೆಯುತ್ತಿವೆ. ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಈಗಾಗಲೇ ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ. ‘ತ್ರಿಕೋನ’ (Trikona Movie) ಚಿತ್ರದ ಅಂತರಾಳದಲ್ಲಿ ಏನೋ ಹೊಸತನವಿದೆ ಎಂದು ಸಾರುವ ಈ ಸ್ಯಾಂಪಲ್ಗಳು ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.
‘ತ್ರಿಕೋನ’ ಚಿತ್ರದ ರೂವಾರಿ ಚಂದ್ರಕಾಂತ್. 2014ರಲ್ಲಿ ತೆರೆಕಂಡ ‘143’ ಸಿನಿಮಾ ಬಗ್ಗೆ ತಿಳಿದಿರಬಹುದು. ಆ ಚಿತ್ರ ಚಂದ್ರಕಾಂತ್ ಅವರ ಮೊದಲ ನಿರ್ದೇಶನದ ಸಿನಿಮಾ. ಇದೀಗ ಒಂದಷ್ಟು ವರ್ಷಗಳ ಗ್ಯಾಪ್ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟು ‘ತ್ರಿಕೋನ’ ಕಥೆ ಹೇಳಲು ಬಂದಿದ್ದಾರೆ. ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಆಕ್ಷನ್ ಕಟ್ ಹೇಳಿದ್ದಾರೆ. ಮೂರು ಜನರೇಷನ್ ಸ್ಟೋರಿ ಚಿತ್ರದಲ್ಲಿದ್ದು ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದನ್ನು ಈ ಸಿನಿಮಾ ಹೇಳಲು ಹೊರಟಿದೆ.
‘ಬರ್ಫಿ’, ‘ಪೆರೋಲ್’ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡಿ ಸೈ ಎನಿಸಿಕೊಂಡಿರುವ ರಾಜ್ ಶೇಖರ್ ಈ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ. ತಾಂತ್ರಿಕವಾಗಿ ಶ್ರೀಮಂತವಾಗಿ ಮೂಡಿ ಬಂದಿರುವ ಈ ಚಿತ್ರಕ್ಕೆ ಜೀವನ್ ಪ್ರಕಾಶ್ ಎನ್. ಸಂಕಲನ, ಶ್ರೀನಿವಾಸ್ ವಿನ್ನಕೋಟ ಕ್ಯಾಮೆರಾ ವರ್ಕ್, ಸುರೇಂದ್ರನಾಥ್ ಬಿ.ಆರ್. ಸಂಗೀತ ಸಂಯೋಜನೆ ಇದೆ.
ಸಿನಿಮಾದ ತಾರಾಗಣವೇ ಈ ಚಿತ್ರದ ಪ್ಲಸ್ ಪಾಯಿಂಟ್ ಬಹುತೇಕ ಸ್ಟಾರ್ ಪೋಷಕ ನಟರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಿರಿಯ ನಟಿ ಲಕ್ಷ್ಮೀ, ಸುರೇಶ್ ಹೆಬ್ಳಿಕರ್, ಅಚ್ಯುತ್ ಕುಮಾರ್, ಸುಧಾರಾಣಿ, ಸಾಧುಕೋಕಿಲ, ಹೊಸ ಪ್ರತಿಭೆಗಳಾದ ಮಾರುತೇಶ್, ರಾಜ್ ವೀರ್ ಚಿತ್ರದ ಮುಖ್ಯ ತಾರಾಬಗಳದಲ್ಲಿದ್ದಾರೆ. ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಏಪ್ರಿಲ್ 8ರಂದು ರಾಜ್ಯಾದ್ಯಂತ ತೆರೆ ಕಾಣಲು ಸಜ್ಜಾಗಿದೆ.
ಇದನ್ನೂ ಓದಿ:
‘ತ್ರಿಕೋನ’ದಲ್ಲಿದೆ ಎಲ್ಲಾ ವಯೋಮಾನದವರು ಮಿಸ್ ಮಾಡದೇ ನೋಡಲೇಬೇಕಾದ ಸಬ್ಜೆಕ್ಟ್; ಚಿತ್ರದ ಕಹಾನಿ ಏನು?
ಆಕ್ಷನ್ ಥ್ರಿಲ್ಲರ್ ‘ತ್ರಿಕೋನ’ ಮೂಲಕ ಕಂಬ್ಯಾಕ್ ಮಾಡಿದ ಡೈರೆಕ್ಟರ್ ಚಂದ್ರಕಾಂತ್