AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತ್ರಿಕೋನ’ದಲ್ಲಿದೆ ಎಲ್ಲಾ ವಯೋಮಾನದವರು ಮಿಸ್ ಮಾಡದೇ ನೋಡಲೇಬೇಕಾದ ಸಬ್ಜೆಕ್ಟ್; ಚಿತ್ರದ ಕಹಾನಿ ಏನು?

Trikona Movie | Lakshmi: ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ತ್ರಿಕೋನ’ದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಅದರಲ್ಲೂ ಹಿರಿಯ ನಟಿ ಜೂಲಿ ಲಕ್ಷ್ಮಿ ಹಾಗೂ ಸುರೇಶ್ ಹೆಬ್ಳಿಕರ್ ಕಾಂಬಿನೇಶ್ ಇರೋದು ಸಿನಿಮಾ ಪ್ರೇಮಿಗಳಿಗೆ ವಿಶೇಷ ವಿಚಾರ. ಏಪ್ರಿಲ್ 8ರಂದು ಚಿತ್ರ ರಿಲೀಸ್ ಆಗುತ್ತಿದೆ.

‘ತ್ರಿಕೋನ’ದಲ್ಲಿದೆ ಎಲ್ಲಾ ವಯೋಮಾನದವರು ಮಿಸ್ ಮಾಡದೇ ನೋಡಲೇಬೇಕಾದ ಸಬ್ಜೆಕ್ಟ್; ಚಿತ್ರದ ಕಹಾನಿ ಏನು?
‘ತ್ರಿಕೋನ’ ಚಿತ್ರದಲ್ಲಿ ಅಚ್ಯುತ್ ಕುಮಾರ್
TV9 Web
| Updated By: shivaprasad.hs|

Updated on: Apr 06, 2022 | 10:09 PM

Share

ಗಾಂಧೀನಗರದ ಗಲ್ಲಿ ಗಲ್ಲಿಗಳಲ್ಲೂ ಸಿನಿಮಾ ಹಬ್ಬ ಮತ್ತೆ ಮರುಕಳಿಸಿದೆ. ಕೊರೋನಾ ಅಲೆಗಳಿಂದ ಕಂಗೆಟ್ಟಿದ್ದ ಚಿತ್ರರಂಗಕ್ಕೆ ಚೇತರಿಕೆಯ ದಿನಗಳು ಬಂದಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಕೆಲವೊಂದಿಷ್ಟು ಸಿನಿಮಾಗಳು ಬಿಡುಗಡೆಯ ಸರತಿಯಲ್ಲಿವೆ. ಆ ಸಾಲಿನಲ್ಲಿ ಸಾಕಷ್ಟು ಗಮನ ಸೆಳೆಯುತ್ತಿರುವ ಚಿತ್ರ ಚಂದ್ರಕಾಂತ್ ನಿರ್ದೇಶನದ ‘ತ್ರಿಕೋನ’. ಆಕ್ಷನ್ ಥ್ರಿಲ್ಲರ್ ಚಿತ್ರವಾದ ‘ತ್ರಿಕೋನ’ (Trikona Movie) ಮೊದಲು ಹೈಲೈಟ್ ಆಗಿರುವುದೇ ಅದರ ತಾರಾಬಳಗದಿಂದ. ಕಾರಣ, ಚಿತ್ರದಲ್ಲಿ ಸ್ಟಾರ್ ಕಲಾವಿದರ ದಂಡೇ ಇದೆ. ಅದರಲ್ಲೂ ಹಿರಿಯ ನಟಿ ಜೂಲಿ ಲಕ್ಷ್ಮಿ ಹಾಗೂ ಸುರೇಶ್ ಹೆಬ್ಳಿಕರ್ ಕಾಂಬಿನೇಶ್ ಇರೋದು ಸಿನಿಮಾ ಪ್ರೇಮಿಗಳಿಗೆ ವಿಶೇಷ ವಿಚಾರ. ಈ ಇಬ್ಬರು ‘ಪಲ್ಲವಿ ಅನುಪಲ್ಲವಿ’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಅದಾಗಿ ಬರೋಬ್ಬರಿ ನಾಲ್ಕು ದಶಕಗಳ ನಂತರ ಒಂದೇ ಸಿನಿಮಾದಲ್ಲಿ ಅದರಲ್ಲೂ ಜೋಡಿಯಾಗಿ ಅವರು ‘ತ್ರಿಕೋನ’ದಲ್ಲಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಈ ಇಬ್ಬರ ರೇರ್ ಕಾಂಬಿನೇಶನ್ ಪ್ರೇಕ್ಷಕರ ಗಮನ ಸೆಳೆಯೋದಂತೂ ಖಂಡಿತ ಎನ್ನುತ್ತಾರೆ ಚಿತ್ರದ ನಿರ್ದೇಶಕ ಚಂದ್ರಕಾಂತ್.

ಚಿತ್ರದಲ್ಲಿ 25, 45, 65 ಹೀಗೆ ಮೂರು ವಯೋಮಾನದವರ ಕಥೆ ಇದೆ. ಈ ಮೂರು ವಯೋಮಾನವು ಚಿತ್ರದಲ್ಲಿ ಶಕ್ತಿ, ಅಹಂ ಮತ್ತು ತಾಳ್ಮೆಯನ್ನು ಪ್ರತಿನಿಧಿಸುತ್ತವೆ. ರಾಜ್ ವೀರ್, ಮಾರುತೇಶ್ 25 ವರ್ಷದವರನ್ನು ಚಿತ್ರದಲ್ಲಿ ಪ್ರತಿನಿಧಿಸಿದರೆ, ಅಚ್ಯುತ್ ಕುಮಾರ್, ಸುಧಾರಾಣಿ 45 ವರ್ಷದವರನ್ನು ಪ್ರತಿನಿಧಿಸಲಿದ್ದಾರೆ. ಲಕ್ಷ್ಮಿ, ಸುರೇಶ್ ಹೆಬ್ಳಿಕರ್ 65ರ ವಯೋಮಾನದವರನ್ನು ಪ್ರತಿನಿಧಿಸುವ ಪಾತ್ರವನ್ನು ನಿಭಾಯಿಸಿದ್ದಾರೆ.

Trikona Movie

‘ತ್ರಿಕೋನ’ ಚಿತ್ರದಲ್ಲಿ ಅಚ್ಯುತ್ ಕುಮಾರ್, ಸುಧಾರಾಣಿ

ಬದುಕಿನಲ್ಲಿ ಕಷ್ಟಗಳು ಎದುರಾದಾಗ ಶಕ್ತಿ, ಅಹಂ, ತಾಳ್ಮೆ ಮೂಲಕ ಮೂರು ವಯೋಮಾನದವರು ಹೇಗೆ ಬಗೆಹರಿಸಿಕೊಳ್ಳುತ್ತಾರೆ, ತಾಳ್ಮೆ ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದೇ ಚಿತ್ರದ ಒನ್ ಲೈನ್ ಕಹಾನಿ. ಇದನ್ನು ತೆರೆ ಮೇಲೆ ಅಷ್ಟೇ ಚೆಂದಗಾಣಿಸಿ ಕಮರ್ಶಿಯಲ್ ಎಳೆಯಲ್ಲಿ, ಅಷ್ಟೇ ಅದ್ದೂರಿಯಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಚಂದ್ರಕಾಂತ್. ಪ್ರಸ್ತುತ ದಿನಮಾನಕ್ಕೆ ಕನೆಕ್ಟ್ ಆಗುವ ಕಥೆ ಚಿತ್ರದಲ್ಲಿದ್ದು ಪ್ರತಿಯೊಬ್ಬರಿಗೂ ಒಂದೊಳ್ಳೆ ಸಂದೇಶವನ್ನು ತ್ರಿಕೋನ ನೀಡಲಿದೆ ಅನ್ನೋದು ಚಿತ್ರತಂಡದ ಭರವಸೆಯ ಮಾತು.

Lakshmi in Trikona Movie

‘ತ್ರಿಕೋನ’ ಚಿತ್ರದಲ್ಲಿ ಲಕ್ಷ್ಮಿ

ಚಿತ್ರಕ್ಕೆ ರಾಜ್ ಶೇಖರ್ ಬಂಡವಾಳ ಹೂಡಿದ್ದು, ಪೊಲೀಸ್ ಪ್ರಕಿ ಪ್ರೊಡಕ್ಷನ್ ಬ್ಯಾನರ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುರೇಂದ್ರನಾಥ್ ಸಂಗೀತ ನಿರ್ದೇಶನ ಮಾಡಿದ್ದು, ಶ್ರೀನಿವಾಸ್ ವಿನ್ನಕೋಟ ಛಾಯಾಗ್ರಹಣ, ಜೀವನ್ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಏಪ್ರಿಲ್ 8ರಂದು ‘ತ್ರಿಕೋನ’ ಬಿಡುಗಡೆಯಾಗುತ್ತಿದೆ.

ಇದನ್ನೂ ಓದಿ: ಆಕ್ಷನ್ ಥ್ರಿಲ್ಲರ್ ‘ತ್ರಿಕೋನ’ ಮೂಲಕ ಕಂಬ್ಯಾಕ್ ಮಾಡಿದ ಡೈರೆಕ್ಟರ್ ಚಂದ್ರಕಾಂತ್

Samantha: ಸಮಂತಾ ಸ್ಟೈಲ್​ಗಿಲ್ಲ ಸರಿಸಾಟಿ; ಬಗೆಬಗೆಯ ಫ್ಯಾಶನ್ ಅವತಾರದಲ್ಲಿ ಮಿಂಚುವ ನಟಿ- ಫೋಟೋಗಳು ಇಲ್ಲಿವೆ

ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ರಾಜಸ್ಥಾನದಲ್ಲಿ ಭಾರೀ ಪ್ರವಾಹ; ಒಂದೇ ದಿನದಲ್ಲಿ 6 ಜನ ಸಾವು
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಬುಧವಾರ ಪುನಃ ವಿಚಾರಣೆಗೆ ಬರಲು ಹೇಳಿದ್ದಾರೆ: ಭೈರತಿ ಬಸವರಾಜ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಭೂಪಾಲ್​ನ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರಿಗೆ ಗಾಯ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಶ್ರೀಗಳ ವಿರುದ್ಧ ಆಡಿದ ಮಾತನ್ನು ಕಾಶಪ್ಪನವರ್ ವಾಪಸ್ಸ ಪಡೆಯಬೇಕು: ವೀರಣ್ಣ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಬಸವರಾಜ ಆಸಂಗಿ, ಲಕ್ಷ್ಮಿ ವಿರುದ್ಧ ಪೊಲೀಸ್ ದೂರು ಸಲ್ಲಿಸಿರುವ ಸಂತ್ರಸ್ತೆ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಎಂಎ ಸಲೀಂರನ್ನು ಐಜಿ-ಡಿಜಿಪಿ ನೇಮಕಾತಿ ಹಿಂದೆ ರಾಜಕೀಯ ಇದೆ: ಅನುಪಮಾ ಶೆಣೈ
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಪಾಕ್ ಮೂಲದ ಫರ್ಹಾನ್
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಮಸ್ಯೆ ಹೆಚ್ಚುತ್ತಿದೆ, ಕೂಡಲೇ ಸರ್ಕಾರ ಮಧ್ಯಪ್ರವೇಶಿಸಬೇಕು: ಧಾಬಾ ಮಾಲೀಕ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಾಧನಾ ಸಮಾವೇಶದಿಂದ ವಾಪಸ್​ ಬರುತ್ತಿದ್ದ ಡಿಕೆಶಿ ಎಸ್ಕಾರ್ಟ್​​ ವಾಹನ ಪಲ್ಟಿ
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್
ಸಿಎಂ ಸಿದ್ದರಾಮಯ್ಯರನ್ನು ವಿನಾಕಾರಣ ದೂಷಿಸಲಾಗುತ್ತಿದೆ: ಕಾಶಪ್ಪನವರ್