‘ನಾನು ದುಡ್ಡಿಗೋಸ್ಕರ ಸಿನಿಮಾ‌ ಮಾಡುವುದಿಲ್ಲ’; ವೃತ್ತಿ ಬದುಕಿನ ಕುರಿತು ಕುತೂಹಲಕಾರಿ ವಿಚಾರ ಹೇಳಿಕೊಂಡ‌ ಪ್ರೇಮಾ

Prema | Wedding Gift Movie: ‘ವೆಡ್ಡಿಂಗ್ ಗಿಫ್ಟ್’ ಚಿತ್ರದ ಸುದ್ದಿಗೋಷ್ಠಿಯ ಸಂದರ್ಭದಲ್ಲಿ ಮಾತನಾಡುತ್ತಾ ಚಿತ್ರವನ್ನು ಒಪ್ಪಿಕೊಂಡಿದ್ದೇಕೆ ಎನ್ನುವುದನ್ನು ನಟಿ ಪ್ರೇಮಾ ವಿವರಿಸಿದ್ದಾರೆ. ಜತೆಗೆ ಚಿತ್ರೀಕರಣದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ.

TV9kannada Web Team

| Edited By: shivaprasad.hs

Apr 06, 2022 | 7:08 PM

ವಿಕ್ರಂ ಪ್ರಭು ಆ್ಯಕ್ಷನ್​ಕಟ್​ ಹೇಳಿರುವ ‘ವೆಡ್ಡಿಂಗ್ ಗಿಫ್ಟ್’ (Wedding Gift) ಚಿತ್ರದಲ್ಲಿ ಹಿರಿಯ ನಟಿ ಪ್ರೇಮಾ, ಸೋನುಗೌಡ, ಅಚ್ಯುತ್​​ ಕುಮಾರ್, ಪವಿತ್ರ ಲೋಕೇಶ್ ಮೊದಲಾದ ಖ್ಯಾತನಾಮರು ತೆರೆಹಂಚಿಕೊಂಡಿದ್ದಾರೆ. ಇನ್ನೇನು ತೆರೆಗೆ ಬರಲು ಸಿದ್ಧವಾಗಿರುವ ಸಿನಿಮಾದ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ಈ ಸಂದರ್ಭದಲ್ಲಿ ಮಾತನಾಡುತ್ತಾ ಚಿತ್ರವನ್ನು ಒಪ್ಪಿಕೊಂಡಿದ್ದೇಕೆ ಎನ್ನುವುದನ್ನು ನಟಿ ಪ್ರೇಮಾ (Actress Prema) ವಿವರಿಸಿದ್ದಾರೆ. ಜತೆಗೆ ಚಿತ್ರೀಕರಣದ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಪ್ರೇಮ ಕಮ್​ಬ್ಯಾಕ್ ಮಾಡುತ್ತಿದ್ದು, ಚಿತ್ರದ ಕತೆ ಕೇಳಿದಾಗಲೇ ಒಪ್ಪಿಕೊಂಡ ಸಿನಿಮಾ ಇದು ಎಂದಿದ್ದಾರೆ.

‘‘ಪ್ರತಿ ಸಿನಿಮಾ ಮಾಡಿದಾಗಲೂ ಹೊಸ ಸಿನಿಮಾ ಮಾಡಿದ ಹಾಗೆ ಅನ್ನಿಸುತ್ತದೆ. ‘ವೆಡ್ಡಿಂಗ್ ಗಿಫ್ಟ್​’ನಲ್ಲಿ ಎಲ್ಲರೂ ಸಹಕಾರ ನೀಡಿದ್ದಾರೆ. ಈ ಚಿತ್ರದ ಟೈಟಲ್ ಕೇಳಿದಾಗಲೇ ಕುತೂಹಲ ಮೂಡಿತ್ತು. ಸಾಮಾನ್ಯವಾಗಿ ಯಾವುದಾದರೂ ಚಿತ್ರದ ಕತೆ ಕೇಳಿದ ತಕ್ಷಣ ಎರಡು ದಿನವಾದರೂ ಸಮಯ ತೆಗೆದುಕೊಳ್ಳುತ್ತೇನೆ. ಆದರೆ ಈ ಚಿತ್ರದ ನಿರ್ದೇಶ ವಿಕ್ರಂ ಪ್ರಭು ಬಂದು ಕತೆ ಹೇಳುವಾಗ, ನಾನು- ನಮ್ಮ ತಾಯಿ ಕೇಳಿದ್ದೆವು. ಕತೆ ಕೇಳಿದ ತಕ್ಷಣವೇ ಸಿನಿಮಾ ಮಾಡುವುದಾಗಿ ಒಪ್ಪಿಕೊಂಡೆ’’ ಎಂದಿದ್ದಾರೆ ಪ್ರೇಮಾ.

‘‘ದುಡ್ಡಿಗೋಸ್ಕರ ಸಿನಿಮಾವನ್ನು ಮಾಡುವುದಿಲ್ಲ ಎಂದಿರುವ ಪ್ರೇಮಾ, ‘‘ನನಗೆ ಇಷ್ಟವಾದರೆ ಮಾತ್ರ ಸಿನಿಮಾ ಒಪ್ಪಿಕೊಳ್ಳುತ್ತೇನೆ. ಕಾರಣ ನನಗೆ ಚಿತ್ರ, ಚಿತ್ರರಂಗದ ಮೇಲೆ ಪ್ಯಾಶನ್ ಇದೆ. ನಿರ್ದೇಶಕರ ಮೊದಲ ಚಿತ್ರವಾದರೂ ಬಹಳ ಚೆನ್ನಾಗಿ ಯೋಜನೆ ಸಿದ್ಧಪಡಿಸಿದ್ದರು. ನಿಗದಿತ ಸಮಯಕ್ಕಿಂತ ಮೊದಲೇ ಚಿತ್ರವನ್ನು ಮುಗಿಸಿದ್ದೇವೆ. ಸಿನಿಮಾ ಮುಗಿದಿದ್ದೇ ತಿಳಿಯಲಿಲ್ಲ. ಈ ಜರ್ನಿ ಚೆನ್ನಾಗಿತ್ತು’’ ಎಂದು ಪ್ರೇಮಾ ನುಡಿದಿದ್ದಾರೆ.

ಇದನ್ನೂ ಓದಿ: KGF Chapter 2: ಮುಂಬೈನಲ್ಲಿ ‘ಕೆಜಿಎಫ್ 2’ ಚಿತ್ರತಂಡ; ಯಶ್ ನೋಡಲು ಮುಗಿಬಿದ್ದ ಫ್ಯಾನ್ಸ್- ಇಲ್ಲಿವೆ ಫೋಟೋಗಳು

ಬೋಲ್ಡ್ ಅವತಾರದಲ್ಲಿ ಸುಹಾನಾ ಖಾನ್

Follow us on

Click on your DTH Provider to Add TV9 Kannada