ಔದಾರ್ಯಕ್ಕೆ, ಅತಿಥಿ ಸತ್ಕಾರಕ್ಕೆ, ಸಾಮರಸ್ಯದ ಜೀವನಕ್ಕೆ ಹೆಸರಾಗಿದೆ ಕನ್ನಡನಾಡು ಎಂದರು ಕಂಚಿ ಶ್ರೀಗಳು
ಕನ್ನಡನಾಡು ಔದಾರ್ಯಕ್ಕೆ, ಅತಿಥಿಸತ್ಕಾರಕ್ಕೆ ಹೆಸರುವಾಸಿಯಾಗಿದೆ. ಮಂದಿರ ಮತ್ತು ಮನೆಗಳಲ್ಲಿ ಅನ್ನ ದಾಸೋಹ ನಡೆಯುತ್ತದೆ, ನೀವು ಯಾವ ಧರ್ಮ, ಯಾವ ಜಾತಿ ಅಂತ ಕೇಳದೆ ಸತ್ಕರಿಸುವ ಪುಣ್ಯಭೂಮಿ ಇದು. ಎಲ್ಲರಲ್ಲೂ ಭಕ್ತಿ ಇರಬೇಕು ಮತ್ತು ಮುಕ್ತಿ ಸಿಗಬೇಕು ಎಂದು ಶ್ರೀಗಳು ಹೇಳಿದರು.
ಹೊಸಪೇಟೆ: ಕಂಚಿ ಕಾಮಕೋಟಿ ಪೀಠಾಧೀಶ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ (Kanchi Kamakoti Seer Sri Shankara Vijayendra Saraswati) ಮಹಾಸ್ವಾಮಿಗಳು ಬುಧವಾರ ಹೊಸಪೇಟೆಯಲ್ಲಿ ಕರ್ನಾಟಕದ (Karnataka) ಜನತೆಗೆ ಬಹಳ ಉತ್ತಮವಾದ ಸಂದೇಶವವನ್ನು ನೀಡಿದರು. ರಾಜ್ಯ ಮತ್ತು ದಕ್ಷಿಣ ಭಾರತದ (South India) ಸಂಸ್ಕೃತಿ, ಸಭ್ಯತೆ ಮತ್ತು ಉತ್ಕೃಷ್ಟ ಪರಂಪರೆಗಳ ಬಗ್ಗೆ ಅವರು ಮಾತಾಡಿದರು. ನಾವೆಲ್ಲ ಸನಾತನ ಧರ್ಮವನ್ನು ಸಂರಕ್ಷಣೆ ಮಾಡಬೇಕು, ದಕ್ಷಿಣ ಭಾರತದಲ್ಲಿ ಧರ್ಮಕ್ಕೆ ಪ್ರತ್ಯೇಕತೆ ಇದೆ ಮತ್ತು ಗೌರವಾದರಗಳಿವೆ. ತ್ಯಾಗರಾಜರು ಹೇಳಿರುವ ಹಾಗೆ ಅಂದರೂ ಮಹಾನುಭಾವುಲು, ಅಂದರೆ ಇಲ್ಲಿ ವಾಸವಾಗಿರುವ ಜನ ಯಾರೂ ಯಾರಿಗಿಂತಲೂ ಕಮ್ಮಿಯಿಲ್ಲ, ಎಲ್ಲರೂ ಮಹಾನುಭಾವರು ಎಂದು ಶ್ರೀಗಳು ಹೇಳಿದರು. ರಾಷ್ಟ್ರಪತಿಳಾಗಿ ಎಪಿಜೆ ಅಬ್ದುಲ್ ಕಲಾಂ ಅವರು ಪ್ರಮಾಣ ವಚನ ಸ್ವೀಕರಿಸಿದ ದೇಶವಿದು, ಈ ದೇಶದಲ್ಲಿ ಎಲ್ಲರೂ ಮಹಾನುಭಾವರು ಎಂದು ಅವರು ಹೇಳಿದರು.
ಋಷಿಮುನಿಗಳು ತಪಸ್ಸು ಮಾಡಿದ ಪುಣ್ಯಭೂಮಿ, ಕೃಷ್ಣದೇವರಾಯ ಮತ್ತು ವಿದ್ಯಾರಣ್ಯ ಸ್ವಾಮೀಜಿ ಮೊದಲಾದವರೆಲ್ಲ ಈ ನಾಡಲ್ಲಿ ಆಗಿ ಹೋಗಿದ್ದಾರೆ ಮತ್ತು ಜನರಿಗೆ ಸಾಮರಸ್ಯದಿಂದ ಬದುಕುವ ದಾರಿ ತೋರಿದ್ದಾರೆ, ಸಾಮರಸ್ಯಕ್ಕೆ ಒಂದು ಉದಾಹರಣೆ ಎಂದರೆ ಕನ್ನಡನಾಡು. ಹಾಗಾಗಿ, ಈ ನಾಡಲ್ಲಿ ವಾಸಮಾಡುವ ಜನರಲ್ಲಿ ದ್ವೇಷದ ಭಾವನೆ ಇರಬಾರದು, ಜಗಳಗಂಟಿತನ ಇರಬಾರದು ಮತ್ತು ಅಹಂಕಾರ ಇರಬಾರದು, ವಿನಮ್ರತೆ ನಮ್ಮ ವ್ಯಕ್ತಿತ್ವದ ಭಾಗವಾಗಿರಬೇಕು ಎಂದು ಕಂಚಿ ಶ್ರೀಗಳು ಹೇಳಿದರು.
ಕನ್ನಡನಾಡು ಔದಾರ್ಯಕ್ಕೆ, ಅತಿಥಿಸತ್ಕಾರಕ್ಕೆ ಹೆಸರುವಾಸಿಯಾಗಿದೆ. ಮಂದಿರ ಮತ್ತು ಮನೆಗಳಲ್ಲಿ ಅನ್ನ ದಾಸೋಹ ನಡೆಯುತ್ತದೆ, ನೀವು ಯಾವ ಧರ್ಮ, ಯಾವ ಜಾತಿ ಅಂತ ಕೇಳದೆ ಸತ್ಕರಿಸುವ ಪುಣ್ಯಭೂಮಿ ಇದು. ಎಲ್ಲರಲ್ಲೂ ಭಕ್ತಿ ಇರಬೇಕು ಮತ್ತು ಮುಕ್ತಿ ಸಿಗಬೇಕು ಎಂದು ಶ್ರೀಗಳು ಹೇಳಿದರು.
ನಿರುದ್ಯೋಗ ಸಮಸ್ಯೆಯನ್ನು ಉಲ್ಲೇಖಿಸಿದ ಸ್ವಾಮೀಜಿ ಅವರು ಅದನ್ನು ಹೊಡೆದೋಡಿಸುವ ಕೆಲಸ ಮಾಡಬೇಕಿದೆ ಎಂದರು. ನೀರಿನ ಸಮಸ್ಯೆಯ ಬಗ್ಗೆಯೂ ಮಾತಾಡಿದ ಅವರು ಎಲ್ಲರಿಗೂ ಸಮೃದ್ಧವಾಗಿ ಕುಡಿಯುವ ನೀರು ಸಿಗಬೇಕು ಅಂದರು. ಸುಮಾರು 30 ವರ್ಷಗಳ ಹಿಂದೆ ಅವರು ಕಲಬುರಗಿಯಲ್ಲಿದ್ದ ದೊಡ್ಡ ಗುರುಗಳನ್ನು ಕಾಣಲೆಂದು ಬಂದಾಗ ರೈಲುಗಳಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಧ್ವನಿವರ್ಧಕಗಳ ಮೂಲಕ ಅಜಾನ್ ಕೂಗುವುದನ್ನು ವಿರೋಧಿಸಿ ಹಿಂದೂ ಕಾರ್ಯಕರ್ತರು ದೇವಸ್ಥಾನದಲ್ಲಿ ಭಜನೆ ನುಡಿಸಿದರು