Fighting: ಟೈಮಿಂಗ್ ವಿಚಾರಕ್ಕೆ ಉಡುಪಿಯ ಬಸ್ ಕಂಡಕ್ಟರ್ಗಳ ನಡುವೆ ಹೊಡೆದಾಟ; ವಿಡಿಯೋ ವೈರಲ್
ಪ್ರಯಾಣಿಕರೊಬ್ಬರು ತೆಗೆದ ಜಗಳದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಸಾರ್ವಜನಿಕ ಶಾಂತಿ ಭಂಗ ಮಾಡಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಖುವಂತೆ ಅಗ್ರಹ ವ್ಯಕ್ತವಾಗಿದೆ.
ಉಡುಪಿ: ಇಲ್ಲಿನ ಸಿಟಿ ಬಸ್ ನಿಲ್ದಾಣದಲ್ಲಿ ಟೈಮಿಂಗ್ಸ್ ವಿಚಾರದಲ್ಲಿ ಎರಡು ಬಸ್ಸಿನ ನಿರ್ವಾಹಕರ ಮಧ್ಯೆ ಬೀದಿ ಕಾಳಗ ನಡೆದಿದೆ. ಉಡುಪಿ ಹೂಡೆ, ಕೆಮ್ಮಣ್ಣು ಎಂಬ ಕಡೆಗೆ ತೆರಳುವ ಈ ಎರಡು ಬಸ್ಸುಗಳ ಕಂಡೆಕ್ಟರ್ಗಳು ಟೈಮಿಂಗ್ಸ್ ವಿಚಾರದಲ್ಲಿ ಜಗಳ ಶುರು ಮಾಡಿಕೊಂಡಿದ್ದಾರೆ. ಜಗಳ ಜೋರಾಗಿ ಬಳಿಕ ಪ್ರಯಾಣಿಕರ ಎದುರೇ ಬೀದಿ ಜಗಳ ಮಾಡಿಕೊಂಡಿದ್ದಾರೆ. ಘಟನೆಯು ಸಾರ್ವಜನಿಕರ ಅಶಾಂತಿಗೆ ಕಾರಣವಾಗಿದೆ. ಪ್ರಯಾಣಿಕರೊಬ್ಬರು ತೆಗೆದ ಜಗಳದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗಿದೆ. ಸಾರ್ವಜನಿಕ ಶಾಂತಿ ಭಂಗ ಮಾಡಿರುವ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆ ಕ್ರಮಕೈಗೊಳ್ಖುವಂತೆ ಅಗ್ರಹ ವ್ಯಕ್ತವಾಗಿದೆ.
ಉಡುಪಿ, ಮಂಗಳೂರು ಹಾಗೂ ಕರಾವಳಿ ಭಾಗದ ಹಲವೆಡೆ ಖಾಸಗಿ ಬಸ್ಗಳ ಪ್ರಾಬಲ್ಯ ಇದೆ. ಈ ನಗರಗಳಲ್ಲಿ ಸೆಕೆಂಡ್ಗಳ ಲೆಕ್ಕದಲ್ಲಿಯೂ ಬಸ್ಗಳು ಸಂಚಾರ ಮಾಡುತ್ತವೆ. ಉಡುಪಿಯಲ್ಲಿ ಕೂಡ ಅದೇ ವಿಚಾರಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದೆ. ಇಬ್ಬರು ನಿರ್ವಾಹಕರ ನಡುವೆ ಬಸ್ ಸಮಯದ ವಿಷಯಕ್ಕೆ ಬೀದಿ ಜಗಳ ನಡೆದಿದೆ.
ಇದನ್ನೂ ಓದಿ: ಕಟ್ಟಡ ಉಳಿಯಲಿ ಅಂತ ಬಂದ್ನಲ್ಲಿ ಭಾಗವಹಿಸದಿರುವುದು ಸಾಧ್ಯವಿರಲಿಲ್ಲ: ಉಡುಪಿ ಎಸ್ಡಿಪಿಐ ಅಧ್ಯಕ್ಷ
ಇದನ್ನೂ ಓದಿ: ನಮ್ಮ ಸಮುದಾಯ ಶಿಕ್ಷಣದಿಂದ ವಂಚಿತರಾಗಬಾರದು: ಮುಸ್ಲಿಂ ಸಮುದಾಯಕ್ಕೆ ಉಡುಪಿ ಖಾಜಿ ಕಿವಿಮಾತು
Published on: Apr 06, 2022 09:36 AM
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

