ಕಟ್ಟಡ ಉಳಿಯಲಿ ಅಂತ ಬಂದ್​ನಲ್ಲಿ ಭಾಗವಹಿಸದಿರುವುದು ಸಾಧ್ಯವಿರಲಿಲ್ಲ: ಉಡುಪಿ ಎಸ್​​ಡಿಪಿಐ ಅಧ್ಯಕ್ಷ

ಕಟ್ಟಡ ಉಳಿಯಲಿ ಅಂತ ಬಂದ್​ನಲ್ಲಿ ಭಾಗವಹಿಸದಿರುವುದು ಸಾಧ್ಯವಿರಲಿಲ್ಲ: ಉಡುಪಿ ಎಸ್​​ಡಿಪಿಐ ಅಧ್ಯಕ್ಷ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 26, 2022 | 8:58 PM

ರಾಜ್ಯಾದ್ಯಂತ ಮುಸ್ಲಿಂ ಸಮುದಾಯದವರೆಲ್ಲ ಬಂದ್ ಗೆ ಕರೆ ನೀಡಿದ್ದರು. ಬಿಲ್ಡಿಂಗ್ ಉಳಿಯುತ್ತದೆ ಅಂತ ನಾವು ಬಂದ್ ಆಚರಿಸದಿರುವುದು ಸಾಧ್ಯವಿರಲಿಲ್ಲ, ಬಿಲ್ಡಿಂಗ್ ಕ್ಕಿಂತ ನಮಗೆ ಧಾರ್ಮಿಕ ನಂಬುಗೆ ಮುಖ್ಯ ಎಂದು ಅವರು ಹೇಳಿದರು.

ಉಡುಪಿಯ ನಗರಸಭೆಯು ಸೋಷಲಿಸ್ಟ್ ಡೆಮೊಕ್ರ್ಯಾಟಿಕ್ ಪಾರ್ಟಿ ಆಫ್ ಇಂಡಿಯ (SDPI) ಸಂಘಟನೆಯ ಜಿಲ್ಲಾಧ್ಯಕ್ಷ (district president) ಅಕ್ರಮ ಕಟ್ಟಡವನ್ನು ತೆರವುಗೊಳಿಸಿದೆ. ಪೌರಾಡಳಿತ ಕಚೇರಿ (civic agency) ಮೂಲಗಳ ಪ್ರಕಾರ ಅಧ್ಯಕ್ಷರು ಪರವಾನಿಗೆ ತೆಗೆದುಕೊಳ್ಳದೆ ಕಟ್ಟಡ ನಿರ್ಮಿಸಿದ್ದರು ಮತ್ತು 2018 ರಲ್ಲೇ ಅವರಿಗೆ ನೋಟಿಸ್ ನೀಡಲಾಗಿತ್ತು. ಈ ಬಗ್ಗೆ ಎಸ್ ಡಿ ಪಿ ಐ ಅಧ್ಯಕ್ಷರು ಶನಿವಾರ ಮಾಧ್ಯಮಗಳೊಂದಿಗೆ ಮಾತಾಡಿದರು. ಹಿಜಾಬ್ ವಿಷಯದಲ್ಲಿ ಎಸ್ ಡಿ ಪಿ ಐ ರಾಜಕೀಯ ಮಾಡಲಿಲ್ಲ, ಆದರೆ ಮಕ್ಕಳು ಅದರ ಬಗ್ಗೆ ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಅದನ್ನು ಧರಿಸುವುದು ಸಂವಿಧಾನ ನಮಗೆ ನೀಡಿರುವ ಹಕ್ಕು, ಅದನ್ನು ಯಾಕೆ ಕಸಿದುಕೊಳ್ಳಲಾಗುತ್ತಿದೆ ಅಂತ ಅವರು ಕೇಳಿದಾಗ ನಾವು ಅವರ ಬೆಂಬಲಕ್ಕೆ ನಿಲ್ಲಲೇಬೇಕಾಗುತ್ತದೆ. ಮಕ್ಕಳಿಗೆ ಅವರ ಹಕ್ಕು ಸಿಗಲೇಬೇಕು ಅಂತ ಅವರು ಹೇಳಿದರು.

ನಮ್ಮ ಕಟ್ಟಡ ಹೋಗಿರಬಹುದು, ಆದರೆ ಅವರು ನಮ್ಮ ಧ್ವನಿಯನ್ನು ಹತ್ತಿಕ್ಕಲಾಗದು. ಅಸಲಿಗೆ ಇದೆಲ್ಲ ಶುರುವಾಗಿದ್ದು ನಾವು ಹೈಕೋರ್ಟ್ ತೀರ್ಪು ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಮಾರ್ಚ್ 17 ರಂದು ರಾಜ್ಯಾದಂತ ಬಂದ್ ಗೆ ಕರೆ ನೀಡಿದಾಗ. ನಾವು ಪ್ರತಿಭಟನೆ ನಡೆಸಿದ್ದು ಯಾವುದೇ ರಾಜಕೀಯ ಪಕ್ಷದ ವಿರುದ್ಧ ಅಲ್ಲ, ಹಿಜಾಬ್ ವಿಷಯದಲ್ಲಿ ಕೋರ್ಟ್ ನೀಡಿದ ತೀರ್ಪಿನಿಂದ ನಮಗೆ ಬೇಸರವಾಗಿತ್ತು. ಅದಕ್ಕಾಗಿ ನಾವು ಬಂದ್ ಕರೆ ನೀಡಿದ್ದು ಎಂದು ಹೇಳಿದರು.

ರಾಜ್ಯಾದ್ಯಂತ ಮುಸ್ಲಿಂ ಸಮುದಾಯದವರೆಲ್ಲ ಬಂದ್ ಗೆ ಕರೆ ನೀಡಿದ್ದರು. ಬಿಲ್ಡಿಂಗ್ ಉಳಿಯುತ್ತದೆ ಅಂತ ನಾವು ಬಂದ್ ಆಚರಿಸದಿರುವುದು ಸಾಧ್ಯವಿರಲಿಲ್ಲ, ಬಿಲ್ಡಿಂಗ್ ಕ್ಕಿಂತ ನಮಗೆ ಧಾರ್ಮಿಕ ನಂಬುಗೆ ಮುಖ್ಯ ಎಂದು ಅವರು ಹೇಳಿದರು.

ಇದನ್ನೂ ಓದಿ:  ಎರಡೆರಡು ಬಾರಿ ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕೇರಳದ ಬಾಲಕ; ವೈರಲ್ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು