ಎರಡೆರಡು ಬಾರಿ ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾದ ಕೇರಳದ ಬಾಲಕ; ವೈರಲ್ ವಿಡಿಯೋ ನೋಡಿ ಹೌಹಾರಿದ ನೆಟ್ಟಿಗರು
ಅದೃಷ್ಟವೆಂಬಂತೆ ಬಾಲಕನಿಗೆ ಸಣ್ಣಪುಟ್ಟ ತೆರಚಿದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಬಾಲಕನ ಅದೃಷ್ಟ ನೆಟ್ಟಗಿತ್ತು, ಆತನಿಗೆ ಇದು ಮರುಜನ್ಮ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ.
ಭಯಾನಕ ಘಟನೆಯೊಂದರಲ್ಲಿ, ಕೇರಳ (Kerala)ದಲ್ಲಿ ಎಂಟು ವರ್ಷದ ಬಾಲಕ ಕೆಲವೇ ಸೆಕೆಂಡುಗಳಲ್ಲಿ ಒಂದಲ್ಲ ಎರಡು ಬಾರಿ ಪವಾಡಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಒಂದು ಕ್ಷಣ ಗಾಬರಿ ಬೀಳುತ್ತಾರೆ. ಏಕೆಂದರೆ ಇದು ಎದೆ ಝಲ್ಲೆನ್ನಿಸುವ ದೃಶ್ಯವಾಗಿದೆ. ಭಯಾನಕ ಅಪಘಾತದಿಂದ ಬಾಲಕ ಸ್ವಲ್ಪದರಲ್ಲೇ ಪಾರಾಗಿರುವುದನ್ನು ನೋಡಿ ನೆಟ್ಟಿಗರನ್ನು ಬೆಚ್ಚಿ ಬೀದಿದ್ದಾರೆ. ಬಿಡುವಿಲ್ಲದ ರಸ್ತೆಯಲ್ಲಿ ಬಾಲಕ ಸೈಕಲ್ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಅವನು ವೇಗವಾಗಿ ಬರುವಾಗ ಎದುರಿನಿಂದ ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸೈಕಲ್‌ನಿಂದ ಹಾರಿ ಬಾಲಕ ರಸ್ತೆಯಿಂದ ಪಕ್ಕಕ್ಕೆ ಹೋಗಿ ಬೀದಿದ್ದಾನೆ. ಅವನು ರಸ್ತೆಯಿಂದ ಸ್ಕಿಡ್ ಆಗುತ್ತಿದ್ದಂತೆ, ಮೋಟಾರ್‌ಬೈಕ್‌ನ ಹಿಂದೆ ಬಂದ ಕೇರಳ ರಾಜ್ಯ ಬಸ್ ಹುಡುಗನ ಸೈಕಲ್ ಮೇಲೆ ಹರಿದುಹೋಗಿದೆ. ಬಸ್ಸಿನ ರಭಸಕ್ಕೆ ಸೈಕಲ್ ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾನೆ.
ಅದೃಷ್ಟವೆಂಬಂತೆ ಬಾಲಕ (Miraculous Escape)ನಿಗೆ ಸಣ್ಣಪುಟ್ಟ ತೆರಚಿದ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ವಿಡಿಯೋ ನೋಡಿದ ಪ್ರತಿಯೊಬ್ಬರೂ ಬಾಲಕನ ಅದೃಷ್ಟ ನೆಟ್ಟಗಿತ್ತು, ಆತನಿಗೆ ಇದು ಮರುಜನ್ಮ ಅಂತಾ ಮಾತನಾಡಿಕೊಳ್ಳುತ್ತಿದ್ದಾರೆ.
KANNUR BOY’S MIRACULOUS ESCAPE…
In a miraculous escape, a 9 year old boy ended up without any serious injuries after his cycle was hit by a state transport bus in #Kerala‘s #Kannur. WATCH! #Accident #BicycleAccident #BusAccident #RoadSafety #KSRTC pic.twitter.com/QiqYoZxI12
— Safa ?? (@safaperaje) March 24, 2022
ಬಸ್ ಸೈಕಲ್ ಮೇಲೆ ಹರಿದು ಹೋದ ನಂತರ ಅದರ ಹಿಂದೆಯೇ ಕಾರೊಂದು ಬಂದಿದೆ. ರಸ್ತೆಯ ಇನ್ನೊಂದು ಬದಿಗೆ ಉರುಳಿದ ಹುಡುಗ ಗಾಬರಿಯಿಂದ ಎದ್ದು ಬರುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಸ್ಥಳೀಯ ವರದಿಗಳ ಪ್ರಕಾರ, ಕೇರಳದ ಕಣ್ಣೂರಿನ ತಳಿಪರಂಬ ಬಳಿಯ ಚೋರುಕ್ಕಲಾ ಎಂಬಲ್ಲಿ ಭಾನುವಾರ ಸಂಜೆ 4.30 ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ:
ದೇಶದಲ್ಲಿ 24ಗಂಟೆಯಲ್ಲಿ 4100 ಮಂದಿ ಕೊರೊನಾದಿಂದ ಸಾವು; ಮೃತರ ಸಂಖ್ಯೆಯಲ್ಲಿ ಏಕಾಏಕಿ ಏರಿಕೆಯಾಗಲು ಕಾರಣವೇನು?
ಹಿಜಾಬ್ ಧರಿಸಿಕೊಂಡು ಬಂದ್ರೆ ಎಸ್ಎಸ್ಎಲ್ಸಿ ಪರೀಕ್ಷೆಗೆ ಇಲ್ಲ ಎಂಟ್ರಿ; ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆದೇಶ