ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!

ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ಇದರಿಂದ ನಿಮ್ಮ ವ್ಯಕ್ತಿತ್ವವನ್ನೇ ಹೇಳಬಹುದಂತೆ!
ನಿಮ್ಮ ವ್ಯಕ್ತಿತ್ವ ಹೇಳುವ ಚಿತ್ರ

Personality: ‘ಆಪ್ಟಿಕಲ್ ಇಲ್ಯೂಶನ್’ ಎಂದರೆ ಒಂದು ರೀತಿಯ ಭ್ರಮೆ. ಅದನ್ನು ದಾಟಿ ನಾವು ಯಾವುದನ್ನು ಗುರುತಿಸಬಲ್ಲೆವು ಎನ್ನುವುದು ಇಲ್ಲಿರುವ ಸವಾಲು! ಇದು ನಮ್ಮ ಕಣ್ಣಿಗೆ ಇದು ಸವಾಲೊಡ್ಡುವುದೇ ಅಲ್ಲದೇ ವ್ಯಕ್ತಿತ್ವವನ್ನು ಗುರುತಿಸಲು ಸಹಾಯಕವಾಗುತ್ತದೆ ಎಂದರೆ ನೀವು ನಂಬಲೇಬೇಕು.

TV9kannada Web Team

| Edited By: shivaprasad.hs

Mar 26, 2022 | 4:11 PM

ನಮ್ಮ ಕಣ್ಣಿಗೆ ಸವಾಲೊಡ್ಡುವ ಹಲವು ಆಟಗಳನ್ನು ನಾವು ನೋಡಿರುತ್ತೇವೆ ಅಥವಾ ಆಡಿರುತ್ತೇವೆ. ಅವುಗಳಲ್ಲಿ ಒಂದು ‘ಆಪ್ಟಿಕಲ್ ಇಲ್ಯೂಶನ್’. ಇಲ್ಯೂಶನ್ (Optical Illusion) ಎಂದರೆ ಒಂದು ರೀತಿಯ ಭ್ರಮೆ. ಅದನ್ನು ದಾಟಿ ನಾವು ಯಾವುದನ್ನು ಗುರುತಿಸಬಲ್ಲೆವು ಎನ್ನುವುದು ಇಲ್ಲಿರುವ ಸವಾಲು! ಇದು ನಮ್ಮ ಕಣ್ಣಿಗೆ ಇದು ಸವಾಲೊಡ್ಡುವುದೇ ಅಲ್ಲದೇ ನಮ್ಮ ವ್ಯಕ್ತಿತ್ವವನ್ನು ಗುರುತಿಸಲು ಸಹಾಯಕವಾಗುತ್ತದೆ ಎಂದರೆ ನೀವು ನಂಬಲೇಬೇಕು. ಹೌದು. ಹಲವು ಚಿತ್ರಗಳ ಮುಖಾಂತರ ಆಪ್ಟಿಕಲ್​ ಇಲ್ಯೂಶನ್ ಸೃಷ್ಟಿಸಬಹುದು ಮತ್ತು ಕಣ್ಣುಗಳಿಗೆ ಟಾಸ್ಕ್ ನೀಡಬಹುದು. ಈ ಕೆಳಗೆ ಅಂಥದ್ದೇ ಒಂದು ಉದಾಹರಣೆಯಿದೆ. ಈ ಚಿತ್ರದಲ್ಲಿ ನಿಮಗೆ ಯಾವ ಪ್ರಾಣಿ ಅಥವಾ ಪಕ್ಷಿ ಅಥವಾ ಕೀಟ ಮೊದಲು ಗೋಚರಿಸುತ್ತದೆ? ಅಥವಾ ನೀವು ಯಾವುದನ್ನು ಮೊದಲು ಗುರುತಿಸುತ್ತೀರಿ? ಇದರ ಮೇಲೆ ನಿಮ್ಮ ವ್ಯಕ್ತಿತ್ವವನ್ನು ಗುರುತಿಸಬಹುದು ಎನ್ನುತ್ತಾರೆ ತಜ್ಞರು. ಇದರಲ್ಲಿ 9 ಜೀವಿಗಳಿವೆ.ಮೊದಲಿಗೆ ನೀವು ಯಾವುದನ್ನು ಗುರುತಿಸುತ್ತೀರಿ? ಚಿತ್ರ ಇಲ್ಲಿದೆ.

Animals

ಇದರಲ್ಲಿ ನಿಮಗೆ ಕಾಣಿಸುವ ಮೊದಲ ಜೀವಿ ಯಾವುದು?

ನಿಮಗೆ ಯಾವುದು ಮೊದಲು ಕಾಣಿಸಿತು? ಅದರ ಅರ್ಥವೇನು? ಇಲ್ಲಿದೆ ನೋಡಿ: 

ಕುದುರೆ:

A Horse

ಕುದುರೆ

ಕುದುರೆ: ನಿಮಗೆ ಮೊದಲು ಕುದುರೆ ಕಾಣಿಸಿತೇ? ಹಾಗಾದರೆ ನೀವು ಜೀವನದಲ್ಲಿ ನಿಮ್ಮ ಆಸಕ್ತಿಯನ್ನು, ಪ್ಯಾಶನ್​ಅನ್ನು ಸಾಧಿಸಲು ಪಣತೊಡುವವರು ಎಂದಾಯಿತು. ಅಷ್ಟೇ ಅಲ್ಲ, ನೀವು ನಿಮ್ಮೊಳಗಿನ ಆಸೆಗಳನ್ನು ಹತ್ತಿಕ್ಕಿ, ಸಮಾಜದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವಿರುವವರಾಗಿದ್ದೀರಿ. ಜತೆಗೆ ನಿಮಗೆ ವಿಶೇಷ ರೊಮ್ಯಾಂಟಿಕ್ ಶಕ್ತಿ ಇರುತ್ತದಂತೆ. ಸ್ವಾತಂತ್ರ್ಯವನ್ನು ಬಯಸುವವರೂ ನೀವಾಗಿದ್ದೀರಿ.

ಹುಂಜ:

ಹುಂಜ

ನಿಮಗೆ ಚಿತ್ರದಲ್ಲಿ ಹುಂಜ ಮೊದಲು ಕಾಣಿಸಿದರೆ ಈ ಗುಣಲಕ್ಷಣಗಳನ್ನು ಹೇಳಲಾಗುತ್ತದೆ. ನೀವು ಬಹಳ ಆತ್ಮವಿಶ್ವಾಸದ, ನಿಮ್ಮ ಕೌಶಲಗಳನ್ನು ಪ್ರದರ್ಶಿಸುವ ವ್ಯಕ್ತಿಯಾಗಿರುತ್ತೀರಿ. ನೀವು ಧೈರ್ಯಶಾಲಿ ಹಾಗೂ ಬುದ್ಧಿವಂತರಾಗಿದ್ದೀರಿ. ಜತೆಗೆ ನಿಮ್ಮ ಪ್ರೀತಿಪಾತ್ರರನ್ನು ಎಂದೆಂದೂ ರಕ್ಷಿಸಲು ನೀವು ಮುಂದಾಗಿರುತ್ತೀರಿ. ಜನರು ನಿಮ್ಮ ಸಹಾಯ ಗುಣವನ್ನು ಬಹಳ ಮೆಚ್ಚುತ್ತಾರೆ.

ಏಡಿ:

The Crab

ಏಡಿ

ನೀವು ಮೊದಲು ಏಡಿಯನ್ನು ಗುರುತಿಸಿದ್ದರೆ: ನೀವು ಜನರಿಗೆ ತೋರಿಸಿಕೊಳ್ಳುವಾಗ ಬಹಳ ಗಂಭೀರಿ ಹಾಗೂ ಕಟುವಾಗಿರುತ್ತೀರಿ. ಆದರೆ ಮನಸ್ಸಿನ ಒಳಗೆ ನೀವು ಬಹಳ ಸೂಕ್ಷ್ಮ. ವಿಷಯಗಳನ್ನು ಹೊಸ ದೃಷ್ಟಿಕೋನದಿಂದ ನೀವು ನೋಡುತ್ತೀರಿ. ನಿಮ್ಮ ಒಳಗಿನ ಅನಿಸಿಕೆಗಳನ್ನು ಬೇರೆಯವರಿಗೆ ಹೇಳಲು ನೀವು ಹೆಣಗಾಡಬಹುದು. ಆದರೆ ನೀವು ಮತ್ತೊಬ್ಬರಿಗೆ ಎಂದೂ ದ್ರೋಹ ಮಾಡುವುದಿಲ್ಲ.

ಮಿಡತೆ:

A Praying Mantis

ಮಿಡತೆ

ನೀವು ಮೊದಲು ಮಿಡತೆಯನ್ನು ಗಮನಿಸಿದರೆ: ನೀವು ಜೀವನದಲ್ಲಿ ಶಾಂತಿ ಮತ್ತು ಶಾಂತತೆಯನ್ನು ಆನಂದಿಸುವವರಂತೆ. ನಿಮ್ಮ ಸುತ್ತಮುತ್ತ ಕರ್ಕಶ ಶಬ್ದಗಳೇ ತುಂಬಿರುವುದರಿಂದ ನೀವು ಒಳಗಿನ ಶಾಂತಿಯ ಕಡೆಗೆ ಒಲವು ತೋರುತ್ತೀರಿ. ನೀವು ಬುದ್ಧಿವಂತರು ಮತ್ತು ತಾಳ್ಮೆಯ ಸ್ವಭಾವದವರು. ದುಡುಕಿನ ನಿರ್ಧಾರಗಳ ಮೊರೆ ಹೋಗುವುದಿಲ್ಲ. ನಿಮ್ಮ ಒಳ ಮನಸ್ಸಿನಂತೆ ನೀವು ಬಹುತೇಕ ಸರಿಯಾದ ನಿರ್ಧಾರಗಳನ್ನೇ ತೆಗೆದುಕೊಳ್ಳುತ್ತೀರಿ.

ತೋಳ:

The Wolf

ತೋಳ

ನೀವು ಮೊದಲು ತೋಳವನ್ನು ಗುರುತಿಸಿದರೆ, ನೀವು ಬುದ್ಧಿವಂತರು ಹಾಗೂ ಧೈರ್ಯಶಾಲಿಗಳು ಎಂದರ್ಥ. ನೀವು ಸ್ವಾಭಾವಿಕವಾಗಿ ಎಲ್ಲವನ್ನೂ ಜಯಿಸುವವರು. ಗುರಿಗಳನ್ನು ಸಾಧಿಸಲು ನಿಮ್ಮಲ್ಲಿ ಶಕ್ತಿಯಿದೆ. ಜನರು ನಿಮ್ಮೊಂದಿಗೆ ಬೆರೆಯಲು ಇಷ್ಟಪಟ್ಟರೂ ಕೂಡ ನಿಮಗೆ ಒಬ್ಬರೇ ಇರುವುದು ಹೆಚ್ಚು ಹಿತ ಎನಿಸುತ್ತದೆ.

ಶ್ವಾನ:

The Dog

ಶ್ವಾನ

ಶ್ವಾನವನ್ನು ನೀವು ಗುರುತಿಸದರೆ, ನಿಮ್ಮಲ್ಲಿ ದಯೆ ಮತ್ತು ಪ್ರಾಮಾಣಿಕತೆ ಹೇರಳವಾಗಿದೆ ಎಂದರ್ಥವಂತೆ. ಬೇರೆಯವರ ಸಂತೋಷವೇ ನಿಮ್ಮ ಸಂತೋಷ. ಅಗತ್ಯವಿರುವವರಿಗೆ ಯಾವಾಗಲೂ ಸಹಾಯ ನೀಡುವ ನೀವು, ಸುತ್ತಲಿನ ಜನರ ರಕ್ಷಣೆಯನ್ನೇ ಪ್ರಮುಖ ಆದ್ಯತೆಯಾಗಿ ಪರಿಗಣಿಸುತ್ತೀರಿ. ಜತೆಗೆ ನಿಮ್ಮಲ್ಲಿ ಕಾಮಿಡಿ ಟೈಮಿಂಗ್ ಕೂಡ ಬಹಳ ಚೆನ್ನಾಗಿರುತ್ತದೆ.

ಹದ್ದು:

Falcon

ಹದ್ದು

ನಿಮಗೆ ಮೊದಲು ಹದ್ದು ಕಾಣಿಸಿದರೆ, ನಿಮಗೆ ಬಲ, ಸಮತೋಲನ ಹಾಗೂ ಮುಕ್ತತೆಯ ಗುಣಗಳು ಹೇರಳವಾಗಿರುವವರು ಆಗಿರುತ್ತೀರಿ. ನಿಮಗೆ ಪ್ರಯಾಣ ಇಷ್ಟ. ನಿಮ್ಮ ಗುರಿ ಸಾಧನೆಗೆ ಪ್ರಯತ್ನಪಡುತ್ತಲೇ ಇರುತ್ತೀರಿ. ನೀವೊಬ್ಬ ಸ್ವಭಾವತಃ ನಾಯಕ. ನಿಮ್ಮ ಸಕಾರಾತ್ಮಕತೆ ಜನರನ್ನು ಪ್ರೇರೇಪಿಸುತ್ತದೆ.

ಚಿಟ್ಟೆ:

Butterfly

ಚಿಟ್ಟೆ

ನೀವು ಚಿಟ್ಟೆಯನ್ನು ಗುರುತಿಸಿದವರಾಗಿದ್ದರೆ, ನೀವು ಕಷ್ಟಕರ ಸಂದರ್ಭಗಳಲ್ಲಿ ಜಯಶಾಲಿಯಾಗಿ ಹೊರಹೊಮ್ಮಿದವರಾಗಿರುತ್ತೀರಿ. ನಿಮ್ಮ ಸಹಜ ಚಾರ್ಮ್ ಜನರನ್ನು ಸೆಳೆಯುತ್ತದೆ. ನಿಮ್ಮ ಗುರಿಯೆಡೆಗೆ ಸಾಗಲು ನಿಮ್ಮಲ್ಲಿ ಸದಾ ಆತ್ಮವಿಶ್ವಾಸ ಹಾಗೂ ಕನಸು ಇರುತ್ತದೆ.

ಪಾರಿವಾಳ:

Dove

ಬಿಳಿ ಪಾರಿವಾಳ (ಡವ್)

ಒಂದು ವೇಳೆ ನೀವು ಬಿಳಿ ಪಾರಿವಾಳವನ್ನು ನೋಡಿದ್ದರೆ ನೀವು ಶಾಂತ, ಭರವಸೆಯ, ಮುಗ್ಧ ಮನಸ್ಸಿನವರಾಗಿರುತ್ತೀರಂತೆ. ನೀವು ಜೀವನದಲ್ಲಿ ಸಮತೋಲನ ಕಾಯ್ದುಕೊಂಡವರು. ನಿಮಗೆ ಸ್ವಯಂ ರಕ್ಷಣೆಗೆ, ಆರೈಕೆಗೆ ಸಮಯವಿರುತ್ತದೆ. ನಿಮಗೆ ಜನರ ಸಹವಾಸ ಸುಲಭವಂತೆ. ಹೀಗೆ ವಿವಿಧ ಜೀವಿಗಳ ಮೂಲಕ ಈ ಚಿತ್ರದಿಂದ ಗುಣಲಕ್ಷಣಗಳನ್ನು ವ್ಯಾಖ್ಯಾನಿಸಲಾಗಿದೆ.

ನಿಮಗೆ ಮೊದಲು ಗೋಚರಿಸಿದ ಜೀವಿ ಯಾವುದು?

ಇದನ್ನೂ ಓದಿ:

Bengaluru Airport: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿಷ್ಠಿತ ವಿಂಗ್ಸ್ ಇಂಡಿಯಾ 2022 ಪ್ರಶಸ್ತಿ

Health Tips: ಡಯಟ್​ನಲ್ಲಿ ಬಸಳೆ ಸೊಪ್ಪು ಬಳಸುವುದರಿಂದ ಏನೆಲ್ಲ ಉಪಯೋಗವಿದೆ ಗೊತ್ತಾ?

Follow us on

Related Stories

Most Read Stories

Click on your DTH Provider to Add TV9 Kannada