AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಕೆಸರು ತುಂಬಿದ ರಸ್ತೆಯನ್ನು ಯುವಕ ದಾಟಿದ್ದು ಹೇಗೆ ಗೊತ್ತಾ? ಇಲ್ಲಿದೆ ವೈರಲ್ ವಿಡಿಯೋ

ಯುವಕನೊಬ್ಬ ತನ್ನ ಸೈಕಲ್ ಹಿಂದೆ ಕೆಲವು ವಸ್ತುಗಳನ್ನು ಇರಿಸಿಕೊಂಡಿದ್ದು, ಕೆಸರು ರಸ್ತೆಯನ್ನು ನೋಡಿ ಗಾಬರಿಯಾಗುವುದಿಲ್ಲ. ಬದಲಿಗೆ ತನ್ನ ಸೈಕಲ್​ ಸಹಾಯದಿಂದ ಗೋಡೆಯನ್ನು ಏರುತ್ತ ಈ ಕಠಿಣ ಹಾದಿಯನ್ನು ಅತ್ಯಂತ ಸುಲಭವಾಗಿ ದಾಟಿದ್ದಾನೆ. ಕೆಸರಿಗೆ ಕಾಲು ಹಾಕದೆ ಅದು ಹೇಗೆ ಇಲ್ಲಿಂದ ಬೇರೆ ಕಡೆ ತಲುವುದು ಎಂದು ಹುಬ್ಬೇರಿಸುವವರಿಗೆ ಉತ್ತರ ಈ ವಿಡಿಯೋದಲ್ಲಿದೆ ನೋಡಿ.

Viral Video: ಕೆಸರು ತುಂಬಿದ ರಸ್ತೆಯನ್ನು ಯುವಕ ದಾಟಿದ್ದು ಹೇಗೆ ಗೊತ್ತಾ? ಇಲ್ಲಿದೆ ವೈರಲ್ ವಿಡಿಯೋ
ಸೈಕಲ್ ಸಹಾಯದಿಂದ ಗೋಡೆಯನ್ನು ಏರುತ್ತ ಈ ಕಠಿಣ ಹಾದಿಯನ್ನು ಅತ್ಯಂತ ಸುಲಭವಾಗಿ ದಾಟಿದ್ದಾನೆ
TV9 Web
| Edited By: |

Updated on:Mar 25, 2022 | 7:09 PM

Share

ಮಳೆಗಾಲದಲ್ಲಿ ಸಾಮಾನ್ಯವಾಗಿ ಒಂದಿಲ್ಲಾ ಒಂದು ಕಡೆ ನೀರು ತುಂಬಿರುತ್ತದೆ. ಅದರಲ್ಲೂ ಮುಖ್ಯವಾಗಿ ಜನರು ಪರದಾಡುವುದು ನೀರು (Water) ತುಂಬಿದ ರಸ್ತೆಯನ್ನು ದಾಟುವುದರಲ್ಲಿ. ಮುಳುಗಿದ ರಸ್ತೆ ಅಥವಾ ದಾರಿಯನ್ನು ದಾಟಿ ಮನೆ ಸೇರುವುದು ಹೇಗೆ ಎಂದು ಯೋಚಿಸುವವರಿಗೆ ಸಾಮಾಜಿಕ ಜಾಲತಾಣದಲ್ಲಿ(Social media) ಉತ್ತರ ಸಿಕ್ಕಿದೆ. ಹೌದು ಕೆಸರಿನಿಂದ ತುಂಬಿದ ರಸ್ತೆಯನ್ನು ತನ್ನದೇ ಶೈಲಿಯಲ್ಲಿ ದಾಟಿ ಮನೆ ಕಡೆಗೆ ಪ್ರಯಾಣ ಬೇಳೆಸುತ್ತಿರುವ ಯುವಕನ ವಿಡಿಯೋ ಒಂದು ವೈರಲ್ (Viral)​ ಆಗಿದೆ. ನೆಟ್ಟಿಗರು ಈ ವಿಡಿಯೋ ಕಂಡು ಹೀಗೆ ಕೂಡ ರಸ್ತೆ ದಾಟಬಹುದಾ ಎಂದು ಅಚ್ಚರಿಗೊಂಡಿದ್ದಾರೆ.

ವೈರಲ್ ಆಗುತ್ತಿರುವ ವೀಡಿಯೊದಲ್ಲಿ, ರಸ್ತೆಯಲ್ಲಿ ನೀರು ಮತ್ತು ಕೆಸರು ತುಂಬಿರುವುದನ್ನು ನೋಡಬಹುದು. ಯುವಕನೊಬ್ಬ ತನ್ನ ಸೈಕಲ್ ಹಿಂದೆ ಕೆಲವು ವಸ್ತುಗಳನ್ನು ಇರಿಸಿಕೊಂಡಿದ್ದು, ಕೆಸರು ರಸ್ತೆಯನ್ನು ನೋಡಿ ಗಾಬರಿಯಾಗುವುದಿಲ್ಲ. ಬದಲಿಗೆ ತನ್ನ ಸೈಕಲ್​ ಸಹಾಯದಿಂದ ಗೋಡೆಯನ್ನು ಏರುತ್ತ ಈ ಕಠಿಣ ಹಾದಿಯನ್ನು ಅತ್ಯಂತ ಸುಲಭವಾಗಿ ದಾಟಿದ್ದಾನೆ. ಕೆಸರಿಗೆ ಕಾಲು ಹಾಕದೆ ಅದು ಹೇಗೆ ಇಲ್ಲಿಂದ ಬೇರೆ ಕಡೆ ತಲುವುದು ಎಂದು ಹುಬ್ಬೇರಿಸುವವರಿಗೆ ಉತ್ತರ ಈ ವಿಡಿಯೋದಲ್ಲಿದೆ ನೋಡಿ.

15 ಸೆಕೆಂಡುಗಳ ಈ ವಿಡಿಯೋವನ್ನು ಐಪಿಎಸ್ ಅಧಿಕಾರಿ ಸ್ವಾತಿ ಲಾಕ್ರಾ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸದ್ಯ 42 ಸಾವಿರಕ್ಕೂ ಹೆಚ್ಚು ವ್ಯೂವ್ಸ್​ ಪಡೆದುಕೊಂಡಿದೆ. ಇದರೊಂದಿಗೆ ಈ ವೀಡಿಯೊವನ್ನು ವೀಕ್ಷಿಸಿದ ನಂತರ ಜನರು ಅದರ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ಕಮೆಂಟ್​ ಮೂಲಕ ತಿಳಿಸಿದ್ದಾರೆ.

ಈ ಯುವಕನ ಪ್ರತಿಭೆಯನ್ನು ನೋಡಿದ ಜನರು ತುಂಬಾ ಇಷ್ಟಪಟ್ಟಿದ್ದಾರೆ. ಜತೆಗೆ ಕಮೆಂಟ್​ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ವಿಲ್ ಇರುವಲ್ಲಿ, ಒಂದು ಮಾರ್ಗವಿದೆ ಎಂದು ಒಬ್ಬರು ಕಮೆಂಟ್​ ಮಾಡಿದರೆ ಮತ್ತೊಬ್ಬರು, ಈ ಯುವಕ ಭೌತಶಾಸ್ತ್ರದ ಪ್ರೊಫೆಸರ್ ಎಂದು ಕಮೆಂಟ್​ ಮಾಡಿದ್ದಾರೆ. ಒನ್ನೊಬ್ಬರು ಈ ಹುಡುಗ ಹಳ್ಳಿಯ ಸ್ಪೈಡರ್ ಮ್ಯಾನ್ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜತೆ ಇದ್ದಾಗಲೂ ‘ಆರ್​ಆರ್​ಆರ್​’ ಪ್ರಚಾರ ಮಾಡಿದ ನಟಿ ಆಲಿಯಾ ಭಟ್​; ವಿಡಿಯೋ ವೈರಲ್​

ಬೀದಿ ಬದಿಯಲ್ಲಿದ್ದ ನಿರ್ಗತಿಕ ವ್ಯಕ್ತಿಯನ್ನು ಮದುವೆಯಾದ ಮಹಿಳೆ: ಇವರ ಸಿಂಪಲ್​ ಲವ್​ ಸ್ಟೋರಿ ಈಗ ಸಖತ್​ ವೈರಲ್​

Published On - 7:08 pm, Fri, 25 March 22