AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Narendra Modi: ಕಾಲಿನ ಬೆರಳುಗಳಿಂದ ಚಿತ್ರ ರಚನೆ; ಅನನ್ಯ ಪ್ರತಿಭೆಯನ್ನು ಗೌರವಿಸಿ ಪ್ರಧಾನಿ ಮೋದಿ ಹೇಳಿದ್ದೇನು?

Swami Vivekananda | Aayush Kundal: ಇತ್ತೀಚೆಗೆ ಪ್ರಧಾನಿ ವಿಶೇಷ ಚೇತನ ಕಲಾವಿದ ಆಯುಷ್ ಕುಂಡಲ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ಚಿತ್ರವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಈ ಭೇಟಿಯ ವಿಶೇಷತೆಗಳ ಬಗ್ಗೆ ಪ್ರಧಾನಿ ಮೋದಿ ಬರೆದಿದ್ದಾರೆ.

PM Narendra Modi: ಕಾಲಿನ ಬೆರಳುಗಳಿಂದ ಚಿತ್ರ ರಚನೆ; ಅನನ್ಯ ಪ್ರತಿಭೆಯನ್ನು ಗೌರವಿಸಿ ಪ್ರಧಾನಿ ಮೋದಿ ಹೇಳಿದ್ದೇನು?
Follow us
TV9 Web
| Updated By: shivaprasad.hs

Updated on:Mar 25, 2022 | 4:08 PM

ಪ್ರಧಾನಿ ನರೇಂದ್ರ ಮೋದಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡ ಪೋಸ್ಟ್ ಒಂದು ಸಖತ್ ವೈರಲ್ ಆಗಿರುವುದಲ್ಲದೇ, ಜನರಿಂದ ಮೆಚ್ಚುಗೆ ಗಳಿಸಿದೆ. ಏನದು? ಇಲ್ಲಿದೆ ನೋಡಿ. ಇತ್ತೀಚೆಗೆ ಪ್ರಧಾನಿ ವಿಶೇಷ ಚೇತನ ಕಲಾವಿದ ಆಯುಷ್ ಕುಂಡಲ್ ಅವರನ್ನು ಭೇಟಿಯಾಗಿದ್ದರು. ಈ ಭೇಟಿಯ ಚಿತ್ರವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ. ಈ ಭೇಟಿಯ ವಿಶೇಷತೆಗಳ ಬಗ್ಗೆ ಪ್ರಧಾನಿ ಮೋದಿ (PM Narendra Modi) ಬರೆದಿದ್ದಾರೆ. ‘‘ಆಯುಷ್​​ ಕುಂಡಲ್​ರನ್ನು ಭೇಟಿಯಾದೆ. ಇದು ಮರೆಯಲಾಗದ ಕ್ಷಣವಾಗಿ ದಾಖಲಾಗಿದೆ. ಕಾರಣ, ಕಲಾಕೃತಿ ರಚನೆಯಲ್ಲಿ ಆಯುಷ್ ಅವರಿಗಿರುವ ಕೌಶಲ್ಯ ಹಾಗೂ ತಮ್ಮ ಕಾಲಿನ ಬೆರಳುಗಳ ಮೂಲಕ ಭಾವಗಳನ್ನು ಕಲಾಕೃತಿಯಾಗಿ ಮೂಡಿಸುವ ಪರಿ ಎಲ್ಲರಿಗೂ ಪ್ರೇರಣೆ ನೀಡುವಂಥದ್ದು’’ ಎಂದು ಪ್ರಧಾನಿ ಬರೆದಿದ್ದಾರೆ. ಆಯುಷ್ ವಿಶೇಷ ಚೇತನ ಕಲಾವಿದರಾಗಿದ್ದು, ತಮ್ಮ ಕಾಲಿನ ಬೆರಳುಗಳ ಮೂಲಕ ಚಿತ್ರಗಳನ್ನು ರಚಿಸುತ್ತಾರೆ. ಪ್ರಧಾನಿ ಮೋದಿಗೆ ತಾವು ಬರೆದ ಸ್ವಾಮಿ ವಿವೇಕಾನಂದರ ಚಿತ್ರವನ್ನು ಆಯುಷ್ ಉಡುಗೊರೆಯಾಗಿ ನೀಡಿದ್ದಾರೆ.

ತಮ್ಮ ಪೋಸ್ಟ್​ನಲ್ಲಿ ಪ್ರಧಾನಿ ಮೋದಿ ಮತ್ತೊಂದು ವಿಚಾರವನ್ನು ಘೋಷಿಸಿದ್ದಾರೆ. ಆಯುಷ್​ರಿಂದ ಸತತ ಪ್ರೇರಣೆ ಪಡೆಯಲು ಟ್ವಿಟರ್​​ನಲ್ಲಿ ಅವರನ್ನು ಫಾಲೋ ಮಾಡುವುದಾಗಿ ಪ್ರಧಾನಿ ಘೋಷಿಸಿದ್ದಾರೆ. ಈ ಮೂಲಕ ವಿನೂತನ ಮಾದರಿಯಲ್ಲಿ ಆಯುಷ್​ರಿಗೆ ಪ್ರಧಾನಿ ಬೆಂಬಲ ನೀಡಿದ್ದಾರೆ. ತಮ್ಮ ಟ್ವೀಟ್​ನಲ್ಲಿ ಆಯುಷ್​ರೊಂದಿಗಿರುವ ಎರಡು ಫೋಟೋಗಳನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್ ಇಲ್ಲಿದೆ:

ಪ್ರಧಾನಿ ಮೋದಿ ಟ್ವೀಟ್​ಗೆ ಸುಮಾರು 99,000 ಮೆಚ್ಚುಗೆಗಳು ವ್ಯಕ್ತವಾಗಿದೆ. ಈ ಸಂಖ್ಯೆ ಇನ್ನೂ ಏರುತ್ತಲೇ ಇದೆ. ಸುಮಾರು 15,000ಕ್ಕೂ ಹೆಚ್ಚು ಜನ ರಿಟ್ವೀಟ್ ಮಾಡಿ ಆಯುಷ್​ರ ಪ್ರತಿಭೆ ಹೊಗಳಿದ್ದಾರೆ. ಸದ್ಯ ಈ ಪೋಸ್ಟ್ ವೈರಲ್ ಆಗಿದೆ. ಆಯುಷ್​ ರಚಿಸಿದ ಕಲಾಕೃತಿ ವೀಕ್ಷಿಸಿದ ನೆಟ್ಟಿಗರು ಅವರ ಪ್ರತಿಭೆಯನ್ನು ಶ್ಲಾಘಿಸಿದ್ದಾರೆ.

ಅಂತಹ ಕೆಲವು ಕಾಮೆಂಟ್​ಗಳು ಇಲ್ಲಿವೆ:

ಪ್ರಧಾನಿ ತಮ್ಮ ಮತ್ತೊಂದು ಟ್ವೀಟ್​ನಲ್ಲಿ ಆಯುಷ್​ರ ಯುಟ್ಯೂಬ್​ ಚಾನಲ್ ಲಿಂಕ್ ಕೂಡ ಹಂಚಿಕೊಂಡಿದ್ದಾರೆ. ಅಲ್ಲಿಗೆ ತೆರಳಿ ವಿಡಿಯೋಗಳನ್ನು ವೀಕ್ಷಿಸುವಂತೆ ಪ್ರಧಾನಿ ಕೋರಿಕೊಂಡಿದ್ದಾರೆ. ‘‘ಆಯುಷ್​ರ ಬದುಕಿನ ವಿವಿಧ ಬಣ್ಣಗಳು ತುಂಬಿರುವ ಯುಟ್ಯೂಬ್​ ಚಾನಲ್​ಅನ್ನು ಅವರು ಪ್ರಾರಂಭಿಸಿದ್ದಾರೆ’’ ಎಂದು ಪ್ರಧಾನಿ ಬರೆದಿದ್ದಾರೆ. ಆಯುಷ್​ರ ಕಲಾಕೃತಿ ನೋಡಿದ ನಿಮಗೇನನ್ನಿಸಿತು?

ಇದನ್ನೂ ಓದಿ:

KPSC Recruitment 2022: ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್​- ಬಿ ಹುದ್ದೆಗಳಿಗೆ ಅರ್ಜಿ ಅಹ್ವಾನ; ಇಲ್ಲಿದೆ ಹೆಚ್ಚಿನ ಮಾಹಿತಿ

ಸಂದರ್ಶನಕ್ಕೆ ಬಂದಿದ್ದ 27 ವರ್ಷದ ಯುವತಿಗೆ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆಯೇನು? ಇಲ್ಲಿದೆ ಕುತೂಹಲಕರ ವಿಚಾರ

Published On - 4:02 pm, Fri, 25 March 22