Viral Video: ವೇಗವಾಗಿ ಬರುತ್ತಿದ್ದ ರೈಲಿನ ಎದುರು ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ಪ್ರಾಣ ಉಳಿಸಿದ ಪೊಲೀಸ್; ವಿಡಿಯೋ ವೈರಲ್
18 ವರ್ಷದ ಬಾಲಕ ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಹಳಿಗಳ ಮೇಲೆ ಹಾರಿದ್ದಾನೆ. ಆದರೆ ಅದೃಷ್ಟವಶಾತ್ ಅಲ್ಲೇ ಇದ್ದ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ತಕ್ಷಣ ಎಚ್ಚೆತ್ತುಕೊಂಡು ಆತನನ್ನು ರಕ್ಷಿಸಿದ್ದಾರೆ.
ಥಾಣೆ: ಮಹಾರಾಷ್ಟ್ರದ ಥಾಣೆ (Thane) ಜಿಲ್ಲೆಯ ವಿಠಲವಾಡಿ ರೈಲ್ವೆ ನಿಲ್ದಾಣದೊಳಗೆ ಬರುತ್ತಿದ್ದ ರೈಲಿನ ಎದುರು ಹಾರಿ, ಅತ್ಮಹತ್ಯೆ (Suicide) ಮಾಡಿಕೊಳ್ಳಲು ಪ್ರಯತ್ನಿಸಿದ ಯುವಕನನ್ನು ಸಿನಿಮೀಯ ರೀತಿಯಲ್ಲಿ ರೈಲ್ವೇ ಪೊಲೀಸ್ ಪೇದೆಯೊಬ್ಬರು ರಕ್ಷಿಸಿದ್ದಾರೆ. ಮಾರ್ಚ್ 23ರಂದು ಮಹಾರಾಷ್ಟ್ರದ ಥಾಣೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. 18 ವರ್ಷದ ಬಾಲಕ ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಹಳಿಗಳ ಮೇಲೆ ಹಾರಿದ್ದಾನೆ. ಆದರೆ ಅದೃಷ್ಟವಶಾತ್ ಅಲ್ಲೇ ಇದ್ದ ರೈಲ್ವೆ ಪೊಲೀಸ್ ಕಾನ್ಸ್‌ಟೇಬಲ್ ತಕ್ಷಣ ಎಚ್ಚೆತ್ತುಕೊಂಡು ಆತನನ್ನು ರಕ್ಷಿಸಿದ್ದಾರೆ. ಈ ಸಂಪೂರ್ಣ ಘಟನೆ ರೈಲ್ವೆ ನಿಲ್ದಾಣದ (Railway Station) ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಕ್ಲಿಪ್ ಅನ್ನು ಎಎನ್‌ಐ ಮತ್ತು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಅಡ್ಡಾಡುತ್ತಿದ್ದ ಬಾಲಕನನ್ನು ಕಂಡು ಅನುಮಾನಗೊಂಡ ಕಾನ್‌ಸ್ಟೆಬಲ್ ಹೃಷಿಕೇಶ್ ಮಾನೆ ರಕ್ಷಣೆಗೆ ಧಾವಿಸಿದ್ದಾರೆ. ರೈಲು ನಿಲ್ದಾಣದೊಳಗೆ ಬೇಗವಾಗಿ ಬರುತ್ತಿದ್ದ ರೈಲಿನ ಮುಂದೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದ ಯುವಕನನ್ನು ರಕ್ಷಿಸಲು ಸರ್ಕಾರಿ ರೈಲ್ವೇ ಪೊಲೀಸ್ (ಜಿಆರ್‌ಪಿ) ಕಾನ್‌ಸ್ಟೆಬಲ್ ಕೂಡ ಹಳಿ ಮೇಲೆ ಹಾರಿದ್ದಾರೆ.
#WATCH | Maharashtra: A police personnel saved a teenage boy’s life by pushing him away from the railway track just seconds before an express train crossed the spot at Vitthalwadi railway station in Thane district. (23.03)
Video Source: Western Railway pic.twitter.com/uVQmU798Zg
— ANI (@ANI) March 23, 2022
ಪೊಲೀಸ್ ಪೇದೆ ತನ್ನ ಪ್ರಾಣದ ಹಂಗಿಲ್ಲದೆ ರೈಲಿನ ಹಳಿ ಮೇಲೆ ಹಾರಿ, ಬಾಲಕನನ್ನು ಹಳಿಯಿಂದ ದೂರ ತಳ್ಳಿದರು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಯುವಕನ ಪ್ರಾಣ ಉಳಿದಿದೆ ಎಂದು ಸಹಾಯಕ ಪೊಲೀಸ್ ಕಮಿಷನರ್ ವಿಜಯ್ ದಾರೆಕರ್ ಹೇಳಿದ್ದಾರೆ. ಪೊಲೀಸರು ಆ ಯುವಕನನ್ನು ಕಲ್ಯಾಣ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು
Viral Video: ಸೇಬು, ಚಿಕ್ಕು, ಬಾಳೆಹಣ್ಣು ಹಾಕಿ ಟೀ ಮಾಡಿದ ಚಾಯ್ವಾಲ; ವಿಡಿಯೋ ನೋಡಿ ನೆಟ್ಟಿಗರು ಸುಸ್ತು!