Viral Video: ಸೇಬು, ಚಿಕ್ಕು, ಬಾಳೆಹಣ್ಣು ಹಾಕಿ ಟೀ ಮಾಡಿದ ಚಾಯ್​ವಾಲ; ವಿಡಿಯೋ ನೋಡಿ ನೆಟ್ಟಿಗರು ಸುಸ್ತು!

Viral Video: ಸೇಬು, ಚಿಕ್ಕು, ಬಾಳೆಹಣ್ಣು ಹಾಕಿ ಟೀ ಮಾಡಿದ ಚಾಯ್​ವಾಲ; ವಿಡಿಯೋ ನೋಡಿ ನೆಟ್ಟಿಗರು ಸುಸ್ತು!
ಸೇಬು, ಬಾಳೆಹಣ್ಣಿನಿಂದ ಟೀ ಮಾಡಿದ ಚಾಯ್​ವಾಲಾ

Fruit Tea: ಕೆಲವರಿಗೆ ಟೀ, ಕಾಫಿ ಇಲ್ಲವೆಂದರೆ ಕೈ-ಕಾಲೇ ಆಡುವುದಿಲ್ಲ. ಆದರೆ, ಈ ಫ್ರೂಟ್​ ಟೀ ಕುಡಿಯಲು ನಿಮಗೆ ಸ್ವಲ್ಪ ಹೆಚ್ಚೇ ಧೈರ್ಯ ಬೇಕು.

TV9kannada Web Team

| Edited By: Sushma Chakre

Mar 23, 2022 | 7:50 PM

ನಿಮಗೆ ಜ್ಯೂಸ್​ ಇಷ್ಟಾನಾ? ಟೀ ಇಷ್ಟಾನಾ? ಸೇಬು (Apple), ಬಾಳೆಹಣ್ಣು (Banana), ಸಪೋಟ, ಕರ್ಬೂಜ ಹೀಗೆ ನಾನಾ ಹಣ್ಣುಗಳ ಮಿಲ್ಕ್​ ಶೇಕ್ (Milk Shake) ಕುಡಿದಿರುತ್ತೀರಿ. ಹಾಗೇ, ಲೆಮನ್ ಟೀ, ಶುಂಠಿ ಟೀ, ಬ್ಲಾಕ್​ ಟೀ, ಮಸಾಲ ಟೀ ಹೀಗೆ ನಾನಾ ರೀತಿಯ ಟೀಗಳನ್ನು ಕೂಡ ಕುಡಿದಿರಬಹುದು. ಆದರೆ, ಸೇಬು, ಸಪೋಟ, ಬಾಳೆಹಣ್ಣಿನ ಚಹಾ ಎಂದಾದರೂ ಕುಡಿದಿದ್ದೀರಾ? ಹೀಗೂ ಟೀ ಮಾಡಬಹುದಾ ಎಂದು ನಿಮಗೆ ಆಶ್ಚರ್ಯವಾಗಬಹುದು. ವಿವಿಧ ಹಣ್ಣುಗಳನ್ನು ಹಾಕಿ ಚಹಾ (Tea) ಮಾಡಿರುವ ವಿಡಿಯೋ ನೋಡಿ ನೆಟ್ಟಿಗರು ಮೂಗು ಮುರಿದಿದ್ದಾರೆ.

ಕೆಲವರಿಗೆ ಟೀ, ಕಾಫಿ ಇಲ್ಲವೆಂದರೆ ಕೈ-ಕಾಲೇ ಆಡುವುದಿಲ್ಲ. ಆದರೆ, ಈ ಫ್ರೂಟ್​ ಟೀ ಕುಡಿಯಲು ನಿಮಗೆ ಸ್ವಲ್ಪ ಹೆಚ್ಚೇ ಧೈರ್ಯ ಬೇಕು. ನೀವು ಚಹಾ ಪ್ರಿಯರಾಗಿದ್ದರೆ ನೀವು ವಿಡಿಯೋವನ್ನು ನೋಡಲೇಬೇಕು. ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಹಣ್ಣಿನಿಂದ ಚಹಾ ಮಾಡುತ್ತಿದ್ದುದನ್ನು ಕಾಣಬಹುದು. ಇದು ತಮಾಷೆಗೆ ಹೇಳುತ್ತಿರುವ ಮಾತಲ್ಲ. ಈ ವಿಡಿಯೋ ನೋಡಿದರೆ ನಿಮಗೂ ಗೊತ್ತಾಗುತ್ತದೆ.

ವೈರಲ್ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಆಹಾರ ಬ್ಲಾಗರ್ ಅಮರ್ ಸಿರೋಹಿ ಪೋಸ್ಟ್ ಮಾಡಿದ್ದಾರೆ. ಈ ಚಿಕ್ಕ ವಿಡಿಯೋ ಕ್ಲಿಪ್‌ನಲ್ಲಿ ಬೀದಿ ಬದಿಯ ವ್ಯಾಪಾರಿ ಹಣ್ಣಿನ ಚಾಯ್ ಮಾಡುವುದನ್ನು ಕಾಣಬಹುದು. ಈ ವಿಡಿಯೋದ ಶೀರ್ಷಿಕೆಯ ಪ್ರಕಾರ ಮಾರಾಟಗಾರರು ಸೂರತ್‌ನಿಂದ ಬಂದವರು. ಅವರು ನೀರು ಮತ್ತು ಹಾಲಿನೊಂದಿಗೆ ಬಾಳೆಹಣ್ಣು, ಸಪೋಟ, ಸೇಬು ಹಣ್ಣನ್ನು ಸೇರಿಸಿ ಟೀ ಮಾಡಿದ್ದಾರೆ. ಆ ಹಣ್ಣುಗಳ ಜೊತೆ ಶುಂಠಿಯನ್ನು ತುರಿದು, ಚಹಾವನ್ನು ಕುದಿಸಿರುವ ವಿಡಿಯೋ ಭಾರೀ ವೈರಲ್ ಆಗಿದೆ.

ನಂತರ ಆ ವ್ಯಕ್ತಿ ಹಣ್ಣಿನ ಚಹಾವನ್ನು ಸೋಸಿದನು. “ಸೂರತ್‌ನ ಹಣ್ಣಿನ ಚಾಯ್” ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ. ಆನ್‌ಲೈನ್‌ನಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು 9 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಆದರೆ, ಈ ವಿಡಿಯೋ ನೋಡಿ ಕೋಪಗೊಂಡ ಚಹಾ ಪ್ರಿಯರು ಇಂತಹ ಟೀಯನ್ನು ತಯಾರಿಸುವ ಮೂಲಕ ನಮ್ಮ ಮನಸನ್ನು ಮುರಿಯಲಾಗಿದೆ ಎಂದು ಟೀಕಿಸಿದ್ದಾರೆ.

ಅವನು ಜ್ಯೂಸ್ ಮಾಡುತ್ತಿದ್ದಾನಾ ಅಥವಾ ಚಹಾ ಮಾಡುತ್ತಿದ್ದಾನಾ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿದರೆ ಟೀ ಕುಡಿಯುವುದೇ ಬೇಡ ಎನಿಸುತ್ತಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Viral Video: ಕರೆಂಟ್ ಇಲ್ಲದೆ ಚಲಿಸುವ ಈ ಮರದ ಟ್ರೆಡ್​ಮಿಲ್​ ವಿಡಿಯೋ ನೋಡಿ ಫಿಟ್​ನೆಸ್​ ಉತ್ಸಾಹಿಗಳು ಫಿದಾ

Butter Tea: ಲೆಮನ್ ಟೀ, ಗ್ರೀನ್ ಟೀ ಬದಲು ಬಟರ್ ಟೀ ಕುಡಿದು ನೋಡಿ; ಬೆಣ್ಣೆ ಚಹಾ ನೋಡಿ ಮುಖ ಸಿಂಡರಿಸಿದ ನೆಟ್ಟಿಗರು

Follow us on

Related Stories

Most Read Stories

Click on your DTH Provider to Add TV9 Kannada