- Kannada News Photo gallery giant lilies tolerate more than 50 kgs here is curious facts abouts giant lilies
Giant Lilies: ಈ ಸಸ್ಯದ ಎಲೆಯ ಮೇಲೆ 50 ಕೆಜಿ ಭಾರವನ್ನು ಹೇರಿದರೂ ಏನೂ ಆಗುವುದಿಲ್ಲ!
Giant Lilies Flower: ಅಮೆಜಾನ್ ಮಳೆಕಾಡಿನಲ್ಲಿ ಕಂದುಬರುವ ಜೈಂಟ್ ಲಿಲಿ ತನ್ನ ಗುಣಲಕ್ಷಣಗಳಿಂದ ಎಂಥವರನ್ನೂ ಬೆರಗುಗೊಳಿಸುತ್ತದೆ. ಕಾರಣ, ನೀರಿನಲ್ಲಿ ಕಾಣಸಿಗುವ ಇದರ ಎಲೆಯ ಮೇಲೆ 45 KG- 50 KG ಭಾರ ಹೇರಿದರೂ ಅದು ಮುಳುಗುವುದಿಲ್ಲ. ಜೈಂಟ್ ಲಿಲಿಯ ಸಚಿತ್ರ ಪರಿಚಯ ಇಲ್ಲಿದೆ.
Updated on:Mar 24, 2022 | 9:41 AM

ಸಾಮಾನ್ಯವಾಗಿ ಎಲ್ಲಾ ಸಸ್ಯದ ಎಲೆಗಳು ಬಹುಸೂಕ್ಷ್ಮವಾಗಿರುತ್ತವೆ. ಮೆದುವಾಗಿ ಗಾಳಿ ಬೀಸಿದರೂ ಅವರು ಹಾರುತ್ತವೆ. ಆದರೆ, ಒಂದು ವಿಶೇಷ ಸಸ್ಯವಿದೆ. ಅದರ ಎಲೆಗಳ ಮೇಲೆ 50 ಕೆಜಿ ಭಾರ ಹೇರಿದರೂ ಅವು ಅಲ್ಲಾಡುವುದಿಲ್ಲ. ಹೌದು. ಇದು ನೀರಿನಲ್ಲಿ ತೇಲುವ ಸಸ್ಯವಾಗಿದ್ದು, ತನ್ನ ಗುಣಲಕ್ಷಣಗಳಿಂದ ಎಲ್ಲರನ್ನೂ ಬೆರಗುಗೊಳಿಸುತ್ತದೆ.

ಈ ಸಸ್ಯದ ಹೆಸರು ಜೈಂಟ್ ಲಿಲೀಸ್. ಇದರ ಹೂವುಗಳು ದೊಡ್ಡದಾಗಿರುತ್ತವೆ ಮತ್ತು ಅದರ ಎಲೆಗಳು ಬಲಶಾಲಿಯಾಗಿರುತ್ತವೆ. 45 KG- 50 KG ಭಾರ ಹೇರಿದರೂ ಅವು ನೀರಿನ ಮೇಲೆ ತೇಲುತ್ತಿರುತ್ತವೆ ಎಂದರೆ ನಿಮಗೆ ಅಚ್ಚರಿಯಾಗಲೇಬೇಕು!

BBC ವರದಿಯ ಪ್ರಕಾರ, ಇದರ ವೈಜ್ಞಾನಿಕ ಹೆಸರು ವಿಕ್ಟೋರಿಯಾ ಅಮೆಜಾನಿಕಾ. ಈ ಎಲೆಗಳು ಅಮೆಜಾನ್ ಮಳೆಕಾಡಿನಲ್ಲಿ ಹೆಚ್ಚು ಕಂಡುಬರುತ್ತವೆ. ಇದನ್ನು ಅಮೆಜಾನ್ ವಾಟರ್ ಲಿಲಿ, ಅಮೆಜಾನ್ ವಾಟರ್ ಪ್ಲೇಟರ್, ಜೈಂಟ್ ವಾಟರ್ ಲಿಲಿ, ರಾಯಲ್ ವಾಟರ್ ಲಿಲಿ ಎಂದೂ ಕರೆಯುತ್ತಾರೆ.

ಜೈಂಟ್ ಲಿಲಿಯ ಎಲೆಗಳು ಎರಡೂವರೆ ಅಡಿಯಿಂದ 3 ಮೀಟರ್ವರೆಗೆ ಬೆಳೆಯಬಹುದು. ದಿನದ ವಿವಿಧ ಸಮಯಗಳಿಗೆ ಅನುಗುಣವಾಗಿ ಇದರ ಬಣ್ಣ ಬದಲಾಗುವುದು ಮತ್ತೊಂದು ವಿಶೇಷ.

ಜೈಂಟ್ ಲಿಲಿಯನ್ನು ನೋಡಿ ನಿಮಗೆ ಅಚ್ಚರಿಯಾಯಿತೆ? ಇಂತಹ ಹಲವು ಸಸ್ಯವರ್ಗಗಳು ಈ ಭೂಮಿಯಲ್ಲಿವೆ. ಅಂತಹ ಹಲವು ಸಸ್ಯಗಳು ಸೃಷ್ಟಿಯ ರಹಸ್ಯಗಳ ಮೂಟೆ ಎಂದರೆ ತಪ್ಪಿಲ್ಲ.
Published On - 9:41 am, Thu, 24 March 22



















