ಬಾಂಬ್ ಶೆಲ್ಟರ್ನಲ್ಲಿ ಆಟವಾಡುತ್ತಿರುವ ಉಕ್ರೇನ್ ಮಕ್ಕಳು: ಮನಕಲಕುವ ವಿಡಿಯೋ ವೈರಲ್
ಬಾಂಬ್ ಶೆಲ್ಟರ್ನಲ್ಲಿ ಉಳಿದುಕೊಂಡ ಮಕ್ಕಳು ಅಲ್ಲೇ ಆಟವಾಡುತ್ತ ಖುಷಿ ಕಾಣುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ,
ಉಕ್ರೆನ್ ಮೇಲಿನ ರಷ್ಯಾ ದಾಳಿ (Russia Ukraine War) ಮುಂದುವರೆದಿದೆ. ಕ್ಷಣ ಕ್ಷಣಕ್ಕೂ ಜೀವ ಉಳಿಸಿಕೊಳ್ಳಲು ಜನ ಹೆಣಗುತ್ತಿದ್ದಾರೆ. ಬಾಂಬ್ ಶೆಲ್ಟರ್ಗಳಲ್ಲಿ ಆಶ್ರಯ ಪಡೆದು ಬದುಕುತ್ತಿದ್ದಾರೆ. ಮಕ್ಕಳು ದೊಡ್ಡವರೆನ್ನದೆ ಜನ ಒಂದೆಡೆ ಸೇರಿ ಬದುಕುತ್ತಿದ್ದಾರೆ. ಈ ನಡುವೆ ಹಲವು ಮನಕಲಕುವ ವಿಡಿಯೋ, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿದೆ. ಇದೀಗ ವೈರಲ್ ಆದ ವಿಡಿಯೋವೊಂದು ರಷ್ಯಾ ಅಬ್ಬರಕ್ಕೆ ನಲುಗಿದ ಉಕ್ರೇನ್ ಹಾಗೂ ಅಲ್ಲಿನ ಮಕ್ಕಳ ದಯನೀಯ ಸ್ಥಿತಿಯನ್ನು ಎತ್ತಿತೋರಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿ ಹೊರಗಿನ ಪ್ರಪಂಚ ಕಾಣಬೇಕಾದ ಮಕ್ಕಳು, ಸ್ನೇಹಿತರೊಂದಿಗೆ ಬೆರೆಯಬೇಕಾದ ಮಕ್ಕಳು ಬಾಂಬ್ ಶೆಲ್ಟರ್(Bomb Shelter) ನಲ್ಲಿ ಪ್ರಪಂಚದ ಅರಿವಿಲ್ಲದೆ ಹೆತ್ತವರೊಂದಿಗೆ ಬದುಕುತ್ತಿದ್ದಾರೆ. ಇದ್ದಲ್ಲಿಯೇ ಖುಷಿ ಕಾಣುವ ಪುಟ್ಟ ಮಕ್ಕಳ ಮನಸ್ಥಿತಿ ಈ ವಿಡಿಯೋಗೆ ಸಾಕ್ಷಿಯಾಗಿದೆ. ಕೀವ್ನ ಮೆಟ್ರೋ ನಿಲ್ದಾಣದಲ್ಲಿ ಬಾಂಬ್ ಶೆಲ್ಟರ್ನಲ್ಲಿ ಚಿಕ್ಕ ಮಕ್ಕಳು ನಗುತ್ತ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.
Childhood in the Kyiv metro, which residents of capital use as a bomb shelter#StandWithUkraine Video: Pavel Suslyakov pic.twitter.com/TYagIUTr5g
— Oleksandra Matviichuk (@avalaina) March 22, 2022
ಟ್ವಿಟರ್ನಲ್ಲಿ ವಿಡಿಯೋವನ್ನು ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ (ಉಕ್ರೇನ್) ಮುಖ್ಯಸ್ಥ ಒಲೆಕ್ಸಾಂಡ್ರಾ ಮ್ಯಾಟ್ವಿಚುಕ್ ಅವರು ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಮಕ್ಕಳು ನಿಲ್ದಾಣದಲ್ಲಿ ಓರೆಯಾದ ಪ್ಲಾಟ್‌ಫಾರ್ಮ್ ಅನ್ನು ಸ್ಲೈಡ್‌ನಂತೆ ಬಳಸಿ ಕೆಳಗೆ ಜಾರುವುದನ್ನು ಕಾಣಬಹುದು. ಅವರು ಭೂಗತ ಬಾಂಬ್ ಆಶ್ರಯದಲ್ಲಿ ಜೀವನವು ನೀಡುವ ಸಣ್ಣ ವಿಷಯಗಳನ್ನು ಆನಂದಿಸುತ್ತಿರುವಾಗ ಅವರು ಎಲ್ಲಾ ನಗುವನ್ನು ಕಾಣಬಹುದು.
ಮನಕಲಕುವ ಈ ವಿಡಿಯೋ ನೋಡಿ ಬಳಕೆದಾರರು ಯುದ್ಧದ ನಿರರ್ಥಕತೆಯ ಬಗ್ಗೆ ಮಾತನಾಡಿದರೆ, ಇತರರು ಸಮಾಜದ ವಿಶೇಷ ವರ್ಗದ ಬಗ್ಗೆ ಬರೆದಿದ್ದಾರೆ. ಅಮೆರಿಕದಲ್ಲಿ, ಅನೇಕ ಮಕ್ಕಳು ಎಲ್ಲವನ್ನೂ ಹೊಂದಿದ್ದಾರೆ. ಮತ್ತು ಅವರು ಬೇಸರಗೊಂಡಿದ್ದಾರೆ ಎಂದು ದೂರುತ್ತಾರೆ. ಈ ಉಕ್ರೇನಿಯನ್ ಮಕ್ಕಳು ಭೂಗತ ವಾಸಿಸುವ ತಮ್ಮನ್ನು ಹೇಗೆ ಮನರಂಜಿಸುತ್ತಾರೆ ಎಂಬುದನ್ನು ಅವರು ನೋಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ:
Viral Story: ಗುವಾಹಾಟಿ ಅಧಿಕಾರಿಯ ವಿಚಿತ್ರ ಸಹಿ ವೈರಲ್; ಮುಳ್ಳು ಹಂದಿಗೆ ಹೋಲಿಸಿದ ನೆಟ್ಟಿಗರು
Published On - 5:28 pm, Wed, 23 March 22