Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು

Shocking Video: ಚಿರತೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಡಾಲ್ಫ್ ವೋಲ್ಕರ್ ಚಿರತೆಗಳ ಫ್ಯಾಮಿಲಿ ಜೊತೆ ಆರಾಮಾಗಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

Viral Video: ಮೂರು ಚಿರತೆಗಳನ್ನು ತಬ್ಬಿ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್; ತಬ್ಬಿಬ್ಬಾದ ನೆಟ್ಟಿಗರು
ಚಿರತೆಗಳೊಂದಿಗೆ ಮಲಗಿದ ವ್ಯಕ್ತಿಯ ವಿಡಿಯೋ ವೈರಲ್
Follow us
| Updated By: ಸುಷ್ಮಾ ಚಕ್ರೆ

Updated on: Mar 24, 2022 | 2:14 PM

ಕಾಡು ಪ್ರಾಣಿಗಳು ಎಷ್ಟೇ ಅಮಾಯಕವಾಗಿ ಕಂಡರೂ ಹತ್ತಿರಕ್ಕೆ ಹೋದಾಗ ಅದರಿಂದ ಅಪಾಯಗಳು ಉಂಟಾಗುವ ಸಾಧ್ಯತೆಗಳೇ ಹೆಚ್ಚು. ಅದರಲ್ಲೂ ಹುಲಿ (Tiger), ಚಿರತೆಯಂತಹ (Leopard) ಕ್ರೂರ ಪ್ರಾಣಿಗಳೇನಾದರೂ ದೂರದಲ್ಲಿ ಕಂಡರೂ ಸಾಕು ಎಷ್ಟೋ ಜನರ ಹೃದಯ ಬಾಯಿಗೆ ಬಂದಿರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮೂರು ಚಿರತೆಗಳ ಜೊತೆ ಹಾಯಾಗಿ ಮಲಗಿ, ನಿದ್ರಿಸುತ್ತಿದ್ದಾನೆ. ಚಿರತೆಗಳನ್ನು ತಬ್ಬಿಕೊಂಡು ಹಾಯಾಗಿ ಬೆಡ್​ಶೀಟ್ ಹೊದ್ದು ಮಲಗಿರುವ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ವೀಡಿಯೊವನ್ನು 2019ರಲ್ಲಿ ದಕ್ಷಿಣ ಆಫ್ರಿಕಾದ ಬ್ಲೋಮ್‌ಫಾಂಟೈನ್‌ನಲ್ಲಿರುವ ಚಿರತೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಚಿತ್ರೀಕರಿಸಲಾಗಿದೆ. ಚಿರತೆ ಸಂತಾನೋತ್ಪತ್ತಿ ಕೇಂದ್ರದಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿರುವ ಡಾಲ್ಫ್ ವೋಲ್ಕರ್ ಚಿರತೆಗಳ ಫ್ಯಾಮಿಲಿ ಜೊತೆ ಆರಾಮಾಗಿ ಮಲಗಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಈ ವೀಡಿಯೊದ ವಿವರಣೆಯ ಪ್ರಕಾರ, ವೋಲ್ಕರ್ ಅವರು ದಕ್ಷಿಣ ಆಫ್ರಿಕಾದಲ್ಲಿ ಚಿರತೆಯ ಸಂತಾನೋತ್ಪತ್ತಿ ಕೇಂದ್ರವಾದ ‘ದಿ ಚೀತಾ ಎಕ್ಸ್‌ಪೀರಿಯೆನ್ಸ್’ ನಲ್ಲಿ ನಡೆಸಿದ ಪ್ರಯೋಗವಾಗಿದೆ. ಅಲ್ಲಿ ಅವರು ಮೂರು ಚಿರತೆಗಳೊಂದಿಗೆ ಮಲಗಿ ರಾತ್ರಿಗಳನ್ನು ಕಳೆಯಲು ವಿಶೇಷ ಅನುಮತಿಯನ್ನು ಪಡೆದಿದ್ದರು.

ಅಂದಹಾಗೆ, ಈ ಚಿರತೆಗಳಲ್ಲೆವೂ ಸಾಕಷ್ಟು ಪಳಗಿದ ಚಿರತೆಗಳಾಗಿದ್ದು, ತಂದೆ-ತಾಯಿ, ಮಗ ಚಿರತೆಗಳನ್ನು ಆ ವ್ಯಕ್ತಿ ತಬ್ಬಿಕೊಂಡು ಮಲಗಿದ್ದಾನೆ. ಸದ್ಯದಲ್ಲಿಯೇ ಈ ಚಿರತೆಗಳಲ್ಲಿ ಒಂದನ್ನು ಸಂರಕ್ಷಿತ ಕಾಡಿಗೆ ಬಿಡುವ ಯೋಜನೆ ಇದೆ. ಈ ಮೂವರೊಂದಿಗೆ ನನ್ನ ರಾತ್ರಿಗಳನ್ನು ಕಳೆಯಲು ನನಗೆ ವಿಶೇಷ ಅನುಮತಿಯನ್ನು ನೀಡಲಾಯಿತು. ನಾನು ಈ ಚಿರತೆಗಳೊಂದಿಗೆ ಅನ್ಯೋನ್ಯ ಸಂಬಂಧ ಹೊಂದಿದ್ದರಿಂದ ಅವುಗಳೊಂದಿಗೆ ಒಂದೆರಡು ದಿನ ಕಳೆಯಲು ನನಗೆ ವಿಶೇಷ ಅನುಮತಿ ನೀಡಲಾಯಿತು ಎಂದು ವೋಲ್ಕರ್ ಹೇಳಿದ್ದಾರೆ.

ಇದನ್ನೂ ಓದಿ: Shocking Video: ಬೆಂಜ್ ಕಾರ್ಖಾನೆಗೆ ಚಿರತೆ ಮರಿಯ ಸರ್​ಪ್ರೈಸ್​ ವಿಸಿಟ್!; 6 ಗಂಟೆ ಸತಾಯಿಸಿದ ಚಿರತೆಯ ವಿಡಿಯೋ ವೈರಲ್

Shocking News: ಹೊಲದಲ್ಲಿ ಚಿರತೆಯೊಂದಿಗೆ ಹೋರಾಡಿ ಮೊಮ್ಮಗಳನ್ನು ಕಾಪಾಡಿದ ಅಜ್ಜಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ