Shocking News: ಹೊಲದಲ್ಲಿ ಚಿರತೆಯೊಂದಿಗೆ ಹೋರಾಡಿ ಮೊಮ್ಮಗಳನ್ನು ಕಾಪಾಡಿದ ಅಜ್ಜಿ

Leopard Attack: ಹಸುಗಳಿಗೆ ಮೇವು ತರಲು ಅಜ್ಜಿ ತನ್ನ ಮೊಮ್ಮಗಳ ಜೊತೆ ಹೊಲಕ್ಕೆ ಹೋದಾಗ 7 ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿದೆ.

Shocking News: ಹೊಲದಲ್ಲಿ ಚಿರತೆಯೊಂದಿಗೆ ಹೋರಾಡಿ ಮೊಮ್ಮಗಳನ್ನು ಕಾಪಾಡಿದ ಅಜ್ಜಿ
ಚಿರತೆ
Follow us
| Updated By: ಸುಷ್ಮಾ ಚಕ್ರೆ

Updated on:Mar 08, 2022 | 6:15 PM

ಬಿಜ್ನೋರ್: ನಮ್ಮವರು ಅಪಾಯದಲ್ಲಿದ್ದಾರೆ ಎಂದು ಗೊತ್ತಾದಾಗ ಅದೆಲ್ಲಿಂದಲೋ ಹುಂಬ ಧೈರ್ಯ ಬಂದು ಬಿಡುತ್ತದೆ. ಅದರಲ್ಲೂ ತನ್ನ ಮಕ್ಕಳು, ಮೊಮ್ಮಕ್ಕಳ ವಿಷಯಕ್ಕೆ ಬಂದರೆ ಯಾವ ಮಹಿಳೆಯರೂ ಸುಮ್ಮನಿರುವುದಿಲ್ಲ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ವಯಸ್ಸಾದ ಮಹಿಳೆ ತನ್ನ 7 ವರ್ಷದ ಮೊಮ್ಮಗಳನ್ನು ರಕ್ಷಿಸಲು ಚಿರತೆಯ (Leopard) ಜೊತೆ ಹೋರಾಡಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್‌ನ ಧಂಪುರ ಪ್ರದೇಶದ ಮಿಲಾಕ್ ಜಹಾಂಗೀರಾಬಾದ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆದಿದೆ. ಮೊಮ್ಮಗಳ ಮೇಲೆ ದಾಳಿ ಮಾಡಿದ ಚಿರತೆಯಿಂದ ಕಾಪಾಡಲು ತಾನೇ ಚಿರತೆಯೊಂದಿಗೆ ಕಾದಾಡಿದ್ದಾಳೆ.

ಹಸುಗಳಿಗೆ ಮೇವು ತರಲು ಅಜ್ಜಿ ತನ್ನ ಮೊಮ್ಮಗಳ ಜೊತೆ ಹೊಲಕ್ಕೆ ಹೋದಾಗ 7 ವರ್ಷದ ಬಾಲಕಿಯ ಮೇಲೆ ಚಿರತೆ ದಾಳಿ ಮಾಡಿದೆ. ಈ ಕುರಿತು ಮಾಹಿತಿ ನೀಡಿರುವ ಆ ಬಾಲಕಿಯ ಅಜ್ಜಿ ಜಗವತಿ ದೇವಿ, ನನ್ನ ಮೊಮ್ಮಗಳು ಅವನಿ ಹೊಲದಲ್ಲಿ ಜೋರಾಗಿ ಕಿರುಚಾಡಿದಳು. ನಾನು ಅವಳ ಕಡೆಗೆ ತಿರುಗಿದಾಗ ಚಿರತೆ ತನ್ನ ಬಾಯಿಯಿಂದ ಆಕೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿತ್ತು. ಅದನ್ನು ನೋಡಿ ನನಗೆ ಒಂದು ಕ್ಷಣ ಗಾಬರಿಯಾಯಿತು. ಆದರೆ, ತಕ್ಷಣ ಸುಧಾರಿಸಿಕೊಂಡ ನಾನು ಆ ಚಿರತೆಯ ಬಳಿ ಓಡಿ ಹೋಗಿ ನನ್ನ ಮೊಮ್ಮಗಳನ್ನು ನನ್ನತ್ತ ಎಳೆದುಕೊಳ್ಳಲು ಪ್ರಯತ್ನಿಸಿದೆ ಎಂದಿದ್ದಾರೆ.

ಸ್ವಲ್ಪ ಹೊತ್ತಿನ ನಂತರ, ಚಿರತೆ ಅವಳನ್ನು ಹೊಲಕ್ಕೆ ಎಳೆದುಕೊಂಡು ಹೋಯಿತು. ಪಟ್ಟು ಬಿಡದ ನಾನು ನನ್ನ ಮೊಮ್ಮಗಳ ಕಾಲುಗಳನ್ನು ಹಿಡಿದು ಎಳೆದುಕೊಂಡೆ. ಅಲ್ಲೇ ಹೊಲದಲ್ಲಿದ್ದ ಗುದ್ದಲಿಯಿಂದ ಚಿರತೆಗೆ ಹೊಡೆದೆ. ಅಷ್ಟರಲ್ಲಿ ಹೊಲದಲ್ಲಿ ಕೆಲಸ ಮಾಡುವ ಇತರ ಮಹಿಳೆಯರು ನಮ್ಮ ರಕ್ಷಣೆಗೆ ಧಾವಿಸಿದರು. ಜನರೆಲ್ಲರೂ ಸೇರಿದ್ದರಿಂದ ಆ ಚಿರತೆ ನನ್ನ ಮೊಮ್ಮಗಳನ್ನು ಬಿಟ್ಟು ಓಡಿ ಹೋಯಿತು. ಚಿರತೆ ಕಚ್ಚಿದ್ದರಿಂದ ಆಕೆಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಅಜ್ಜಿ ಮಾಹಿತಿ ನೀಡಿದ್ದಾರೆ.

ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಆಕೆಯ ಮೇಲೆ ಚಿರತೆ ದಾಳಿ ನಡೆಸಿದ್ದರಿಂದ ಉಂಟಾದ ಶಾಕ್​ನಿಂದ ಇನ್ನು ಹೊರಬಂದಿಲ್ಲ. ಹಾಗೇ, ಆಕೆಯ ಬೆನ್ನು ಮತ್ತು ಕುತ್ತಿಗೆಗೆ ತೀವ್ರ ಗಾಯಗಳಾಗಿದ್ದು, ಊಟ ಮಾಡಲು ಸಾಧ್ಯವಾಗದಂತಾಗಿದೆ. ಆಕೆಗೆ ಚಿಕಿತ್ಸೆ ಮುಂದುವರೆದಿದೆ.

ಇದನ್ನೂ ಓದಿ: Shocking Video: ಅಂಬೆಗಾಲಿಡುತ್ತಿದ್ದ 7 ತಿಂಗಳ ಮಗು ಮೇಲೆ ಹಾರಲು ಯತ್ನಿಸಿದ ಚಿರತೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!

Published On - 6:15 pm, Tue, 8 March 22