Shocking Video: ಅಂಬೆಗಾಲಿಡುತ್ತಿದ್ದ 7 ತಿಂಗಳ ಮಗು ಮೇಲೆ ಹಾರಲು ಯತ್ನಿಸಿದ ಚಿರತೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್

Leopard Video: 7 ತಿಂಗಳ ಒಟ್ಟೋ ಎಂಬ ಪುಟ್ಟ ಮಗು ಸಫಾರಿ ಲಾಡ್ಜ್‌ನ ಕೋಣೆಯೊಳಗೆ ನೆಲದ ಮೇಲೆ ತೆವಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವಿಡಿಯೋದಲ್ಲಿ ಚಿರತೆಯೊಂದು ಮಗುವಿನ ಮೇಲೆ ನುಗ್ಗಲು ಪ್ರಯತ್ನಿಸಿದೆ.

Shocking Video: ಅಂಬೆಗಾಲಿಡುತ್ತಿದ್ದ 7 ತಿಂಗಳ ಮಗು ಮೇಲೆ ಹಾರಲು ಯತ್ನಿಸಿದ ಚಿರತೆ; ಮೈ ಜುಮ್ಮೆನಿಸುವ ವಿಡಿಯೋ ವೈರಲ್
ಮಗುವಿನ ಮೇಲೆ ಚಿರತೆಯ ದಾಳಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Feb 17, 2022 | 3:59 PM

ಇಂಗ್ಲೆಂಡ್​ನ ವೋರ್ಸೆಸ್ಟರ್‌ಶೈರ್‌ನಲ್ಲಿ ಚಿರತೆಯೊಂದು (Leopard) ಅಂಬೆಗಾಲಿಡುವ 7 ತಿಂಗಳ ಮಗುವಿನ ಮೇಲೆ ದಾಳಿ ಮಾಡಲು ಪ್ರಯತ್ನಿಸಿರುವ ಆಘಾತಕಾರಿ ವಿಡಿಯೋ (Shocking Video) ವೈರಲ್ ಆಗಿದೆ. ಬೆವ್ಡ್ಲಿಯಲ್ಲಿರುವ ವೆಸ್ಟ್ ಮಿಡ್‌ಲ್ಯಾಂಡ್ಸ್ ಸಫಾರಿ ಪಾರ್ಕ್‌ನಲ್ಲಿರುವ ಚೀತಾ ಸಫಾರಿ ಲಾಡ್ಜ್‌ನಲ್ಲಿ ಈ ಆಘಾತಕಾರಿ ವಿಡಿಯೋವನ್ನು ರೆಕಾರ್ಡ್ ಮಾಡಲಾಗಿದೆ. ಈ ವಿಡಿಯೋ ಕ್ಲಿಪ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ವೈರಲ್ ಆಗಿದ್ದು, ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ.

7 ತಿಂಗಳ ಒಟ್ಟೋ ಎಂಬ ಪುಟ್ಟ ಮಗು ಸಫಾರಿ ಲಾಡ್ಜ್‌ನ ಕೋಣೆಯೊಳಗೆ ನೆಲದ ಮೇಲೆ ತೆವಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಆ ವಿಡಿಯೋದಲ್ಲಿ ಚಿರತೆಯೊಂದು ಮಗುವಿನ ಮೇಲೆ ನುಗ್ಗಲು ಪ್ರಯತ್ನಿಸಿದೆ. ಆದರೆ, ಆ ಚಿರತೆ ಸುತ್ತಲೂ ಗಾಜಿನ ಬಾಕ್ಸ್​ ಇದ್ದುದರಿಂದ ಚಿರತೆಯ ಮುಖ ಗಾಜಿನ ಬಾಕ್ಸ್​ಗೆ ಬಡಿದು ಅದು ಕೆಳಗೆ ಬಿದ್ದಿದೆ. ಇದರಿಂದ ಮಗುವಿನ ಮೇಲೆರಗಲು ಬಂದ ಚಿರತೆಯ ಪ್ರಯತ್ನ ವಿಫಲವಾಗಿದೆ.

ಡೈಲಿಮೇಲ್ ವರದಿಯ ಪ್ರಕಾರ, ಒಟ್ಟೊ ಅವರ ತಂದೆ ಬೆನ್ ಮಿಲ್ಲರ್ ಈ ಆಘಾತಕಾರಿ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ನಾವು ಬಾಡಿಗೆಗೆ ಪಡೆದಿದ್ದ ಸಫಾರಿ ಲಾಡ್ಜ್‌ನಲ್ಲಿ ನನ್ನ ಮಗು ಪ್ರಾಣಿಗಳನ್ನು ಇರಿಸಿದ್ದ ಬಾಕ್ಸ್​ ಕಡೆಗೆ ಅಂಬೆಗಾಲಿಟ್ಟುಕೊಂಡು ಹೋಗುತ್ತಿತ್ತು. ರಾತ್ರಿಯ ಕತ್ತಲೆಯಿಂದ ಚಿರತೆಯೊಂದು ತನ್ನ ಮುಂದೆ ಅಂಬೆಗಾಲಿಟ್ಟುಕೊಂಡು ಬರುತ್ತಿದ್ದ ಮಗುವಿನ ಮೇಲೆ ದಾಳಿ ಮಾಡಿದೆ. ಆದರೆ, ಎದುರಲ್ಲಿ ಗಾಜಿನ ಬಾಕ್ಸ್​ ಇದ್ದುದರಿಂದ ಆ ಚಿರತೆಗೆ ಮಗುವಿನ ಮೇಲೆ ಎರಗಲು ಸಾಧ್ಯವಾಗಿಲ್ಲ.

ಇಸ್ರೇಲ್ ಮತ್ತು ಎಂಬಪ್ಪೆ ವೆಸ್ಟ್ ಮಿಡ್‌ಲ್ಯಾಂಡ್ಸ್ ಸಫಾರಿ ಪಾರ್ಕ್‌ನಲ್ಲಿ ಎರಡು ಚಿರತೆಗಳನ್ನು ಇರಿಸಲಾಗಿದೆ. ಲಾಡ್ಜ್‌ನಲ್ಲಿ ತಂಗುವ ಪ್ರವಾಸಿಗರು ಅವುಗಳನ್ನು ನಿಯಮಿತವಾಗಿ ವೀಕ್ಷಿಸಬಹುದು. ಇದೇ ಸಫಾರಿ ಲಾಡ್ಜ್‌ನಲ್ಲಿ ಏಳು ತಿಂಗಳ ಮಗುವಿನ ಮೇಲೆ ದಾಳಿ ಮಾಡಲು ಯತ್ನಿಸಿದ ಚಿರತೆಯೊಂದು ಗಾಜಿನ ಬಾಕ್ಸ್​ಗೆ ಅಪ್ಪಳಿಸಿದೆ.

ಇದನ್ನೂ ಓದಿ: Shocking News: ಹಾವುಗಳನ್ನೇ ಹಸಿಯಾಗಿ ತಿಂಡಿ ರೀತಿ ತಿನ್ನುತ್ತಾನೆ ಆಂಧ್ರದ ಈ ವ್ಯಕ್ತಿ; ಏನ್ ಕಾಲ ಬಂತಪ್ಪಾ!

Shocking News: ಪ್ರಾಣಿ ಬಲಿ ವೇಳೆ ಕುರಿಯ ಬದಲು ಮನುಷ್ಯನ ತಲೆ ಕತ್ತರಿಸಿದ ಕುಡುಕ!

Published On - 3:58 pm, Thu, 17 February 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್