AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಹಾವುಗಳನ್ನೇ ಹಸಿಯಾಗಿ ತಿಂಡಿ ರೀತಿ ತಿನ್ನುತ್ತಾನೆ ಆಂಧ್ರದ ಈ ವ್ಯಕ್ತಿ; ಏನ್ ಕಾಲ ಬಂತಪ್ಪಾ!

Viral News: ಪುಳ್ಳಣ್ಣ ಎಂಬ 60 ವರ್ಷದ ಹಾವು ಪ್ರಿಯನೊಬ್ಬ ಎಲ್ಲಾದರೂ ಹಾವು ಸತ್ತಿದೆಯೇ ಎಂದು ಎಲ್ಲ ಕಡೆಯೂ ಹುಡುಕಾಡುತ್ತಿದ್ದ. ಆ ಸತ್ತ ಹಾವನ್ನು ಸಮಾಧಿ ಮಾಡಲು ಆತ ಹುಡುಕುತ್ತಿರಬಹುದು ಎಂದು ಊರಿನವರು ಅಂದುಕೊಂಡಿದ್ದರು.

Shocking News: ಹಾವುಗಳನ್ನೇ ಹಸಿಯಾಗಿ ತಿಂಡಿ ರೀತಿ ತಿನ್ನುತ್ತಾನೆ ಆಂಧ್ರದ ಈ ವ್ಯಕ್ತಿ; ಏನ್ ಕಾಲ ಬಂತಪ್ಪಾ!
ಹಾವು
TV9 Web
| Edited By: |

Updated on:Feb 17, 2022 | 2:42 PM

Share

ಒಬ್ಬೊಬ್ಬರ ಆಹಾರ ಪದ್ಧತಿ ಒಂದೊಂದು ರೀತಿ ಇರುತ್ತದೆ. ಅದರಲ್ಲೂ ಚೀನಾ (China) ಹೆಸರು ಹೇಳಿದಾಗ ಮೊದಲು ನೆನಪಿಗೆ ಬರುವುದು ಅವರ ಆಹಾರ ಪದ್ಧತಿ. ಚೀನಾದವರು ನೆಲದ ಮೇಲೆ ನಡೆಯುವ, ನೀರಿನಲ್ಲಿ ವಾಸಿಸುವ, ಆಕಾಶದಲ್ಲಿ ಹಾರಾಡುವ ಪ್ರತಿಯೊಂದು ಜೀವಿಯನ್ನೂ ಅಡುಗೆ ಮಾಡಿ ತಿನ್ನುತ್ತಾರೆ. ಅದರಲ್ಲೂ ಅವರಿಗೆ ಹಾವು, ಚೇಳುಗಳೆಂದರೆ ವಿಚಿತ್ರವಾದ ಪ್ರೀತಿ. ವಿಷಕಾರಿ ಹಾವುಗಳನ್ನು ಅವರು ಅಲೋವೆರಾದಲ್ಲಿ ಹುರಿದು ತಿನ್ನುತ್ತಾರೆ. ಈ ವಿಷಯ ಕೇಳಿ ನಿಮಗೆ ವಾಕರಿಕೆ ಬರಬಹುದು. ಆದರೆ, ಕೇವಲ ಚೀನಾದಲ್ಲಿ ಮಾತ್ರವಲ್ಲ ಪಕ್ಕದ ಆಂಧ್ರಪ್ರದೇಶದಲ್ಲಿ ಕೂಡ ವ್ಯಕ್ತಿಯೊಬ್ಬ ಹಾವನ್ನು (Snake) ಇಷ್ಟಪಟ್ಟು ತಿನ್ನುತ್ತಾನೆ. ಆತ ಸತ್ತ ಹಾವನ್ನು ಹಸಿಹಸಿಯಾಗೇ ತಿನ್ನುತ್ತಾನೆ. 

ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಪುತ್ತೂರು ವಲಯದ ಶಣಗಳಗೂಡೂರು ಗ್ರಾಮದಲ್ಲಿ ಹುಳಿಯಾರು ಎಂಬ ದೊಡ್ಡ ಮನೆಯಿದೆ. ಅಲ್ಲಿದ್ದ ಪುಳ್ಳಣ್ಣ ಎಂಬ 60 ವರ್ಷದ ಹಾವು ಪ್ರಿಯನೊಬ್ಬ ಎಲ್ಲಾದರೂ ಹಾವು ಸತ್ತಿದೆಯೇ ಎಂದು ಎಲ್ಲ ಕಡೆಯೂ ಹುಡುಕಾಡುತ್ತಿದ್ದ. ಆ ಸತ್ತ ಹಾವನ್ನು ಸಮಾಧಿ ಮಾಡಲು ಆತ ಹುಡುಕುತ್ತಿರಬಹುದು ಎಂದು ಊರಿನವರು ಅಂದುಕೊಂಡಿದ್ದರು. ಆದರೆ, ಪುಳ್ಳಣ್ಣ ಹಾಗೆ ಸತ್ತ ಹಾವಿಗಾಗಿ ಹುಡುಕುತ್ತಿದ್ದುದು ತಿನ್ನುವ ಸಲುವಾಗಿ!

ಉಳ್ಳಾಲದ ಜನರಿಗೆ ಪುಳ್ಳಣ್ಣ ತನಗೆ ಹಾವುಗಳೆಂದರೆ ಬಹಳ ಪ್ರೀತಿ ಎಂದು ಆಗಾಗ ಹೇಳುತ್ತಿದ್ದ. ಆತ ಪ್ರಾಣಿಪ್ರಿಯ ಎಂದು ಎಲ್ಲರೂ ಖುಷಿಪಟ್ಟಿದ್ದರು. ಆದರೆ, ಆತ ಹಾವುಗಳನ್ನು ಪ್ರೀತಿಸುವುದು ಅವುಗಳನ್ನು ತಿನ್ನುವ ಕಾರಣಕ್ಕೆ ಎಂಬುದು ಅವರ್ಯಾರಿಗೂ ಗೊತ್ತಿರಲಿಲ್ಲ. ಆ ವ್ಯಕ್ತಿ ಎಲ್ಲಾದರೂ ಸತ್ತ ಹಾವು ಕಂಡರೆ ಅದಕ್ಕೆ ಹುಳಿ ಹಾಕಿ ತಿನ್ನುತ್ತಿದ್ದ. ಈ ರೀತಿ ಹಲವಾರು ವರ್ಷಗಳಿಂದ ಆತ ಹಾವುಗಳನ್ನು ತಿನ್ನುತ್ತಿದ್ದ. ಆದರೆ, ಆ ಊರಿನವರಿಗೆ ಈ ವಿಷಯ ಕೆಲವು ದಿನಗಳ ಹಿಂದಷ್ಟೇ ಗೊತ್ತಾಗಿದೆ.

ಎರಡು ದಿನಗಳ ಹಿಂದೆ ಆ ಗ್ರಾಮದಲ್ಲಿ ಸತ್ತ ಹಾವಿನ ವಿಡಿಯೋ ತೆಗೆದಿದ್ದ ಕೆಲವು ಯುವಕರು ಸತ್ತ ಹಾವನ್ನು ಜಗಿದು ತಿನ್ನುತ್ತಿರುವ ಪುಳ್ಳಣ್ಣನ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್​ಲೋಡ್ ಮಾಡಿದ್ದಾರೆ. ಅದನ್ನು ನೋಡಿ ಅನೇಕರು ಶಾಕ್ ಆಗಿದ್ದಾರೆ, ಇನ್ನು ಕೆಲವರು ಬಾಯಿಗೆ ಬಂದಂತೆ ಉಗಿದಿದ್ದಾರೆ. ಆತ ಎಲ್ಲಿಯಾದರೂ ಹಾವು ಸತ್ತರೆ ಅದನ್ನು ತಂದು ತಿನ್ನುತ್ತಾನೆ. ಕೆಲವರು ಪುಳ್ಳಣ್ಣನನ್ನು ನೋಡಿ ಅಸಹ್ಯಪಟ್ಟು ಅಲ್ಲಿಂದ ಓಡಿ ಹೋಗುತ್ತಾರೆ. ಹಸಿ ಹಸಿಯಾಗಿ ಹಾವನ್ನು ತಿನ್ನುವ ಆತನನ್ನು ಕಂಡರೆ ಈಗ ಊರಿನವರಿಗೆ ಆತಂಕ, ಅಚ್ಚರಿ, ಕುತೂಹಲ. ಹಾವು ತಿನ್ನುವ ವಿಡಿಯೋಗಳು ವೈರಲ್ ಆಗುತ್ತಿದ್ದಂತೆ ಪುಳ್ಳಣ್ಣನೂ ಫೇಮಸ್ ಆಗಿದ್ದಾರೆ.

ಇದನ್ನೂ ಓದಿ: Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!

Shocking News: ಪೊಲೀಸರು ತಂದ ಕೈದಿಯ ಶವ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿತ್ತು!

Published On - 2:42 pm, Thu, 17 February 22

ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬೆಂಗಳೂರು ಮೆಟ್ರೋ ವಿಸ್ತರಣೆ ಬಗ್ಗೆ ದೆಹಲಿಯಲ್ಲಿ ಡಿಕೆಶಿ ಬಿಗ್ ಅಪ್ಡೇಟ್!
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್‌ ಗಡಿಯಲ್ಲಿ ದೈತ್ಯ ಹುಲಿ ಪ್ರತ್ಯಕ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ಎ ಯು ಜ್ಯುವೆಲ್ಲರ್ಸ್‌ನಿಂದ 140 ಕೆಜಿ ಬೆಳ್ಳಿ ದೋಚಿದವರು ಅಂದರ್!
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ