3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಮನೆಯ ಮೆಟ್ಟಿಲ ಕೆಳಗಿನ ಕತ್ತಲೆ ಕೋಣೆಯಲ್ಲಿ ಪತ್ತೆ!

ನ್ಯೂಯಾರ್ಕ್​ನಲ್ಲಿ ಪೈಸ್ಲೀ ಶುಲ್ಟಿಸ್ ಎಂಬ 6 ವರ್ಷದ ಬಾಲಕಿ 2019ರಲ್ಲಿ ನಾಪತ್ತೆಯಾಗಿದ್ದಳು. ಆ ಬಾಲಕಿ ಇನ್ನೂ ಬದುಕಿದ್ದಾಳೆ, ಆಕೆಯನ್ನು ನಿಗೂಢ ಸ್ಥಳದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಸಿಕ್ಕ ನಂತರ ಆಕೆ ಎಲ್ಲಿದ್ದಾಳೆ ಎಂದು ಪತ್ತೆಹಚ್ಚಲು ಸಾಕಷ್ಟು ಹುಡುಕಾಟ ನಡೆಸಲಾಯಿತು.

3 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕಿ ಮನೆಯ ಮೆಟ್ಟಿಲ ಕೆಳಗಿನ ಕತ್ತಲೆ ಕೋಣೆಯಲ್ಲಿ ಪತ್ತೆ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 17, 2022 | 5:43 PM

ನ್ಯೂಯಾರ್ಕ್: ಆ ಬಾಲಕಿ ಮನೆಯಿಂದ ನಾಪತ್ತೆಯಾಗಿ 3 ವರ್ಷವಾಗಿತ್ತು. ಆಕೆಗಾಗಿ ಪೊಲೀಸರು ಮತ್ತು ಮನೆಯವರು ಹುಡುಕಾಡದ ಜಾಗವೇ ಇಲ್ಲ. ಆದರೂ ಆಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆ ಬಾಲಕಿ ಸತ್ತಿದ್ದಾಳೋ, ಬದುಕಿದ್ದಾಳೋ ಎಂಬುದೂ ಯಾರಿಗೂ ಗೊತ್ತಿರಲಿಲ್ಲ. ಆದರೆ ಮೂರು ವರ್ಷಗಳಿಂದನಾಪತ್ತೆಯಾಗಿದ್ದ 6 ವರ್ಷದ ಬಾಲಕಿ ಹಳ್ಳಿಯೊಂದರ ಮನೆಯ ಮೆಟ್ಟಿಲುಗಳ ಕೆಳಗೆ ಇದ್ದ ಕತ್ತಲೆ ಕೋಣೆಯಲ್ಲಿ ಪತ್ತೆಯಾಗಿದ್ದಾಳೆ. ನ್ಯೂಯಾರ್ಕ್‌ನಲ್ಲಿ (New York) ಈ ವಿಚಿತ್ರವಾದ ಘಟನೆ ನಡೆದಿದೆ ಎಂದು ಅಮೆರಿಕದ ಪೊಲೀಸರು ತಿಳಿಸಿದ್ದಾರೆ.

ನ್ಯೂಯಾರ್ಕ್​ನಲ್ಲಿ ಪೈಸ್ಲೀ ಶುಲ್ಟಿಸ್ ಎಂಬ ಬಾಲಕಿ 2019ರಲ್ಲಿ ನಾಪತ್ತೆಯಾಗಿದ್ದಳು. ಆಕೆ ತಮ್ಮ ಕೈತಪ್ಪಿ ಹೋಗುತ್ತಾಳೆ ಎಂದು ಆಕೆಯ ಅಪ್ಪ-ಅಮ್ಮನೇ ಆ ಬಾಲಕಿಯನ್ನು ಕಿಡ್ನಾಪ್ ಮಾಡಿ ಬಚ್ಚಿಟ್ಟಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಆಕೆಯ ಪೋಷಕರು ಈ ಆರೋಪವನ್ನು ನಿರಾಕರಿಸಿದ್ದರು. ಆದರೆ, 3 ವರ್ಷಗಳ ಹಿಂದೆ ಆ ಬಾಲಕಿ ನಾಪತ್ತೆಯಾಗಿದ್ದ ಸ್ಥಳದಿಂದ 150 ಮೈಲುಗಳಷ್ಟು (240 ಕಿಮೀ) ದೂರದ “ರಹಸ್ಯ ಸ್ಥಳದಲ್ಲಿ” ಇದ್ದಾಳೆ ಎಂಬ ಸುಳಿವು ಪಡೆದ ಪೊಲೀಸರು ಆಕೆಯನ್ನು ಪತ್ತೆಹಚ್ಚಿದ್ದಾರೆ. ನ್ಯೂಯಾರ್ಕ್​ನ ಗ್ರಾಮೀಣ ಭಾಗದ ಸ್ಪೆನ್ಸರ್ ಎಂಬಲ್ಲಿದ್ದ ಮನೆಯ ಮೆಟ್ಟಿಲ ಕೆಳಗಿನ ನಿಗೂಢ ರೂಮಿನಲ್ಲಿ ಆಕೆಯನ್ನು ಬಚ್ಚಿಡಲಾಗಿತ್ತು.

ಆ ಬಾಲಕಿ ಇನ್ನೂ ಬದುಕಿದ್ದಾಳೆ, ಆಕೆಯನ್ನು ನಿಗೂಢ ಸ್ಥಳದಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಸಿಕ್ಕ ನಂತರ ಆಕೆ ಎಲ್ಲಿದ್ದಾಳೆ ಎಂದು ಪತ್ತೆಹಚ್ಚಲು ಸಾಕಷ್ಟು ಹುಡುಕಾಟ ನಡೆಸಲಾಯಿತು. ಆಕೆಯನ್ನು ಆಕೆಯ ಪೋಷಕರೇ ಮನೆಯೊಂದರ ಬೇಸ್​ಮೆಂಟ್​ಗೆ ಸಂಪರ್ಕ ಕಲ್ಪಿಸುತ್ತಿದ್ದ ಬೃಹತ್ ಮೆಟ್ಟಿಲುಗಳ ಕೆಳಗಿನ ಕತ್ತಲಿನ ಸ್ಟೋರ್ ರೂಮೊಂದರಲ್ಲಿ ಇರಿಸಿದ್ದರು.

‘ನಾವು ಆ ನೆಲಮಾಳಿಗೆಯ ದಾರಿಯ ಸ್ಟೆಪ್ ಬೋರ್ಡ್‌ಗಳನ್ನು ತೆಗೆದ ನಂತರ ಆ ಬಾಲಕಿ ಮತ್ತು ಆಕೆಯ ಅಪಹರಣಕಾರ ಕಿಂಬರ್ಲಿ ಕೂಪರ್ ಶುಲ್ಟಿಸ್ ಅಲ್ಲಿ ಅಡಗಿರುವುದು ಗೊತ್ತಾಯಿತು. ಆ ಬಾಲಕಿಯ ಅಪಹರಣಕಾರರು ಆಕೆಯನ್ನು ಇಷ್ಟು ದಿನ ಹೇಗೆ ಅಡಗಿಸಿಟ್ಟಿದ್ದರು ಎಂಬುದೇ ನಮಗೆ ಅಚ್ಚರಿಯ ಸಂಗತಿಯಾಗಿದೆ ‘ ಎಂದು ಅಮೆರಿಕದ ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು ಎನ್​ಡಿಟಿವಿ ವರದಿ ಮಾಡಿದೆ.

ನಾವು ಆಗಾಗ ಆ ಬಾಲಕಿಯ ಬಗ್ಗೆ ವಿಚಾರಣೆ ಮಾಡಲು, ಕೆಲವು ವಿಚಾರಗಳನ್ನು ತಿಳಿಸಲು ಆ ಬಾಲಕಿಯ ಮನೆಗೆ ಹೋಗಿ ಬರುತ್ತಿದ್ದೆವು. ಆದರೆ, ನಮಗೆ ಆಕೆ ಅಲ್ಲಿಯೇ ಇದ್ದಾಳೆ ಎಂಬ ವಿಷಯ ಗೊತ್ತಾಗಲೇ ಇಲ್ಲ. ಎರಡೂವರೆ ವರ್ಷಗಳ ಕಾಲ ಆ ಬಾಲಕಿಯ ಪೋಷಕರು ಸುಳ್ಳು ಕತೆ ಹೇಳಿ ನಮ್ಮನ್ನು ನಂಬಿಸಿದ್ದರು. ಆಕೆಯ ಅಪ್ಪ-ಅಮ್ಮನ ಮೇಲೆ ನಮಗೆ ಅನುಮಾನ ಬಂದಾಗಲೂ ಅವರು ತಮ್ಮ ಮಗಳು ಎಲ್ಲಿದ್ದಾಳೆಂಬ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದು ನಮ್ಮೆದುರು ಕಣ್ಣೀರು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಇದೀಗ ಪತ್ತೆಯಾಗಿರುವ ಬಾಲಕಿ ಆರೋಗ್ಯವಾಗಿದ್ದಾಳೆ. ಆಕೆಯನ್ನು ಆ ಕತ್ತಲೆ ಕೋಣೆಯಿಂದ ಹೊರಗೆ ಕರೆದುಕೊಂಡು ಬಂದ ನಂತರ ಖುಷಿಯಾದ ಆಕೆ ಪೊಲೀಸರ ಬಳಿ ತನಗೆ ಮೆಕ್‌ಡೊನಾಲ್ಡ್​​ನಿಂದ ಹ್ಯಾಪಿ ಮೀಲ್ ತರಿಸುವಂತೆ ಮನವಿ ಮಾಡಿದ್ದಾಳೆ. ಆಕೆಯ ಪೋಷಕರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: Shocking News: ಹಾವುಗಳನ್ನೇ ಹಸಿಯಾಗಿ ತಿಂಡಿ ರೀತಿ ತಿನ್ನುತ್ತಾನೆ ಆಂಧ್ರದ ಈ ವ್ಯಕ್ತಿ; ಏನ್ ಕಾಲ ಬಂತಪ್ಪಾ!

Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್