AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Drinking Water: ಕುಡಿಯುವ ನೀರಿಗಾಗಿ ತಿಂಗಳಿಗೆ 1.5 ಲಕ್ಷ ಖರ್ಚು ಮಾಡ್ತಾರೆ ಈ ವ್ಯಕ್ತಿ; ಯಾಕೆ ಅಂತೀರಾ?

Viral News: ಎಷ್ಟೋ ಜನರಿಗೆ ಕುಡಿಯಲು ಶುದ್ಧವಾದ ನೀರೇ ಸಿಗುವುದಿಲ್ಲ. ಇನ್ನು ಕೆಲವರು ಸ್ನಾನಕ್ಕೂ ಮಿನರಲ್ ವಾಟರ್​​ ಬಳಸುತ್ತಾರೆ. ಇದರ ನಡುವೆ ಇಲ್ಲೊಬ್ಬರು ವ್ಯಕ್ತಿ ತಾನು ಕುಡಿಯುವ ಬ್ರಾಂಡೆಡ್ ವಾಟರ್ ಬಾಟಲ್​ಗಾಗಿ ಪ್ರತಿ ತಿಂಗಳು 1.5 ಲಕ್ಷ ರೂ. ಖರ್ಚು ಮಾಡುತ್ತಾರಂತೆ.

Drinking Water: ಕುಡಿಯುವ ನೀರಿಗಾಗಿ ತಿಂಗಳಿಗೆ 1.5 ಲಕ್ಷ ಖರ್ಚು ಮಾಡ್ತಾರೆ ಈ ವ್ಯಕ್ತಿ; ಯಾಕೆ ಅಂತೀರಾ?
ಬ್ರಾಂಡೆಡ್ ನೀರಿನ ಬಾಟಲ್​ಗಳನ್ನು ಇಟ್ಟಿರುವ ವ್ಯಕ್ತಿ
TV9 Web
| Edited By: |

Updated on: Feb 17, 2022 | 7:49 PM

Share

ಕೆಲವರಿಗೆ ತಾವು ಬಳಸುವ ಎಲ್ಲವೂ ಬ್ರ್ಯಾಂಡೆಡ್ ಆಗಿರಬೇಕು ಎಂಬ ಮನೋಭಾವವಿರುತ್ತದೆ. ಆದರೆ, ಇಲ್ಲೊಬ್ಬ ವ್ಯಕ್ತಿಗೆ ತಾನು ಕುಡಿಯುವ ನೀರು (Drinking Water) ಕೂಡ ಬ್ರ್ಯಾಂಡೆಡ್ ಆಗಬೇಕಂತೆ. ಅದಕ್ಕಾಗಿ ಆತ ಪ್ರತಿ ತಿಂಗಳು ಖರ್ಚು ಮಾಡುವ ಹಣ ಎಷ್ಟು ಎಂದು ಗೊತ್ತಾದರೆ ನಿಮಗೆ ಶಾಕ್ ಆಗುವುದು ಗ್ಯಾರಂಟಿ. ಈ ಕುರಿತು ಟಿಕ್​ಟಾಕ್​ನಲ್ಲಿ ವಿಡಿಯೋವೊಂದನ್ನು ಅಪ್​ಲೋಡ್ ಮಾಡಿರುವ ರಿಯಾನ್ ಡಬ್ಸ್ ಎಂಬಾತ ತಾನು ಪ್ರತಿ ತಿಂಗಳು ಕುಡಿಯುವ ನೀರಿಗಾಗಿ 1.5 ಲಕ್ಷ ರೂ. ಖರ್ಚು ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಅಲ್ಲದೆ, ತಾನು ಬಳಸುವ ಬ್ರ್ಯಾಂಡೆಡ್ ವಾಟರ್ ಬಾಟಲ್​ಗಳ ಫೋಟೋವನ್ನು ಕೂಡ ಪೋಸ್ಟ್ ಮಾಡಿದ್ದಾನೆ.

ನನಗೆ ಶುದ್ಧವಾದ ನೀರು ಬೇಕೇ ಬೇಕು. ನಲ್ಲಿಯಲ್ಲಿ ಅಥವಾ ಫಿಲ್ಟರ್​​ನಲ್ಲಿ ಹಿಡಿದು ಕುಡಿಯುವ ನೀರು ನನಗೆ ಇಷ್ಟವಾಗುವುದಿಲ್ಲ. ಹೀಗಾಗಿ, ನನ್ನ ಮನೆಗೆ ನೇರವಾಗಿ ತಲುಪುವ ಹೈ ಎಂಡ್ ವಾಟರ್ ಬಾಟಲಿಗಳಿಗಾಗಿ ನಾನು ತಿಂಗಳಿಗೆ 1.5 ಲಕ್ಷ ರೂ. ಖರ್ಚು ಮಾಡುತ್ತೇನೆ ಎಂದಿದ್ದಾರೆ.

‘ನಾನು ಈ ವಾಟರ್ ಬಾಟಲ್​ಗಳನ್ನು ಎಲ್ಲಿಡುತ್ತೇನೆ ಎಂದು ನೀವು ಯೋಚಿಸುತ್ತಿರಬಹುದು. ನನ್ನ ಬಳಿ ನಾಲ್ಕು ಫ್ರಿಡ್ಜ್​ಗಳಿವೆ. ಅವುಗಳಲ್ಲಿ ನಾನು ವಾಟರ್ ಬಾಟಲ್​ಗಳನ್ನು ಇಡುತ್ತೇನೆ. ಪ್ಲಾಸ್ಟಿಕ್​ ಬಳಕೆಯನ್ನು ಕಡಿಮೆ ಮಾಡಬೇಕೆಂಬ ಕಾರಣಕ್ಕೆ ನಾನು ಪರಿಸರ ಸ್ನೇಹಿಯಾದ ಗಾಜಿನ ವಾಟರ್ ಬಾಟಲ್​ಗಳನ್ನು ಉತ್ಪಾದಿಸುವ ಬ್ರ್ಯಾಂಡ್​ನಿಂದ ನೀರಿನ ಬಾಟಲ್​ಗಳನ್ನು ತರಿಸಿಕೊಳ್ಳುತ್ತೇನೆ’ ಎಂದು ರಯಾನ್ ಹೇಳಿದ್ದಾರೆ.

ಇದಕ್ಕೆ ಹಲವರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ‘ನಮಗೆ ಏನು ಹೇಳಬೇಕೆಂದೇ ತಿಳಿಯುತ್ತಿಲ್ಲ. ಜಗತ್ತಿನಲ್ಲಿ 3 ಜನರಲ್ಲಿ ಒಬ್ಬರು ಶುದ್ಧ ಕುಡಿಯುವ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ, ಈ ವ್ಯಕ್ತಿ ಕುಡಿಯುವ ನೀರಿಗಾಗಿ ತಿಂಗಳಿಗೆ 1.5 ಲಕ್ಷ ರೂ. ಖರ್ಚು ಮಾಡುತ್ತಿದ್ದಾನೆ’ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ: Viral News: 42 ಲಕ್ಷ ರೂ. ವೆಚ್ಚದಲ್ಲಿ ಕೃಷ್ಣನ ದೇವಸ್ಥಾನ ಕಟ್ಟಿಸಿ ಸಾಮರಸ್ಯ ಮೆರೆದ ಮುಸ್ಲಿಂ ಉದ್ಯಮಿ

Viral News: ಆ ಒಂದು ಫೋಟೋದಿಂದ ಅದೃಷ್ಟವೇ ಬದಲಾಯ್ತು; ಕೇರಳದ ಕೂಲಿ ಕಾರ್ಮಿಕ ಈಗ ಸೂಪರ್ ಮಾಡೆಲ್!

ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್