Viral Video: ಹಳ್ಳಿಯ ದಾರಿಯಲ್ಲಿ ಬೈಕ್​ನಲ್ಲಿ ಹೋಗುವಾಗ ದಿಢೀರೆಂದು ಎದುರು ಬಂದ ಸಿಂಹಿಣಿ; ಶಾಕಿಂಗ್ ವಿಡಿಯೋ ಇಲ್ಲಿದೆ

Shocking Video: ಅದೃಷ್ಟವಶಾತ್ ಆ ಸಿಂಹಿಣಿ ಬೈಕ್ ಸಮೀಪವೇ ಬಂದರೂ ಆ ಪ್ರಯಾಣಿಕರ ಮೇಲೆ ಯಾವುದೇ ದಾಳಿ ಮಾಡಲಿಲ್ಲ. ಪ್ರಯಾಣಿಕರ ಹತ್ತಿರಕ್ಕೆ ಬಂದ ಆ ಸಿಂಹಿಣಿ ನಂತರ ಪೊದೆಗಳ ಕಡೆಗೆ ಹೋಗುತ್ತದೆ. ನಂತರ ಪೊದೆಗಳ ಹಿಂದೆ ಆ ಸಿಂಹಿಣಿ ಕಣ್ಮರೆಯಾಗುತ್ತದೆ.

Viral Video: ಹಳ್ಳಿಯ ದಾರಿಯಲ್ಲಿ ಬೈಕ್​ನಲ್ಲಿ ಹೋಗುವಾಗ ದಿಢೀರೆಂದು ಎದುರು ಬಂದ ಸಿಂಹಿಣಿ; ಶಾಕಿಂಗ್ ವಿಡಿಯೋ ಇಲ್ಲಿದೆ
ದಾರಿಯಲ್ಲಿ ಎದುರಾದ ಸಿಂಹಿಣಿ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Feb 16, 2022 | 1:14 PM

ನಗರದ ಜನರಿಗೆ ಹಳ್ಳಿಗಳಲ್ಲಿ ಓಡಾಡುವುದೆಂದರೆ ಒಂಥರಾ ಖುಷಿ, ಹಳ್ಳಿಗಳ ಬಗ್ಗೆ ಕುತೂಹಲ. ಸುತ್ತಲಿನ ಹಸಿರು, ವಿಸ್ತಾರವಾದ ನಿರ್ಮಲ ಆಕಾಶ ಮತ್ತು ತಾಜಾ ಗಾಳಿಯ ಅಲೆಗಳು ಎಂಥವರ ಮನಸನ್ನೂ ಉಲ್ಲಸಿತಗೊಳಿಸುತ್ತವೆ. ಹೀಗೆ ಹಳ್ಳಿಯ ದಟ್ಟ ಕಾಡಿನ ಮಧ್ಯೆ ಹೋಗುತ್ತಿರುವಾಗ ಅಕಸ್ಮಾತ್ ಸಿಂಹ (Lion) ಎದುರು ಬಂದರೆ ಹೇಗಿರುತ್ತದೆ? ಆರಾಮಾಗಿ ಹಳ್ಳಿಯ ವಾತಾವರಣದಲ್ಲಿ ಓಡಾಡಬೇಕು ಎಂದು ಹೋಗಿದ್ದವರಿಗೆ ಎದುರಲ್ಲಿ ಸಿಂಹಿಣಿಯೊಂದು ಎದುರು ಬಂದಿದೆ. ಕಿರಿದಾದ ಹಳ್ಳಿಯ ಹಾದಿಯಲ್ಲಿ ಪ್ರಯಾಣಿಸುವಾಗ ಇಬ್ಬರು ಪ್ರಯಾಣಿಕರಿಗೆ ಸಿಂಹಿಣಿ ಎದುರಾಗಿದೆ.

ವೈರಲ್ ಆಗಿರುವ ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಕ್ಲಿಪ್‌ನಲ್ಲಿ ಬೈಕಿನಲ್ಲಿ ಇಬ್ಬರು ಪ್ರಯಾಣಿಕರು ಹಳ್ಳಿಯ ಹಾದಿಯಲ್ಲಿ ಹಾದುಹೋಗುತ್ತಿರುವುದನ್ನು ನೋಡಬಹುದು. ಹಾಗೆ ಹೋಗುತ್ತಿರುವಾಗ ರಸ್ತೆಯಲ್ಲೇ ದೂರದಲ್ಲಿ ಸಿಂಹಿಣಿಯೊಂದು ಚಲಿಸುತ್ತಿರುತ್ತದೆ. ನಂತರ ಆ ಸಿಂಹಿಣಿ ಬೈಕ್‌ನತ್ತ ಬರುತ್ತಿರುವುದನ್ನು ವಿಡಿಯೋದಲ್ಲಿ ರೆಕಾರ್ಡ್​ ಮಾಡಲಾಗಿದೆ. ಈ ಮೈ ಜುಂ ಎನಿಸುವ ವಿಡಿಯೋ ಭಾರೀ ವೈರಲ್ ಆಗಿದೆ.

ಅದೃಷ್ಟವಶಾತ್ ಆ ಸಿಂಹಿಣಿ ಬೈಕ್ ಸಮೀಪವೇ ಬಂದರೂ ಆ ಪ್ರಯಾಣಿಕರ ಮೇಲೆ ಯಾವುದೇ ದಾಳಿ ಮಾಡಲಿಲ್ಲ. ಪ್ರಯಾಣಿಕರ ಹತ್ತಿರಕ್ಕೆ ಬಂದ ಆ ಸಿಂಹಿಣಿ ನಂತರ ಪೊದೆಗಳ ಕಡೆಗೆ ಹೋಗುತ್ತದೆ. ನಂತರ ಪೊದೆಗಳ ಹಿಂದೆ ಆ ಸಿಂಹಿಣಿ ಕಣ್ಮರೆಯಾಗುತ್ತದೆ. ಈ ಘಟನೆ ನಡೆದಿರುವುದು ಗುಜರಾತ್‌ನಲ್ಲಿ. ಈ ವಿಡಿಯೋವನ್ನು 31,000ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.

ಈ ವಿಡಿಯೋ ನೋಡಿದವರು ಆ ಇಬ್ಬರು ಪ್ರಯಾಣಿಕರ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿಂಹ ಹತ್ತಿರದಲ್ಲೇ ಸುಳಿದಾಡುವಾಗ ಹಾಗೆ ನಿಲ್ಲಲು ಸಾಕಷ್ಟು ಧೈರ್ಯ ಬೇಕು ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಹಾಗೇ, ಆ ಸಿಂಹಿಣಿ ಬೈಕ್ ಸವಾರರ ಮೇಲೆ ಏಕೆ ದಾಳಿ ಮಾಡಲಿಲ್ಲ? ಎಂಬ ಕುತೂಹಲವನ್ನೂ ಅನೇಕರು ವ್ಯಕ್ತಪಡಿಸಿದ್ದಾರೆ.

“ಸಿಂಹಗಳು ಪ್ರಚೋದನೆಗೆ ಒಳಗಾಗದ ಹೊರತು ಮನುಷ್ಯರ ಮೇಲೆ ದಾಳಿ ಮಾಡುವುದಿಲ್ಲ” ಎಂದು ಕೆಲವರು ಟ್ವೀಟ್ ಮಾಡಿದ್ದಾರೆ. ಗುಜರಾತ್‌ನ ವಿವಿಧ ಪ್ರದೇಶಗಳಲ್ಲಿ ಸಿಂಹಗಳು ಹೆಚ್ಚಾಗಿವೆ.

ಇದನ್ನೂ ಓದಿ: Shocking News: ಹೆಂಡತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದವರನ್ನು ಕೊಲ್ಲಲು ಗಂಡ ಮಾಡಿದ ಪ್ಲಾನ್ ಅಂತಿಂಥದ್ದಲ್ಲ!

Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ