Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್

Viral News: ಘಾನಾದ ಮಹಿಳೆಯೊಬ್ಬರಿಗೆ ಬೀದಿ ಬದಿಯ ಸಣ್ಣ ಹೋಟೆಲ್​ನಲ್ಲಿ ಖರೀದಿಸಿದ ಆಹಾರದಲ್ಲಿ ಮನುಷ್ಯನ ಶಿಶ್ನದಂತಹ ವಸ್ತು ಸಿಕ್ಕಿದೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Shocking Video: ಹೋಟೆಲ್ ಊಟದಲ್ಲಿ ಶಿಶ್ನದ ತುಂಡು ಪತ್ತೆ!; ತಿನ್ನೋ ಆಹಾರದಲ್ಲಿ ಗುಪ್ತಾಂಗ ಕಂಡು ಮಹಿಳೆ ಶಾಕ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Dec 07, 2021 | 8:07 PM

ನವದೆಹಲಿ: ಹೋಟೆಲ್​ಗೆ ಹೋದಾಗ ನಾವು ತಿನ್ನುವ ಊಟ-ತಿಂಡಿಯಲ್ಲಿ ಜಿರಲೆ, ಹಲ್ಲಿ, ಕೂದಲು, ಇಲಿ ಹೀಗೆ ನಾನಾ ವಸ್ತುಗಳು ಸಿಕ್ಕಿರುವ ಉದಾಹರಣೆಗಳು ಸಾಕಷ್ಟಿವೆ. ಹೀಗಾಗಿ, ನಾವು ಏನು ತಿನ್ನುತ್ತೇವೋ ಅದನ್ನು ಒಮ್ಮೆ ಪರಿಶೀಲಿಸಿ ತಿನ್ನುವುದು ಉತ್ತಮ. ಆದರೆ, ತಿನ್ನುವ ಆಹಾರದಲ್ಲಿ ಮನುಷ್ಯನ ಅಂಗಾಂಗಗಳು ಸಿಕ್ಕರೆ ತುತ್ತನ್ನು ಬಾಯಿಗಿಟ್ಟವರ ಸ್ಥಿತಿ ಹೇಗಿರಬಹುದು? ಘಾನಾದ ಮಹಿಳೆಯೊಬ್ಬರಿಗೆ ಬೀದಿ ಬದಿಯ ಸಣ್ಣ ಹೋಟೆಲ್​ನಲ್ಲಿ ಖರೀದಿಸಿದ ಆಹಾರದಲ್ಲಿ ಮನುಷ್ಯನ ಶಿಶ್ನದಂತಹ ವಸ್ತು ಸಿಕ್ಕಿದೆ. ಈ ಆಘಾತಕಾರಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮಹಿಳೆಯೊಬ್ಬರು ತಾನು ತಿನ್ನುತ್ತಿರುವ ಆಹಾರದಲ್ಲಿ ಸಿಕ್ಕ ಗಂಡಿನ ಗುಪ್ತಾಂಗದ ರೀತಿಯ ವಸ್ತುವನ್ನು ತೋರಿಸಿದ್ದಾರೆ. ಇದನ್ನು ನೋಡಿದ ನೆಟಿಜನ್‌ಗಳು ಅಸಹ್ಯದಿಂದ ಕಮೆಂಟ್ ಮಾಡಿದ್ದಾರೆ. ಘಾನಾದಲ್ಲಿ ಲಭ್ಯವಿರುವ ಪ್ರಮುಖ ಆಹಾರವಾದ ತುವೋ ಝಾಫಿ ಎಂಬ ಭಕ್ಷ್ಯದಲ್ಲಿ ಸಿಕ್ಕಿದ ಮಾಂಸದ ತುಂಡನ್ನು ಮಹಿಳೆ ವಿಡಿಯೋ ಮಾಡಿ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಧಾನ್ಯಗಳು ಮತ್ತು ಮಾಂಸದಿಂದ ತಯಾರಿಸಿದ ಆಹಾರಗಳು ಇಲ್ಲಿನ ಬೀದಿ ಬದಿಯ ಆಹಾರ ಮಳಿಗೆಗಳಲ್ಲಿ ಲಭ್ಯವಿದೆ.

View this post on Instagram

A post shared by Ghbase.com (@officialghbase)

ಬೀದಿ ಬದಿಯ ಸ್ಟಾಲ್‌ಗಳಿಂದ ಖರೀದಿಸಿದ ಆಹಾರ ಪದಾರ್ಥಗಳನ್ನು ಸೇವಿಸುವ ಮೊದಲು ಎಚ್ಚರಿಕೆಯಿಂದ ಇರುವಂತೆ ಮಹಿಳೆ ನೆಟ್ಟಿಗರನ್ನು ವಿನಂತಿಸಿದ್ದಾರೆ. ಘಾನಾ ಮೂಲದ ಮಹಿಳೆಯೊಬ್ಬರಿಗೆ ಆಹಾರದಲ್ಲಿ ಸಿಕ್ಕ ಮಾನವನ ಶಿಶ್ನದಂತಹ ವಸ್ತುವಿನ ಆಘಾತಕಾರಿ ವಿಡಿಯೋ ನೋಡಿದವರು ಹೇಸಿಗೆಯಿಂದ ಕಮೆಂಟ್ ಮಾಡಿದ್ದಾರೆ. ಈ ವಿಷಯವನ್ನು ಪೊಲೀಸರಿಗೆ ತಿಳಿಸುವಂತೆ ನೆಟ್ಟಿಗರು ಮಹಿಳೆಯನ್ನು ಕೇಳಿಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಘಾನಾದಲ್ಲಿ ಆಹಾರದ ಪ್ಯಾಕೆಟ್‌ನಿಂದ ಇಂತಹ ಅಸಹ್ಯಕರ ವಿಷಯ ನಡೆದಿರುವುದು ಇದೇ ಮೊದಲೇನಲ್ಲ. 2016ರಲ್ಲಿ ಅಕೌಸಾ ಎಂಬ ಮಹಿಳೆ ತನ್ನ ಆಹಾರದಲ್ಲಿ ಶಿಶ್ನದಂತಹ ಮಾಂಸದ ತುಂಡು ಸಿಕ್ಕಿದ್ದನ್ನು ಶೇರ್ ಮಾಡಿದ್ದರು. ಘಾನಾದ ಅಕ್ರಾದಲ್ಲಿ ಈ ಘಟನೆ ನಡೆದಿತ್ತು. ಆ ಮಾಂಸದ ತುಂಡಿನ ಮೇಲೆ ಡಿಎನ್‌ಎ ಪರೀಕ್ಷೆ ಮಾಡಲು ಅಕೌಸಾ ಪೊಲೀಸರನ್ನು ಸಂಪರ್ಕಿಸಿದ್ದರು.

ಇದನ್ನೂ ಓದಿ: Shocking News: ಮನೆಯಲ್ಲಿದ್ದ ಹಾವುಗಳನ್ನು ಓಡಿಸಲು ಹೋಗಿ 13 ಕೋಟಿ ಮೌಲ್ಯದ ಬಂಗಲೆಯನ್ನೇ ಸುಟ್ಟ ಆಸಾಮಿ!

Shocking News: ಹೋಂ ವರ್ಕ್ ಮಾಡದ ಮಗನ ಕೈ-ಕಾಲು ಕಟ್ಟಿ ಫ್ಯಾನ್​ಗೆ ನೇತು ಹಾಕಿದ ಅಪ್ಪ!

Published On - 8:07 pm, Tue, 7 December 21

ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ನಮ್ಮ ಫ್ಯಾನ್ಸ್ ’ಬೊಂಬಾಟ್’ ಎಂದ ಕಿಂಗ್ ಕೊಹ್ಲಿ; ವಿಡಿಯೋ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಪುನೀತ್​ ರಾಜ್​ಕುಮಾರ್​ಗೆ ವಿಶೇಷ ಗೌರವ ಸಲ್ಲಿಸಿದ ಆರ್​ಸಿಬಿ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ಗುರುದ್ವಾರ ರಕಬ್‌ಗಂಜ್‌ನಲ್ಲಿ ಪೂಜೆ ಸಲ್ಲಿಸಿದ ಮೋದಿ, ನ್ಯೂಜಿಲೆಂಡ್ ಪಿಎಂ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ನೂತನ ನಾಯಕನಿಗಾಗಿ ಫ್ಯಾನ್ಸ್ ಬಳಿ ಕಿಂಗ್ ಕೊಹ್ಲಿ ಮನವಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಬೇರೆಯವರನ್ನು ನಿಂದಿಸುವ ಹಕ್ಕು ಪ್ರದೀಪ್ ಈಶ್ವರ್​ಗಿಲ್ಲ: ಮುನಿಸ್ವಾಮಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಅಮೆರಿಕದ ಗುಪ್ತಚರ ನಿರ್ದೇಶಕಿ ತುಳಸಿ ಗಬ್ಬಾರ್ಡ್​ಗೆ ಗಂಗಾಜಲ ನೀಡಿದ ಮೋದಿ
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಹಂಗಾಮಿ ಸಭಾಧ್ಯಕ್ಷ ಶಿವಲಿಂಗೇಗೌಡರ ಮಾತು ಬೋರ್ಗಲ್ಲ ಮೇಲೆ ಮಳೆ ಸುರಿದಂತೆ!
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಪಿಎಂ ಇಂಟರ್ನ್‌ಶಿಪ್ ಯೋಜನೆ ಆ್ಯಪ್​ಗೆ ನಿರ್ಮಲಾ ಸೀತಾರಾಮನ್ ಚಾಲನೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ
ಕಣ್ಣೀರಿಡುತ್ತಲ್ಲೇ ರಾಜ್ಯ ಸರ್ಕಾರಕ್ಕೆ ಜೈನ ಮುನಿ ಎಚ್ಚರಿಕೆ