AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral News: ಆ ಒಂದು ಫೋಟೋದಿಂದ ಅದೃಷ್ಟವೇ ಬದಲಾಯ್ತು; ಕೇರಳದ ಕೂಲಿ ಕಾರ್ಮಿಕ ಈಗ ಸೂಪರ್ ಮಾಡೆಲ್!

Viral Video: ಫೋಟೋಗ್ರಾಫರ್‌ ಒಬ್ಬರು ಈ 60 ವರ್ಷದ ಮಮ್ಮಿಕ್ಕಾ ಎಂಬ ನೌಕರನ ಫೋಟೋಗಳನ್ನು ಕ್ಲಿಕ್ಕಿಸಿದ್ದರು. ರಸ್ತೆಯಲ್ಲಿ ಲುಂಗಿ ಸುತ್ತಿಕೊಂಡು, ತಲೆಗೊಂದು ಟವೆಲ್ ಕಟ್ಟಿಕೊಂಡು ನಡೆದು ಬರುತ್ತಿದ್ದ ಆ ನೌಕರನ ಫೋಟೋ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಆ ನೌಕರ ಸ್ಥಳೀಯ ಸಂಸ್ಥೆಯೊಂದಕ್ಕೆ ಮಾಡೆಲ್‌ ಆಗಿ ಪೋಸ್‌ ನೀಡಿದ್ದಾರೆ.

Viral News: ಆ ಒಂದು ಫೋಟೋದಿಂದ ಅದೃಷ್ಟವೇ ಬದಲಾಯ್ತು; ಕೇರಳದ ಕೂಲಿ ಕಾರ್ಮಿಕ ಈಗ ಸೂಪರ್ ಮಾಡೆಲ್!
ಮಾಡೆಲ್ ಆಗಿ ಬದಲಾದ ಕೇರಳದ ಕಾರ್ಮಿಕ
TV9 Web
| Updated By: ಸುಷ್ಮಾ ಚಕ್ರೆ|

Updated on:Feb 15, 2022 | 6:29 PM

Share

ತಿರುವನಂತಪುರಂ: ಹಣೆಬರಹ ಚೆನ್ನಾಗಿದ್ದರೆ ರಾತ್ರೋರಾತ್ರಿ ಏನು ಬೇಕಾದರೂ ನಡೆಯಬಹುದು. ರೂಪದರ್ಶಿಯಾಗಬೇಕೆಂದು (Model) ಅದೆಷ್ಟೋ ಜನರು ಏನೇನೋ ಸಾಹಸ ಮಾಡುತ್ತಾರೆ, ಏನೆಲ್ಲ ಟ್ರೈನಿಂಗ್ ಪಡೆಯುತ್ತಾರೆ. ಆದರೂ ಹಲವರಿಗೆ ಅದೃಷ್ಟ ಖುಲಾಯಿಸುವುದೇ ಇಲ್ಲ. ಆದರೆ, ಕೇರಳದ 60 ವರ್ಷದ ದಿನಗೂಲಿ ಕಾರ್ಮಿಕ ಈಗ ಮಾಡೆಲ್‌ ಆಗಿದ್ದಾರೆ. ಕೊಳಕಾದ ಲುಂಗಿ ಸುತ್ತಿಕೊಂಡು, ಮಸುಕಾದ ಹಳೇ ಶರ್ಟ್​ ಹಾಕಿಕೊಂಡು, ತಲೆಗೊಂದು ಟವೆಲ್ ಸುತ್ತಿಕೊಂಡು ರಸ್ತೆಯಲ್ಲಿ ಓಡಾಡುತ್ತಿದ್ದ 60 ವರ್ಷದ ವ್ಯಕ್ತಿ ರಾತ್ರೋರಾತ್ರಿ ಮಾಡೆಲ್ ಆಗಿ ಬದಲಾಗಿದ್ದಾರೆ. ಕೇರಳದ ಕೋಯಿಕ್ಕೋಡ್‌ನ (Kozhikode) ಈ ಕಾರ್ಮಿಕನ ಮೇಕ್ ಓವರ್ ನೋಡಿದರೆ ನೀವೂ ಅಚ್ಚರಿಪಡುವುದು ಗ್ಯಾರಂಟಿ.

ಕೇರಳದ ದಿನಗೂಲಿ ಕಾರ್ಮಿಕರೊಬ್ಬರು ಮಾಡೆಲ್‌ ಆಗಿ ಬದಲಾಗಿದ್ದಾರೆ. ಫೋಟೋಗ್ರಾಫರ್‌ ಒಬ್ಬರು ಈ 60 ವರ್ಷದ ಮಮ್ಮಿಕ್ಕಾ ಎಂಬ ನೌಕರನ ಫೋಟೋಗಳನ್ನು ಕ್ಲಿಕ್ಕಿಸಿದ್ದರು. ರಸ್ತೆಯಲ್ಲಿ ಲುಂಗಿ ಸುತ್ತಿಕೊಂಡು, ತಲೆಗೊಂದು ಟವೆಲ್ ಕಟ್ಟಿಕೊಂಡು ನಡೆದು ಬರುತ್ತಿದ್ದ ಆ ನೌಕರನ ಫೋಟೋ ಮೆಚ್ಚುಗೆಗೆ ಪಾತ್ರವಾಗಿತ್ತು. ಇದೀಗ ಆ ನೌಕರ ಸ್ಥಳೀಯ ಸಂಸ್ಥೆಯೊಂದಕ್ಕೆ ಮಾಡೆಲ್‌ ಆಗಿ ಫೋಸ್‌ ನೀಡಿದ್ದಾರೆ.

ಸೂಟು-ಬೂಟು ಧರಿಸಿ, ಕೂಲಿಂಗ್ ಗ್ಲಾಸ್​, ಶೂಟ್ ಹಾಕಿಕೊಂಡು ಸ್ಟೈಲಿಶ್ ಆಗಿ ಟ್ಯಾಬ್ ಹಿಡಿದು ಕೂತಿರುವ ಮಮ್ಮಿಕ್ಕಾ ಫೋಟೋಶೂಟ್ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ದಿನಗೂಲಿ ಕೆಲಸ ಮಾಡುತ್ತಿದ್ದ 60 ವರ್ಷದ ಮಮ್ಮಿಕ್ಕಾ ಕೇರಳದ ಕೋಯಿಕೋಡ್ ನಿವಾಸಿಯಾಗಿದ್ದು, ಈಗ ಮಾಡೆಲ್ ಆಗಿ ಬದಲಾಗಿದ್ದಾರೆ. ಫೋಟೋಗ್ರಾಫರ್ ಶರೀಕ್ ವಯಾಲಿಲ್ ಎಂಬುವವರು ಮೊದಲು ಇವರ ಫೋಟೋಗಳನ್ನು ತೆಗೆದಿದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆ ಫೋಟೋ ನೋಡಿದವರು ಅವರು ಮಲೆಯಾಳಂ ನಟ ವಿನಾಯಕನ್ ರೀತಿ ಇದ್ದಾರೆಂದು ಅಭಿಪ್ರಾಯಪಟ್ಟಿದ್ದರು. ಹೀಗಾಗಿ, ಅವರಿಗೆ ಮೇಕ್ ಓವರ್ ಮಾಡಿ ಮಾಡರ್ನ್​ ಲುಕ್​ನಲ್ಲಿ ಫೋಟೋಶೂಟ್ ಮಾಡಲಾಯಿತು.

ತಮ್ಮ ಫೋಟೋಗೆ ಸಿಗುತ್ತಿರುವ ಮೆಚ್ಚುಗೆಯನ್ನು ಗಮನಿಸಿದ ಮಮ್ಮಿಕ್ಕಾ ತಾವು ಇನ್ನು ದಿನಗೂಲಿ ನೌಕರನ ವೃತ್ತಿಯ ಜೊತೆಗೆ ಮಾಡೆಲಿಂಗ್ ವೃತ್ತಿಯನ್ನೂ ಮಾಡಲು ಇಚ್ಛಿಸುವುದಾಗಿ ಹೇಳಿದ್ದಾರೆ. ಮಮ್ಮಿಕ್ಕಾ ಅವರಿಗೆ ಮೇಕಪ್ ಮಾಡುತ್ತಿರುವ ವಿಡಿಯೋ ಭಾರೀ ವೈರಲ್ ಆಗಿದೆ. ಕಳೆದ ವಾರ ಪೋಸ್ಟ್ ಮಾಡಲಾದ ಮಮ್ಮಿಕ್ಕಾ ಅವರ ಫೋಟೋ ಮತ್ತು ವಿಡಿಯೋ 23,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ: Viral News: ಮದುವೆಯಾದ ಕೂಡಲೆ ಗಂಡನ ಬಿಟ್ಟು ಪ್ರಿಯಕರನ ಜೊತೆ ವಧು ಪರಾರಿ; ಲವ್ ಸ್ಟೋರಿಗೆ ಹೊಸ ಟ್ವಿಸ್ಟ್​!

Shocking Video: ಕೆಳಗೆ ಬಿದ್ದ ಬಟ್ಟೆ ತರಲು ಮಗನನ್ನು ಸೀರೆಗೆ ಕಟ್ಟಿ 10ನೇ ಮಹಡಿಯಿಂದ ನೇತಾಡಿಸಿದ ತಾಯಿ!

Published On - 6:25 pm, Tue, 15 February 22