‘ಮತ್ತು ಬರಿಸಿ ಅತ್ಯಾಚಾರ ಮಾಡಿದರು’; ಖ್ಯಾತ ಗಾಯಕನ ವಿರುದ್ಧ ಮಾಡೆಲ್​ ಆರೋಪ: 150 ಕೋಟಿ ಕೊಡಲು ಆಗ್ರಹ

‘ಮತ್ತು ಬರಿಸಿ ಅತ್ಯಾಚಾರ ಮಾಡಿದರು’; ಖ್ಯಾತ ಗಾಯಕನ ವಿರುದ್ಧ ಮಾಡೆಲ್​ ಆರೋಪ: 150 ಕೋಟಿ ಕೊಡಲು ಆಗ್ರಹ
ಕ್ರಿಸ್​ ಬ್ರೌನ್​

ಜೇನ್​ ಡೋ ಎಂಬುವವರು ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ. ಅವರು ವೃತ್ತಿಯಲ್ಲಿ ಡ್ಯಾನ್ಸರ್​, ಮಾಡೆಲ್, ಕೋರಿಯೋಗ್ರಾಫರ್​​ ಹಾಗೂ ಆರ್ಟಿಸ್ಟ್​. ಜೇನ್​ ಡೋ ದೂರಿನಲ್ಲಿ ಘಟನೆಯನ್ನು ವಿವರಿಸಿದ್ದಾರೆ.

TV9kannada Web Team

| Edited By: Rajesh Duggumane

Jan 31, 2022 | 1:46 PM

ಅಮೆರಿಕದ (America) ಗಾಯಕ ಕ್ರಿಸ್​ ಬ್ರೌನ್ (Chris Brown)​ ವಿರುದ್ಧ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಮಾಡೆಲ್​ ಒಬ್ಬರು ಕ್ರಿಸ್​ ವಿರುದ್ಧ ದೂರು ದಾಖಲಿಸಿದ್ದಾರೆ. ತಮಗೆ ಡ್ರಗ್ಸ್​ ನೀಡಿ ಅತ್ಯಾಚಾರ ಮಾಡಿದ್ದಾರೆ ಎನ್ನುವ ಆರೋಪವನ್ನು ಅವರು ಮಾಡಿದ್ದಾರೆ. ಈ ಘಟನೆ ನಡೆದಿದ್ದು 2020ರ ಡಿಸೆಂಬರ್​ನಲ್ಲಿ. ಮಿಯಾಮಿಯಲ್ಲಿ ಈ ಘಟನೆ ನಡೆದಿದೆ. ಈ ದೂರಿನಿಂದ 32 ವರ್ಷದ ಕ್ರಿಸ್​ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸದ್ಯ, ಈ ಪ್ರಕರಣ ಲಾಸ್​ ಏಂಜಲೀಸ್​ ಕೌಂಟಿ ಕೋರ್ಟ್​ನಲ್ಲಿದೆ. ಈ ಪ್ರಕರಣದಲ್ಲಿ ಯಾವ ರೀತಿಯಲ್ಲಿ ವಾದ-ವಿವಾದ ನಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಆರೋಪ ಸಾಬೀತಾದರೆ ಕ್ರಿಸ್​ ಬ್ರೌನ್​ಗೆ ಶಿಕ್ಷೆ ಆಗಲಿದೆ.

ಜೇನ್​ ಡೋ (ಹೆಸರು ಮುಚ್ಚಿಡುವ ಸಂದರ್ಭದಲ್ಲಿ ಅಮೆರಿಕದಲ್ಲಿ ಜೇನ್​ ಡೋ ಹೆಸರು ಬಳಕೆ ಮಾಡಲಾಗುತ್ತದೆ) ಎಂಬುವವರು ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ. ಅವರು ವೃತ್ತಿಯಲ್ಲಿ ಡ್ಯಾನ್ಸರ್​, ಮಾಡೆಲ್, ಕೋರಿಯೋಗ್ರಾಫರ್​​ ಹಾಗೂ ಆರ್ಟಿಸ್ಟ್​. ಜೇನ್​ ಡೋ ದೂರಿನಲ್ಲಿ ಘಟನೆಯನ್ನು ವಿವರಿಸಿದ್ದಾರೆ. ‘ನಾನು ಡಿಸೆಂಬರ್​ 30, 2020ರಂದು ಮಿಯಾಮಿಯಲ್ಲಿದ್ದೆ. ನನ್ನ​ ಗೆಳೆಯ ಕೂಡ ನನ್ನ ಜತೆಯೇ ಇದ್ದ. ಈ ವೇಳೆ ಬಂದ ಕ್ರಿಸ್​ ತಮ್ಮನ್ನು ಪರಿಚಯಿಸಿಕೊಂಡಿದ್ದರು. ‘ನಾನು ನಿಮ್ಮ ಮ್ಯೂಸಿಕ್​ ಕೇಳಿದ್ದೇನೆ. ನನಗೆ ಇಷ್ಟವಾಯಿತು’ ಎಂದು ಅವರು ಹೇಳಿದ್ದರು ಮತ್ತು ನನ್ನ ಫ್ರೆಂಡ್​ ಮೊಬೈಲ್​ ಕಸಿದುಕೊಂಡರು’ ಎಂದು ದೂರನ್ನು ಆರಂಭಿಸಿದ್ದಾರೆ ಜೇನ್​ ಡೋ.

‘ಬ್ರೌನ್​ ನನ್ನನ್ನು ಸ್ಟಾರ್​ ಐಸ್​​ಲೆಂಡ್​ಗೆ ಕರೆದುಕೊಂಡು ಹೋದರು. ನನಗೆ ಅವರು ಕುಡಿಯೋಕೆ ಡ್ರಿಂಕ್ಸ್​ ಒಂದನ್ನು ನೀಡಿದರು. ಅದನ್ನು ಕುಡಿದ ಬಳಿಕ ಮತ್ತು ಬಂದಿತ್ತು. ನಾನು ಅಲ್ಲಿಯೇ ನಿದ್ರಿಸಿದೆ. ನನ್ನನ್ನು ಬ್ರೌನ್ ಬೆಡ್​ರೂಂಗೆ ಕರೆದುಕೊಂಡು ಹೋದರು. ಕಿಸ್​ ಮಾಡೋಕೆ ಆರಂಭಿಸಿದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ನಾನು ನಿಲ್ಲಿಸಿ ಎಂದು ಕೂಗುತ್ತಿದ್ದೆ. ಆದರೆ, ಅವರು ದೈಹಿಕವಾಗಿ ಕಿರುಕುಳ ನೀಡುವುದನ್ನು ಮುಂದುವರಿಸಿದರು. ನಂತರ ಅವರು ನನ್ನನ್ನು ರೇಪ್​ ಮಾಡಿದರು’ ಎಂಬುದು ಜೇನ್​ ಡೋ ಅವರ ಆರೋಪ.

‘ನನಗೆ ಲೈಂಗಿಕವಾಗಿ ಹಿಂಸೆ ಆಗಿದೆ. ಅವರು ನನಗೆ ಹಾನಿ ಮಾಡಿದ್ದಾರೆ. ಹೀಗಾಗಿ, ಇದಕ್ಕೆ ಪರಿಹಾರವಾಗಿ 150 ಕೋಟಿ ರೂಪಾಯಿ ನೀಡಬೇಕು’ ಎಂದು ಸಂತ್ರಸ್ತೆ ಕೋರಿದ್ದಾರೆ. ಇದಕ್ಕೆ ಬ್ರೌನ್​ ಪರೋಕ್ಷವಾಗಿ ಉತ್ತರಿಸಿದ್ದಾರೆ. ‘ನಾನು ಮ್ಯೂಸಿಕ್​ ಪ್ರಾಜೆಕ್ಟ್​ಗಳನ್ನು ಬಿಡುಗಡೆ ಮಾಡಿದಾಗ ಅವರು ನನ್ನನ್ನು ಕೆಳಗೆ ಎಳೆಯೋಕೆ ಪ್ರಯತ್ನಿಸುತ್ತಾರೆ’ ಎಂದು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Samantha: ಅಬ್ಬಬ್ಬಾ, ಸಮಂತಾ ಖರೀದಿಸಿದ ಈ ಎರಡು ಜಾಕೆಟ್​ನ ಬೆಲೆ ಇಷ್ಟೊಂದಾ?

ಯಾದಗಿರಿಯಲ್ಲಿ ಅಪ್ರಾಪ್ತೆ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ ಆರೋಪ! ಆರೋಪಿ ಅರೆಸ್ಟ್

Follow us on

Related Stories

Most Read Stories

Click on your DTH Provider to Add TV9 Kannada