ಯಾದಗಿರಿಯಲ್ಲಿ ಅಪ್ರಾಪ್ತೆ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ ಆರೋಪ! ಆರೋಪಿ ಅರೆಸ್ಟ್

ಅಪ್ರಾಪ್ತೆಯನ್ನು ಗುಡಿಸಲಿಗೆ ಕರೆದೊಯ್ದು ವೃದ್ಧ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪವಿದ್ದು, ಅಪ್ರಾಪ್ತೆ ಕಿರುಚಿಕೊಂಡಿದ್ದನ್ನು ಕೇಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾದಗಿರಿಯಲ್ಲಿ ಅಪ್ರಾಪ್ತೆ ಮೇಲೆ ವೃದ್ಧನಿಂದ ಅತ್ಯಾಚಾರಕ್ಕೆ ಯತ್ನ ಆರೋಪ! ಆರೋಪಿ ಅರೆಸ್ಟ್
ಬಂಧಿತ ವೃದ್ಧ
Follow us
TV9 Web
| Updated By: sandhya thejappa

Updated on:Jan 30, 2022 | 2:30 PM

ಯಾದಗಿರಿ: ಅಪ್ರಾಪ್ತೆ ಮೇಲೆ ವೃದ್ಧನೊಬ್ಬ ಅತ್ಯಾಚಾರಕ್ಕೆ (Rape) ಯತ್ನಿಸಿರುವ ಆರೋಪ ಕೇಳಿಬಂದಿದೆ. ಜ.27ರಂದು ಘಟನೆ ನಡೆದಿದ್ದು, ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪ್ರಾಪ್ತೆಯನ್ನು ಗುಡಿಸಲಿಗೆ ಕರೆದೊಯ್ದು ವೃದ್ಧ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂಬ ಆರೋಪವಿದ್ದು, ಅಪ್ರಾಪ್ತೆ ಕಿರುಚಿಕೊಂಡಿದ್ದನ್ನು ಕೇಳಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿ ಅಪ್ರಾಪ್ತೆ ತಮ್ಮನ ಕತ್ತು ಹಿಸುಕಿ ಕೊಲೆ ಮಾಡುವ ಬೆದರಿಕೆ ಹಾಕಿದ್ದನಂತೆ. ಸದ್ಯ ವೃದ್ಧನ ವಿರುದ್ಧ ಪೋಕ್ಸೋ (POSCO) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ.

8 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಜನವರಿ 22ಕ್ಕೆ ಬೆಂಗಳೂರಿನಲ್ಲಿ 8 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. 22ರ ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ದುಷ್ಕೃತ್ಯ ನಡೆದಿತ್ತು. ಬಾಲಕಿ ತಾಯಿ ಮಗಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದರು. ಈ ವೇಳೆ ಪಕ್ಕದ ಮನೆಯ ಯುವಕ ದುಷ್ಕೃತ್ಯ ಎಸಗಿದ್ದಾನೆ. ಆರೋಪಿಯನ್ನು ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಬಾಲಕಿ ತಾಯಿ ಮಗಳನ್ನು ಬಿಟ್ಟು ಗಾಮೆಂಟ್ ಒಂದರಲ್ಲಿ ಕೆಲಸ ಮಾಡಲು ಹೋಗಿದ್ದರು. ಆಗ ಬಂಧಿತ ಆರೋಪಿ ನಿನ್ನೆ ಸಂಜೆ 7 ಗಂಟೆ ಸುಮಾರಿಗೆ ಕೃತ್ಯ ಎಸಗಿದ್ದಾನೆ. ಮನೆಗೆ ಬಂದ ತಾಯಿಗೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿತ್ತು ಬಾಲಕಿ ತಾಯಿ ಮನೆಗೆ ಬರುತ್ತಿದ್ದಂತೆ ಆರೋಪಿ ಪರಾರಿಯಾಗಿದ್ದ.

ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿ, ಆಕೆಯ ಕೂದಲನ್ನು ಕತ್ತರಿಸಿದ ಆರೋಪಿಗಳು ಅರೆಸ್ಟ್: ನವದೆಹಲಿ: ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿ, ಆಕೆಯ ಕೂದಲನ್ನು ಕತ್ತರಿಸಿ, ಮುಖಕ್ಕೆ ಕಪ್ಪು ಬಣ್ಣ ಬಳಿದು, ಆಕೆಗೆ ಚಪ್ಪಲಿಯ ಹಾರ ಹಾಕಿ ಹರ್ಷೋದ್ಘಾರದಿಂದ ಮೆರವಣಿಗೆ ನಡೆಸಿದ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಮಹಿಳಾ ಸಮಿತಿಯು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆ ಅತ್ಯಾಚಾರ (Rape) ಸಂತ್ರಸ್ತೆಯ ಮೇಲೆ ಹಲ್ಲೆ ನಡೆಸಿದ ನಾಲ್ಕು ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ

ಎಲ್ಲ ಕ್ಷೇತ್ರಗಳಿಗೂ ವಿನಾಯಿತಿ ಆದರೆ, ಚಿತ್ರಮಂದಿರಗಳಿಗೆ ಯಾಕಿಲ್ಲ; ನಟ ಶಿವರಾಜ್ ಕುಮಾರ್ ಹೇಳಿದ್ದೇನು..?

ಗಾಂಧೀಜಿ ಅವರು ವಿಶ್ವ ನಾಯಕ ಮತ್ತು ಅವರ ಜೀವನವೇ ಒಂದು ಸಂದೇಶ; ಸಿಎಂ ಬೊಮ್ಮಾಯಿ

Published On - 2:22 pm, Sun, 30 January 22