AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shocking News: ಪೊಲೀಸರು ತಂದ ಕೈದಿಯ ಶವ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿತ್ತು!

ಸ್ಪೇನ್​ನ ವಿಲ್ಲಬೊನಾದಲ್ಲಿರುವ ಆಸ್ಟುರಿಯಾಸ್ ಸೆಂಟ್ರಲ್ ಜೈಲಿನಲ್ಲಿದ್ದ ಕೈದಿ ಸಾವನ್ನಪ್ಪಿದ್ದಾನೆ ಎಂದು ಆತನನ್ನು ಬ್ಯಾಗ್​ನಲ್ಲಿ ತುಂಬಲಾಗಿತ್ತು. ಮರಣೋತ್ತರ ಪರೀಕ್ಷೆ ನಡೆಸಲು ಆತನ ದೇಹವನ್ನು ವೈದ್ಯರು ಕತ್ತರಿಸಲು ಸಿದ್ಧರಾದಾಗ ಆ ವ್ಯಕ್ತಿ ಬದುಕಿರುವುದು ಗೊತ್ತಾಗಿದೆ.

Shocking News: ಪೊಲೀಸರು ತಂದ ಕೈದಿಯ ಶವ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿತ್ತು!
ಸಾಂದರ್ಭಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Feb 05, 2022 | 1:13 PM

Share

ಸಾವನ್ನಪ್ಪಿರುವ ವ್ಯಕ್ತಿ ಇದ್ದಕ್ಕಿದ್ದಂತೆ ಎದ್ದು ಬಂದರೆ ಹೇಗಿರುತ್ತದೆ? ಆ ಘಟನೆಯನ್ನು ಊಹಿಸಲು ಕೂಡ ಅಸಾಧ್ಯ. ಆದರೆ, ಸ್ಪೇನ್​ನಲ್ಲಿ ಸಾವನ್ನಪ್ಪಿದ ಕೈದಿಯ ದೇಹವನ್ನು ಕತ್ತರಿಸಿ ಇನ್ನೇನು ಪೋಸ್ಟ್​ಮಾರ್ಟಂ (post-mortem) ಮಾಡಬೇಕೆನ್ನುವಷ್ಟರಲ್ಲಿ ಆ ಕೈದಿ ಎದ್ದು ಕುಳಿತಿದ್ದಾನೆ. ಇದನ್ನು ನೋಡಿದ ವೈದ್ಯರೇ ಬೆಚ್ಚಿಬಿದ್ದಿದ್ದಾರೆ. ಆದರೆ, ಸಮಯಕ್ಕೆ ಸರಿಯಾಗಿ ಆ ಕೈದಿ ಬದುಕಿರುವುದು ಗೊತ್ತಾದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಸ್ಪೇನ್​ನ ವಿಲ್ಲಬೊನಾದಲ್ಲಿರುವ ಆಸ್ಟುರಿಯಾಸ್ ಸೆಂಟ್ರಲ್ ಜೈಲಿನಲ್ಲಿದ್ದ ಕೈದಿ ಸಾವನ್ನಪ್ಪಿದ್ದಾನೆ ಎಂದು ಆತನನ್ನು ಬ್ಯಾಗ್​ನಲ್ಲಿ ತುಂಬಲಾಗಿತ್ತು. ಆತನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೈದ್ಯರು ಕತ್ತರಿಸಲು ಸಿದ್ಧರಾದಾಗ ಆ ವ್ಯಕ್ತಿ ಬದುಕಿರುವುದು ಗೊತ್ತಾಗಿದೆ.

ಸ್ಪೇನ್​ನ ಜೈಲಿನಲ್ಲಿ ಕೈದಿಯಾಗಿದ್ದ ಗೊಂಜಾಲೊ ಮೊಂಟೊಯಾ ಜಿಮೆನೆಜ್‌ ಎಂಬ ವ್ಯಕ್ತಿ ಪ್ರಜ್ಞಾಹೀನನಾಗಿದ್ದ. ಆತ ಸಾವನ್ನಪ್ಪಿದ್ದಾನೆ ಎಂದು ಪೋಲೀಸ್ ಗಾರ್ಡ್‌ಗಳು ಭಾವಿಸಿದ್ದರು. ಹೀಗಾಗಿ, ಆತನ ದೇಹವನ್ನು ಬ್ಯಾಗ್‌ನಲ್ಲಿ ಹಾಕಿಕೊಂಡು, ಒವಿಡೊದಲ್ಲಿನ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಮೆಡಿಸಿನ್‌ಗೆ ಕರೆದೊಯ್ಯಲಾಯಿತು.

ಅಚ್ಚರಿಯ ರೀತಿಯಲ್ಲಿ ಆ ಕೈದಿ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿದ್ದಾನೆ ಎಂದು ಸ್ಪ್ಯಾನಿಷ್ ಜೈಲು ಸೇವೆಯ ವಕ್ತಾರರು ತಿಳಿಸಿದ್ದಾರೆ. ವೈದ್ಯರೇ ಜೈಲಿಗೆ ಭೇಟಿ ನೀಡಿ ಆ ಕೈದಿ ಸಾವನ್ನಪ್ಪಿರುವುದಾಗಿ ಘೋಷಿಸಿದ್ದರು. ಆದರೆ, ಆಸ್ಪತ್ರೆಯಲ್ಲಿ ಪೋಸ್ಟ್​ ಮಾರ್ಟಂ ವೇಳೆ ಆತ ಬದುಕಿರುವುದು ಗೊತ್ತಾಗಿದೆ. ಇಬ್ಬರು ಕರ್ತವ್ಯದಲ್ಲಿರುವ ವೈದ್ಯರು ಜಿಮೆನೆಜ್ ಸತ್ತಿದ್ದಾನೆ ಎಂದು ದೃಢಪಡಿಸಿದ್ದರು. ಆದರೆ, ವಿಧಿವಿಜ್ಞಾನ ವೈದ್ಯರು ಆತ ಬದುಕಿದ್ದಾನೆ ಎಂದು ದೃಢಪಡಿಸಿದರು ಎಂದು ವಕ್ತಾರರು ತಿಳಿಸಿದ್ದಾರೆ ಎಂದು ‘ಟೈಮ್ಸ್​ ನೌ’ ವರದಿ ಮಾಡಿದೆ.

ಸೈನೊಸಿಸ್‌ನಿಂದ ಬಳಲುತ್ತಿದ್ದ ಕೈದಿಯ ದೇಹದಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಆತನ ಚರ್ಮದ ಬಣ್ಣ ಬದಲಾಗಿತ್ತು ಎಂದು ವರದಿಗಳು ತಿಳಿಸಿವೆ. ಆದರೆ ಆಸ್ಪತ್ರೆಯ ಶವಾಗಾರಕ್ಕೆ ಕೊಂಡೊಯ್ದ ನಂತರ, ಆತ ಜೀವಂತವಾಗಿರುವ ವಿಷಯ ಗೊತ್ತಾಯಿತು. ಆತನ ದೇಹದ ಮೇಲೆ ವೈದ್ಯರು ಮಾರ್ಕ್ ಮಾಡಿ, ಕತ್ತರಿಸಲು ಎಲ್ಲ ಸಿದ್ಧತೆಗಳನ್ನೂ ಮಾಡಿಕೊಂಡಿದ್ದರು. ಆ ವೇಳೆ ಆತ ಬದುಕಿರುವ ವಿಷಯ ಗೊತ್ತಾಗಿದೆ.

ಇದನ್ನೂ ಓದಿ: Crime News: ಜೈಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮೊಬೈಲನ್ನೇ ನುಂಗಿದ ಕೈದಿ!

Viral Video: ಪೊಲೀಸ್ ಅಧಿಕಾರಿಯನ್ನು ಕೊಂದ ಕೈದಿಗೆ ಚುಂಬಿಸಿದ ಜಡ್ಜ್; ವಿಡಿಯೋ ವೈರಲ್

Published On - 1:12 pm, Sat, 5 February 22

Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily Devotional: ಶ್ರೀ ಸೂಕ್ತದ ಮಹತ್ವ ಹಾಗೂ ಯಾವಾಗ ಪಠಿಸಬೇಕು ತಿಳಿಯಿರಿ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
Daily horoscope: ಗಂಡ-ಹೆಂಡತಿಯ ನಡುವೆ ಸಣ್ಣಪುಟ್ಟ ಕಲಹಗಳಾಗುವ ಸಾಧ್ಯತೆ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಾ. ರಾಜ್​ಕುಮಾರ್ ಅಪಹರಣಕ್ಕೂ ಮುನ್ನ ಏನೆಲ್ಲ ನಡೆದಿತ್ತು? ವಿವರಿಸಿದ ಅಳಿಯ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಡಿವೈಡರ್​​ಗೆ ಡಿಕ್ಕಿ ಹೊಡೆದು ಹೈವೇಯಲ್ಲಿ ಆಟಿಕೆಯಂತೆ ಹಾರಿದ ಸ್ಕಾರ್ಪಿಯೋ
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
ಕನ್ನಡ, ತೆಲುಗು ಎರಡೂ ಕಡೆ ಪ್ರೀತಿ ಸಿಕ್ಕಿದ್ದಕ್ಕೆ ಕಿರೀಟಿ ರೆಡ್ಡಿ ಖುಷ್
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
‘ಚಾಯ್ ಪೆ ಚರ್ಚಾ’; ಇಂಗ್ಲೆಂಡ್ ಪ್ರಧಾನಿ ಜೊತೆ ಟೀ ಸವಿದ ಪ್ರಧಾನಿ ಮೋದಿ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಲೋಕಸಭಾ ಚುನಾವಣೆಯಲ್ಲಿ ನಮಗೆ ರಾಜ್ಯದಲ್ಲಿ ಹೆಚ್ಚು ಸೀಟು ಬರಬೇಕಿತ್ತು: ಸಚಿವ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಯಶ್ ತಾಯಿಯನ್ನು ಅಂಡರ್ವಲ್ಡ್ ಡಾನ್ ಅಂದುಕೊಂಡಿದ್ದರಂತೆ ಪೃಥ್ವಿ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಬಿಕ್ಲು ಶಿವ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ ಸರ್ಕಾರ
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?
ಪುನೀತ್ ರಾಜ್​ಕುಮಾರ್ ಜೊತೆ ಹೋಲಿಕೆ: ‘ಜೂನಿಯರ್’ ನಟ ಕಿರೀಟಿ ಹೇಳಿದ್ದೇನು?