Crime News: ಜೈಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮೊಬೈಲನ್ನೇ ನುಂಗಿದ ಕೈದಿ!

ಮೊಬೈಲ್ ನುಂಗಿದ ಕೈದಿಯನ್ನು ದೀನ್ ದಯಾಳ್ ಆಸ್ಪತ್ರೆಗೆ ಸೇರಿಸಲಾಗಿದೆ. ಆತನ ಆರೋಗ್ಯ ಉತ್ತಮವಾಗಿದ್ದರೂ ಮೊಬೈಲ್ ಇನ್ನೂ ಆತನ ಹೊಟ್ಟೆಯೊಳಗೆ ಇದೆ.

Crime News: ಜೈಲಿನ ಅಧಿಕಾರಿಗಳ ಕೈಗೆ ಸಿಕ್ಕಿ ಬೀಳುವ ಭಯದಲ್ಲಿ ಮೊಬೈಲನ್ನೇ ನುಂಗಿದ ಕೈದಿ!
ತಿಹಾರ್ ಜೈಲು
Follow us
| Updated By: ಸುಷ್ಮಾ ಚಕ್ರೆ

Updated on:Jan 07, 2022 | 5:06 PM

ನವದೆಹಲಿ: ದೆಹಲಿಯ ತಿಹಾರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯೊಬ್ಬನ ಮೇಲೆ ಅನುಮಾನಗೊಂಡ ಜೈಲು ಸಿಬ್ಬಂದಿ ಆತನ ಕೊಠಡಿಯನ್ನು ಹುಡುಕಲು ಮುಂದಾದಾಗ ಆತ ತನ್ನ ಬಳಿ ಬಚ್ಚಿಟ್ಟುಕೊಂಡಿದ್ದ ಮೊಬೈಲ್ ಫೋನ್ ನುಂಗಿದ್ದಾನೆ ಎಂದು ಡಿಜಿ (ಜೈಲು) ಸಂದೀಪ್ ಗೋಯೆಲ್ ತಿಳಿಸಿದ್ದಾರೆ.

“ಜನವರಿ 5ರಂದು ಜೈಲು ನಂಬರ್ 1ರ ಕೈದಿಯೊಬ್ಬ ಗೌಪ್ಯವಾಗಿ ಮೊಬೈಲ್ ಬಳಸುತ್ತಿದ್ದಾನೆ ಎಂಬ ಅನುಮಾನ ಬಂದಿದ್ದರಿಂದ ನಮ್ಮ ಸಿಬ್ಬಂದಿ ಹುಡುಕಲು ಅವನ ಕೊಠಡಿಗೆ ಹೋದರು. ಆಗ ಆತ ತನ್ನ ಬಳಿಯಿದ್ದ ಮೊಬೈಲ್ ಫೋನ್ ಅನ್ನು ನುಂಗಿದ್ದಾನೆ” ಎಂದು ಜೈಲು ಅಧಿಕಾರಿ ಹೇಳಿದ್ದಾರೆ.

ಆ ಕೈದಿಯನ್ನು ದೀನ್ ದಯಾಳ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಆತನ ಸ್ಥಿತಿ ಉತ್ತಮವಾಗಿದೆ, ಅವನ ಪ್ರಾಣಕ್ಕೇನೂ ತೊಂದರೆಯಿಲ್ಲ. ಆದರೆ, ಮೊಬೈಲ್ ಇನ್ನೂ ಆತನ ಹೊಟ್ಟೆಯೊಳಗೆ ಇದೆ ”ಎಂದು ಗೋಯೆಲ್ ಹೇಳಿದ್ದಾರೆ.

ಈ ಘಟನೆಯ ಹಿನ್ನೆಲೆಯಲ್ಲಿ ತಿಹಾರ್ ಜೈಲಿನ ಭದ್ರತಾ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ. ಜೈಲಿನ ಕೈದಿಗಳಿಗೆ ಪೊಲೀಸರೇ ಮೊಬೈಲ್ ಮತ್ತಿತರ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿರುವುದರಿಂದ ಭದ್ರತೆ ಬಿಗಿಗೊಳಿಸಲಾಗಿದೆ. ಇದುವರೆಗೂ ತಿಹಾರ್ ಜೈಲಿನ 40ಕ್ಕೂ ಹೆಚ್ಚು ಅಧಿಕಾರಿಗಳ ವಿರುದ್ಧ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ಬಿಗಿ ಭದ್ರತೆಯಿದ್ದ ತಿಹಾರ್ ಜೈಲಿನೊಳಗೆ ಎಂಟೇ ದಿನದಲ್ಲಿ ಐವರು ಕೈದಿಗಳ ಸಾವು; ತನಿಖೆಗೆ ಆದೇಶ

Unitech Case: ಯುನಿಟೆಕ್ ಪ್ರಕರಣ; ತಿಹಾರ್ ಜೈಲಿನ 30 ಅಧಿಕಾರಿಗಳ ಅಮಾನತು

Published On - 5:04 pm, Fri, 7 January 22