Valentines Day: ಕೈಕೊಟ್ಟು ಹೋದ ಪ್ರೇಮಿಯ ಹೆಸರನ್ನು ಜಿರಲೆಗಿಟ್ಟು ಕೋಪ ತೀರಿಸಿಕೊಳ್ಳಿ; ಇದು ವ್ಯಾಲಂಟೈನ್ಸ್ ಡೇ ಆಫರ್!

ಹಳೇ ಪ್ರೇಮಿಯ ಬಗ್ಗೆ ಮನಸ್ಸಿನ ಮೂಲೆಯಲ್ಲೆಲ್ಲೋ ಕೋಪವೊಂದು ಉಳಿದುಹೋಗಿರುತ್ತದೆ ಅಂತಿಟ್ಟುಕೊಳ್ಳಿ. ಪರಿಹಾರವೇನು? ನೊಂದ ಪ್ರೇಮಿಗಳಿಗೆ ವಿಚಿತ್ರ ಆಫರ್​ಗಳನ್ನು ನೀಡಿದೆ ಒಂದು ಸಂಸ್ಥೆ.

Valentines Day: ಕೈಕೊಟ್ಟು ಹೋದ ಪ್ರೇಮಿಯ ಹೆಸರನ್ನು ಜಿರಲೆಗಿಟ್ಟು ಕೋಪ ತೀರಿಸಿಕೊಳ್ಳಿ; ಇದು ವ್ಯಾಲಂಟೈನ್ಸ್ ಡೇ ಆಫರ್!
ಚಿಕಾಗೋದ ಬ್ರೂಕ್‌ಫೀಲ್ಡ್ ಮೃಗಾಲಯ ಹಂಚಿಕೊಂಡಿರುವ ಚಿತ್ರ
Follow us
TV9 Web
| Updated By: shivaprasad.hs

Updated on:Feb 05, 2022 | 4:28 PM

ಪ್ರೇಮಿಗಳ ದಿನ (Valentines Day) ಸಮೀಪಿಸುತ್ತಿದೆ. ಆದರೆ ಎಲ್ಲರ ಪ್ರೀತಿಯ ಬದುಕು ಯಶಸ್ವಿಯಾಗಿರಬೇಕೆಂದೇನೂ ಇಲ್ಲವಲ್ಲ. ಹಳೇ ಗೆಳೆಯನೋ, ಗೆಳೆತಿಯೋ ಕೈಕೊಟ್ಟು ಹೋಗಿರಬಹುದು. ಕಾರಣಗಳೇನೇ ಇದ್ದರೂ ಇದು ಮತ್ತೊಬ್ಬರಿಗೆ ನೋವುಂಟು ಮಾಡಿರುತ್ತದೆ. ಕೆಲವರಿಗೆ ಸಿಟ್ಟೂ ತರಿಸಿರುತ್ತದೆ. ಮತ್ತೆ ಕೆಲವರು ಹತಾಶೆಗೆ ಜಾರಿರುತ್ತಾರೆ. ಮತ್ತಷ್ಟು ಜನರು ಇದನ್ನೆಲ್ಲಾ ಮೆಟ್ಟಿನಿಂತು ಮುಂದಿನ ಹಾದಿಯೆಡೆಗೆ ಯೋಚಿಸುತ್ತಾರೆ. ಇಷ್ಟಾಗ್ಯೂ ಹಳೇ ಪ್ರೇಮಿಯ ಬಗ್ಗೆ ಮನಸ್ಸಿನ ಮೂಲೆಯಲ್ಲೆಲ್ಲೋ ಕೋಪವೊಂದು ಉಳಿದುಹೋಗಿರುತ್ತದೆ ಅಂತಿಟ್ಟುಕೊಳ್ಳಿ. ಪರಿಹಾರವೇನು? ಇಂತಹ ನೊಂದ ಪ್ರೇಮಿಗಳಿಗೆ ವಿಚಿತ್ರ ಆಫರ್​ಗಳನ್ನು ನೀಡಿದೆ ಒಂದು ಸಂಸ್ಥೆ. ಹೌದು. ಜಿರಲೆಗಳಿಗೆ ಕೈಕೊಟ್ಟ ಹಳೇ ಪ್ರೇಮಿಯ ಹೆಸರನ್ನಿಟ್ಟು ಕೋಪ ತೀರಿಸಿಕೊಳ್ಳಿ. ಇದು ವ್ಯಾಲಂಟೈನ್ಸ್ ಡೇ ಆಫರ್ ಎಂದು ಭರ್ಜರಿ ಆಫರ್ ನೀಡಿದೆ ಬ್ರಿಟನ್​ನ ಹೆಂಸ್ಲೆ ಕನ್ಸರ್ವೇಶನ್ ಸೆಂಟರ್ (ಹೆಚ್​​ಸಿಸಿ). ಆದರೆ ಇದಕ್ಕೆ ಹಣವನ್ನೂ ನಿಗದಿಪಡಿಸಿದೆ. ವಿಶೇಷವೆಂದರೆ ಇದಕ್ಕೆ ದೊಡ್ಡ ಮೊತ್ತದ ಹಣವೇನೂ ಬೇಕಾಗಿಲ್ಲ!

ಏನಿದು ಯೋಜನೆ; ಇದಕ್ಕೆ ಜನರು ನೀಡಬೇಕಾದ ಹಣವೆಷ್ಟು?

ಹೆಚ್​​ಸಿಸಿ ತನ್ನ ಹೇಳಿಕೆಯಲ್ಲಿ ‘‘ಋಣಾತ್ಮಕ ಯೋಚನೆಗಳನ್ನು ಬದಿಗಿಟ್ಟು, ನಿಮ್ಮ ಮುಖದಲ್ಲಿ ಮತ್ತೆ ನಗು ಮೂಡಿಸುವ ಯೋಜನೆ ಇದು’’ ಎಂದು ಹೇಳಿಕೊಂಡಿದೆ. ಜಿರಲೆಗೆ ಹೆಸರಿಟ್ಟ ತಕ್ಷಣ ನಿಮ್ಮ ಕೋಪ ಶಮನವಾಗಬಹುದು. ಅಥವಾ ಜಿರಲೆಗೆ ನಿಮ್ಮ ಹಳೇ ಪ್ರೇಮಿಯ ಹೆಸರಿಟ್ಟು ಗೌರವ ಸೂಚಿಸಬಹುದು. ಅಥವಾ ಜಿರಲೆಗೆ ಹೆಸರಿಟ್ಟು ಕ್ಷುಲ್ಲಕ ಎಂದು ನೀವು ಭಾವಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಸಂಸ್ಥೆ ನೀಡಿದ ಆಯ್ಕೆಗಳಂತೆ, ಈ ಯೋಜನೆಯನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳುವುದು ಎನ್ನುವುದು ಅವರವರಿಗೆ ಬಿಟ್ಟ ವಿಚಾರ. ಆದರೆ ಹಣ ನೀಡಿ ನೀವು ಜಿರಲೆಗೆ ಹೆಸರು ನೀಡಿದರೆ ಅದರಿಂದ ಒಳ್ಳೆಯ ಕಾರ್ಯವೊಂದಕ್ಕೆ ಜತೆಯಾಗುವುದಂತೂ ಹೌದು. ಕಾರಣ, ಜಿರಲೆಗೆ ಮರುನಾಮಕರಣ ಮಾಡಲು ನೀಡುವ 1.50 ಯೂರೋ ಅಥವಾ 150 ರೂ ಹಣ ಹೆಚ್​ಸಿಸಿಯ ಅಭಿವೃದ್ಧಿಪರ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತದೆ.

ಈ ಕುರಿತು ತಮಾಷೆಯಾಗಿಯೇ ಮಾಹಿತಿ ನೀಡಿರುವ ಹೆಚ್​ಸಿಸಿ, ‘‘ಎಲ್ಲರೂ ಅವರ ಹಳೆಯ ಗೆಳತಿಯರನ್ನು ದತ್ತು ತೆಗೆದುಕೊಳ್ಳಲು ಬಯಸುವುದಿಲ್ಲ. ಅದಕ್ಕೇ ಮರುನಾಮಕರಣ ಮಾಡುವ ಯೋಜನೆಯನ್ನು ನಾವು ಪರಿಚಯಿಸಿದ್ದು’’ ಎಂದಿದೆ. ಹೊಸ ಹೆಸರು ಪಡೆದುಕೊಂಡ ಜಿರಲೆಗಳನ್ನು ‘ರೋಚ್ ಬೋರ್ಡ್​​’ನಲ್ಲಿ ಪ್ರದರ್ಶಿಸಲಾಗುತ್ತದೆ. ಫೆಬ್ರವರಿ 10ರ ಮಧ್ಯಾಹ್ನ 12 ಗಂಟೆಗೆ ನೋಂದಣಿ ಮುಗಿಯಲಿದೆ ಎಂದು ತಿಳಿಸಲಾಗಿದೆ.

ಇದೇ ಮಾದರಿಯ ಆಫರ್​ಗಳು ಸದ್ಯ ವಿವಿಧ ರಾಷ್ಟ್ರಗಳಲ್ಲಿ ಜನಪ್ರಿಯವಾಗುತ್ತಿವೆ. ವ್ಯಾಲಂಟೈನ್ಸ್ ಡೇ ಸಂದರ್ಭದಲ್ಲಿ ಇಂತಹ ಆಫರ್​ಗಳನ್ನು ಮೃಗಾಲಯ ಹಾಗೂ ಹಲವು ಅಧ್ಯಯನ ಕೇಂದ್ರಗಳು ನೀಡುತ್ತಿವೆ. ಟೆಕ್ಸಾಸ್‌ನಲ್ಲಿರುವ ಸ್ಯಾನ್ ಆಂಟೋನಿಯೊ ಮೃಗಾಲಯ, ನ್ಯೂಯಾರ್ಕ್‌ನ ಬ್ರಾಂಕ್ಸ್ ಮೃಗಾಲಯ ಮತ್ತು ಚಿಕಾಗೋದ ಬ್ರೂಕ್‌ಫೀಲ್ಡ್ ಮೃಗಾಲಯ, ಯುಕೆಯ ಡೆವೊನ್‌ನಲ್ಲಿರುವ ಡಾರ್ಟ್‌ಮೂರ್ ಮೃಗಾಲಯ ಕೂಡ ಇದೇ ಮಾದರಿಯ ಆಫರ್​ಗಳನ್ನು ನೀಡಿವೆ. ಸದ್ಯ ಈ ಅಫರ್​ಗಳು ಜನರನ್ನು ಸಖತ್ ಆಕರ್ಷಿಸಿರೋದು ಸುಳ್ಳಲ್ಲ.

ಚಿಕಾಗೋದ ಬ್ರೂಕ್‌ಫೀಲ್ಡ್ ಮೃಗಾಲಯ ಹಂಚಿಕೊಂಡ ಟ್ವೀಟ್:

ಇದನ್ನೂ ಓದಿ:

ಪ್ರಭುದೇವ ಹೊಸ ಪ್ಯಾನ್​ ಇಂಡಿಯಾ ಚಿತ್ರ ಘೋಷಣೆ; ಕನ್ನಡ ಸೇರಿ ಬಹುಭಾಷೆಯಲ್ಲಿ ನಿರ್ಮಾಣ

ತುಂಬು ಗರ್ಭಿಣಿ ಅಮೂಲ್ಯ ಜತೆ ಶಿಲ್ಪಾ ಗಣೇಶ್​ ಫೋಟೋ ಟೈಮ್​; ಇಲ್ಲಿದೆ ಕ್ಯೂಟ್​ ಗ್ಯಾಲರಿ

Published On - 9:31 am, Sat, 5 February 22