Viral News: ಸ್ವೀಡನ್ನ ಬೀದಿಗಳಲ್ಲಿರುವ ಸಿಗರೇಟ್ ಚೂರುಗಳ ಸಂಗ್ರಹಕ್ಕೆ ಕಾಗೆಗಳಿಗೆ ತರಬೇತಿ
ಸೂಕ್ಷ್ಮ ದೃಷ್ಟಿಯುಳ್ಳ ಕಾಗೆಗಳನ್ನು ನಗರದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಸಿಗರೇಟ್ಗಳನ್ನು ಹೆಕ್ಕಿ ತೆಗೆದು ಮಾಲಿನ್ಯವನ್ನು ತಡೆಯಲು ಸ್ವೀಡನ್ನ ಸ್ಟಾರ್ಟ್ ಅಪ್ ಕಂಪನಿಯೊಂದು ಕಾಗೆಗಳಿಗೆ ತರಬೇತಿ ನೀಡಲು ಮುಂದಾಗಿದೆ.
ನಗರಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಸ್ವೀಡನ್ನಲ್ಲಿ (Sweden) ಕಾಗೆಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೌದು ಸೂಕ್ಷ್ಮ ದೃಷ್ಟಿಯುಳ್ಳ ಕಾಗೆಗಳನ್ನು ನಗರದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿದ್ದ ಸಿಗರೇಟ್ಗಳನ್ನು ಹೆಕ್ಕಿ ತೆಗೆದು ಮಾಲಿನ್ಯವನ್ನು ತಡೆಯಲು ಸ್ವೀಡನ್ನ ಸ್ಟಾರ್ಟ್ ಅಪ್ ಕಂಪನಿಯೊಂದು (Start Up Company) ಕಾಗೆಗಳಿಗೆ (Crows) ತರಬೇತಿ ನೀಡಲು ಮುಂದಾಗಿದೆ. ಸದ್ಯ ಈ ಸುದ್ದಿ ಜಗತ್ತಿನಾದ್ಯಂತ ವೈರಲ್ ಆಗಿದೆ. ಕಾಗೆಗಳು ಹೆಕ್ಕಿ ತಂದ ಸಿಗರೇಟ್ಗಳನ್ನು ಹಾಕಲು ಮಷಿನ್ ಒಂದನ್ನು ಇಡಲಾಗುತ್ತದೆ ಎಂದು ವರದಿಯಾಗಿದೆ.
ಫಸ್ಟ್ ಪೋಸ್ಟ್ ಸುದ್ದಿ ಸಂಸ್ಥೆ ಈ ಕುರಿತು ವರದಿ ಮಾಡಿದೆ. ಸ್ವೀಡನ್ನಲ್ಲಿ ಎಲ್ಲೆಂದರಲ್ಲಿ ಬಿಸಾಡಿದ ಸಿಗರೇಟ್ ಚುರುಗಳು ಬಹುದೊಡ್ಡ ಸಮಸ್ಯೆಯಾಗಿ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಮಣ್ಣಿನ ಮಾಲಿನ್ಯವನ್ನು ಹೆಚ್ಚು ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಸ್ವೀಡನ್ನ ಸ್ಟಾರ್ಟ್ ಅಪ್ ಕಂಪನಿ ಕಾಗೆಗಳಿಗೆ ಸಿಗರೇಟ್ ಚೂರುಗಳನ್ನು ಹೆಕ್ಕಿ ತರುವ ಕೆಲಸ ನೀಡುತ್ತಿದೆ. ಪ್ರತೀ ಬಾರಿ ಕಸವನ್ನು ತಂದು ಮಷಿನ್ನೊಳಗೆ ಹಾಕುವಾಗಲೂ ಕಾಗೆಗಳು ಆಹಾರವನ್ನು ಪಡೆಯುತ್ತವಂತೆ.
ಕೋರ್ವಿಡ್ ಕ್ಲೀನಿಂಗ್ ಎನ್ನುವ ಹೆಸರಿನ ಸಂಸ್ಥೆ ಈ ಕ್ರಮಕ್ಕೆ ಮುಂದಾಗಿದೆ. ಸ್ವೀಡನ್ನಲ್ಲಿ ಸಿಗರೇಟ್ ಬಟ್ಗಳನ್ನು ಸಂಗ್ರಹಿಸಲು ಪ್ರತೀ ಸಿಗರೇಟ್ ಬಡ್ ಪತ್ತೆಗೆ 16 ರೂ ವೆಚ್ಚವಾಗುತ್ತದೆ. ಕಾಗೆಗಳನ್ನು ಈ ಕೆಲಸಕ್ಕೆ ಬಳಸಿಕೊಂಡರೆ ಖರ್ಚು ಕಡಿಮೆಯಾಗುತ್ತದೆ ಎನ್ನುತ್ತಾರೆ ಸಂಸ್ಥೆಯ ಸ್ಥಾಪಕ ಗುಂಥರ್ ಅನ್ಸೇನ್. ಕಾಗೆಗಳ ಬುದ್ಧಿವಂತಿಕೆ ಬಗ್ಗೆ ಮಾತನಾಡುವ ಗುಂಥರ್, ಕಾಗೆಗಳಿಗೆ ಕಲಿಸುವುದು ಸುಲಭ, 7 ರಿಂದ 10 ವರ್ಷದ ಮಕ್ಕಳಲ್ಲಿ ಕಂಡುಬರುವ ಕಲಿಕೆಯಲ್ಲಿನ ಚುರುಕುತನ ಕಾಗೆಗಳಲ್ಲಿ ಕಂಡುಬರುತ್ತದೆ. ಹೀಗಾಗಿ ನಗರ ಸ್ವಚ್ಛತೆಗೆ ಕಾಗೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಸ್ವೀಡನ್ನಲ್ಲಿ ದಿನದಿಂದ ದಿನಕ್ಕೆ ಸಿಗರೇಟ್ ಬಿಟ್ಗಳು ಬೀದಿಯಲ್ಲಿ ಬೀಳುತ್ತಿರುವ ಪ್ರಮಾಣ ಏರಿಕೆಯಾಗುತ್ತಿದೆ. ಸಿಗರೇಟ್ ದೇಹಕ್ಕೆ ಎಷ್ಟು ಮಾರಕವೋ ಅದರಲ್ಲಿನ ಪ್ಲಾಸ್ಟಿಕ್ ಪರಿಸರಕ್ಕೂ ಅಷ್ಟೇ ಹಾನಿಕಾರಕ. ಸ್ವೀಡನ್ನಲ್ಲಿ ಪ್ರತೀ ವರ್ಷ 1 ಬಿಲಿಯನ್ ಸಿಗರೇಟ್ ಬಡ್ಗಳು ದೇಶದ ಶೇ. 62ರಷ್ಟು ಭಾಗದಲ್ಲಿ ಕಾಣಸಿಗುತ್ತವೆ. ಇದರ ತಡೆಗೆ ಈಗ ಕಾಗೆಗಳ ಮೂಲಕ ಪರಿಹಾರ ನೀಡಲು ಸ್ಟಾರ್ಟ್ ಅಪ್ ಸಂಸ್ಥೆ ಮುಂದಾಗಿದೆ.
ಇದನ್ನೂ ಓದಿ:
ಮೆಟಾವರ್ಸ್ ಪ್ರವೇಶಿಸಿದ ಕೆಲವೇ ಹೊತ್ತಲ್ಲಿ ಗ್ಯಾಂಗ್ ರೇಪ್ಗೆ ಒಳಗಾದೆ; ಬ್ರಿಟಿಷ್ ಮಹಿಳೆಯಿಂದ ಗಂಭೀರ ಆರೋಪ