AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಭುದೇವ ಹೊಸ ಪ್ಯಾನ್​ ಇಂಡಿಯಾ ಚಿತ್ರ ಘೋಷಣೆ; ಕನ್ನಡ ಸೇರಿ ಬಹುಭಾಷೆಯಲ್ಲಿ ನಿರ್ಮಾಣ

ಸಂದೇಶ್​ ನಾಗರಾಜ್​ ಅವರು ಕನ್ನಡದಲ್ಲಿ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗ ಅವರ ಬ್ಯಾನರ್​ನಲ್ಲಿ ಪ್ರಭುದೇವ ನಟನೆಯ ಹೊಸ ಸಿನಿಮಾ ಸೆಟ್ಟೇರುತ್ತಿರುವ ಸುದ್ದಿ ಹೊರಬಿದ್ದಿದೆ.

ಪ್ರಭುದೇವ ಹೊಸ ಪ್ಯಾನ್​ ಇಂಡಿಯಾ ಚಿತ್ರ ಘೋಷಣೆ; ಕನ್ನಡ ಸೇರಿ ಬಹುಭಾಷೆಯಲ್ಲಿ ನಿರ್ಮಾಣ
ಸಂದೇಶ್​ ನಾಗರಾಜ್​, ಪ್ರಭುದೇವ
TV9 Web
| Edited By: |

Updated on: Feb 05, 2022 | 8:46 AM

Share

ನಟನಾಗಿ, ನಿರ್ದೇಶಕನಾಗಿ, ಕೊರಿಯೋಗ್ರಾಫರ್​ ಆಗಿ ಪ್ರಭುದೇವ (Prabhu Deva) ಅವರು ಸಖತ್​ ಫೇಮಸ್​. ಕನ್ನಡ, ತಮಿಳು, ಹಿಂದೆ ಸೇರಿದಂತೆ ಹಲವು ಭಾಷೆಯ ಚಿತ್ರರಂಗದಲ್ಲಿ ಅವರಿಗೆ ಬೇಡಿಕೆ ಇದೆ. ಅತ್ಯುತ್ತಮ ಡ್ಯಾನ್ಸ್​​ನಿಂದಾಗಿ ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಪ್ರಭುದೇವ ಅವರು ಈಗೊಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಚಿತ್ರ ಪ್ಯಾನ್​ ಇಂಡಿಯಾ (Pan India Movie) ಮಟ್ಟದಲ್ಲಿ ಮೂಡಿಬರಲಿದೆ. ಕನ್ನಡದ ಜೊತೆಗೆ ತೆಲುಗು, ತಮಿಳು ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಈ ಚಿತ್ರ ನಿರ್ಮಾಣ ಆಗಲಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ಬಂಡವಾಳ ಹೂಡುತ್ತಿರುವುದು ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆ ‘ಸಂದೇಶ್​ ಪ್ರೊಡಕ್ಷನ್ಸ್​’. ಕನ್ನಡ ಚಿತ್ರರಂಗದಲ್ಲಿ ಅನೇಕ ಸೂಪರ್​ ಹಿಟ್​ ಸಿನಿಮಾಗಳನ್ನು ನಿರ್ಮಾಣ ಮಾಡಿದ ಕೀರ್ತಿ ಈ ಸಂಸ್ಥೆಗೆ ಸೇರುತ್ತದೆ. ಈಗ ‘ಸಂದೇಶ್​ ಪ್ರೊಡಕ್ಷನ್ಸ್​’ ಮೂಲಕ ಪ್ರಭುದೇವ ಅವರ ಪ್ಯಾನ್​ ಇಂಡಿಯಾ ಸಿನಿಮಾ ತಯಾರಾಗುತ್ತದೆ ಎಂಬ ಸುದ್ದಿ ಖಚಿತಗೊಂಡಿದೆ. ಈ ಕುರಿತಂತೆ ನಿರ್ಮಾಪಕ ಸಂದೇಶ್​ ನಾಗರಾಜ್ (Sandesh Nagaraj) ಅವರು ಪ್ರಭುದೇವ ಜೊತೆ ಮಾತುಕತೆ ಮುಗಿಸಿದ್ದಾರೆ. ಈ ಪ್ಯಾನ್​ ಇಂಡಿಯಾ ಸಿನಿಮಾದಲ್ಲಿ ಅಭಿನಯಿಸಲು ಪ್ರಭುದೇವ ಒಪ್ಪಿಕೊಂಡಿದ್ದಾರೆ.

ಮಣ್ಣಿನ ದೋಣಿ, ಮಿಸ್ಟರ್​ ಐರಾವತ, ಪ್ರಿನ್ಸ್​, ಅಮರ್​ ಮುಂತಾದ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂದೇಶ್​ ನಾಗರಾಜ್​ ಅವರಿಗೆ ಕನ್ನಡ ಚಿತ್ರರಂಗದಲ್ಲಿ ಅಪಾರ ಅನುಭವ ಇದೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳನ್ನು ಅವರು ಮಾಡುತ್ತಿದ್ದಾರೆ. ಈಗ ಅವರ ಬ್ಯಾನರ್​ನಲ್ಲಿ ಪ್ರಭುದೇವ ಸಿನಿಮಾ ಸೆಟ್ಟೇರುತ್ತಿರುವ ಸುದ್ದಿ ಹೊರಬಿದ್ದಿದೆ. ಈ ಸಿನಿಮಾದಲ್ಲಿ ಬೇರೆ ಯಾವೆಲ್ಲ ಕಲಾವಿದರು ನಟಿಸಲಿದ್ದಾರೆ? ನಿರ್ದೇಶನ ಮಾಡುವವರು ಯಾರು? ಪ್ರಭುದೇವ ಅವರ ಪಾತ್ರ ಯಾವ ರೀತಿ ಇರಲಿದೆ? ಅವರಿಗೆ ನಾಯಕಿ ಯಾರು? ಇಂಥ ಹಲವು ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ. ಶೀಘ್ರದಲ್ಲೇ ಈ ಕುರಿತು ಮಾಹಿತಿ ಹಂಚಿಕೊಳ್ಳುವುದಾಗಿ ಸಂದೇಶ್​ ನಾಗರಾಜ್​ ತಿಳಿಸಿದ್ದಾರೆ.

ಶಿವರಾಜ್​ಕುಮಾರ್​ ಜೊತೆ ಸಂದೇಶ್​ ನಾಗರಾಜ್​ ಹೊಸ ಚಿತ್ರ:

ಕೆಲವೇ ದಿನಗಳ ಹಿಂದೆ ನಿರ್ಮಾಪಕ ಸಂದೇಶ್​ ನಾಗರಾಜ್​ ಅವರು ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಜೊತೆ ಹೊಸ ಸಿನಿಮಾ ಘೋಷಿಸಿದರು. ಈಗಾಗಲೇ ಹಲವು ಸಿನಿಮಾಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿರುವ ಚಿ. ಗುರುದತ್​ ಅವರು ಈ ಹೊಸ ಚಿತ್ರಕ್ಕೆ ಆ್ಯಕ್ಷನ್​-ಕಟ್​ ಹೇಳಲಿದ್ದಾರೆ. ಗುರುದತ್​ ಮತ್ತು ಶಿವರಾಜ್​ಕುಮಾರ್​ ಅವರ ನಡುವೆ ಉತ್ತಮ ಗೆಳೆತನ ಇದೆ. ಇಬ್ಬರೂ ಬಾಲ್ಯದ ಗೆಳೆಯರು. ‘ಆನಂದ್​’ ಸಿನಿಮಾ ಕಾಲದಿಂದಲೂ ಅವರಿಬ್ಬರ ಸಿನಿಮಾ ಜರ್ನಿ ಮುಂದುವರಿದುಕೊಂಡು ಬಂದಿದೆ. ಈ ಸ್ನೇಹಿತರು ಜೊತೆಗೂಡಿ ಈಗ ಹೊಸ ಸಿನಿಮಾ ಮಾಡುತ್ತಿದ್ದಾರೆ.

ಇದನ್ನೂ ಓದಿ:

Prabhudeva: ಅರ್ಧ ತುಂಡಾದ ಕಾಲು ಇಟ್ಟುಕೊಂಡು ಅಚ್ಚರಿ ಮೂಡಿಸಿದ ನಟ ಪ್ರಭುದೇವ; ಬೆರಗಾದ ಅಭಿಮಾನಿಗಳು

ನಮ್ಮಮ್ಮ ಕೂಡ ಭಯಂಕರವಾಗಿ ಅತ್ತುಬಿಟ್ಟರು -ಕನ್ನಡದಲ್ಲಿ ಸಂತಾಪ ಹೇಳಿದ ಡ್ಯಾನ್ಸ್​ ರಾಜ ಪ್ರಭುದೇವ

Follow Us
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮಂಗಳೂರಲ್ಲಿ ಜನವಸತಿ ಕಟ್ಟಡಗಳ ಸಮೀಪವೇ ಹಾರಾಡಿದ ಸೇನಾ ಹೆಲಿಕಾಪ್ಟರ್‌ಗಳು!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಮೆಣಸಿನಕಾಯಿ ದರ ಕುಸಿತ, 3 ಎಕರೆಯಲ್ಲಿ ಬೆಳೆದಿದ್ದ ಬೆಳೆ ನಾಶ ಮಾಡಿದ ರೈತ!
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ನಡೆಯುತ್ತೆ ಪ್ರತಿಭಟನೆ: ದೀಪ್ಕೆ
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಬೊಮ್ಮಸಂದ್ರದಲ್ಲಿ ಬೆಳ್ಳಂಬೆಳಗ್ಗೆ ಭೀಕರ ಸಿಲಿಂಡರ್ ಸ್ಫೋಟ!
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
ಮರಿ ಮೊಮ್ಮಗಳ ಜೊತೆ ದೇವೇಗೌಡ-ಚೆನ್ನಮ್ಮ ದಂಪತಿಯ ಮುದ್ದಾದ ವಿಡಿಯೋ ವೈರಲ್​​
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
BJP ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆತ ಕೇಸ್​​: ಆರೋಪಿ ಬಂಧನ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
ಬಾಗಲಕೋಟೆ ಬೇಕರಿ ತಪಾಸಣೆ ನಡೆಸಿ ಉಪಲೋಕಾಯುಕ್ತರ ಎಚ್ಚರಿಕೆ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
‘ನನಗೆ 2 ಸೆಕೆಂಡ್ ಸಾಕು ಕಾಂಗ್ರೆಸ್ಸನ್ನು ಸೋಲಿಸಲು’: ಇಕ್ಬಾಲ್ ಅನ್ಸಾರಿ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಅಂಬರೀಷ್ ಊರಲ್ಲಿ ಶೂಟ್ ಆಗಿದೆ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ
ಜೋಳ ತಿಂದು ಅಡ್ಡಾದಿಡ್ಡಿ ಓಡಿದ ಆನೆ ಮರಿ