AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಗೋಲಗಪ್ಪಾ ತಿನ್ನಲು ಅಡ್ಡಿಯಾದ ವಧುವಿನ ಮೂಗುತಿ: ವರ ಮಾಡಿದ್ದೇನು ಗೊತ್ತಾ?

ಗೋಲ್ಗಪ್ಪಾ ತಿನ್ನುವ ವೇಳೆ ವಧುವಿಗೆ ಮೂಗುತಿ ಅಡ್ಡವಾಗಿದ್ದು ಅದನ್ನು ವರ ಸರಿಪಡಿಸಿದ ವಿಡಿಯೋ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್ ಆಗಿದೆ.

Viral Video: ಗೋಲಗಪ್ಪಾ ತಿನ್ನಲು ಅಡ್ಡಿಯಾದ ವಧುವಿನ ಮೂಗುತಿ: ವರ ಮಾಡಿದ್ದೇನು ಗೊತ್ತಾ?
ವಧು
TV9 Web
| Updated By: Pavitra Bhat Jigalemane|

Updated on: Feb 05, 2022 | 2:30 PM

Share

ಮದುವೆಗಳಲ್ಲಿ ವಧುವಿಗೆ (Bride)  ಮೈತುಂಬ ಒಡವೆ. ದುಬಾರಿ ಲೆಹಂಗಾದೊಂದಿಗೆ ಅಲಂಕರಿಸಿರುತ್ತಾರೆ. ಇದರಲ್ಲಿ ಮೂಗುತಿ (Nose Ring), ಜುಮುಕಿ, ಹಲವು ರೀತಿಯ ನೆಕ್ಲೆಸ್​ಗಳು, ಕೈತುಂಬ ಬಳೆ ಹೀಗೆ ಆಭರಣಗಳಿಂದ ಆಕೆಯನ್ನು ಮುಚ್ಚಿರುತ್ತಾರೆ. ಆದರೆ ಕೆಲವು ಸಂದರ್ಭಗಳಲ್ಲಿ ಒಡವೆಗಳು ವಧುವಿಗೆ ಕಿರಿಕಿರಿ ಉಂಟುಮಾಡುತ್ತವೆ. ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್​ ಆಗಿದೆ. ಗೋಲ್ಗಪ್ಪಾ ತಿನ್ನುವ ವೇಳೆ ವಧುವಿಗೆ ಮೂಗುತಿ ಅಡ್ಡವಾಗಿದ್ದು ಅದನ್ನು ವರ (Groom) ಸರಿಪಡಿಸಿದ ವಿಡಿಯೋ ವೈರಲ್​ ಆಗಿದೆ. ಇನ್ಸ್ಟಾಗ್ರಾಮ್​ನಲ್ಲಿ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ವಧು ಬಾಯಲ್ಲಿ ನೀರೂರಿಸಿಕೊಂಡು ಗೋಲ್ಗಪ್ಪಾ ತಿನ್ನಲು ಯತ್ನಿಸುತ್ತಾಳೆ. ಆದರೆ ಆಕೆಗೆ ಮೂಗುತಿ ಅಡ್ಡವಾಗುತ್ತದೆ. ಈ ವೇಳೆ ಆಕೆ ವರನ ಕಡೆಗೆ ತಿರುಗುತ್ತಾಳೆ. ಆಗ ವರ ಆಕೆಯ ಮೂಗುತಿಯನ್ನು ಎತ್ತಿ ಹಿಡಿದುಕೊಳ್ಳುತ್ತಾನೆ.  ಆಗ ಆಕೆ ಗೋಲ್ಗಪ್ಪಾವನ್ನು ತಿನ್ನುತ್ತಾಳೆ. ಇದರ ವಿಡಿಯೋ ಗೋಲ್ಗಪ್ಪಾ ವಧು ಎನ್ನುವ ಕ್ಯಾಪ್ಷನ್​ ಮೂಲಕ ಹಂಚಿಕೊಳ್ಳಲಾಗಿದೆ.

ಸದ್ಯ ವಿಡಿಯೋ ನೋಡಿ ನೆಟ್ಟಿಗರು ನಕ್ಕಿದ್ದಾರೆ. ವಧುವಿನ ಗೋಲ್ಗಪ್ಪಾ ಪ್ರೀತಿ ಕಂಡು ಬೆರಗಾಗಿದ್ದಾರೆ. ಈ ವಿಡಿಯೋವನ್ನು ಕಳೆದ ಡಿಸೆಂಬರ್​ನಲ್ಲಿ ಅಭಿಷೇಕ್​ಪ್ರಿಯಾಮೇಕ್​ಓವರ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಇದೀಗ ದಿ ವೆಡ್ಡಿಂಗ್​ ವರ್ಲ್ಡ್​ ಎನ್ನುವ ಇನ್ಸ್ಟಾಗ್ರಾಮ್​ ಖಾತೆ ಹಂಚಿಕೊಂಡಿದೆ. ಸದ್ಯ ವಿಡಿಯೋ 23 ಸಾವಿರಕ್ಕೂ ಹೆಚ್ಚು ಲೈಕ್ಸ್​ ಗಳಿಸಿದ್ದು, ನೆಟ್ಟಿಗರ ಗಮನ ಸೆಳೆದಿದೆ.

ಇದನ್ನೂ ಓದಿ:

Viral Video: ಕಾಡಾನೆಯನ್ನು ಕಾರಿನಲ್ಲಿ ಅಡ್ಡಗಟ್ಟಿ, ಓಡಿಸಿಕೊಂಡು ಹೋದ ಟಿಕ್​ಟಾಕರ್; ವಿಡಿಯೋ ನೋಡಿ ಸಿಟ್ಟಿಗೆದ್ದ ನೆಟ್ಟಿಗರು

ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್