ಏನೂ ಅರಿಯದ 8 ತಿಂಗಳ ಹಸುಗೂಸನ್ನು ಅಮಾನುಷವಾಗಿ ಥಳಿಸಿದ ಕೇರ್​ಟೇಕರ್; ಐಸಿಯುಗೆ ದಾಖಲಾದ ಮಗು

ಹೌದು ಏನೂ ಅರಿದ 8 ತಿಂಗಳ ಹಸುಗೂಸಿಗೆ ಕೇರ್​ಟೇಕರ್ ಒಬ್ಬಳು ನಿರ್ದಾಕ್ಷಣ್ಯವಾಗಿ ಥಳಿಸಿರುವಂತಹ ಭೀಕರ ಘಟನೆ ನಡೆದಿದೆ.

ಏನೂ ಅರಿಯದ 8 ತಿಂಗಳ ಹಸುಗೂಸನ್ನು ಅಮಾನುಷವಾಗಿ ಥಳಿಸಿದ ಕೇರ್​ಟೇಕರ್; ಐಸಿಯುಗೆ ದಾಖಲಾದ ಮಗು
ಮಗುವನ್ನು ಥಳಿಸುತ್ತಿರುವ ಕೇರ್​ಟೇಕರ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Feb 05, 2022 | 2:32 PM

ಗುಜರಾತ್: ಅದೆಷ್ಟೋ ಪಾಲಕರು ತಮ್ಮ ಕಂದಮ್ಮಗಳನ್ನು ಕೇರ್​ಟೇಕರ್ (caretaker) ಹತ್ತಿರ ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ಹೋಗುತ್ತಾರೆ. ಆದರೆ ಅಂತಹ ಪಾಲಕರಿಗೆ ಒಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಹೌದು ಏನೂ ಅರಿದ 8 ತಿಂಗಳ ಹಸುಗೂಸಿಗೆ ಕೇರ್​ಟೇಕರ್ ಒಬ್ಬಳು ನಿರ್ದಾಕ್ಷಣ್ಯವಾಗಿ ಥಳಿಸಿರುವಂತಹ ಭೀಕರ ಘಟನೆ ನಡೆದಿದೆ. ಗುಜರಾತ್‌ನ ಸೂರತ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಪಾಟಿಯಾದ ನಿವಾಸಿಗಳಾದ ಸೂರತ್‌ನ ರಾಂದರ್ ಪಾಲನ್‌ಪುರ್ ದಂಪತಿ ಇಬ್ಬರೂ ಉದ್ಯೋಗಿಗಳಾಗಿದ್ದು, ತಮ್ಮ ಮಗುವನ್ನು ನೋಡಿಕೊಳ್ಳಲು ಒಬ್ಬ ಕೇರ್‌ಟೇಕರ್ ಅನ್ನು ನೇಮಿಸಿಕೊಂಡಿದ್ದರು.

ದಂಪತಿ ಕೇರ್‌ಟೇಕರ್​ನ್ನು ನೇಮಿಸಿಕೊಂಡರು ಸಹ ಮಗು ಅಳುತ್ತಿರುವುದನ್ನು ನೆರೆಹೊರೆಯವರು ಹೇಳಿದ್ದಾರೆ. ಆ ಬಳಿಕ ದಂಪತಿಗಳು ತಮ್ಮ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಆವಾಗ ಅವರಿಗೆ ಕಂಡದ್ದು ಭಯಾನಕ ದೃಶ್ಯಗಳು. ಹೌದು ಕೇರ್‌ಟೇಕರ್ ಮಗುವನ್ನು ಅಮಾನುಷವಾಗಿ ಥಳಿಸುವ ದೃಶ್ಯವನ್ನು ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋದಲ್ಲಿ ಕೇರ್​ಟೇಕರ್​ ಮಗುವಿನ ತಲೆಗೆ ಹಾಸಿಗೆಯಿಂದ ಪದೇ ಪದೇ ಹೊಡೆಯುತ್ತಿರುವುದು ಕಂಡುಬಂದಿದೆ. ಹಸುಗೂಸಿನ ಕದಲು ಎಳೆಯುವುದು ಮತ್ತು ನಿರ್ದಯವಾಗಿ ಹೊಡೆಯುತ್ತಿರುವುದು ಕೂಡಾ ಸೆರೆಯಾಗಿದೆ. ಹಲ್ಲೆಯಿಂದ ಮಿದುಳು ರಕ್ತಸ್ರಾವದಿಂದ ಬಳಲುತ್ತಿದ್ದ ಮಗುವನ್ನು ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ.

ಇಂಡಿಯಾ ಟುಡೆಯೊಂದಿಗೆ ಮಾತನಾಡಿರುವ ಮಗುವಿನ  ಅಜ್ಜಿ ಕಲಾಬೆನ್ ಪಟೇಲ್, ಕೇರ್‌ಟೇಕರ್  ಆದ ಆರೋಪಿ ಕೋಮಲ್ ಚಾಂಡ್ಲೇಕರ್ ಅವರನ್ನು ಮೂರು ತಿಂಗಳ ಹಿಂದೆ ನೇಮಿಸಲಾಗಿತ್ತು. ಕೋಮಲ್ ಆರಂಭದಲ್ಲಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಆದರೆ, ಆಕೆಯ ಆಶ್ರಯದಲ್ಲಿ ಮಕ್ಕಳು ಅಳುವುದನ್ನು ಮುಂದುವರಿಸಿದ ನಂತರ ಅನುಮಾನ ಹುಟ್ಟಿಕೊಂಡಿದೆ. ನಂತರ ಪೋಷಕರು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಭಯಾನಕ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ಸದ್ಯ ಘಟನೆಯ ನಂತರ ಪೋಷಕರು ಪೊಲೀಸರಿಗೆ ದೂರು ನೀಡಿದ್ದು, ಮಹಿಳೆಯನ್ನು ವಶಕ್ಕೆ ಪಡೆಯಲಾಗಿದೆ. 8 ತಿಂಗಳ ಮಗುವಿನ ತಂದೆ ಮಿತೇಶ್ ಪಟೇಲ್, ಆರೋಪಿಗಳ ವಿರುದ್ಧ ಸೂರತ್‌ನ ರಾಂಡರ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗೆ ಮದುವೆಯಾಗಿ 5 ವರ್ಷವಾಗಿತ್ತು, ಆದರೆ ಅವಳಿಗೆ ಸ್ವಂತ ಮಗು ಇರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ;

Shocking News: ಪೊಲೀಸರು ತಂದ ಕೈದಿಯ ಶವ ಪೋಸ್ಟ್​ ಮಾರ್ಟಂ ವೇಳೆ ಎದ್ದು ಕುಳಿತಿತ್ತು!

Published On - 2:18 pm, Sat, 5 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್