Viral Video: ಕಾಡಾನೆಯನ್ನು ಕಾರಿನಲ್ಲಿ ಅಡ್ಡಗಟ್ಟಿ, ಓಡಿಸಿಕೊಂಡು ಹೋದ ಟಿಕ್‌ಟಾಕರ್; ವಿಡಿಯೋ ನೋಡಿ ಸಿಟ್ಟಿಗೆದ್ದ ನೆಟ್ಟಿಗರು
ರಾತ್ರಿ ಖಾಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಆನೆಯನ್ನು ಹೆದರಿಸಿದ ಟಿಕ್‌ಟಾಕರ್ ತನ್ನ ಕಾರಿನಿಂದ ಆ ಆನೆಯನ್ನು ಓಡಿಸಿಕೊಂಡು ಹೋಗಿದ್ದಾರೆ. ಇದರಿಂದ ಆ ಆನೆ ಭಯಭೀತವಾಗಿರುವುದು ವಿಡಿಯೋದಲ್ಲಿ ಗೋಚರವಾಗುತ್ತಿದೆ.
ಕೆಲವು ದಿನಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ಘಟನೆಯೊಂದು ಇಂಟರ್ನೆಟ್ನಲ್ಲಿ (Online) ಬಿರುಗಾಳಿಯನ್ನೇ ಎಬ್ಬಿಸಿದೆ. ಟಿಕ್‌ಟಾಕ್ (TikTok) ವಿಡಿಯೋ ಮಾಡಿ ಪ್ರಸಿದ್ಧಿಯಾಗಿದ್ದ ಟಿಕ್‌ಟಾಕರ್ ಒಬ್ಬ ತನ್ನ ಕಾರಿನಲ್ಲಿ ಆನೆಯನ್ನು ಬೆನ್ನತ್ತಿ ಹೋಗಿ, ಅದಕ್ಕೆ ಕಿರುಕುಳ ನೀಡಿರುವ ವಿಡಿಯೋ ವೈರಲ್ ಆಗಿದೆ. ಕಾಡಿನ ಸಮೀಪವಿರುವ ರಸ್ತೆಯೊಂದರಲ್ಲಿ ವ್ಯಕ್ತಿಯೊಬ್ಬ ಮಧ್ಯರಾತ್ರಿ ಕಾಡಾನೆಗೆ ಕಿರುಕುಳ ನೀಡುತ್ತಿರುವ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತವಾಗಿದೆ. ಈ ವಿಡಿಯೋವನ್ನು ಮೊದಲು @shashikagimhandha ಎಂಬ ಬಳಕೆದಾರರು ಟಿಕ್ಟಾಕ್ನಲ್ಲಿ ಹಂಚಿಕೊಂಡಿದ್ದರು. ಇದು ವೈರಲ್ ಆದ ನಂತರ ಟ್ವಿಟ್ಟರ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೋವನ್ನು ಮತ್ತೆ ಹಂಚಿಕೊಳ್ಳಲಾಗಿದೆ.
This is the original video off his TikTok account. People like this need to be found and taught a lesson that this shit isn’t acceptable. @wnpssl @PearlProtectors @KumarSanga2 @MahelaJay @RusselArnold69 @Melpeters_x @ashadevos @ashroxx @RajapaksaNamal @GotabayaR @PresRajapaksa pic.twitter.com/8ML1l1TmEK
— Poorna Seneviratne (@PoornaSenev) February 3, 2022
‘ಕಾಡು ಪ್ರಾಣಿಗಳಿಗೆ ಈ ರೀತಿ ಶಿಕ್ಷೆ ನೀಡುವುದು ಸರಿಯಲ್ಲ ಎಂದು ನಿಮಗೆ ಇನ್ನೂ ಅರ್ಥವಾಗದಿದ್ದರೆ ನಿಮ್ಮ ತಲೆಯಲ್ಲಿ ಮೆದುಳೇ ಇಲ್ಲ ಎಂದು ಅರ್ಥ. ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಪಡೆಯಬೇಕೆಂಬ ಕಾರಣಕ್ಕೆ ವನ್ಯಜೀವಿಗಳಿಗೆ ಹಿಂಸೆ ನೀಡಬೇಡಿ. ಅದು ಸರಿಯಲ್ಲ. ಈ ರೀತಿ ಹಿಂಸೆ ಮಾಡಿದ ವ್ಯಕ್ತಿಗೆ ತಕ್ಕ ಶಿಕ್ಷೆಯಾಗಬೇಕು’ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Gosh this made me furious! The audacity to endanger the wildlife and make a video out of it for likes.Tagging those who can legally deal with this kind of behavior so this does not become a trend. @cher @otaradel @ShermiRaja @RajapaksaNamal @wnpssl.
— Thashuki Mendis (@ThashukiMendis) February 3, 2022
ವಿಡಿಯೋದಲ್ಲಿ ಟಿಕ್‌ಟಾಕ್ ಬಳಕೆದಾರರು ತಮ್ಮ ಕಾರಿನೊಂದಿಗೆ ಕಾಡಾನೆಯನ್ನು ಹೆದರಿಸುತ್ತಿರುವುದನ್ನು ನೋಡಬಹುದು. ರಾತ್ರಿ ಖಾಲಿ ರಸ್ತೆಯಲ್ಲಿ ಓಡಾಡುತ್ತಿದ್ದ ಆನೆಯನ್ನು ಹೆದರಿಸಿದ ಟಿಕ್‌ಟಾಕರ್ ತನ್ನ ಕಾರಿನಿಂದ ಆ ಆನೆಯನ್ನು ಓಡಿಸಿಕೊಂಡು ಹೋಗಿದ್ದಾರೆ. ಇದರಿಂದ ಆ ಆನೆ ಭಯಭೀತವಾಗಿರುವುದು ವಿಡಿಯೋದಲ್ಲಿ ಗೋಚರವಾಗುತ್ತಿದೆ.
This is so disturbing one…. So bad how humans behave sometimes #HorribleHorriblePerson
— Ashok kumar (@ashok7545) February 4, 2022
ಈ ವೀಡಿಯೊ ಶ್ರೀಲಂಕಾದ ವನ್ಯಜೀವಿ ಮತ್ತು ಪ್ರಕೃತಿ ಸಂರಕ್ಷಣಾ ಸೊಸೈಟಿಯ ಗಮನ ಸೆಳೆದಿದ್ದು, ಈ ಆತಂಕಕಾರಿ ಘಟನೆಯ ಎಲ್ಲಾ ವಿವರಗಳನ್ನು ಅವರು ವನ್ಯಜೀವಿ ಸಂರಕ್ಷಣಾ ಇಲಾಖೆಗೆ ಸಲ್ಲಿಸಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದ್ದಾರೆ.
ಇದನ್ನೂ ಓದಿ:Viral Video: ಸಿಎಂ ಜಗನ್ ಮೋಹನ್ ರೆಡ್ಡಿ ಬಂಗಿ ಜಂಪ್ ಮಾಡಿದ ವಿಡಿಯೋ ವೈರಲ್
Shocking News: ಮಾರ್ಗ ಮಧ್ಯೆ ಶಿಫ್ಟ್ ಮುಗಿದಿದ್ದರಿಂದ ವಿಮಾನ ಹಾರಿಸೋದಿಲ್ಲ ಎಂದ ಪೈಲಟ್; ಆಮೇಲೇನಾಯ್ತು?
Published On - 2:10 pm, Sat, 5 February 22